ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ದಾಖಲೆ: ಸುರೇಶ್ ರೈನಾ, ವಿರಾಟ್ ಕೊಹ್ಲಿ ಸಾಲಿಗೆ ಹಿಟ್‌ಮ್ಯಾನ್ ರೋಹಿತ್

DC vs MI: Rohit Sharma joins Virat Kohli and Suresh Raina in elite list

ನವದೆಹಲಿ, ಏಪ್ರಿಲ್ 19: ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ರೋಹಿತ್ ಶರ್ಮಾ ಟಿ20 ಕ್ರಿಕೆಟ್‌ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ 8,000 ರನ್ ಪೂರೈಸುವ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಈ ಸಾಧನೆ ಮೆರೆದ 3ನೇ ಭಾರತೀಯನಾಗಿ ಹಿಟ್‌ಮ್ಯಾನ್ ಗುರುತಿಸಿಕೊಂಡರು.

ಮತದಾನದ ಹಕ್ಕು ಚಲಾಯಿಸಿದ ಕುಂಬ್ಳೆ, ವೋಟ್‌ ಮಾಡಿದ ಕ್ರಿಕೆಟಿಗರೆಷ್ಟು?ಮತದಾನದ ಹಕ್ಕು ಚಲಾಯಿಸಿದ ಕುಂಬ್ಳೆ, ವೋಟ್‌ ಮಾಡಿದ ಕ್ರಿಕೆಟಿಗರೆಷ್ಟು?

ನವದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಗುರುವಾರ (ಏಪ್ರಿಲ್ 18) ನಡೆದ ಐಪಿಎಲ್ 34ನೇ ಪಂದ್ಯದಲ್ಲಿ ರೋಹಿತ್ 22 ಎಸೆತದಲ್ಲಿ 30 ರನ್ ಬಾರಿಸುವ ಮೂಲಕ ಟಿ20ಯಲ್ಲಿ ಒಟ್ಟು 8018 ರನ್ ಕಲೆ ಹಾಕಿದ್ದಾರೆ. ಅಲ್ಲದೆ ಇದೇ ಸಾಧನೆಗಾಗಿ ರೋಹಿತ್, ಸುರೇಶ್ ರೈನಾ ಮತ್ತು ವಿರಾಟ್ ಕೊಹ್ಲಿ ಸಾಲಿನಲ್ಲಿ ಸೇರಿಕೊಂಡಿದ್ದಾರೆ.

ಟಿ20ಯಲ್ಲಿ 8000 ರನ್ ಬಾರಿಸಿದ ಮೊದಲ ಭಾರತೀಯ ಕ್ರಿಕೆಟಿಗನಾಗಿ ಚೆನ್ನೈ ಸೂಪರ್ ಕಿಂಗ್ಸ್‌ನ ಸುರೇಶ್ ರೈನಾ ದಾಖಲೆ ಬರೆದಿದ್ದರು. ರೈನಾ ಒಟ್ಟು 295 ಇನ್ನಿಂಗ್ಸ್‌ಗಳಲ್ಲಿ 8216 ರನ್ ಗಳಿಸಿದ್ದಾರೆ. ಎರಡನೇ ಆಟಗಾರನಾಗಿ ಗುರುತಿಸಿಕೊಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ 246 ಇನ್ನಿಂಗ್ಸ್‌ಗಳಲ್ಲಿ 8183 ರನ್ ಕಲೆ ಹಾಕಿದ್ದಾರೆ.

ವಿಶ್ವಕಪ್ 2019: ಪಾಕಿಸ್ತಾನದ ತಂಡ ಪ್ರಕಟ, ಅಬಿದ್ ಅಲಿಗೆ ಚಾನ್ಸ್ವಿಶ್ವಕಪ್ 2019: ಪಾಕಿಸ್ತಾನದ ತಂಡ ಪ್ರಕಟ, ಅಬಿದ್ ಅಲಿಗೆ ಚಾನ್ಸ್

ರೋಹಿತ್ ಶರ್ಮಾ 294 ಇನ್ನಿಂಗ್ಸ್‌ಗಳಲ್ಲಿ 8018 ರನ್ ಬಾರಿಸಿದ್ದಾರೆ. ಟಿ20 ಅತ್ಯಧಿಕ ರನ್ ವಿಶ್ವದಾಖಲೆ ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್‌ಗೇಲ್ ಹೆಸರಿನಲ್ಲಿದೆ. ಗೇಲ್ 12670 ಸಾಧನೆ ಹೊಂದಿದ್ದಾರೆ. ಅಂದ್ಹಾಗೆ ಗುರುವಾರ ನಡೆದ ಮುಂಬೈ ಇಂಡಿಯನ್ಸ್-ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 40 ರನ್ ಜಯ ಗಳಿಸಿತು.

Story first published: Friday, April 19, 2019, 0:34 [IST]
Other articles published on Apr 19, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X