ಐಪಿಎಲ್‌ನಲ್ಲಿ ಡೇಲ್ ಸ್ಟೇನ್ ದಾಖಲೆಯನ್ನು ಹಿಂದಿಕ್ಕಿದ ಕಗಿಸೊ ರಬಾಡ: ದ. ಆಫ್ರಿಕಾ ಬೌಲರ್‌ಗಳ ಪೈಕಿ ಅಗ್ರಸ್ಥಾನ!

ಸೋಮವಾರ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲು ಅನುಭವಿಸಿದೆ. ಈ ಮೂಲಕ ಈ ಬಾರಿಯ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ಪ್ಲೇಆಫ್‌ಗೇರುವ ಸ್ಪರ್ಧೆಯಲ್ಲಿ ಹಿಂದುಳಿದಿದೆ. ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ವೇಗಿ ಕಗಿಸೊ ರಬಾಡ ವಿಶೇಷ ದಾಖಲೆಯೊಂದನ್ನು ಮಾಡಿದ್ದಾರೆ.

ಇಂಡಿಯನ್ ಪ್ರೀಮಿಯರ್ ಇತಿಹಾಸದಲ್ಲಿ ದಕ್ಷಿಣ ಆಫ್ರಿಕಾ ಬೌಲರ್‌ಗಳ ಪೈಕಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ದಾಖಲೆಯನ್ನು ಕಗಿಸೊ ರಬಾಡ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಈ ಹಿಂದೆ ಈ ದಾಖಲೆ ದಕ್ಷಿಣ ಆಫ್ರಿಕಾದ ಮಾಜಿ ವೇಗದ ಬೌಲರ್ ಡೇಲ್ ಸ್ಟೇನ್ ಹೆಸರಿನಲ್ಲಿತ್ತು. 2020ರ ಐಪಿಎಲ್ ಬಳಿಕ ನಿವೃತ್ತಿಯನ್ನು ಪಡೆದ ಡೇಲ್ ಸ್ಟೇನ್ ಐಪಿಎಲ್‌ನಲ್ಲಿ ಒಟ್ಟು 97 ವಿಕೆಟ್‌ಗಳನ್ನು ಪಡೆದಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಬಾಡ ಈ ದಾಖಲೆಯನ್ನು ಹಿಂದಿಕ್ಕಿದ್ದು 98 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ.

MI vs SRH: ಪಂದ್ಯದಲ್ಲಿ ನಿಮ್ಮ ಡ್ರೀಮ್ ಟೀಮ್ ಗೆಲ್ಲಲು ತಂಡವನ್ನು ಹೀಗೆ ರಚಿಸಿ, ಈತನಿಗೆ ನಾಯಕತ್ವ ನೀಡಿMI vs SRH: ಪಂದ್ಯದಲ್ಲಿ ನಿಮ್ಮ ಡ್ರೀಮ್ ಟೀಮ್ ಗೆಲ್ಲಲು ತಂಡವನ್ನು ಹೀಗೆ ರಚಿಸಿ, ಈತನಿಗೆ ನಾಯಕತ್ವ ನೀಡಿ

ಈ ಪಂದ್ಯದಲ್ಲಿಯೂ ಅದ್ಭುತ ಪ್ರದರ್ಶನ ನಿಡಿ ಮಿಂಚಿದ ಶಾನ್ ಮಾರ್ಶ್ ವಿಕೆಟ್ ಪಡೆಯುವ ಮೂಲಕ ರಬಾಡ ಡೇಲ್ ಸ್ಟೇನ್ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಈ ಪಂದ್ಯದಲ್ಲಿ ಮಾರ್ಶ್ 48 ಎಸೆತಗಳನ್ನು ಎದುರಿಸಿ ಮಹತ್ವದ 63 ರನ್‌ಗಳನ್ನು ಗಳಿಸಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ಇನ್ನಿಂಗ್ಸ್‌ನ ಕಡೆಯ ಹಂತದಲ್ಲಿ ಮಾರ್ಶ್ ಸಾಕಷ್ಟು ಆಘಾತವನ್ನು ನೀಡಿದ್ದರು. ಈ ಪ್ರದರ್ಶನದಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 159 ರನ್‌ಗಳನ್ನು ಗಳಿಸಲು ಸಾಧ್ಯವಾಯಿತು.

ವಿಕೆಟ್ ಕಳೆದುಕೊಳ್ಳುವುದಕ್ಕೂ ಮುನ್ನ ಮಾರ್ಶ್ ರಬಡಾ ಎಸೆತದಲ್ಲಿ ಒಂದರ ನಂತರ ಮತ್ತೊಂದರಂತೆ ಸತತ ಎತರಡು ಸಿಕ್ಸರ್ ಸಿಡಿಸಿದ್ದರು. ಆದರೆ ದಕ್ಷಿಣ ಆಫ್ರಿಕಾದ ವೇಗಿ ನಂತರ ಅದ್ಭುತವಾಗಿ ಕಮ್‌ಬ್ಯಾಕ್ ಮಾಡಿದರು. ಅಂತಿಮವಾಗಿ ತಾವು ಎಸೆತ ಮೂರು ಓವರ್‌ಗಳಲ್ಲಿ ರಡಾಬಾ 24 ರನ್ ನೀಡಿ ಒಂದು ವಿಕೆಟ್ ಸಂಪಾದಿಸಿದರು. ಇನ್ನು ರಬಾಡ ಐಪಿಎಲ್‌ನಲ್ಲಿ ನೂರನೇ ವಿಕೆಟ್ ಪಡೆಯಲು ಇನ್ನು ಕೇವಲ ಎರಡು ವಿಕೆಟ್‌ಗಳ ಅಗತ್ಯವಿದೆ. ತನ್ನ ಮುಂದಿನ ಪಂದ್ಯದಲ್ಲಿ ರಬಾಡ ಈ ಮೈಲಿಗಲ್ಲನ್ನು ಸಾಧಿಸುವ ಸಾಧ್ಯತೆಯಿದೆ.

ಈ ಬಾರಿಯ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡ ಹೇಳಿಕೊಳ್ಳುವಂತಾ ಅದ್ಭುತ ಮಟ್ಟದ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಸ್ಥಿರ ಪ್ರದರ್ಶನ ನೀಡುವಲ್ಲಿ ಸತತವಾಗಿ ಪಿಬಿಕೆಎಸ್ ವಿಫಲವಾಯಿತು. ಆದರೆ ರಬಾಡ ಪ್ರದರ್ಶನ ಮಾತ್ರ ಅದ್ಭುತವಾಗಿತ್ತು ಎಂಬುದು ಗಮನಾರ್ಹ. ಆಡಿರುವ 12 ಪಂದ್ಯಗಳಲ್ಲಿ ಬಲಗೈ ವೇಗಿ 22 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಎರಡು ಬಾರಿ ನಾಲ್ಕು ವಿಕೆಟ್‌ಗಳ ಗೊಂಚಲು ಪಡೆದುಕೊಂಡಿದ್ದಾರೆ.

ಸೈಮಂಡ್ಸ್‌ ಕಾರು ಅಪಘಾತದಲ್ಲಿ ಬದುಕುಳಿದ ಪ್ರೀತಿಯ ನಾಯಿ: ತನ್ನ ಮಾಲೀಕನನ್ನ ಬಿಟ್ಟು ಹೋಗಲು ಹಿಂದೇಟುಸೈಮಂಡ್ಸ್‌ ಕಾರು ಅಪಘಾತದಲ್ಲಿ ಬದುಕುಳಿದ ಪ್ರೀತಿಯ ನಾಯಿ: ತನ್ನ ಮಾಲೀಕನನ್ನ ಬಿಟ್ಟು ಹೋಗಲು ಹಿಂದೇಟು

Mumbai Indians ಗೆಲ್ಲುವಂತಹ ಪಂದ್ಯದಲ್ಲಿ ಸೋತಿದ್ದು ಹೀಗೆ | Oneindia Kannada

ಸೋಮವಾರ ನಡೆದ ಪಂದ್ಯದಲ್ಲಿ ಗೆಲ್ಲಲೇಬೇಕಾಗಿದ್ದ ಪಂದ್ಯದಲ್ಲಿ ಪಂಜಾಬ್ ಸೋಲು ಅನುಭವಿಸಿದೆ. 160 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಪ್ರಮುಖ ಆಟಗಾರರ ವೈಫಲ್ಯದ ಕಾರಣದಿಂದಾಗಿ 17 ರನ್‌ಗಳ ಅಂತರದ ಸೋಲು ಅನುಭವಿಸಿದೆ. ಹೀಗಾಗಿ ಪ್ಲೇಆಫ್ ರೇಸ್‌ನಿಂದ ಪಂಜಾಬ್ ಕಿಂಗ್ಸ್ ಬಹುತೇಕ ಹೊರಬಿದ್ದಾಂತಾಗಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, May 17, 2022, 12:28 [IST]
Other articles published on May 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X