ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದಕ್ಷಿಣ ಆಫ್ರಿಕಾ ಟೆಸ್ಟ್ ಕ್ರಿಕೆಟ್ ನಾಯಕತ್ವದತ್ತ ಡೀನ್ ಎಲ್ಗರ್ ಕಣ್ಣು

Dean Elgar eyes South Africa Test captaincy

ಕೇಪ್‌ಟೌನ್, ಮೇ 25: ದಕ್ಷಿಣ ಆಫ್ರಿಕಾ ಟೆಸ್ಟ್‌ ಕ್ರಿಕೆಟ್‌ ತಂಡದ ನಾಯಕತ್ವದಿಂದ ಫಾ ಟು ಫ್ಲೆಸಿಸ್ ಕೆಳಗಿಳಿದ ಬಳಿಕ ಆ ಜಾಗಕ್ಕೆ ಡೀನ್ ಎಲ್ಗರ್ ಬರಲಿದ್ದಾರೆ ಎಂಬ ಮಾತುಗಳು ಕ್ರಿಕೆಟ್ ವಲಯದಲ್ಲಿ ಕೇಳಿಬರುತ್ತಿವೆ. ಎಲ್ಗರ್ ಕೂಡ ಈ ಕುರಿತ ಪ್ರಶ್ನೆಗೆ ಹೌದೆಂಬಂತೆ ಉತ್ತರಿಸಿದ್ದಾರೆ.

ಸತ್ಯ ಮಾತನಾಡಿದ್ದಕ್ಕೆ ಹುಚ್ಚನೆನಿಸಿಕೊಂಡಿದ್ದೆ: ಪಾಕ್ ಮಾಜಿ ನಾಯಕಸತ್ಯ ಮಾತನಾಡಿದ್ದಕ್ಕೆ ಹುಚ್ಚನೆನಿಸಿಕೊಂಡಿದ್ದೆ: ಪಾಕ್ ಮಾಜಿ ನಾಯಕ

ಸೌತ್ ಆಫ್ರಿಕಾ ಟೆಸ್ಟ್‌ ತಂಡಕ್ಕೆ ಮುಂದಿನ ನಾಯಕರು ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ಡೀನ್ ಎಲ್ಗರ್ ಅವರು ತನಗೆ ಅತ್ತ ಆಸಕ್ತಿಯಿರುವುದಾಗಿ ಹೇಳಿದ್ದಾರೆ. ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಸಂದರ್ಶನದ ವೇಳೆ ಎಲ್ಗರ್ ಈ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಐಡೆನ್ ಮಾರ್ಕ್ರಮ್‌ ಕೂಡ ಟೆಸ್ಟ್ ನಾಯಕತ್ವದಲ್ಲಿ ಆಸಕ್ತಿ ಹೊಂದಿದ್ದಾರೆ ಎಂದು ತಿಳಿದುಬಂದಿದೆ.

ಕ್ರಿಕೆಟ್‌, ಸೆಕ್ಸ್‌ ಎರಡರ ವೇಳೆಯೂ ಹೇಳಬಹುದಾದ ಪೋಲಿ ಪದಗಳಿವು!ಕ್ರಿಕೆಟ್‌, ಸೆಕ್ಸ್‌ ಎರಡರ ವೇಳೆಯೂ ಹೇಳಬಹುದಾದ ಪೋಲಿ ಪದಗಳಿವು!

ಸೀಮಿತ ಓವರ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡದ ನಾಯರಾಗಿದ್ದ ಡು ಪ್ಲೆಸಿಸ್ ಅವರನ್ನು ಕ್ವಿಂಟನ್ ಡಿ ಕಾಕ್ ಕೆಳಗಿಳಿಸಿದ್ದರು. ಡಿ ಕಾಕ್‌ಗೆ ಟೆಸ್ಟ್ ನಾಯಕತ್ವ ವಹಿಸಿಕೊಳ್ಳಲೂ ಆಸಕ್ತಿಯಿದೆ, ಆದರೆ ಅವರಿಗೆ ಹೆಚ್ಚುವರಿ ಹೊರೆ ಹೊರಿಸಲು ಇಷ್ಟವಿಲ್ಲ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಹೇಳಿದೆ.

ಭಾವುಕರಾಗಿದ್ದ ಸಚಿನ್, ದ್ರಾವಿಡ್ ವಿಶ್ವಕಪ್‌ನಲ್ಲಿ ಭಾರತ ಗೆಲ್ಲಿಸಿದ್ದು ಇದೇ ದಿನ!ಭಾವುಕರಾಗಿದ್ದ ಸಚಿನ್, ದ್ರಾವಿಡ್ ವಿಶ್ವಕಪ್‌ನಲ್ಲಿ ಭಾರತ ಗೆಲ್ಲಿಸಿದ್ದು ಇದೇ ದಿನ!

'ಟೆಸ್ಟ್‌ ನಾಯಕನಾಗಿ ಮುಂದುವರೆಯೋದು ಖಂಡಿತಾ ಸುಲಭವಿಲ್ಲ. ಆದರೆ ನಾಯಕತ್ವದ ಗುಣ ನನ್ನಲ್ಲಿ ಸ್ವಾಭಾವಿಕವಾಗಿಯೇ ಬಂದಿದೆ ಎಂದು ನನಗನ್ನಿಸುತ್ತಿದೆ. ಈ ಮೊದಲು ನಾನು ಶಾಲಾ ಮಟ್ಟದಿಂದ ಪ್ರಾಂತೀಯ ಮಟ್ಟ ಮತ್ತು ಫ್ರಾಂಚೈಸಿ ತಂಡಗಳನ್ನು ಮುನ್ನಡೆಸಿದ ಅನುಭವ ಹೊಂದಿದ್ದೇನೆ. ಈಗ ಕೇಳಿಬರುತ್ತಿರುವ (ಆಫ್ರಿಕಾಕ್ಕೆ ಎಲ್ಗರ್ ನಾಯಕ ಎನ್ನುವ) ಮಾತುಗಳು ನಿಜವಾದರೆ ಅರ್ಥಪೂರ್ಣ ಎಂದು ಅನ್ನಿಸುತ್ತಿದೆ,' ಎಂದು ಎಲ್ಗರ್ ವಿವರಿಸಿದ್ದಾರೆ.

Story first published: Monday, May 25, 2020, 18:12 [IST]
Other articles published on May 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X