ಚಾಹಲ್ ಟೀಮ್ ಇಂಡಿಯಾದ ಮೀಸಲು ಆಟಗಾರನಾಗಿಯಾದರೂ ಇರಬೇಕಿತ್ತು: ದೀಪ್‌ದಾಸ್‌ಗುಪ್ತ

ಈ ಬಾರಿಯ ಟಿ20 ವಿಶ್ವಕಪ್ ತಂಡಕ್ಕೆ ಟೀಮ್ ಇಂಡಿಯಾ ಆಟಗಾರರ ಆಯ್ಕೆಯ ನಂತರ ಅತಿ ಹೆಚ್ಚು ಸುದ್ದಿಯಾದ ಆಟಗಾರ ಎಂದರೆ ಅದು ಯುಜುವೇಂದ್ರ ಚಾಹಲ್. ಇತ್ತೋಚಿನ ದಿನಗಳಲ್ಲಿ ಚಾಹಲ್ ಹೇಳಿಕೊಳ್ಳುವಂತಾ ಲಯದಲ್ಲಿಲ್ಲದಿದ್ದ ಕಾರಣ ಆಯ್ಕೆಯಾರರು ಚಾಹಲ್‌ರನ್ನು ಕೈಬಿಡುವ ನಿರ್ಧಾರವನ್ನು ಮಾಡಿದ್ದರು. ನಂತರ ಇದಕ್ಕೆ ಆಯ್ಕೆಗಾರರ ಸಮಿತಿಯ ಮುಖ್ಯಸ್ಥ ಚೇತನ್ ಶರ್ಮಾ ಪ್ರತಿಕ್ರಿಯೆ ಕೂಡ ನೀಡಿದ್ದು ಯುಎಇ ನೆಲದಲ್ಲಿ ಚಾಹಲ್‌ಗಿಂತ ವೇಗವಾಗಿ ಚೆಂಡೆಯುವ ಬೌಲರ್‌ಗಳ ಅಗತ್ಯವನ್ನು ಮನಗಂಡು ಈ ನಿರ್ಧಾರ ಕೈಗೊಂಡಿದ್ದೇವೆ ಎಂದಿದ್ದರು.

ಆದರೆ ಅನುಭವಿ ಆಟಗಾರನಾಗಿರುವ ಯುಜುವೇಂದ್ರ ಚಾಹಲ್ ಈ ಬಾರಿಯ ಐಪಿಎಲ್‌ನಲ್ಲಿ ಆಯ್ಕೆಗಾರರ ನಿರ್ಧಾರ ತಪ್ಪು ಎಂಬುದನ್ನು ಸಾರಿ ಸಾರಿ ಹೇಳುತ್ತಿದ್ದಾರೆ. ಆರ್‌ಸಿಬಿ ತಂಡದ ಪ್ರಮುಖ ಸ್ಪಿನ್ನರ್ ಆಗಿರುವ ಚಾಹಲ್ ಪ್ರತಿ ಪಂದ್ಯದಲ್ಲಿಯೂ ಅಮೋಘ ಪ್ರದರ್ಶನ ನೀಡುತ್ತಿದ್ದು ಎದುರಾಳಿಗಳಿಗೆ ಆಘಾತ ನೀಡುತ್ತಿದ್ದಾರೆ. ಈ ಮೂಲಕ ಆಯ್ಕೆಗಾರರ ನಿರ್ಧಾರ ತಪ್ಪು ಎಂದು ನಿರೂಪಿಸಲು ಹೊರಟವರಂತೆ ಭಾಸವಾಗುತ್ತಿದ್ದಾರೆ.

ಐಪಿಎಲ್‌ನಲ್ಲಿ ಒಂದು ತಂಡದೆದುರು ಹೆಚ್ಚು ಪಂದ್ಯ ಗೆದ್ದಿರುವ ತಂಡಗಳ ಪಟ್ಟಿಐಪಿಎಲ್‌ನಲ್ಲಿ ಒಂದು ತಂಡದೆದುರು ಹೆಚ್ಚು ಪಂದ್ಯ ಗೆದ್ದಿರುವ ತಂಡಗಳ ಪಟ್ಟಿ

ಚಾಹಲ್ ನೀಡುತ್ತಿರುವ ಈ ಪ್ರದರ್ಶನದಿಂದಾಗಿ ಕ್ರಿಕೆಟ್ ಅಭಿಮಾನಿಗಳು ಚಾಹಲ್ ಟೀಮ್ ಇಂಡಿಯಾ ವಿಶ್ವಕಪ್ ತಂಡದಲ್ಲಿರಬೇಕಿತ್ತು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಭಾರತದ ಮಾಜಿ ಕ್ರಿಕೆಟಿಗ ದೀಪ್ ದಾಸ್‌ಗುಪ್ತ ಕೂಡ ಹೊರತಾಗಿಲ್ಲ. ಈ ವಿಚಾರವಾಗಿ ದೀಪ್ ದಾಸ್‌ಗುಪ್ತ ಮಾತನಾಡಿದ್ದು ಯುಜುವೇಂದ್ರ ಚಾಹಲ್ ಟೀಮ್ ಇಂಡಿಯಾದಲ್ಲಿ ಮಿಸಲು ಆಟಗಾರನಾಗಿಯಾದರೂ ಇರಬೇಕಿತ್ತು ಎಂದಿದ್ದಾರೆ.

ಟಿ20 ವಿಶ್ವಕಪ್ ಬಿಡಿ, ನಿಮ್ಮ ಐಪಿಎಲ್ ತಂಡಕ್ಕೆ ಮೊದಲು ಆಸರೆಯಾಗಿ; ಆಟಗಾರರಿಗೆ ಲಾರಾ ಬುದ್ಧಿಮಾತುಟಿ20 ವಿಶ್ವಕಪ್ ಬಿಡಿ, ನಿಮ್ಮ ಐಪಿಎಲ್ ತಂಡಕ್ಕೆ ಮೊದಲು ಆಸರೆಯಾಗಿ; ಆಟಗಾರರಿಗೆ ಲಾರಾ ಬುದ್ಧಿಮಾತು

ಐಪಿಎಲ್‌ನಲ್ಲಿ ಚಾಹಲ್ ಮಿಂಚು: ಈ ಬಾರಿಯ ಟಿ20 ವಿಶ್ವಕಪ್‌ಗೆ ಭಾರತೀಯ ಕ್ರಿಕೆಟ್ ತಮಡದ ಆಯ್ಕೆಗಾರರು ಯುಜುವೇಂದ್ರ ಚಾಹಲ್ ಬದಲಿಗೆ ರಾಹುಲ್ ಚಾಹರ್‌ಗೆ ಮಣೆ ಹಾಕಿದ್ದಾರೆ. ಆದರೆ ಈ ಬಾರಿಯ ಐಪಿಎಲ್‌ನಲ್ಲಿ ಯುಜುವೇಂದ್ರ ಚಾಹಲ್ ಅಮೋಘ ಪ್ರದರ್ಶನ ನೀಡುತ್ತಿದ್ದರೆ ನಿರೀಕ್ಷೆ ಮೂಡಿಸಿದ್ದ ರಾಹುಲ್ ಚಹರ್ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಇದು ಟೀಮ್ ಇಂಡಿಯಾ ಪಾಲಿಗೆ ಆತಂಕದ ಬೆಳವಣಿಗೆಯಾಗಿದೆ.

ಐಪಿಎಲ್ 2021: ಪ್ಲೇಆಫ್ಸ್‌ಗೆ ಪ್ರವೇಶಿಸಿದ ಮೊದಲ ತಂಡ ಚೆನ್ನೈ ಸೂಪರ್ ಕಿಂಗ್ಸ್ಐಪಿಎಲ್ 2021: ಪ್ಲೇಆಫ್ಸ್‌ಗೆ ಪ್ರವೇಶಿಸಿದ ಮೊದಲ ತಂಡ ಚೆನ್ನೈ ಸೂಪರ್ ಕಿಂಗ್ಸ್

ಚಹರ್‌ಗೆ ಬೆಂಬಲ ನೀಡಬೇಕು: "ರಾಹುಲ್ ಚಹರ್ ಹೆಸರು ಆಡುವ ಬಳಗದಲ್ಲಿ ಇಲ್ಲದಿರುವುದು ಕಂಡು ನನಗೆ ಆಶ್ಚರ್ಯವಾಗಿತ್ತು. ಕನಿಷ್ಠ ನೀಸಲು ಆಟಗಾರನಾಗಿಯೂ ಆಯ್ಕೆಯಾಗದಿರುವುದು ಅಚ್ಚರಿ ಮೂಡಿಸಿತ್ತು. ಇಂಗ್ಲೆಂಡ್ ಹಾಗೂ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಚಹರ್ ಉತ್ತಮ ಪ್ರದರ್ಶನ ನಿಡಿದ್ದರು ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಅಕ್ಟೋಬರ್ 10ರ ವರೆಗೆ ನೀವು ಕೆಲ ಬದಲಾವನೆಯನ್ನು ಮಾಡಿಕೊಳ್ಳಲು ಅವಕಾಶವಿದೆ. ಹೀಗಾಗಿ ಚಾಹಲ್‌ಗೆ ಕನಿಷ್ಠ ಮೀಸಲು ಆಟಗಾರನಾಗಿಯೂ ಅವಕಾಶ ದೊರೆಯಬಹುದು ಎಂದು ನಾನು ಭಾವಿಸುತ್ತೇನೆ. ಅಲ್ಲದೆ ಇಂತಾ ಸಂದರ್ಭದಲ್ಲಿ ನಾವು ರಾಹುಲ್ ಚಹರ್‌ಗೆ ಕೂಡ ಬೆಂಬಲವನ್ನು ನೀಡಬೇಕು ಯಾಕೆಂದರೆ ಒಂದೆರಡು ಪಂದ್ಯಗಳ ಪ್ರದರ್ಶನದಿಂದಾಗಿ ಆತನನ್ನು ಕೆಟ್ಟ ಬೌಲರ್ ಎಂದು ನಿರೂಪಿಸಲು ಸಾಧ್ಯವಿಲ್ಲ" ಎಂದು ದೀಪ್‌ ದಾಸ್‌ಗುಪ್ತ ಅಭಿಪ್ರಾಯಪಟ್ಟಿದ್ದಾರೆ.

ಮೂವರು ಮಾತ್ರವೇ ವೇಗಿಗಳು: ಇನ್ನು ಇದೇ ಸಂದರ್ಭದಲ್ಲಿ ಟೀಮ್ ಇಂಡಿಯಾದ ಸ್ಕ್ವಾಡ್‌ನಲ್ಲಿ ಕೇವಲ ಮೂವರು ವೇಗಿಗಳು ಮಾತ್ರ ಇರುವುದು ನೋಡಿ ಅಚ್ಚರಿಯಾಯಿತು ಎಂಬುದನ್ನು ಕೂಡ ದೀಪ್‌ ದಾಸ್‌ಗುಪ್ತ ಹೇಳಿದ್ದಾರೆ. "ಕೇವಲ ಮೂವರು ವೇಗಿಗಳನ್ನು ಮಾತ್ರವೇ ತಂಡದಲ್ಲಿ ನೋಡಿ ನನಗೆ ಅಚ್ಚರಿಯಾಯಿತು. ಅಲ್ಲದೆ ಹಾರ್ದಿಕ್ ಪಾಂಡ್ಯ ಕೂಡ ಬೌಲಿಂಗ್ ಮಾಡುತ್ತಿಲ್ಲ. ಆತನನ್ನು ಬೌಲಿಂಗ್ ವಿಚಾರವಾಗಿ ಮಾತ್ರವೇ ಆಯ್ಕೆ ಮಾಡದಿದ್ದರೂ ಆತ ಉತ್ತಮವಾಗಿ ಬೌಲಿಂಗ್ ಎಸೆಯಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ. ಈ ಮಧ್ಯೆ ನನಗೆ ಭುವನೇಶ್ವರ್ ಕುಮಾರ್ ಅವರ ಫಾರ್ಮ್ ಸ್ವಲ್ಪ ಕಳವಳ ಮೂಡಿಸುತ್ತಿದೆ. ಎಸ್‌ಆರ್‌ಹೆಚ್ ವಾತಾವರಣದ ಕಾರಣದಿಂದಾಗಿಯೂ ಬೌಲಿಂಗ್ ಮೇಲೆ ಪರಿಣಾಮ ಬಿದ್ದಿರಬಹುದು. ಈಗ ನಮ್ಮ ತಂಡದಲ್ಲಿ ರವೀಂದ್ರ ಜಡೇಜಾ ಮಾತ್ರವೇ ಪ್ರಮುಖ ಬೌಲಿಂಗ್ ಆಲ್‌ರೌಂಡರ್ ಆಗಿ ಗುರುತಿಸಿಕೊಳ್ಳುತ್ತಾರೆ" ಎಂದಿದ್ದಾರೆ ದೀಪ್ ದಾಸ್‌ಗುಪ್ತ.

CSK vs SRH: ಮುಂದುವರೆದ ಚೆನ್ನೈ ಗೆಲುವಿನ ನಾಗಾಲೋಟ, ಮತ್ತೆ ಮುಗ್ಗರಿಸಿದ ಹೈದರಾಬಾದ್CSK vs SRH: ಮುಂದುವರೆದ ಚೆನ್ನೈ ಗೆಲುವಿನ ನಾಗಾಲೋಟ, ಮತ್ತೆ ಮುಗ್ಗರಿಸಿದ ಹೈದರಾಬಾದ್

ಟೀಮ್ ಇಂಡಿಯಾ ಸಂಪೂರ್ಣ ತಂಡ ಹೀಗಿದೆ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪ ನಾಯಕ), ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರಾಹುಲ್ ಚಹರ್, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬೂಮ್ರಾ , ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ
ಮೀಸಲು ಆಟಗಾರರು: ಶ್ರೇಯಸ್ ಅಯ್ಯರ್, ಶಾರ್ದೂಲ್ ಠಾಕೂರ್, ದೀಪಕ್ ಚಹರ್

For Quick Alerts
ALLOW NOTIFICATIONS
For Daily Alerts
Story first published: Friday, October 1, 2021, 19:15 [IST]
Other articles published on Oct 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X