ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶ್ರೀಲಂಕಾ ಪ್ರವಾಸದಲ್ಲಿ ಟೀಮ್ ಇಂಡಿಯಾ ನಾಯಕತ್ವಕ್ಕೆ ಈ ಇಬ್ಬರು ಸೂಕ್ತ ಎಂದ ದೀಪ್‌ದಾಸ್ ಗುಪ್ತ

Deep Dasgupta suggests two playes for Team India captaincy for sri lanka tour
Team India ಏಕದಿನ ತಂಡಕ್ಕೆ ಹೊಸ ನಾಯಕ | Oneindia Kannada

ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ತಂಡ ಇರುವಂತೆಯೇ ಮತ್ತೊಂದು ತಂಡ ಶ್ರೀಲಂಕಾಗೆ ತೆರಳಿ ಸೀಮಿತ ಓವರ್‌ಗಳ ಸರಣಿಯಲ್ಲಿ ಭಾಗಿಯಾಗುವುದನ್ನು ಬಿಸಿಸಿಐ ಅಧ್ಯಕ್ಷ ಘೋಷಿಸಿದ್ದಾರೆ. ಹೀಗಾಗಿ ಈ ಪ್ರವಾಸದಲ್ಲಿ ಭಾರತ ತಂಡದ ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇವೆ ಲಭ್ಯವಾಗುವುದಿಲ್ಲ. ಹಾಗಾಗಿ ತಂಡವನ್ನು ಮುನ್ನಡೆಸುವವರು ಯಾರು ಎಂಬುದು ಕೂಡ ಈಗ ಪ್ರಶ್ನೆಯಾಗಿದೆ.

ಈ ಪ್ರಶ್ನೆಗೆ ಮಾಜಿ ಕ್ರಿಕೆಟಿಗ ಹಾಲಿ ಕಾಮೆಂಟೇಟರ್ ದೀಪ್ ದಾಸ್‌ಗುಪ್ತ ಉತ್ತರವನ್ನು ನೀಡಿದ್ದಾರೆ. ಈ ಪ್ರವಾಸದಲ್ಲಿ ಭಾರತ ತಂಡವನ್ನು ಸಮರ್ಥವಾಗಿ ಮುನ್ನಡೆಸಬಲ್ಲ ಇಬ್ಬರ ಹೆಸರನ್ನು ದೀಪ್ ದಾಸ್‌ಗುಪ್ತ ಹೆಸರಿಸಿದ್ದಾರೆ.

ಯುಎಇಯಲ್ಲಿ ಪಿಎಸ್‌ಎಲ್ ನಡೆಸುವ ಪಾಕಿಸ್ತಾನ್ ಯೋಜನೆಗೆ ತಣ್ಣೀರು!ಯುಎಇಯಲ್ಲಿ ಪಿಎಸ್‌ಎಲ್ ನಡೆಸುವ ಪಾಕಿಸ್ತಾನ್ ಯೋಜನೆಗೆ ತಣ್ಣೀರು!

ಟೀಮ್ ಇಂಡಿಯಾದ ವೇಗಿ ಭುವನೇಶ್ವರ್ ಕುಮಾರ್ ಹಾಗೂ ಆರಂಭಿಕ ಆಟಗಾರ ಶಿಖರ್ ಧವನ್ ಶ್ರೀಲಂಕಾ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಗೆ ನಾಯಕತ್ವ ವಹಿಸಿಕೊಳ್ಳಲು ಸಮರ್ಥರು ಎಂದಿದ್ದಾರೆ ದೀಪ್‌ದಾಸ್ ಗುಪ್ತ. ಟೆಸ್ಟ್ ತಂಡದಲ್ಲಿ ದುದೀರ್ಘ ಕಾಲದಿಂದ ಧವನ್ ಸ್ಥಾನವನ್ನು ಗಳಿಸಲು ವಿಫಲರಾಗುದ್ದರೆ ಭುವನೇಶ್ವರ್ ಕುಮಾರ್ ಕೂಡ ಇಂಗ್ಲೆಂಡ್ ವಿರುದ್ಧದ ಸರಣಿಗೆ ಆಯ್ಕೆಯಾಗಿಲ್ಲ.

"ಖಂಡಿತವಾಗಿಯೂ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆಎಲ್ ರಾಹುಲ್ ಈ ಸರಣಿಗೆ ಲಭ್ಯವಾಗುವುದಿಲ್ಲ. ಹೀಗಾಗಿ ಅನುಭವಿ ಆಟಗಾರ ಶಿಖರ್ ಧವನ್ ಮಖಂಡಿತಾ ನಾಯಕನ ಸ್ಥಾನಕ್ಕೆ ಉತ್ತಮ ಆಯ್ಕೆಯಾಗಬಲ್ಲರು. ಇನ್ನು ಭುವನೇಶ್ವರ್ ಕುಮಾರ್ ಅವರನ್ನು ಕೂಡ ನಾವು ಕಡೆಗಣನೆ ಮಾಡುವಂತಿಲ್ಲ. ಭುವನೇಶ್ವರ್ ಆಡಲು ಸಮರ್ಥರಾಗಿದ್ದು ಆಡಲು ಸಿದ್ಧವಾಗಿದ್ದರೆ ಶ್ರೀಲಂಕಾ ಸರಣಿಗೆ ನಾಯಕನಾಗಲು ಅವರು ಕೂಡ ಉತ್ತಮ ಆಯ್ಕೆ" ಎಂದು ದೀಪ್‌ ದಾಸ್‌ಗುಪ್ತ ಹೇಳಿದ್ದಾರೆ.

ಎಬಿಡಿಗಿಂತ ಕ್ರಿಸ್ ಗೇಲ್, ಕೊಹ್ಲಿ ಸಖತ್ ಡೇಂಜರಸ್ ಎನ್ನುತ್ತಿವೆ ಈ ಅಂಕಿಅಂಶಗಳು!ಎಬಿಡಿಗಿಂತ ಕ್ರಿಸ್ ಗೇಲ್, ಕೊಹ್ಲಿ ಸಖತ್ ಡೇಂಜರಸ್ ಎನ್ನುತ್ತಿವೆ ಈ ಅಂಕಿಅಂಶಗಳು!

ಯುವ ಆಟಗಾರರನ್ನು ಒಳಗೊಂಡಿರುವ ಭಾರತ ತಂಡ ಜುಲೈ 5 ರಂದು ಶ್ರೀಲಂಕಾಗೆ ಪ್ರಯಾಣ ಬೆಳೆಸುವ ಸಂಭವವಿದೆ. ಮೊದಲಿಗೆ ಏಕದಿನ ಸರಣಿ ಜುಲೈ 13, 16 ಮತ್ತು 19ರಂದು ನಡೆಯಲಿದ್ದು ನಂತರ ಮೂರು ಪಂದ್ಯಗಳ ಟಿ20 ಸರಣಿ ಜುಲೈ 22, 24 ಹಾಗೂ 27ರಂದು ನಡೆಯುವ ಸಾಧ್ಯತೆಯಿದೆ.

Story first published: Tuesday, May 11, 2021, 13:28 [IST]
Other articles published on May 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X