ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದೀಪಕ್ ಚಹಾರ್‌ಗೆ ಕೊರೊನಾ, ಐಪಿಎಲ್ ವೇಳಾಪಟ್ಟಿ ಘೋಷಣೆ ವಿಳಂಬ

Deepak Chahar is the one who has been tested positive for COVID-19 from CSK

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ನ ಮಾಜಿ ಚಾಂಪಿಯನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್‌ನ ಆಟಗಾರ ದೀಪಕ್ ಚಹಾರ್‌ಗೆ ಕೊರೊನಾವೈರಸ್ ಪಾಸಿಟಿವ್ ಬಂದಿದೆ. ಸಿಎಸ್‌ಕೆ ತಂಡದಲ್ಲಿ ಓರ್ವ ಆಟಗಾರ ಸೇರಿ 12 ಸಿಬ್ಬಂದಿಗೆ ಕೋವಿಡ್-19 ಪಾಸಿಟಿವ್ ಬಂದಿರುವುದು ವರದಿಯಾಗಿತ್ತು. ಆದರೆ ಈಗ ಆಟಗಾರನ ಹೆಸರು ಬಹಿರಂಗವಾಗಿದೆ.

ಕ್ರೀಡಾ ಪ್ರಶಸ್ತಿ ಸಮಾರಂಭಕ್ಕೆ ರೋಹಿತ್-ಇಶಾಂತ್ ಇಲ್ಲ, ಮೂವರಿಗೆ ಕೊರೊನಾಕ್ರೀಡಾ ಪ್ರಶಸ್ತಿ ಸಮಾರಂಭಕ್ಕೆ ರೋಹಿತ್-ಇಶಾಂತ್ ಇಲ್ಲ, ಮೂವರಿಗೆ ಕೊರೊನಾ

ಐಪಿಎಲ್‌ ತಂಡಗಳಲ್ಲಿ ಕೊರೊನಾ ಪ್ರಕರಣ ಬಂಡು ಬರುತ್ತಿರುವುದನ್ನು ಗಮನಿಸಿರುವ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಐಪಿಎಲ್ 13ನೇ ಆವೃತ್ತಿಯ ವೇಳಾಪಟ್ಟಿ ಘೋಷಿಸಲು ಮಾಡಿದ್ದ ನಿರ್ಧಾರವನ್ನು ಹಿಡಿದಿಟ್ಟುಕೊಳ್ಳಲಿದೆ ಎಂದು ಹೇಳಲಾಗುತ್ತಿದೆ.

ಸಿಕ್ಸ್ ಚಚ್ಚಿ ತನ್ನ ಕಾರಿನ ಗಾಜನ್ನೇ ಪುಡಿ ಪುಡಿ ಮಾಡಿದ ಕೆವಿನ್ ಓಬ್ರಿಯನ್!ಸಿಕ್ಸ್ ಚಚ್ಚಿ ತನ್ನ ಕಾರಿನ ಗಾಜನ್ನೇ ಪುಡಿ ಪುಡಿ ಮಾಡಿದ ಕೆವಿನ್ ಓಬ್ರಿಯನ್!

ಬಿಸಿಸಿಐಯು 2020ರ ಐಪಿಎಲ್ ವೇಳಾಪಟ್ಟಿಯನ್ನು ಈ ವಾರದ ಅಂತ್ಯಕ್ಕೆ ಘೋಷಿಸುವ ನಿರೀಕ್ಷೆಯಿದೆ. ಅಂದರೆ ಟೂರ್ನಿ ಆರಂಭಕ್ಕೆ ಎರಡು ವಾರ ಮುಂಚಿತವಾಗಿ ವೇಳಾಪಟ್ಟಿ ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ. ಸದ್ಯ ಎಲ್ಲಾ ಐಪಿಎಲ್ ತಂಡಗಳು ಅಭ್ಯಾಸದಲ್ಲಿ ತೊಡಗಿಕೊಂಡಿವೆ.

ಹತ್ರ ಬಂದ್ರೆ ಅಲರಾಮ್: ಯುಎಇ ಐಪಿಎಲ್‌ನ ಕುತೂಹಲಕಾರಿ ಸಂಗತಿಗಳಿವು!ಹತ್ರ ಬಂದ್ರೆ ಅಲರಾಮ್: ಯುಎಇ ಐಪಿಎಲ್‌ನ ಕುತೂಹಲಕಾರಿ ಸಂಗತಿಗಳಿವು!

'ಪರಿಸ್ಥಿತಿಯನ್ನು ನಿಭಾಯಿಸಲು ಸಾಕಷ್ಟು ಕ್ರಮಗಳು ಜಾರಿಯಲ್ಲಿವೆ ಮತ್ತು ಪಂದ್ಯಾವಳಿಗೆ ಕೊರೊನಾದಿಂದ ತಕ್ಷಣದ ಬೆದರಿಕೆ ಇಲ್ಲ. ಆದರೆ ಈ ಬೆಳವಣಿಗೆಯಿಂದಾಗಿ ಐಪಿಎಲ್ ವೇಳಾಪಟ್ಟಿ ಘೋಷಣೆ ವಿಳಂಬವಾಗಿದೆ,' ಎಂದು ಬಿಸಿಸಿಐ ಮೂಲವೊಂದು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದೆ.

Story first published: Saturday, August 29, 2020, 15:39 [IST]
Other articles published on Aug 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X