ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬ್ಯಾಟಿಂಗ್‌ಗೆ ಇಳಿಯುವ ಮುನ್ನ ದ್ರಾವಿಡ್ ಹೇಳಿದ್ದೇನು? ಗುಟ್ಟು ಬಿಚ್ಚಿಟ್ಟ ದೀಪಕ್ ಚಹರ್

Deepak Chahar Reveals What Rahul Dravid Told Him Before he Went Out to Bat
Deepak Chahar ಬಾಲ್ ಹಾಗು ಬ್ಯಾಟ್ನಲ್ಲಿ ಪಂದ್ಯದ ದಿಕ್ಕನ್ನೇ ಬದಲಿಸಿದ್ದು ಹೇಗೆ | Oneindia Kannada

ಕೊಲಂಬೋ, ಜುಲೈ 21: ಭಾರತ ಹಾಗೂ ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದ ಗೆಲುವಿನಲ್ಲಿ ಅನಿರೀಕ್ಷಿತವೆಂಬಂತೆ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿ ಹೀರೋ ಆಗಿ ಮಿಂಚಿದ್ದಾರೆ ವೇಗಿ ದೀಪಕ್ ಚಹರ್. ಸೀಮಿತ ಓವರ್‌ಗಳ ಕ್ರಿಕೆಟ್‌ನ ಸ್ಪೆಶಲಿಸ್ಟ್ ಬೌಲರ್ ಎನಿಸಿರುವ ದೀಪಕ್ ಚಹರ್ ಮೊದಲ ಬಾರಿಗೆ ಬ್ಯಾಟಿಂಗ್‌ನಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವ ಅವಕಾಶ ಪಡೆದುಕೊಂಡು ಅತ್ಯುತ್ತಮ ರೀತಿಯಲ್ಲಿ ಬಳಸಿಕೊಂಡಿದ್ದಾರೆ. ದೀಪಕ್ ಚಹರ್ ತಮ್ಮ ಈ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಮಾತನಾಡಿದ್ದು ಈ ಪ್ರದರ್ಶನಕ್ಕೆ ರಾಹುಲ್ ದ್ರಾವಿಡ್ ನನ್ನ ಮೇಲಿಟ್ಟದ್ದ ನಂಬಿಕೆಯೇ ಕಾರಣ ಎಂದಿದ್ದಾರೆ.

276 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ 36 ಓವರ್‌ಗಳಲ್ಲಿ 193 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ಸಂದರ್ಭದಲ್ಲಿ ದೀಪಕ್ ಚಹರ್ ಹಾಗೂ ಭುವನೇಶ್ವರ್ ಕುಮಾರ್ ಜೋಡಿ ಅತ್ಯಂತ ನಿರ್ಣಾಯಕ ಪ್ರದರ್ಶನ ಜೊತೆಯಾಟವನ್ನು ನೀಡಿದ್ದಲ್ಲದೆ ಅಸಾಧ್ಯ ಗೆಲುವನ್ನು ಸಾಧ್ಯವಾಗಿಸಿದ್ದರು.

ಟೀಮ್ ಇಂಡಿಯಾ ಗೆಲುವಿನ ಸ್ಟಾರ್ ದೀಪಕ್ ಚಾಹರ್ ಹೊಸ ದಾಖಲೆ!ಟೀಮ್ ಇಂಡಿಯಾ ಗೆಲುವಿನ ಸ್ಟಾರ್ ದೀಪಕ್ ಚಾಹರ್ ಹೊಸ ದಾಖಲೆ!

ಗೆಲುವಿನ ಹೀರೋ ಆಗಿ ಮಿಂಚಿದ ದೀಪಕ್ ಚಹರ್ ಈ ಪಂದ್ಯದ ಬಳಿಕ ಹೇಳಿದ್ದೇನು? ಕೋಚ್ ರಾಹುಲ್ ದ್ರಾವಿಡ್ ದೀಪಕ್ ಚಹರ್‌ಗೆ ಬ್ಯಾಟಿಂಗ್‌ಗೆ ಇಳಿಯುವ ಮುನ್ನ ಹೇಳಿದ್ದೇನು? ಮುಂದೆ ಓದಿ..

ದ್ರಾವಿಡ್ ಸರ್ ನಂಬಿಕೆಯೇ ಕಾರಣ

ದ್ರಾವಿಡ್ ಸರ್ ನಂಬಿಕೆಯೇ ಕಾರಣ

ದೀಪಕ್ ಚಹರ್ ಬ್ಯಾಟಿಂಗ್‌ನಲ್ಲಿ ತಮ್ಮ ಅಮೋಘ ಪ್ರದರ್ಶನದ ಬಳಿಕ ಮಾತನಾಡಿ ತಮ್ಮ ಈ ಪ್ರದರ್ಶನಕ್ಕೆ ಕೋಚ್ ರಾಹುಲ್ ದ್ರಾವಿಡ್ ಅವರು ನನ್ನ ಬ್ಯಾಟಿಂಗ್ ಮೇಲೆ ಇಟ್ಟಿದ್ದ ನಂಬಿಕೆಯೇ ಕಾರಣ ಎಂದಿದ್ದಾರೆ. ದ್ರಾವಿಡ್ ಅವರು ಇಟ್ಟಿದ್ದ ಭರವಸೆಯ ಕಾರಣದಿಂದಾಗಿ ತಾನು ಮ್ಯಾಚ್ ವಿನ್ನಿಂ್‌ ಪ್ರದರ್ಶನ ನೀಡಲು ಸಾಧ್ಯವಾಯಿತು ಎಂದಿದ್ದಾರೆ.

"ಎಲ್ಲಾ ಎಸೆತಗಳನ್ನು ಆಡು"

"ದೇಶಕ್ಕಾಗಿ ಪಂದ್ಯವನ್ನು ಗೆಲ್ಲಿಸುವುದಕ್ಕಿಂತ ಸಂತಸದ ಸಂಗತಿ ಮತ್ತೊಂದಿಲ್ಲ. ರಾಹುಲ್ ಸರ್ ನನಗೆ ಎಲ್ಲಾ ಎಸೆತಗಳನ್ನು ಕೂಡ ಆಡುವಂತೆ ಹೇಳಿದ್ದರು. ನಾನು ಅವರೊಂದಿಗೆ ಭಾರತ ಎ ತಂಡದಲ್ಲಿ ಕೆಲ ಪಂದ್ಯಗಳನ್ನು ಆಡಿದ್ದೆ. ಅವರಿಗೆ ನನ್ನ ಮೇಲೆ ಭರವಸೆಯಿತ್ತೆಂಬ ನಂಬಿಕೆಯಿದೆ. ನಾನು ಏಳನೇ ಕ್ರಮಾಂಕದಲ್ಲಿ ಇಳಿಯುವಷ್ಟು ಉತ್ತಮ ಬ್ಯಾಟಿಂಗ್ ಹೊಂದಿದ್ದೇನೆ ಎಂದು ಅವರು ನನಗೆ ಹೇಳಿದ್ದರು"

ಗೆಲುವಿನ ಭರವಸೆ ಮೂಡಿತ್ತು

ಗೆಲುವಿನ ಭರವಸೆ ಮೂಡಿತ್ತು

"ಈ ಪಿಚ್‌ನಲ್ಲಿ ಬೆನ್ನಟ್ಟಲು ಇದು ಉತ್ತಮವಾದ ಸ್ಕೋರ್ ಆಗಿತ್ತು. ಆಗ ನನ್ನ ತಲೆಯಲ್ಲಿ ಓಡುತ್ತಿದ್ದ ಒಂದೇ ಸಂಗತಿಯೆಂದರೆ ಇದೇ ರೀತಿಯ ಇನ್ನಿಂಗ್ಸ್‌ಗಾಗಿ ನಾನು ಕನಸು ಕಾಣುತ್ತಿದ್ದೆ ಎಂದು. 50 ರನ್‌ಗಳಿಗಿಂತ ಕಡಿಮೆ ಅಂತರಕ್ಕೆ ಬಂದಾಗ ನಾವು ಗೆಲ್ಲಬಹುದು ಎಂಬ ಭರವಸೆ ಮೂಡಿತ್ತು. ಅದಕ್ಕೂ ಮುನ್ನ ಪ್ರತಿ ಎಸೆತವನ್ನೂ ಎಚ್ಚರಿಕೆಯಿಂದ ಎದುರಿಸುತ್ತಿದ್ದೆವು. ಅದಾದ ಬಳಿಕ ನಾನು ಕೆಲ ಸವಾಲಿನ ಹೊಡೆತಗಳನ್ನು ಬಾರಿಸಿದೆ" ಎಂದು ದೀಪಕ್ ಚಹರ್ ಹೇಳಿದ್ದಾರೆ.

8ನೇ ಕ್ರಮಾಂಕದಲ್ಲಿ ದಾಖಲೆಯ ಸ್ಕೋರ್

8ನೇ ಕ್ರಮಾಂಕದಲ್ಲಿ ದಾಖಲೆಯ ಸ್ಕೋರ್

ಚಹರ್ ಶ್ರೀಲಂಕಾ ತಂಡದ ವಿರುದ್ಧ ಅಜೇಯ 69 ರನ್‌ಗಳನ್ನು ಬಾರಿಸಿ ಗೆಲುವಿಗೆ ಕಾರಣರಾದರು. ಭಾರತೀಯ ಬ್ಯಾಟ್ಸ್‌ಮನ್ ಓರ್ವ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದು ಗಳಿಸಿದ ಎರಡನೇ ಹೈಯೆಸ್ಟ್ ಸ್ಕೋರ್ ಇದಾಗಿದೆ. ರವೀಂದ್ರ ಜಡೇಜಾ ನ್ಯೂಜಿಲೆಂಡ್ ತಂಡದ ವಿರುದ್ಧ 2019ರ ವಿಶ್ವಕಪ್‌ನಲ್ಲಿ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದು 77 ರನ್ ಬಾರಿಸಿರುವುದು ಮೊದಲ ಸ್ಥಾನದಲ್ಲಿದೆ. ಮೂರನೇ ಪಂದ್ಯವೂ ಕೂಡ ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯಲಿದೆ.ಮೂರು ಪಂದ್ಯಗಳ ಏಕದಿನ ಸರಣಿಯನ್ನು ಭಾರತ 2-0 ಅಂತರದಿಂದ ಈಗಾಗಲೇ ತನ್ನ ವಶಕ್ಕೆ ಪಡೆದುಕೊಂಡಿದೆ.

Story first published: Wednesday, July 21, 2021, 14:44 [IST]
Other articles published on Jul 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X