ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ವೆಸ್ಟ್ ಇಂಡೀಸ್: ಟಿ20ಐ ದಾಖಲೆ ಬರೆದ ದೀಪಕ್ ಚಹಾರ್

Deepak Chahar scripts record after stunning spell against West Indies

ಗಯಾನಾ, ಆಗಸ್ಟ್ 7: ವೆಸ್ಟ್ ಇಂಡೀಸ್ ವಿರುದ್ಧದ 3ನೇ ಮತ್ತು ಕೊನೆಯ ಟಿ20 ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನದೊಂದಿಗೆ ಭಾರತದ ವೇಗಿ ದೀಪಕ್ ಚಾಹರ್ ಅಪರೂಪದ ದಾಖಲೆಯನ್ನೂ ನಿರ್ಮಿಸಿದ್ದಾರೆ. ಮಂಗಳವಾರ (ಆಗಸ್ಟ್ 6) ಪಂದ್ಯದಲ್ಲಿ ಚಾಹರ್ ಈ ಸಾಧನೆ ಮೆರೆದರು.

ಭಾರತ vs ವೆಸ್ಟ್ ಇಂಡೀಸ್ ಟಿ20: ಆಲ್ ರೌಂಡರ್ ಪೊಲಾರ್ಡ್‌ಗೆ ದಂಡಭಾರತ vs ವೆಸ್ಟ್ ಇಂಡೀಸ್ ಟಿ20: ಆಲ್ ರೌಂಡರ್ ಪೊಲಾರ್ಡ್‌ಗೆ ದಂಡ

ದೀಪಕ್ ಮಾರಕ ಬೌಲಿಂಗ್ ನೆರವಿನಿಂದ ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಪ್ರವಾಸಿ ಭಾರತ 7 ವಿಕೆಟ್ ಗೆಲುವು ದಾಖಲಿಸುವುದರೊಂದಿಗೆ 3 ಪಂದ್ಯಗಳ ಟಿ20 ಸರಣಿಯಲ್ಲಿ ವಿಂಡೀಸನ್ನು ವೈಟ್‌ ವಾಷ್‌ಗೊಳಿಸಿದೆ.

ಲಡಾಖ್‌ ಕ್ರಿಕೆಟಿಗರಿಗೆ ಜಮ್ಮು-ಕಾಶ್ಮೀರ ತಂಡದಲ್ಲಿ ಆಡಲು ಬಿಸಿಸಿಐ ಅಸ್ತುಲಡಾಖ್‌ ಕ್ರಿಕೆಟಿಗರಿಗೆ ಜಮ್ಮು-ಕಾಶ್ಮೀರ ತಂಡದಲ್ಲಿ ಆಡಲು ಬಿಸಿಸಿಐ ಅಸ್ತು

ಮಂಗಳವಾರದ ಪಂದ್ಯದಲ್ಲಿ ದೀಪಕ್ ಚಾಹರ್ ಒಟ್ಟು 3 ವಿಕೆಟ್‌ಗಳೊಂದಿಗೆ ಗಮನ ಸೆಳೆದರು.

ಪ್ರಮುಖ ಮೂರು ವಿಕೆಟ್‌ಗಳು

ಪ್ರಮುಖ ಮೂರು ವಿಕೆಟ್‌ಗಳು

ಪಂದ್ಯದ ಆರಂಭದಲ್ಲೇ ಚೆಂಡು ಎತ್ತಿಕೊಂಡ ದೀಪಕ್ ಚಾಹರ್ ವೆಸ್ಟ್ ಇಂಡೀಸ್ ಆರಂಭಿಕ ಬ್ಯಾಟ್ಸ್ಮನ್‌ಗಳಾದ ಸುನಿಲ್ ನರೈನ್ ಮತ್ತು ಎವಿನ್ ಲೆವಿಸ್ ವಿಕೆಟ್ ಕೆಡವಿದರು. ಅನಂತರ ಶಿಮ್ರನ್ ಹೆಟ್ಮೈಯರ್ ವಿಕೆಟ್ ಕೂಡ ದೀಪಕ್‌ಗೆ ಲಭಿಸಿತು. ಅಂತೂ ಕ್ರಮವಾಗಿ 1.5, 3.1, 3.5ನೇ ಓವರ್‌ಗಳಲ್ಲಿ ವಿಂಡೀಸ್‌ನ ಆರಂಭಿಕ ಮೂರು ವಿಕೆಟ್‌ಗಳು ಪತನ ಕಂಡಿದ್ದವು.

ಕೇವಲ 4 ರನ್‌ಗೆ 3 ವಿಕೆಟ್

ಕೇವಲ 4 ರನ್‌ಗೆ 3 ವಿಕೆಟ್

ದೀಪಕ್ ಚಾಹರ್ ವೆಸ್ಟ್‌ ಇಂಡೀಸ್‌ನ ಪ್ರಮುಖ ಮೂರು ವಿಕೆಟ್‌ ಮುರಿದು ನೀಡಿದ್ದು ಕೇವಲ 4 ರನ್‌. 3 ಓವರ್‌ ಎಸೆದಿದ್ದ ಚಾಹರ್ ಬರೀ 4 ರನ್‌ ನೀಡಿದ್ದರು. ಇದಕ್ಕಾಗಿ ದೀಪಕ್ ದಾಖಲೆ ನಿರ್ಮಿಸಿದ್ದಾರೆ. ಟಿ20ಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಇನ್ನಿಂಗ್ಸ್‌ ಒಂದರಲ್ಲಿ ಬೆಸ್ಟ್ ಬೌಲಿಂಗ್ ತೋರಿಸಿದವರಲ್ಲಿ ದೀಪಕ್ ಮೊದಲ ಸ್ಥಾನದಲ್ಲಿದ್ದಾರೆ.

ಕುಲದೀಪ್ 2ನೇ ಉತ್ತಮ ಬೌಲರ್

ಕುಲದೀಪ್ 2ನೇ ಉತ್ತಮ ಬೌಲರ್

ಟಿ20ಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅತ್ಯುತ್ತಮ ಬೌಲಿಂಗ್ ತೋರಿಸಿದವರಲ್ಲಿ ದೀಪಕ್ ಅಗ್ರ ಸ್ಥಾನದಲ್ಲಿದ್ದರೆ. 2018ರಲ್ಲಿ ಕೋಲ್ಕತ್ತಾದಲ್ಲಿ ನಡೆದಿದ್ದ ಪಂದ್ಯದಲ್ಲಿ 13 ರನ್ನಿಗೆ 3 ವಿಕೆಟ್ ಕೆಡವಿದ್ದ ಕುಲದೀಪ್ ಯಾದವ್ ದ್ವಿತೀಯ ಸ್ಥಾನದಲ್ಲಿ, 2019ರಲ್ಲಿ ಲಾಡರ್‌ಹಿಲ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ (ಇದೇ ಸರಣಿ) 17 ರನ್ನಿಗೆ 3 ವಿಕೆಟ್ ಪಡೆದಿದ್ದ ನವದೀಪ್ ಸೈನಿ 3ನೇ ಸ್ಥಾನದಲ್ಲಿ, 2016ರಲ್ಲಿ ಲಾಡರ್‌ಹಿಲ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ 24 ರನ್‌ಗೆ 3 ವಿಕೆಟ್ ಕೆಡವಿದ್ದ ಅಮಿತ್ ಮಿಶ್ರ 4ನೇ ಸ್ಥಾನದಲ್ಲಿ ಮತ್ತು 2010ರಲ್ಲಿ ಬ್ರಿಡ್ಜ್‌ಟೌನ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ 35 ರನ್‌ಗೆ 3 ವಿಕೆಟ್ ಪಡೆದಿದ್ದ ಆಶೀಷ್ ನೆಹ್ರಾ 5ನೇ ಸ್ಥಾನದಲ್ಲಿದ್ದಾರೆ.

ಕೊಹ್ಲಿ-ಪಂತ್ ಭರ್ಜರಿ ಬ್ಯಾಟಿಂಗ್

ಕೊಹ್ಲಿ-ಪಂತ್ ಭರ್ಜರಿ ಬ್ಯಾಟಿಂಗ್

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ವಿಂಡೀಸ್‌, ಕೀರನ್ ಪೊಲಾರ್ಡ್ 58, ರೋಮನ್ ಪೊವೆಲ್ 32 ರನ್‌ನೊಂದಿಗೆ 20 ಓವರ್‌ಗೆ 6 ವಿಕೆಟ್ ನಷ್ಟದಲ್ಲಿ 146 ರನ್ ಮಾಡಿತ್ತು. ಗುರಿ ಬೆನ್ನತ್ತಿದ ಭಾರತ, 19.1 ಓವರ್‌ಗೆ 3 ವಿಕೆಟ್‌ ನಷ್ಟದಲ್ಲಿ 150 ರನ್ ಮಾಡಿತು. ರಿಷಬ್ ಪಂತ್ 65, ವಿರಾಟ್ ಕೊಹ್ಲಿ 59 ರನ್ ಕೊಡುಗೆಯಿತ್ತಿದ್ದರು.

Story first published: Wednesday, August 7, 2019, 13:25 [IST]
Other articles published on Aug 7, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X