ಜಸ್ಪ್ರೀತ್ ಬುಮ್ರಾ ಬದಲಿಗೆ ಟಿ20 ವಿಶ್ವಕಪ್‌ನಲ್ಲಿ ಈ ಬೌಲರ್ ಆಡಬೇಕು ಎಂದ ಸಬಾ ಕರೀಮ್

ವೇಗಿ ಜಸ್ಪ್ರೀತ್ ಬುಮ್ರಾ ಮುಂಬರುವ ಪಂದ್ಯಗಳಿಗೆ ಅನರ್ಹರಾಗಿದ್ದರೆ ದೀಪಕ್ ಚಹಾರ್ ಅವರನ್ನು ಐಸಿಸಿ ಟಿ 20 ವಿಶ್ವಕಪ್‌ನ ಮುಖ್ಯ ತಂಡಕ್ಕೆ ಭಾರತದ ಸ್ಟ್ಯಾಂಡ್‌ಬೈ ಪಟ್ಟಿಯಿಂದ ಅಪ್‌ಗ್ರೇಡ್ ಮಾಡಬೇಕು ಎಂದು ಭಾರತದ ಮಾಜಿ ಕ್ರಿಕೆಟಿಗ ಸಬಾ ಕರೀಮ್ ಅಭಿಪ್ರಾಯಪಟ್ಟಿದ್ದಾರೆ.

ಬಿಸಿಸಿಐ ಮೂಲಗಳನ್ನು ಉಲ್ಲೇಖಿಸಿ ವರದಿಗಳು ಬಂದ ನಂತರ, ಬುಮ್ರಾ ಬೆನ್ನುಮೂಳೆಯ ಮುರಿತದಿಂದ ಟಿ 20 ವಿಶ್ವಕಪ್‌ನಿಂದ ಹೊರಗುಳಿದಿದ್ದಾರೆ ಎಂದು ಹೇಳಿದ್ದಾರೆ. ಆದರೆ, ಅಧಿಕೃತ ಘೋಷಣೆ ಇನ್ನಷ್ಟೇ ಹೊರಬೀಳಬೇಕಿದೆ.

ಬುಧವಾರ ತಿರುವನಂತಪುರದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲು ಬುಮ್ರಾ ಕಣಕ್ಕಿಳಿಯಲಿಲ್ಲ. "ಬುಮ್ರಾ ಫಿಟ್ ಆಗದಿದ್ದರೆ, ನೀವು ದೀಪಕ್ ಚಹಾರ್ ಅವರನ್ನು ತಂಡಕ್ಕೆ ಕರೆತರಬೇಕು ಏಕೆಂದರೆ ಅವರು ಸ್ಟ್ಯಾಂಡ್‌ಬೈ ಲಿಸ್ಟ್‌ನಲ್ಲಿದ್ದಾರೆ." ಎಂದು ಕರೀಮ್ ಹೇಳಿದ್ದಾರೆ.

ಭಾರತದ ವಿರುದ್ಧದ ಪಂದ್ಯಕ್ಕೆ ಯೋಜನೆ ಸಿದ್ಧ: ಟೀಮ್ ಇಂಡಿಯಾಗೆ ಖಡಕ್ ಎಚ್ಚರಿಕೆ ನೀಡಿದ ಪಾಕ್ ವೇಗಿಭಾರತದ ವಿರುದ್ಧದ ಪಂದ್ಯಕ್ಕೆ ಯೋಜನೆ ಸಿದ್ಧ: ಟೀಮ್ ಇಂಡಿಯಾಗೆ ಖಡಕ್ ಎಚ್ಚರಿಕೆ ನೀಡಿದ ಪಾಕ್ ವೇಗಿ

ಟಿ 20 ವಿಶ್ವಕಪ್‌ನಲ್ಲಿ ಯಾವುದೇ ಗಾಯದ ಬಿಕ್ಕಟ್ಟನ್ನು ತಡೆಗಟ್ಟಲು ಮುಂಬರುವ ಪಂದ್ಯಗಳಲ್ಲಿ ಎಲ್ಲಾ ತಂಡದ ಸದಸ್ಯರಿಗೆ ಸಾಕಷ್ಟು ಅವಕಾಶಗಳನ್ನು ನೀಡುವ ಬಗ್ಗೆ ಕರೀಮ್ ಮತ್ತಷ್ಟು ಮಾತನಾಡಿದರು.

ಬಹುರಾಷ್ಟ್ರೀಯ ಪಂದ್ಯಾವಳಿಯ ಸಂದರ್ಭದಲ್ಲಿ ಭಾರತಕ್ಕೆ ಬಿಗಿಯಾದ ಸಂದರ್ಭಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರರ ಅಗತ್ಯವಿದೆ ಎಂದು ಅವರು ಹೇಳಿದರು.

ಚಹಾರ್, ಅರ್ಶ್‌ದೀಪ್‌ಗೆ ಅವಕಾಶ ಸಿಕ್ಕಿರುವುದು ಒಳ್ಳೆಯದು

"ಬಹುರಾಷ್ಟ್ರೀಯ ಪಂದ್ಯಾವಳಿಯಲ್ಲಿ ಆಡುವ ಒತ್ತಡವನ್ನು ನಿಭಾಯಿಸುವ ಆಟಗಾರರ ಅಗತ್ಯವಿದೆ. ಹೀಗಾಗಿ, ನೀವು ಪೂರ್ಣ ತಂಡದ ಸದಸ್ಯರನ್ನು ಆಡುತ್ತಲೇ ಇರಬೇಕು ಏಕೆಂದರೆ ಯಾರು ಗಾಯಗೊಂಡರು ಎಂದು ಹೇಳುವುದು ಕಷ್ಟ. ಆದ್ದರಿಂದ ಅರ್ಶ್‌ದೀಪ್ ಸಿಂಗ್ ಮತ್ತು ದೀಪಕ್ ಚಹಾರ್ ಅವರಿಗೆ ಅವಕಾಶಗಳು ಸಿಕ್ಕಿರುವುದು ಒಳ್ಳೆಯದು." ಎಂದು ಹೇಳಿದರು.

ದೀಪಕ್ ಚಹಾರ್ ಮತ್ತು ಅರ್ಶ್‌ದೀಪ್ ಸಿಂಗ್ ಬುಧವಾರ ದಕ್ಷಿಣ ಆಫ್ರಿಕಾ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿದರು. 2.3 ಓವರ್‌ಗಳಲ್ಲಿ 9 ರನ್ ನೀಡಿ ಪ್ರಮುಖ 5 ವಿಕೆಟ್ ಪಡೆಯುವ ಮೂಲಕ ದಕ್ಷಿಣ ಆಫ್ರಿಕಾ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು.

ದಕ್ಷಿಣ ಆಫ್ರಿಕಾ ವಿರುದ್ಧ ಉತ್ತಮ ಪ್ರದರ್ಶನ

ಜಸ್ಪ್ರೀತ್ ಬುಮ್ರಾ ಮತ್ತು ಭುವನೇಶ್ವರ್ ಕುಮಾರ್ ಅನಪಸ್ಥಿತಿಯಲ್ಲಿ ಇಬ್ಬರು ಯುವ ವೇಗಿಗಳು ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. ಚಹಾರ್ 4 ಓವರ್ ಗಳಲ್ಲಿ 24 ರನ್ ನೀಡಿ 2 ವಿಕೆಟ್ ಪಡೆದರೆ. ಅರ್ಶ್‌ದೀಪ್ 4 ಓವರ್ ಗಳಲ್ಲಿ 32 ರನ್ ನೀಡಿ 3 ವಿಕೆಟ್ ಪಡೆದು ಪಂದ್ಯ ಶ್ರೇಷ್ಠ ಆಟಗಾರ ಪಡೆದರು.

ಭಾರತದ ಉತ್ತಮ ಬೌಲಿಂಗ್ ಪ್ರದರ್ಶನದಿಂದ ದಕ್ಷಿಣ ಆಫ್ರಿಕಾ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 106 ರನ್ ಗಳಿಸಿದರು. 107 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾ ಸೂರ್ಯಕುಮಾರ್ ಯಾದವ್ ಮತ್ತು ಕೆಎಲ್ ರಾಹುಲ್ ಅರ್ಧಶತಕದ ನೆರವಿನಿಂದ ಎಂಟು ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, September 29, 2022, 23:41 [IST]
Other articles published on Sep 29, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X