ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೃಣಾಲ್ ಪಾಂಡ್ಯ ವಿರುದ್ಧ ನಿಂದನೆ ಆರೋಪ: SMATಯಿಂದ ಹಿಂದಕ್ಕೆ ಸರಿದ ದೀಪಕ್ ಹೂಡ

Deepak Hooda Withdraws From SMIT After Being Abused By Krunal Pandya

ದೇಶೀಯ ಕ್ರಿಕೆಟ್ ಟೂರ್ನಿ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯ ಆರಂಭಕ್ಕೆ ಕೆಲವೇ ಗಂಟೆಗಳ ಮುನ್ನ ವಿವಾದವೊಂದು ಉಂಟಾಗಿದೆ. ಬರೋಡಾ ತಂಡದ ಸ್ಟಾರ್ ಆಟಗಾರ ದೀಪಕ್ ಹೂಡ ಈ ಟೂರ್ನಿಯಿಂದ ಹಿಂದಕ್ಕೆ ಸರಿಯುವ ನಿರ್ಧಾರ ತೆಗೆದುಕೊಂಡಿದ್ದಾರೆ. ಕೃಣಾಲ್ ಪಾಂಡ್ಯ ಜೊತೆಗೆ ವಾಗ್ವಾದ್ಧದ ನಂತರ ಹೂಡಾ ಈ ನಿರ್ಧಾರ ಕೈಗೊಂಡಿದ್ದಾರೆ.

ಬರೋಡಾ ಕ್ರಿಕೆಟ್ ಅಸೋಸಿಯೇಷನ್ ಇಕ್ಕೂ ಮುನ್ನ ಕಳೆದ ವಾರ ಅಂತಿಮ 22 ಆಟಗಾರರ ಪಟ್ಟಿಯನ್ನು ಪ್ರಕಟಿಸುವ ಸಂದರ್ಭದಲ್ಲಿ ದೀಪಕ್ ಹೂಡಾ ಅವರನ್ನು ಬರೋಡಾ ತಂಡದ ಉಪನಾಯಕನನ್ನಾಗಿ ಘೋಷಿಸಿತ್ತು.

ಇಂಡಿಯಾ vs ಆಸ್ಟ್ರೇಲಿಯಾ: ನಾಲ್ಕನೇ ದಿನದಾಟದಲ್ಲಿ ಮತ್ತೆ ಆಸಿಸ್ ಪ್ರೇಕ್ಷಕರ ದುರ್ವರ್ತನೆಇಂಡಿಯಾ vs ಆಸ್ಟ್ರೇಲಿಯಾ: ನಾಲ್ಕನೇ ದಿನದಾಟದಲ್ಲಿ ಮತ್ತೆ ಆಸಿಸ್ ಪ್ರೇಕ್ಷಕರ ದುರ್ವರ್ತನೆ

ಸ್ಥಳೀಯ ಸುದ್ಧಿವಾಹಿನಿ ಟಿವಿ9 ಗುಜರಾತಿ ವರದಿಯಂತೆ ಭಾನುವಾರದ ಉತ್ತರಾಖಂಡ್ ವಿರುದ್ಧದ ಮೊದಲ ಪಂದ್ಯಕ್ಕೂ ಮುನ್ನ ವಡೋದರಾದ ರಿಲಯನ್ಸ್ ಸ್ಟೇಡಿಯಮ್‌ನಲ್ಲಿ ಅಭ್ಯಾಸ ನಡೆಸುವ ವೇಳೆ ಇಬ್ಬರು ಆಟಗಾರರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಘಟನೆಯ ಬಳಿಕ ಬರೋಡಾ ಕ್ರಿಕೆಟ್ ಅಸಿಸಿಯೇಷನ್‌ಗೆ ಮೇಲ್ ಮುಖಾಂತರ ದೀಪಕ್ ಹೂಡ ಮಾಹಿತಿ ನೀಡಿದ್ದಾರೆ.

ದೀಪಕ್ ಹೂಡಾ ಬರೆದಿರುವ ಮೇಲ್‌ನಲ್ಲಿ ಕೃಣಾಲ್ ಪಾಂಡ್ಯ ತಮ್ಮನ್ನು ನಿಂದಿಸಿರುವುದಾಗಿ ಆರೋಪಿಸಿದ್ದಾರೆ. ಇದೇ ಸಂದರ್ಭದಲ್ಲಿ ಟಿ20 ಟೂರ್ನಿಯಲ್ಲಿ ತಾನು ಆಡುತ್ತಿಲ್ಲ ಎಂಬುದಾಗಿಯೂ ಬರೋಡಾ ಕ್ರಿಕೆಟ್ ಅಸೊಸಿಯೇಶನ್‌ಗೆ ಬರೆದಿರುವ ಮೇಲ್‌ನಲ್ಲಿ ಮಾಹಿತಿಯನ್ನು ನೀಡಿದ್ದಾರೆ.

ಭಾರತ vs ಆಸ್ಟ್ರೇಲಿಯಾ: ಭಾರತಕ್ಕೆ 407 ರನ್‌ಗಳ ಗುರಿ ನೀಡಿದ ಆಸಿಸ್ ಪಡೆಭಾರತ vs ಆಸ್ಟ್ರೇಲಿಯಾ: ಭಾರತಕ್ಕೆ 407 ರನ್‌ಗಳ ಗುರಿ ನೀಡಿದ ಆಸಿಸ್ ಪಡೆ

ಕೆಲ ವರದಿಗಳ ಪ್ರಕಾರ ಈ ಮಾತಿನ ಚಕಮಕಿಯ ವೇಳೆ ಕೃಣಾಲ್ ಪಾಂಡ್ಯ ದೀಪಕ್ ಹೂಡಾ ಅವರಿಗೆ ಬೆದರಿಕೆಯನ್ನು ಹಾಕಿದ್ದಾರೆ ಎನ್ನಲಾಗುತ್ತಿದೆ. ಭಾನುವಾರ ಕಣಕ್ಕಿಳಿದಿರುವ ತಂಡದಲ್ಲಿ ದೀಪಕ್ ಹೂಡ ಕಾಣೀಸಿಕೊಂಡಿಲ್ಲ. ಈ ಘಟನೆ ಯಾವ ರೀತಿಯ ಬೆಳವಣಿಗೆ ಕಾಣಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ.

Story first published: Sunday, January 10, 2021, 15:18 [IST]
Other articles published on Jan 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X