ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆಕೆಆರ್ ವಿರುದ್ಧದ ಸೋಲು ನಮ್ಮ ಗೆಲುವಿನ ಹಸಿವನ್ನು ಹೆಚ್ಚಿಸಿದೆ: ಡ್ರೆಸ್ಸಿಂಗ್ ರೂಮ್‌ನಲ್ಲಿ ಕೊಹ್ಲಿ ಹೇಳಿಕೆ

Defeat against KKR should give us more hunger said RCB Skipper Virat Kohli

14ನೇ ಆವೃತ್ತಿಯ ಐಪಿಎಲ್‌ನ ಆರಂಭದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಆರ್‌ಸಿಬಿ ಎರಡನೇ ಚರಣದಲ್ಲಿ ಮೊದಲ ಪಂದ್ಯದಲ್ಲಿಯೇ ಮುಗ್ಗರಿಸಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆ ಹೀನಾಯ ಸೋಲು ಅನುಭವಿಸಿದೆ. 9 ವಿಕೆಟ್‌ಗಳ ಅಂತರದ ಈ ಸೋಲು ಆರ್‌ಸಿಬಿ ಪಡೆ ಹಾಗೂ ಅಭಿಮಾನಿಗಳಿಗೂ ಆಘಾತವನ್ನು ನೀಡಿದೆ. ಆದರೆ ನಾಯಕ ವಿರಾಟ್ ಕೊಹ್ಲಿ ಮುಂದಿನ ಪಂದ್ಯಗಳಲ್ಲಿ ಮತ್ತಷ್ಟು ಆಕ್ರಮಣಕಾರಿಯಾಗುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಡ್ರೆಸ್ಸಿಂಗ್‌ ರೂಮ್‌ನಲ್ಲಿ ಆಟಗಾರರನ್ನು ಉದ್ದೇಶಿಸಿ ಮಾತನಾಡಿದ ಕೊಹ್ಲಿ ಈ ಸೋಲು ನಮ್ಮ ಗೆಲುವಿನ ಹಸಿವನ್ನು ಹೆಚ್ಚಿಸಬೇಕು ಎಂದು ಹೇಳಿದ್ದಾರೆ.

ಇನ್ನು ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಈ ಆಟದಲ್ಲಿ ಕೆಟ್ಟ ದಿನದಿಂದಾಗಿ ಹೀಗಾಗುತ್ತದೆ, ಆದರೆ ಇಂಥಾ ಪಂದ್ಯಗಳಿಂದ ನಾವು ಸ್ಪೂರ್ತಿಯನ್ನು ಪಡೆದುಕೊಂಡು ಮುಂದಿನ ಸವಾಲುಗಳಿಗೆ ಸಿದ್ಧವಾಗುವುದು ಅಗತ್ಯವಿದೆ ಎಂದಿದ್ದಾರೆ. ನಾವು ಸೋಲನ್ನು ತಕ್ಷಣವೇ ಒಪ್ಪಿಕೊಳ್ಳುವುದು ಹಾಗೂ ಶಾಂತವಾಗಿರುವುದು ಬಹಳ ಮುಖ್ಯವಾಗುತ್ತದೆ ಎಂದಿದ್ದಾರೆ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ.

ಐಪಿಎಲ್ ಇತಿಹಾಸದಲ್ಲಿ 7ನೇ ಬಾರಿಗೆ ಮೂರಂಕಿ ದಾಟಲು ವಿಫಲವಾದ ಆರ್‌ಸಿಬಿಐಪಿಎಲ್ ಇತಿಹಾಸದಲ್ಲಿ 7ನೇ ಬಾರಿಗೆ ಮೂರಂಕಿ ದಾಟಲು ವಿಫಲವಾದ ಆರ್‌ಸಿಬಿ

ಮುಂದುವರಿದು ಮಾತನಾಡಿದ ಕೊಹ್ಲಿ "ಸೋಲನ್ನು ಒಪ್ಪಿಕೊಳ್ಳಬೇಕು ಎಂದ ಮಾತ್ರಕ್ಕೆ ಆಟದಲ್ಲಿ ಎದುರುನೋಡಲು ಬಯಸುವುದಿಲ್ಲ ಎಂದು ಅರ್ಥವಲ್ಲ. ಅದರಿಂದಾಗಿ ನಮ್ಮ ಗೆಲುವಿನ ಹಸಿವು ಮತ್ತಷ್ಟು ಹೆಚ್ಚಾಗಬೇಕು. ನೀವು ಇಲ್ಲಿಯವರೆಗೆ ಟೂರ್ನಿಯಲ್ಲಿ ಆಡಿದಂತೆಯೇ ಆಡಿ. ಇಂಥಾ ಟೂರ್ನಿಗಳಲ್ಲಿ ಈ ರೀತಿಯ ಸಂದರ್ಭಗಳು ಕೆಲ ಬಾರಿ ಬರುತ್ತವೆ" ಎಂದಿದ್ದಾರೆ ವಿರಾಟ್ ಕೊಹ್ಲಿ. "ಸೋಲಿಗೆ ನಾವು ಭಿನ್ನವಾಗಿ ಪ್ರತಿಕ್ರಿಯಿಸಬೇಕು ಎಂಬುದಕ್ಕೆ ಯಾವುದೇ ಅರ್ಥಗಳಿಲ್ಲ. ನಾವು ಅಂದುಕೊಂಡಂತೆಯೇ ತಂಡ ಮುನ್ನುಗ್ಗಬೇಕಾದರೆ ನಾವು ಸಮಚಿತ್ತದಿಂದ ಇರಬೇಕು" ಎಂದಿದ್ದಾರೆ ನಾಯಕ ಕೊಹ್ಲಿ.

ಐಪಿಎಲ್: ಕೆಕೆಆರ್ ವಿರುದ್ಧದ ಹೀನಾಯ ಸೋಲಿಗೆ ಕಾರಣ ಯಾರೆಂಬುದನ್ನು ಬಹಿರಂಗಪಡಿಸಿದ ಕೊಹ್ಲಿಐಪಿಎಲ್: ಕೆಕೆಆರ್ ವಿರುದ್ಧದ ಹೀನಾಯ ಸೋಲಿಗೆ ಕಾರಣ ಯಾರೆಂಬುದನ್ನು ಬಹಿರಂಗಪಡಿಸಿದ ಕೊಹ್ಲಿ

ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ 3ನೇ ಸೋಲು ಕಂಡಿದೆ. ಅಂಕಪಟ್ಟಿಯಲ್ಲಿ ವಿರಾಟ್ ಬಳಗ ಮೂರನೇ ಸ್ಥಾನದಲ್ಲಿದ್ದು ಪ್ಲೇಆಫ್‌ಗೆ ಏರಲು ಸನಿಹದಲ್ಲಿದೆ. ಈ ಮೂಲಕ ಸತತ ಎರಡನೇ ಬಾರಿಗೆ ಪ್ಲೇಆಫ್ ಸಾಧನೆ ಮಾಡಲು ತಂಡ ಸಜ್ಜಾಗಿದೆ. ಆದರೆ ಕೆಕೆಆರ್ ವಿರುದ್ಧದ ಸೋಲು ತಂಡಕ್ಕೆ ಸಣ್ಣ ಹಿನ್ನಡೆಯಾಗಿರುವುದರಲ್ಲಿ ಅನುಮಾನವಿಲ್ಲ.

ಈ ಪಂದ್ಯದಲ್ಲಿ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಅಪರೂಪಕ್ಕೆ ಎಂಬಂತೆ ಟಾಸ್ ಗೆದ್ದಿದ್ದರು. ಆದರೆ ಇದರ ಲಾಭವನ್ನು ಪಡೆಯುವಲ್ಲಿ ಮಾತ್ರ ತಂಡ ಸಂಪೂರ್ಣವಾಗಿ ವಿಫಲವಾಯಿತು. ಆರ್‌ಸಿಬಿ ತಂಡದ ದಾಂಡಿಗರು ಆರಂಭದಿಂದಲೇ ಮುಗ್ಗರಿಸಲು ಆರಂಭಿಸಿತ್ತು. ಸ್ವತಃ ನಾಯಕ ವಿರಾಟ್ ಕೊಹ್ಲಿಯೇ ಈ ಕುಸಿತಕ್ಕೆ ಚಾಲನೆ ನಿಡಿದ್ದರು. ಕೇವಲ 5 ರನ್‌ಗಳಿಸಿದ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡರು. ಬಳಿಕ ಅಗ್ರ ಹಾಗೂ ಮಧ್ಯಮ ಕ್ರಮಾಂಕದ ಎಲ್ಲಾ ಆಟಗಾರರು ಕೂಡ ಒಬ್ಬರ ಹಿಂದೊಬ್ಬರಂತೆ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದರು

'ಧೋನಿ ಟಿಪ್ಸ್ ಕೊಟ್ಟಿದ್ದಾರೆ, ಒಳ್ಳೆಯ ಆರಂಭ ಸಿಕ್ಕಿದೆ, ಈ ಸಲ ಕಪ್ ನಮ್ದೇ' ಎಂದ ಆರ್‌ಸಿಬಿ ಆಟಗಾರ!'ಧೋನಿ ಟಿಪ್ಸ್ ಕೊಟ್ಟಿದ್ದಾರೆ, ಒಳ್ಳೆಯ ಆರಂಭ ಸಿಕ್ಕಿದೆ, ಈ ಸಲ ಕಪ್ ನಮ್ದೇ' ಎಂದ ಆರ್‌ಸಿಬಿ ಆಟಗಾರ!

ನಾಯಕ ವಿರಾಟ್ ಕೊಹ್ಲಿ 5 ರನ್‌ಗಳಿಸಿದರೆ ದೇವದತ್ ಪಡಿಕ್ಕಲ್ 22 ರನ್‌ಗಳನ್ನು ಗಳಿಸಿ ವಿಕೆಟ್ ಕಳೆದುಕೊಂಡರು. ಚೊಚ್ಚಲ ಪಂದ್ಯವನ್ನಾಡಿದ ಶ್ರೀಕರ್ ಭರತ್ 16 ರನ್‌ಗಳಿಗೆ ಆಟವನ್ನು ಮುಗಿಸಿದರು. ನಂತರ ಬ್ಯಾಟಿಂಗ್‌ಗೆ ಇಳಿದ ಎಬಿ ಡಿವಿಲಿಯರ್ಸ್ ಎದುರಿಸಿದ ಮೊದಲ ಎಸೆತಕ್ಕೇ ಔಟಾಗಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ನಂತರ ಸಚಿನ್ ಬೇಬಿ, ಗ್ಲೆನ್ ಮ್ಯಾಕ್ಸ್‌ವೆಲ್, ವನಿಂದು ಹಸರಂಗ, ಕೈಲ್ ಜಾಮಿಸನ್, ಹರ್ಷಲ್ ಪಟೇಲ್ ಕೂಡ ನಿರಾಸೆ ಮೂಡಿಸಿ ಪೆವಿಲಿಯನ್ ಸೇರಿಕೊಂಡಿದ್ದಾರೆ. 22 ರನ್‌ಗಳಿಸಿದ ದೇವದತ್ ಪಡಿಕ್ಕಲ್ ಹೈಯೆಸ್ಟ್ ಸ್ಕೋರರ್ ಎನಿಸಿದ್ದಾರೆ. ಅಂತಿಮವಾಗಿ ಆರ್‌ಸಿಬಿ ಇನ್ನೂ ಒಂದು ಓವರ್ ಬಾಕಿಯಿರುವಂತೆಯೇ 92 ರನ್‌ಗಳಿಸಿ ಆಲೌಟ್ ಆಯಿತು

ಇನ್ನು ಆರ್‌ಸಿಬಿ ತಂಡದ ಬೌಲಿಂಗ್ ವಿಭಾಗ ಕೂಡ ಈ ಪಂದ್ಯದಲ್ಲಿ ದೊಡ್ಡ ಹಿನ್ನಡೆಯನ್ನು ಅನುಭವಿಸುವ ಮೂಲಕ ಆತಂಕ ಮೂಡಿಸಿದೆ. ಮೊದಲ ಚರಣದಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಆರ್‌ಸಿಬಿ ಬೌಲರ್‌ಗಳು ಯುಎಇ ಚರಣದಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. ಕೇಲ್ ಜ್ಯಾಮಿಸನ್, ವನಿಂದು ಹಸರಂಗ ಹಾಗೂ ಚಾಹಲ್ 10ಕ್ಕೂ ಅಧಿಕ ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ. ಯುಜುವೇಂದ್ರ ಚಾಹಲ್ ಆರ್‌ಸಿಬಿ ಪರವಾಗಿ ಏಕೈಕ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ

Story first published: Wednesday, September 22, 2021, 10:08 [IST]
Other articles published on Sep 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X