ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚೆನ್ನೈ ಸೂಪರ್ ಕಿಂಗ್ಸ್‌ ಹೀನಾಯವಾಗಿ ಸೋತ ಕೆಟ್ಟ ದಾಖಲೆಗಳಿವು

Defeats by most balls remaining for Chennai Super Kings

ಶಾರ್ಜಾ: 2020ರ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್‌ಗೆ ಇಷ್ಟು ಕೆಟ್ಟ ಸೀಸನ್ ಆಗಬಹುದು ಎಂದು ಬಹುಶಃ ಸಿಎಸ್‌ಕೆಯ ಯಾರೂ ಅಂದುಕೊಂಡಿರಲಿಕ್ಕಿಲ್ಲ. 13ನೇ ಆವೃತ್ತಿಯಲ್ಲಿ ಸಿಎಸ್‌ಕೆ ಅಷ್ಟರ ಮಟ್ಟಿಗೆ ಸೋಲಿನ ಮುಖಭಂಗ ಅನುಭವಿಸುತ್ತಿದೆ.

ಶುಕ್ರವಾರ (ಅಕ್ಟೋಬರ್ 23) ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 41ನೇ ಪಂದ್ಯದಲ್ಲೂ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ 10 ವಿಕೆಟ್‌ಗಳ ಹೀನಾಯ ಸೋಲನುಭವಿಸಿದೆ. ಇನ್ನೂ 46 ಎಸೆತಗಳು ಬಾಕಿಯಿರುವಾಗಲೇ ಮುಂಬೈ ಜಯ ದಾಖಲಿಸಿತ್ತು.

ರನ್‌ ವೇಳೆ ದೂರದ ದಾರೀಲಿ ಓಡಿದ್ದರ ಗುಟ್ಟು ಬಿಚ್ಚಿಟ್ಟ ಕ್ರಿಸ್ ಜೋರ್ಡನ್ರನ್‌ ವೇಳೆ ದೂರದ ದಾರೀಲಿ ಓಡಿದ್ದರ ಗುಟ್ಟು ಬಿಚ್ಚಿಟ್ಟ ಕ್ರಿಸ್ ಜೋರ್ಡನ್

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಚೆನ್ನೈ ಸೂಪರ್ ಕಿಂಗ್ಸ್ ತಂಡ ನೀರಸ ಬ್ಯಾಟಿಂಗ್ ಪ್ರದರ್ಶಿಸಿತ್ತು. 20 ಓವರ್‌ಗಳಲ್ಲಿ 9 ವಿಕೆಟ್ ಕಳೆದು ಕೇವಲ 114 ರನ್ ಬಾರಿಸಿತ್ತು. ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ 12.2 ಓವರ್‌ಗೆ ವಿಕೆಟ್ ನಷ್ಟವಿಲ್ಲದೆ 116 ರನ್ ಗಳಿಸಿತು. ಇದರೊಂದಿಗೆ ಚೆನ್ನೈ ಐಪಿಎಲ್ ಇತಿಹಾಸದಲ್ಲಿ ಕೆಟ್ಟ ದಾಖಲೆ ನಿರ್ಮಿಸಿದೆ.

ಹೆಚ್ಚು ಎಸೆತಗಳು ಬಾಕಿ ಉಳಿಸಿಕೊಂಡು ಚೆನ್ನೈ ಸೋಲಿಸಿರುವ ತಂಡಗಳು
* 46 ಎಸೆತಗಳು, vs ಮುಂಬೈ ಇಂಡಿಯನ್ಸ್, ಶಾರ್ಜಾ, 2020 *
* 40 ಎಸೆತಗಳು, vs ಡೆಲ್ಲಿ ಕ್ಯಾಪಿಟಲ್ಸ್, ದೆಹಲಿ, 2012
* 37 ಎಸೆತಗಳು, vs ಮುಂಬೈ ಇಂಡಿಯನ್ಸ್, ಮುಂಬೈ, 2008
* 34 ಎಸೆತಗಳು, vs ರಾಜಸ್ಥಾನ್ ರಾಯಲ್ಸ್, ಜೈಪುರ, 2008

Story first published: Saturday, October 24, 2020, 9:48 [IST]
Other articles published on Oct 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X