ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚೆನ್ನೈ ಟೆಸ್ಟ್‌ಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯದ ಬಗ್ಗೆ ಬೇಸರ ವ್ಯಕ್ತಪಡಿಸಿದ ನಟರಾಜನ್

Definitely missing being part of squad, was with team for last few months says T Natarajan

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಹೆಸರಿಸಿರುವ ತಂಡದಲ್ಲಿ ವೇಗಿ ನಟರಾಜನ್ ಆಯ್ಕೆಯಾಗಿಲ್ಲ. ಹೀಗಾಗಿ ನಟರಾಜನ್ ಸದ್ಯ ತಮಿಳುನಾಡಿನಲ್ಲಿ ತಮ್ಮ ಕುಟುಂಬದೊಂದಿಗೆ ಸಮಯವನ್ನು ಕಳೆಯುತ್ತಿದ್ದಾರೆ. ಆದರೆ ಈ ಸಂದರ್ಭದಲ್ಲಿ ಅವರು ಟೀಮ್ ಇಂಡಿಯಾ ಬಳಗವನ್ನು ಮಿಸ್‌ ಮಾಡಿಕೊಳ್ಳುತ್ತಿದ್ದಾರೆ ಎಂದು ಸ್ವತಃ ನಟರಾಜನ್ ಹೇಳಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಮ್ ಇಂಡಿಯಾದ ಎಲ್ಲಾ ಮಾದರಿಯ ತಂಡದಲ್ಲೂ ಅವಕಾಶ ಪಡೆದಿದ್ದ ನಟರಾಜನ್ ಸುದೀರ್ಘ ಕಾಲ ತಂಡದ ಸದಸ್ಯರ ಜೊತೆಯಲ್ಲಿ ಬಯೋ ಬಬಲ್‌ನಲ್ಲಿದ್ದರು. ಆದರೆ ಜನವರಿ ಮಧ್ಯದಲ್ಲಿ ಆಸಿಸ್ ವಿರುದ್ಧದ ಸರಣಿ ಮುಕ್ತಾಯದೊದಿಗೆ ಟೀಮ್ ಇಂಡಿಯಾ ತವರಿಗೆ ಮರಳಿತು.

ವಿರಾಟ್ ಕೊಹ್ಲಿ ನಾಯಕತ್ವದ ಬಗೆಗಿನ ಎಲ್ಲಾ ಚರ್ಚೆಗಳು ಅನಗತ್ಯ: ಸಬಾ ಕರೀಮ್ವಿರಾಟ್ ಕೊಹ್ಲಿ ನಾಯಕತ್ವದ ಬಗೆಗಿನ ಎಲ್ಲಾ ಚರ್ಚೆಗಳು ಅನಗತ್ಯ: ಸಬಾ ಕರೀಮ್

"ಕಳೆದ ಕಲ ತಿಂಗಳುಗಳಿಂದ ತಂಡದ ಭಾಗವಾಗಿದ್ದು ಸದಸ್ಯರ ಜೊತೆಯಲ್ಲಿ ಆತ್ಮೀಯವಾಗಿದ್ದೆ. ಈಗ ಖಂಡಿತವಾಗಿ ತಂಡವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಆದರೆ ಈ ವಿರಾಮದ ಅಗತ್ಯವನ್ನು ನಾನು ಅರ್ಥ ಮಾಡಿಕೊಳ್ಳುತ್ತೇನೆ. ಕಳೆದ ಆರು ತಿಂಗಳಿನಿಂದ ನಾನು ನನ್ನ ಕುಟುಂಬಕ್ಕೆ ಸಮಯವನ್ನು ನೀಡಿರಲಿಲ್ಲ. ಆದರೆ ಅದಕ್ಕೆ ಬೇಸರವಿಲ್ಲ. ಆದರೆ ತಂಡ ಚೆನ್ನೈನಲ್ಲಿ ಆಡುತ್ತಿರುವಾಗ ನಾನು ರಾಷ್ಟ್ರೀಯ ತಂಡದ ಭಾಗವಾಗದಿರುವ ಬಗ್ಗೆ ಖಂಡಿತಾ ನನಗೆ ಬೇಸರವಿದೆ" ಎಂದಿದ್ದಾರೆ ನಟರಾಜನ್.

ಇನ್ನು ಇದೇ ಸಂದರ್ಭದಲ್ಲಿ ನಟರಾಜನ್ ಎಲ್ಲಾ ಮಾದರಿಯ ತಂಡದಲ್ಲೂ ಟೀಮ್ ಇಂಡಿಯಾದ ಭಾಗವಾಗಲು ಇಷ್ಟ ಪಡುತ್ತೇನೆ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಕೆಲಸದ ಒತ್ತಡವನ್ನೂ ನಿಭಾಯಿಸಿಕೊಳ್ಳುತ್ತೇನೆ ಎಂದು ನಟರಾಜನ್ ಹೇಳಿದ್ದಾರೆ.

ನಟರಾಜನ್ ಬಗ್ಗೆ ಸಿನಿಮಾ ನಿರ್ಮಾಣಕ್ಕೆ ಮುಂದಾದ ನಿರ್ದೇಶಕರು: ಮೃದು ಮಾತುಗಳಲ್ಲಿ ನಟ್ಟು ಹೇಳಿದ್ದಿಷ್ಟು !ನಟರಾಜನ್ ಬಗ್ಗೆ ಸಿನಿಮಾ ನಿರ್ಮಾಣಕ್ಕೆ ಮುಂದಾದ ನಿರ್ದೇಶಕರು: ಮೃದು ಮಾತುಗಳಲ್ಲಿ ನಟ್ಟು ಹೇಳಿದ್ದಿಷ್ಟು !

"ನಾನು ಎಲ್ಲಾ ಮಾದರಿಯಲ್ಲೂ ಆಡುವ ಜೊತೆಗೆ ಕೆಲಸದ ಒತ್ತಡವನ್ನು ನಿಭಾಯಿಸುವತ್ತ ಗಮನಹರಿಸುತ್ತಿದ್ದೇನೆ. ನನ್ನ ಸಾಮರ್ಥ್ಯ ಹಾಗೂ ಸಹನೆಯ ಮಟ್ಟವನ್ನು ಏರಿಸಲು ಮುಮದಿನ ದಿನಗಳಲ್ಲಿ ಬಯಸುತ್ತೇನೆ. ನಾನು ನನ್ನ ಜೋವನದಲ್ಲಿ ಇದೇ ಮೊದಲ ಬಾರಿಗೆ ಸುದೀರ್ಘ 6 ತಿಂಗಳುಗಳ ಕಾಲ ನಿರಂತರವಾಗಿ ಆಡಿದ್ದು ಇದೇ ಮೊದಲು" ಎಂದು ನಟರಾಜನ್ ಹೇಳಿದರು.

Story first published: Tuesday, February 2, 2021, 14:41 [IST]
Other articles published on Feb 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X