ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಡೆಲ್ಲಿ ತಂಡದ ಪ್ರದರ್ಶನದ ಬಗ್ಗೆ ಮೊಹಮ್ಮದ್ ಕೈಫ್ ಹೇಳಿದ್ದಿಷ್ಟು!

Delhi Capitals have a bunch of match-winners in IPL 2020: Kaif

ಈ ಬಾರಿಯ ಐಪಿಎಲ್ ಆವೃತ್ತಿ ಅದ್ಭುತ ಪ್ರದರ್ಶನವನ್ನು ನೀಡಿರುವ ತಂಡಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮುಂದಿದೆ. ಎಲ್ಲಾ ಪಂದ್ಯಗಳಲ್ಲೂ ಶ್ರೇಯಸ್ ಅಯ್ಯರ್ ನೇತೃತ್ವದ ಡೆಲ್ಲಿ ಶ್ರೇಷ್ಠ ಪ್ರದರ್ಶನವನ್ನು ನೀಡುತ್ತಿದೆ. ತಂಡದ ಈ ಪ್ರದರ್ಶನದ ಬಗ್ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹಾಯಕ ಕೋಚ್ ಮೊದಹಮದ್ ಕೈಫ್ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಶ್ರೇಯಸ್ ಅಯ್ಯರ್ ಮುನ್ನಡೆಸುತ್ತಿರುವ ಡೆಲ್ಲಿ ತಂಡದಲ್ಲಿ ಮ್ಯಾಚ್ ವಿನ್ನರ್‌ಗಳ ಪಡೆಯೇ ಇದೆ ಎಂದು ಮೊಹಮ್ಮದ್ ಕೈಫ್ ಹೇಳಿದ್ದಾರೆ. ಇದಕ್ಕೆ ಪೂರಕವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಟೂರ್ನಿಯಲ್ಲಿ ಈವರೆಗೆ ಗೆದ್ದಿರುವ 7 ಪಂದ್ಯಗಳಲ್ಲಿ 7 ಭಿನ್ನ ಆಟಗಾರರು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಅಭಿಮಾನಿಗೆ ಧೋನಿ ಬಗ್ಗೆ ಕೆಎಲ್ ರಾಹುಲ್ ಕೊಟ್ಟ ಉತ್ತರ ವಾಹ್!ಅಭಿಮಾನಿಗೆ ಧೋನಿ ಬಗ್ಗೆ ಕೆಎಲ್ ರಾಹುಲ್ ಕೊಟ್ಟ ಉತ್ತರ ವಾಹ್!

"ನಾವೀಗ ತುಂಬಾ ಸಂತಸದಲ್ಲಿದ್ದೇವೆ, ಮೊದಲ ಪಂದ್ಯದಲ್ಲಿ ನಾವು ಎಸ್‌ಆರ್‌ಹೆಚ್ ವಿರುದ್ಧ ಸೋಲು ಕಂಡೆವು. 160 ರನ್‌ಗಳ ಗುರಿಯನ್ನು ಮುಟ್ಟಲು ಸಾಧ್ಯವಾಗಿರಲಿಲ್ಲ. ಆದರೆ ಬಳಿಕ ಸಿಎಸ್‌ಕೆ ವಿರುದ್ಧ ಕಠಿಣ ಸವಾಲನ್ನು ಬೆನ್ನಟ್ಟಿ ಗೆದ್ದೆವು. ಟೂರ್ನಿಯಲ್ಲಿ ಈವರೆಗೆ ನಾವು ರನ್‌ ಬೆನ್ನಟ್ಟುವುದರಲ್ಲಿ ಶ್ರೇಷ್ಠ ಪ್ರದರ್ಶನವನ್ನು ನೀಡಿಲ್ಲ. ಆದರೆ ನಾವು ನೀಡಿದ ಗುರಿಯನ್ನು ಕಾಪಾಡಿಕೊಳ್ಳಲು ಯಶಸ್ವಿಯಾಗಿದ್ದೇವೆ. ಈವರೆಗಿನ ಪಂದ್ಯಗಳಲ್ಲಿ ನಮ್ಮ ಬೌಲರ್‌ಗಳು ಅದ್ಭುತವಾದ ಪ್ರದರ್ಶನವನ್ನು ನೀಡುತ್ತಿದ್ದಾರೆ" ಎಂದು ಮೊಹಮ್ಮದ್ ಕೈಫ್ ಹೇಳಿಕೆಯನ್ನು ನೀಡಿದ್ದಾರೆ.

ತಂಡದ ಎಲ್ಲಾ ಆಟಗಾರರೂ ಅದ್ಭುತವಾದ ಪ್ರದರ್ಶನವನ್ನು ಈ ಟೂರ್ನಿಯಲ್ಲಿ ನೀಡುತ್ತಿದ್ದಾರೆ. ತಂಡದಲ್ಲಿ ಮ್ಯಾಚ್ ವಿನ್ನರ್‌ಗಳ ದಂಡೇ ಇದೆ. ಇದು ಎದುರಾಳಿಗಳಿಗೆ ನಿಜಕ್ಕೂ ತಲೆನೋವಿನ ಸಂಗತಿಯಾಗಿದೆ. ಎದುರಾಳಿಗಳು ಡೆಲ್ಲಿ ವಿರುದ್ಧ ಯಾವ ರೀತಿಯ ರಣತಂತ್ರವನ್ನು ಹೆಣೆಯಬೇಕೆಂದು ಎದುರಾಳಿಗಳು ಚಿಂತಿಸುತ್ತಿದ್ದಾರೆ ಎಂದು ಡೆಲ್ಲಿ ತಂಡದ ಸಹಾಯಕ ಕೋಚ್ ಮೊಹಮ್ಮದ್ ಕೈಫ್ ಪ್ರತಿಕ್ರಿಯಿಸಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ ಸಿಇಒ ''ಅಜ್ಞಾನಿ'' ಎಂದು ಕರೆದ ಬಿಸಿಸಿಐಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ ಸಿಇಒ ''ಅಜ್ಞಾನಿ'' ಎಂದು ಕರೆದ ಬಿಸಿಸಿಐ

ನಮ್ಮ ಮುಂದಿರುವ ತಂಡದ ಬಗ್ಗೆ ತಲೆ ಕೆಡಿಸಿಕೊಳ್ಳದೆ ಪಂದ್ಯಗಳು ಬರುವ ರೀತಿಗೆ ಪೂರಕವಾಗಿ ಪ್ರತಿಕ್ರಿಯಿಸುತ್ತಿದ್ದೇವೆ. ಪ್ರತಿ ಪಂದ್ಯದಿಂದಲೂ ಎರಡು ಅಂಕಗಳನ್ನು ಗಳಿಸಿಕೊಳ್ಳಲು ನಾವು ಗುರಿಯನ್ನಿಟ್ಟುಕೊಂಡಿದ್ದೇವೆ. ತಂಡ ಯಾವುದೇ ಇದ್ದರೂ ಗೆಲುವಿನ ಕ್ಷಣವನ್ನು ಮುಂದುವರಿಸಿಕೊಂಡು ಹೋಗುವುದು ನಮ್ಮ ಮುಂದಿರುವ ಸವಾಲಾಗಿದೆ ಎಂದು ಮೊಹಮ್ಮದ್ ಕೈಫ್ ಹೇಳಿದ್ದಾರೆ.

Story first published: Tuesday, October 20, 2020, 17:32 [IST]
Other articles published on Oct 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X