ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಮುಂಬೈನಲ್ಲಿ 7 ದಿನಗಳ ಕ್ವಾರಂಟೈನ್ ಆರಂಭಿಸಿದ ಇಶಾಂತ್, ಉಮೇಶ್, ಅಮಿತ್ ಮಿಶ್ರಾ

Delhi Capitals players Ishant Sharma, Umesh Yadav and Amit Mishra begin 7-day quarantine in Mumbai

ಐಪಿಎಲ್ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಚೆನ್ನೈ ಸಹಿತ ಕೆಲ ತಂಡಗಳು ಈಗಾಗಲೇ ತಮ್ಮ ಶಿಬಿರವನ್ನು ಆರಂಭಿಸಿದ್ದರೆ ಕೆಲ ತಂಡಗಳು ಇನ್ನಷ್ಟೇ ಶಿಬಿರ ಆರಂಭಿಸಲಿದೆ. ಎಲ್ಲಾ ತಂಡಗಳ ಸದಸ್ಯರು ಕೂಡ ಒಬ್ಬೊಬ್ಬರಾಗಿ ತಂಡಗಳ ಶಿಬಿರಕ್ಕೆ ತೆರಳಿ ಟೂರ್ನಿಗೆ ಸಜ್ಜಾಗುತ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೂವರು ಅನುಭವಿ ಆಟಗಾರರು ಮುಂಬೈ ತಲುಪಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ವೇಗಿಗಳಾದ ಇಶಾಂತ್ ಶರ್ಮಾ, ಉಮೇಶ್ ಯಾದವ್ ಲೆಗ್‌ ಸ್ಪಿನ್ನರ್ ಅಮಿತ್ ಮಿಶ್ರಾ ಆಲ್‌ರೌಂಡರ್ ಲಲಿತ್ ಯಾದವ್ ಮುಂಬೈಗೆ ತಲುಪಿದ್ದಾರೆ . ಮುಂದಿನ ಏಳುದಿನಗಳ ಕಾಲ ಕಡ್ಡಾಯ ಕ್ವಾರಂಟೈನ್‌ಗೆ ಈ ಆಟಗಾರರು ಒಳಗಾಗಲಿದ್ದು ಬಳಿಕ ತಮ್ಮ ಅಭ್ಯಾಸವನ್ನು ಆರಂಬಿಸಲಿದ್ದಾರೆ.

ಭಾರತ ವಿರುದ್ಧದ ದ್ವಿತೀಯ ಏಕದಿನಕ್ಕೆ ಮಾರ್ಗನ್, ಬಿಲ್ಲಿಂಗ್ಸ್‌ ಅನುಮಾನಭಾರತ ವಿರುದ್ಧದ ದ್ವಿತೀಯ ಏಕದಿನಕ್ಕೆ ಮಾರ್ಗನ್, ಬಿಲ್ಲಿಂಗ್ಸ್‌ ಅನುಮಾನ

ಬಿಸಿಸಿಐ ಸಿದ್ಧಪಡಿಸಿದ ಸ್ಟಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್(SOP) ಟೂರ್ನಿಯಲ್ಲಿ ಪಾಲ್ಗೊಳ್ಳುವ ಪ್ರತಿಯೋರ್ವ ಆಟಗಾರ, ಮ್ಯಾನೇಜ್‌ಮೆಂಟ್ ಸಿಬ್ಬಂದಿ, ಬೆಂಬಲಿಗ ಸಿಬ್ಬಂದಿಗಳು ಬಯೋ ಬಬಲ್‌ಗೆ ಸೇರ್ಪಡೆಗೊಳ್ಳುವ ಮುನ್ನ ಒಂದು ವಾರಗಳ ಕಡ್ಡಾಯ ಹೋಟೆಲ್ ಕ್ವಾರಂಟೈನ್ ಪೂರೈಸಬೇಕಿದೆ. ಈ ಅವಧಿಯಲ್ಲಿ ಪ್ರತಿ ಆಟಗಾರರ ಕೋವಿಡ್ ಪರೀಕ್ಷೆಯನ್ನೂ ನಡೆಸಲಾಗುತ್ತದೆ.

ಇನ್ನು ಡೆಲ್ಲಿ ಕ್ಯಾಪಿಟಲ್ಸ್ ಆಟಗಾರರು ಮುಂಬೈಗೆ ಬಂದಿಳಿದಿರುವ ಬಗ್ಗೆ ಡೆಲ್ಲಿ ಕ್ಯಾಪಿಟಲ್ಸ್ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. "ಕಳೆದ ರಾತ್ರಿ ಐಪಿಎಲ್ 2021 ಗಾಗಿ ಕೆಎಲ ಡಿಸಿ ತಾರೆಗಳು ಬಂದಿಳಿದಿರುವುದು ನಮ್ಮನ್ನು ಅಕ್ಷರಶಃ ರೋಮಾಂಚಿತಗೊಳಿಸಿದೆ" ಎಂದು ಟ್ವಿಟ್‌ನಲ್ಲಿ ಬರೆದುಕೊಂಡಿದೆ.

IPL 2021: ಮಾರ್ಚ್ 29ರಿಂದ ಆರ್‌ಸಿಬಿ ಆಟಗಾರರ ಅಭ್ಯಾಸ ಶುರುIPL 2021: ಮಾರ್ಚ್ 29ರಿಂದ ಆರ್‌ಸಿಬಿ ಆಟಗಾರರ ಅಭ್ಯಾಸ ಶುರು

ಇತ್ತೀಚೆಗಷ್ಟೇ ಡೆಲ್ಲಿ ಕ್ಯಾಪಿಟಲ್ಸ್ ತಂಡ ತನ್ನ ನೂತನ ಜರ್ಸಿಯನ್ನು ಬಿಡುಗಡೆಗೊಳಿಸಿತು. ಕಳೆದ ಬಾರಿ ಐಪಿಎಲ್‌ನ ಫೈನಲ್ ಹಂತದವರೆಗೆ ತಲುಪಿದ್ದ ಡೆಲ್ಲಿ ಕ್ಯಾಪಿಟಲ್ಸ್ ಈ ಬಾರಿ ಟ್ರೋಫಿ ಎತ್ತಿ ಹಿಡಿಯಲೇ ಬೇಕೆಂದು ಹಠತೊಟ್ಟಿದೆ.

Story first published: Wednesday, March 24, 2021, 20:34 [IST]
Other articles published on Mar 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X