ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಿಬ್ಬಂದಿ, ಕೋಚ್‌ಗಳಿಗೆ 4.5 ಕೋಟಿ ರೂ. ಸಂಬಳ ಬಾಕಿ ಉಳಿಸಿದ ಡೆಲ್ಲಿ

Delhi cricket body yet to pay R4.5 crore in salaries to staff, coaches

ನವದೆಹಲಿ, ಮಾರ್ಚ್ 23: ಡೆಲ್ಲಿ ಆ್ಯಂಡ್ ಡಿಸ್ಟ್ರಿಕ್ಟ್ ಕ್ರಿಕೆಟ್ ಅಸೋಸಿಯೇಷನ್ (ಡಿಡಿಸಿಎ) ತನ್ನ ಸಿಬ್ಬಂದಿಗೆ ಮತ್ತು ಕೋಚ್‌ಗಳಿಗೆ ಸುಮಾರು 4.5 ಕೋಟಿ ರೂಪಾಯಿಯಷ್ಟು ಸಂಬಳ ನೀಡದೆ ಬಾಕಿ ಉಳಿಸಿದೆ. ಸೀಸನ್ ಮುಗಿದ ಬಳಿಕವೂ ಡಿಡಿಸಿಎ ಸಂಬಳ ನೀಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ವೀವ್ ರಿಚರ್ಡ್ಸ್ ಟು ವಿರಾಟ್ ಕೊಹ್ಲಿ: ಐಸಿಸಿ ಬೆಸ್ಟ್ 'ಪುಲ್‌ಶಾಟ್' ಪ್ರಶ್ನೆಗೆ ರೋಹಿತ್ ಅಸಮಾಧಾನವೀವ್ ರಿಚರ್ಡ್ಸ್ ಟು ವಿರಾಟ್ ಕೊಹ್ಲಿ: ಐಸಿಸಿ ಬೆಸ್ಟ್ 'ಪುಲ್‌ಶಾಟ್' ಪ್ರಶ್ನೆಗೆ ರೋಹಿತ್ ಅಸಮಾಧಾನ

ಡಿಸಿಸಿಎ ಸಂಬಳ ಬಾಕಿ ಉಳಿಸಿರುವ ವಿಚಾರವನ್ನು ಸಹ ಕಾರ್ಯದರ್ಶಿ ರಾಜನ್ ಮಂಚಂದ ಮತ್ತು ಭಾರತದ ಮಾಜಿ ಆಟಗಾರ ಕೀರ್ತಿ ಅಝಾದ್ ತಿಳಿಸಿದ್ದಾರೆ. ಡಿಡಿಸಿಎ ಮೇಲಿನ ಆರೋಪವನ್ನು ಈ ಇಬ್ಬರೂ ಓಂಬುಡ್ಸ್ಮನ್ ಜಸ್ಟೀಸ್ (ನಿವೃತ್ತ) ದೀಪಕ್ ವರ್ಮಾಗೆ ವಿವರಿಸಿದ್ದಾರೆ ಎನ್ನಲಾಗಿದೆ.

ನಿಮ್ಮ ವೈಯಕ್ತಿಕ ಆಟದ ಕಡೆಗೆ ಮಾತ್ರ ಗಮನ ನೀಡಿ: ಪಿಸಿಬಿ ತಾಕೀತುನಿಮ್ಮ ವೈಯಕ್ತಿಕ ಆಟದ ಕಡೆಗೆ ಮಾತ್ರ ಗಮನ ನೀಡಿ: ಪಿಸಿಬಿ ತಾಕೀತು

ಕಾನೂನಿನ ವಿಚಾರವಾಗಿ ಡಿಡಿಸಿಎ ಹಣವನ್ನು ವಿನಿಯೋಜಿಸುತ್ತಿದೆ. ಆದರೆ ತನ್ನ ಸಿಬ್ಬಂದಿಗೆ ಸೀಸನ್ ಮುಗಿದರೂ ಸಂಬಳ ನೀಡಿಲ್ಲ ಎಂದು ಅಝಾದ್ ಹೇಳಿದ್ದಾರೆ. ಹಿಂದುಸ್ತಾನ್ ಟೈಮ್ಸ್‌ಗೆ ತೋರಿಸಲಾದ ದಾಖಲೆಯಲ್ಲಿ ಸುಮಾರು 1.63 ಕೋಟಿ ರೂ. ವಕೀಲರಿಗೆ ನೀಡಿದ್ದು ಕಾಣಸಿಕ್ಕಿತ್ತು ಎಂದು ತಿಳಿದು ಬಂದಿದೆ.

ಜಾದೂಗಾರನಾಗಿ ಬದಲಾದ ಶ್ರೇಯಸ್ ಐಯ್ಯರ್: ವೈರಲ್ ವೀಡಿಯೋಜಾದೂಗಾರನಾಗಿ ಬದಲಾದ ಶ್ರೇಯಸ್ ಐಯ್ಯರ್: ವೈರಲ್ ವೀಡಿಯೋ

'ಕಳೆದ ಕೆಲ ತಿಂಗಳುಗಳಲ್ಲಿ ಸುಮಾರು 2 ಕೋ.ರೂ (ಸರಿಯಾಗಿ 1.63 ಕೋ.ರೂ.) ಹಣವನ್ನು ಡಿಡಿಸಿಎ ಬರೀ ಕಾನೂನು ವಿಚಾರವಾಗಿ ವ್ಯಯಿಸಿದೆ. ಅಂದರೆ ಕ್ರೀಡಾ ಸಂಸ್ಥೆಯೊಂದು ಕ್ರಿಕೆಟ್‌ಗಿಂತ ಹೆಚ್ಚಾಗಿ ಕಾನೂನಿನ ವಿಚಾರದಲ್ಲಿ ಹೆಚ್ಚು ತಲೆ ಕೆಡಿಸಿಕೊಂಡಂತೆ ಕಾಣುತ್ತಿದೆ,' ಎಂದು ಅಝಾದ್ ಓಂಬುಡ್ಸ್ಮನ್‌ಗೆ ನೀಡಿರುವ ಪತ್ರದಲ್ಲಿ ಅಝಾದ್ ಬರೆದಿದ್ದಾರೆ.

Story first published: Monday, March 23, 2020, 10:26 [IST]
Other articles published on Mar 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X