ಭಾರತ vs ಡರ್ಬಿಶೈರ್: ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಟಿ20 ಅಭ್ಯಾಸ ಪಂದ್ಯ

ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಭಾರತ ತಂಡ ಮತ್ತೊಂದು ಟಿ20 ಪಂದ್ಯವನ್ನು ಆಡಲಿದೆ. ಐರ್ಲೆಂಡ್ ವಿರುದ್ಧದ ಟಿ20 ಸರಣಿಯನ್ನು 2-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದ ಭಾರತ ತಂಡ ಇಂಗ್ಲೆಂಡ್ ತಲುಪಿದೆ. ಜುಲೈ 7ರಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೂ ಮುನ್ನ ಭಾರತ ತಂಡ ಎರಡು ಅಭ್ಯಾಸ ಟಿ20 ಪಂದ್ಯಗಳನ್ನು ಆಡುತ್ತಿದೆ.

ಇವುಗಳಲ್ಲಿ ಮೊದಲನೆಯದು ಶುಕ್ರವಾರ ನಡೆಯಲಿದೆ. ಈ ಪಂದ್ಯದಲ್ಲಿ ಭಾರತವು ಇಂಗ್ಲಿಷ್ ಕೌಂಟಿ ಕ್ರಿಕೆಟ್ ಕ್ಲಬ್ ಡರ್ಬಿಶೈರ್ ಅನ್ನು ಎದುರಿಸಲಿದೆ. ಎರಡು ಅಭ್ಯಾಸ ಟಿ20 ಪಂದ್ಯಗಳು ಇಂಗ್ಲೆಂಡ್ ವಿರುದ್ಧದ ಅಧಿಕೃತ ಟಿ20 ಸರಣಿಯ ಮೊದಲು ಭಾರತವು ತಮ್ಮ ದೌರ್ಬಲ್ಯಗಳನ್ನು ಗುರುತಿಸಲು ಮತ್ತು ಪರಿಹರಿಸಲು ಒಂದು ಅವಕಾಶವಾಗಿದೆ.

ಸಂಜು ಸ್ಯಾಮ್ಸನ್ ಮೇಲೆ ಎಲ್ಲರ ಕಣ್ಣು

ಸಂಜು ಸ್ಯಾಮ್ಸನ್ ಮೇಲೆ ಎಲ್ಲರ ಕಣ್ಣು

ಐರ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಸಿಕ್ಕ ಅವಕಾಶದಲ್ಲಿ ಮಿಂಚಿದ ಸಂಜು ಸ್ಯಾಮ್ಸನ್ ಶುಕ್ರವಾರದ ಪಂದ್ಯಕ್ಕೂ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇಶಾನ್ ಕಿಶನ್ ಜೊತೆಗೆ ಅವರು ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ.

ಕಳೆದ ಪಂದ್ಯದಲ್ಲಿ ಸಂಜು ಭಾರತದ ಜೆರ್ಸಿಯಲ್ಲಿ ಚೊಚ್ಚಲ ಅರ್ಧಶತಕ ಗಳಿಸಿ 77 ರನ್ ಕಲೆಹಾಕಿದರು. ಎರಡು ಅಭ್ಯಾಸ ಟಿ20ಗಳಲ್ಲಿ ಸಂಜು ತಮ್ಮ ಫಾರ್ಮ್ ಅನ್ನು ಉಳಿಸಿಕೊಳ್ಳಲು ಪ್ರಯತ್ನಿಸಲಿದ್ದಾರೆ. ಈ ಮೂಲಕ ಅವರು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ತಂಡದಲ್ಲಿ ಸ್ಥಾನ ಪಡೆಯಬಹುದು.

ಅಬ್ಬರ ಮುಂದುವರಿಸಲು ದೀಪಕ್ ಹೂಡಾ ಸಜ್ಜು

ಅಬ್ಬರ ಮುಂದುವರಿಸಲು ದೀಪಕ್ ಹೂಡಾ ಸಜ್ಜು

ಕಳೆದ ಟಿ20 ಸರಣಿಯಲ್ಲಿ ಟ್ರಂಪ್ ಕಾರ್ಡ್ ಆಗಿದ್ದ ದೀಪಕ್ ಹೂಡಾ, ಟಿ20 ಅಭ್ಯಾಸ ಪಂದ್ಯದಲ್ಲಿ ಎಲ್ಲರ ಗಮನ ಸೆಳೆಯಲಿದ್ದಾರೆ. ಅವರು ಐರ್ಲೆಂಡ್ ವಿರುದ್ಧದ ಪಂದ್ಯ ಶ್ರೇಷ್ಟ ಹಾಗೂ ಸರಣಿ ಶ್ರೇಷ್ಟ ಪ್ರಶಸ್ತಿ ಪಡೆದರು. ಮೊದಲ ಟಿ20ಯಲ್ಲಿ ಅಜೇಯ 47 ರನ್ ಗಳಿಸಿದ್ದ ಹೂಡಾ ಎರಡನೇ ಟಿ20ಯಲ್ಲಿ 104 ರನ್ ಗಳಿಸಿ ಎಲ್ಲರನ್ನೂ ದಂಗುಬಡಿಸಿದರು. ಅವರ ಶತಕ ವೃತ್ತಿಜೀವನದ ಮೂರನೇ ಟಿ20 ಪಂದ್ಯದಲ್ಲೇ ಆಗಿತ್ತು. ಇದರೊಂದಿಗೆ ಹೂಡಾ ಈ ಮಾದರಿಯಲ್ಲಿ ಶತಕ ಸಿಡಿಸಿದ ನಾಲ್ಕನೇ ಭಾರತೀಯ ಎನಿಸಿಕೊಂಡರು. ಈ ಪ್ರದರ್ಶನದ ಮೂಲಕ ಅವರು ಈ ವರ್ಷದ ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ತಮ್ಮ ಹಕ್ಕು ಸಾಧಿಸಿದ್ದಾರೆ.

ಕೆ.ಎಲ್ ರಾಹುಲ್ ಏಷ್ಯಾಕಪ್‌ನಲ್ಲೂ ಆಡೋದು ಅನುಮಾನ: ಕಾರಣ ಏನು?

ಅರ್ಷ್‌ದೀಪ್‌ಗೆ ಸಿಗುತ್ತಾ ಅವಕಾಶ?

ಅರ್ಷ್‌ದೀಪ್‌ಗೆ ಸಿಗುತ್ತಾ ಅವಕಾಶ?

ಹೊಸಬರಾದ ರಾಹುಲ್ ತ್ರಿಪಾಠಿ ಮತ್ತು ಅರ್ಷದೀಪ್ ಸಿಂಗ್ ಅವರಿಗೆ ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಪದಾರ್ಪಣೆ ಮಾಡುವ ಅವಕಾಶ ಸಿಗಲಿಲ್ಲ. ಈ ಸರಣಿಯ ಮೂಲಕ ತ್ರಿಪಾಠಿ ಮೊದಲ ಬಾರಿಗೆ ತಂಡಕ್ಕೆ ಬಂದರೆ, ಅರ್ಷ್‌ದೀಪ್ ಕೂಡ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆಯಲು ಎದುರು ನೋಡುತ್ತಿದ್ದಾರೆ.

ಆದಾಗ್ಯೂ, ಶುಕ್ರವಾರದ ಡರ್ಬಿಶೈರ್ ವಿರುದ್ಧದ ಟಿ20ಗೆ ಭಾರತೀಯ ತಂಡದಲ್ಲಿ ಅರ್ಶ್‌ದೀಪ್ ಮತ್ತು ತ್ರಿಪಾಠಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

IND vs ENG: ಐದನೇ ಟೆಸ್ಟ್ ಪಂದ್ಯಕ್ಕೆ ಬಲಿಷ್ಠ ಆಡುವ ಬಳಗ ಘೋಷಿಸಿದ ಇಂಗ್ಲೆಂಡ್

ಅಭ್ಯಾಸ ಪಂದ್ಯ ಎಷ್ಟು ಗಂಟೆಗೆ ಪ್ರಾರಂಭ?

ಅಭ್ಯಾಸ ಪಂದ್ಯ ಎಷ್ಟು ಗಂಟೆಗೆ ಪ್ರಾರಂಭ?

ಭಾರತ ಮತ್ತು ಡರ್ಬಿಶೈರ್ ನಡುವಿನ ಟಿ20 ಪಂದ್ಯ ಭಾರತೀಯ ಕಾಲಮಾನ ಶುಕ್ರವಾರ ರಾತ್ರಿ 11.30ಕ್ಕೆ ಆರಂಭವಾಗಲಿದೆ. ಪಂದ್ಯವು ಯಾವುದೇ ಟಿವಿಗಳಲ್ಲಿ ನೇರ ಪ್ರಸಾರ ಮಾಡಲಾಗುವುದಿಲ್ಲ. ಆದರೆ ಕೆಲವು ಯೂಟ್ಯೂಬ್‌ ಚಾನಲ್‌ಗಳು ಆಟದ ಲೈವ್ ಸ್ಟ್ರೀಮಿಂಗ್ ಅನ್ನು ಹೊಂದಿರುತ್ತವೆ. ಇದಕ್ಕೂ ಮುನ್ನ ಭಾರತ ಮತ್ತು ಲೀಸೆಸ್ಟರ್‌ಶೈರ್ ನಡುವಿನ ನಾಲ್ಕು ದಿನಗಳ ತರಬೇತಿ ಪಂದ್ಯವನ್ನು ಯೂಟ್ಯೂಬ್‌ನಲ್ಲಿ ಪ್ರಸಾರ ಮಾಡಲಾಗಿತ್ತು.

For Quick Alerts
ALLOW NOTIFICATIONS
For Daily Alerts
Story first published: Thursday, June 30, 2022, 18:37 [IST]
Other articles published on Jun 30, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X