ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಿಂಕ್ ಬಾಲ್ ಟೆಸ್ಟ್ ಪಂದ್ಯ ನಮಗೆ ಹೆಚ್ಚು ಅನುಕೂಲಕರವಾಗಿದೆ ಎಂದ ಇಂಗ್ಲೆಂಡ್ ಬ್ಯಾಟ್ಸ್‌ಮನ್

Despite hosts unbelievable attack, we hold edge in Pink-ball Test, says Crawley

"ಅದ್ಭುತವಾದ ವೇಗದ ಬೌಲಿಂಗ್ ಹಾಗೂ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳು ಭಾರತ ತಂಡವನ್ನು ಬಲಿಷ್ಠವನ್ನಾಗಿ ಮಾಡುತ್ತದೆ. ಆದರೆ ಪಿಂಕ್ ಬಾಲ್ ಪಂದ್ಯದಲ್ಲಿ ಇಂಗ್ಲೆಂಡ್ ಹೆಚ್ಚಿನ ಪ್ರಾವೀಣ್ಯತೆಯನ್ನು ಸಾಧಿಸಿರುವುದರಿಂದ ಈ ಪಂದ್ಯದ ಅನುಕೂಲತೆಯನ್ನು ಪ್ರವಾಸಿ ತಂಡ ಹೊಂದಿದೆ ಎಂದು ಇಂಗ್ಲೆಂಡ್ ವೇಗಿ ಜಾಕ್ ಕ್ರಾವ್ಲೇ ಅಭಿಪ್ರಾಯಪಟ್ಟಿದ್ದಾರೆ.

ಬ್ರಿಟೀಷ್ ಮಾಧ್ಯಮಗಳೊಂದಿಗೆ ಇಂಗ್ಲೆಂಡ್ ದಾಂಡಿಗ ಜಾಕ್ ಕ್ರಾವ್ಲೇ ಮಾತನಾಡುತ್ತಾ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸೀಮಿಂಗ್ ಪಿಚ್‌ಗಳಲ್ಲಿ ಇಂಗ್ಲೆಂಡ್ ಮೇಲುಗೈ ಸಾಧಿಸುವ ಬಗ್ಗೆ ಕೇಳಲಾದ ಪ್ರಶ್ನೆಗೆ ಅವರು "ನಾವು ಅಂತಾ ಪರಿಸ್ಥಿತಿಗಳಲ್ಲಿ ಆಡುತ್ತಾ ಬೆಳೆದವರು. ಸೀಮಿಂಗ್ ಕಂಡೀಶನ್‌ಗಳಲ್ಲಿ ಚೆಂಡುಗಳನ್ನು ತಡವಾಗಿ ಎದುರಿಸುವ ಪ್ರಯತ್ನ ಮಾಡುತ್ತೇವೆ. ಹೀಗಾಗಿ ಭಾರತೀಯರಿಗಿಂತ ಇಂತಾ ಸನ್ನಿವೇಶಕ್ಕೆ ವೇಗವಾಗಿ ಒಗ್ಗಿಕೊಳ್ಳುತ್ತೇವೆ ಎಂದು ಹೇಳಬಹುದು" ಎಂದರು ಜಾಕ್ ಕ್ರಾವ್ಲೇ.

ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಗೆ ಟೀಮ್ ಇಂಡಿಯಾ ಪ್ರಕಟ!ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಗೆ ಟೀಮ್ ಇಂಡಿಯಾ ಪ್ರಕಟ!

ಅದೇ ಕಾರಣಕ್ಕಾಗಿ ಬಹುಶಃ ಅವರು ಸ್ಪಿನ್ ಬೌಲಿಂಗ್‌ನ ಎದುರು ಅದ್ಭುತವಾಗಿ ಆಡುತ್ತಾರೆ. ಯಾಕೆಂದರೆ ಅವರು ಸ್ಪಿನ್ ಬೌಲಿಂಗ್‌ ಕಂಡೀಶನ್‌ಗಳನ್ನು ಎದುರಿಸುತ್ತಾ ಬೆಳೆದಿರುತ್ತಾರೆ ಎಂದು ಜಾಕ್ ಕ್ರಾವ್ಲೇ ತಮ್ಮ ಅಭಿಪ್ರಾಯವನ್ನು ಹೇಳಿಕೊಂಡಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಟೀಮ್ ಇಂಡಿಯಾ ಕೂಡ ಅದ್ಭುತವಾಗಿ ವೇಗದ ಬೌಲಿಂಗ್ ಪಡೆಯನ್ನು ಹೊಂದಿದೆ ಎಂಬುದನ್ನು ಜಾಕ್ ಕ್ರಾವ್ಲೇ ಮರೆಯಲಿಲ್ಲ. "ಅವರು ಕುಡ ಶ್ರೇಷ್ಠವಾದ ವೇಗದ ಬೌಲಿಂಗ್ ಪಡೆಯನ್ನು ಹೊಂದಿದ್ದಾರೆ. ಅದ್ಭುತವಾಗಿ ಬ್ಯಾಟ್ಸ್‌ಮನ್‌ಗಳನ್ನು ಹೊಂದಿದ್ದಾರೆ. ಹೀಗಾಗಿ ಅದು ನಮಗೆ ಹೆಚ್ಚಿನ ಸಹಾಯ ಮಾಡಲಾರದು ಎಂದಿದ್ದಾರೆ ಜಾಕ್ ಕ್ರಾವ್ಲೇ.

ವಿಜಯ್ ಹಜಾರೆ: ಒಡಿಶಾ ವಿರುದ್ಧ ರಾಬಿನ್ ಉತ್ತಪ್ಪ ಸ್ಫೋಟಕ ಶತಕವಿಜಯ್ ಹಜಾರೆ: ಒಡಿಶಾ ವಿರುದ್ಧ ರಾಬಿನ್ ಉತ್ತಪ್ಪ ಸ್ಫೋಟಕ ಶತಕ

ಜಾಕ್ ಕ್ರಾವ್ಲೇ ಭಾರತದ ವಿರುದ್ಧದ ಟೆಸ್ಟ್ ಸರಣಿಯ ಮೊದಲಎರಡು ಪಮದ್ಯಗಳಿಂದ ಹೊರಗುಳಿದಿದ್ದರು. ಚೆನ್ನೈ ಸ್ಟೇಡಿಯಮ್‌ನ ಡ್ರೆಸ್ಸಿಂಗ್ ರೂಮ್‌ನಲ್ಲಿ ಜಾರಿ ಬಿದ್ದು ಜಾಕ್ ಕ್ರಾವ್ಲೇ ಗಾಯಗೊಮಡಿದ್ದರು. ಈಗ ಅಂತಿಮ ಎರಡು ಪಂದ್ಯಗಳಲ್ಲಿ ಆಡಲು ಅವರು ಸಂಪೂರ್ಣ ಫಿಟ್ ಆಗಿದ್ದಾರೆ

Story first published: Monday, February 22, 2021, 8:00 [IST]
Other articles published on Feb 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X