ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಶ್ರೀಲಂಕಾ: ವಿಶೇಷ ದಾಖಲೆ ಬರೆದ ದೇವದತ್ ಪಡಿಕ್ಕಲ್

Devdutt Padikkal creates this unique record on his debut in 2nd T20I against Sri Lanka

ಯುವ ಆಟಗಾರರಿಂದ ಕೂಡಿದ ಶಿಖರ್ ಧವನ್ ನೇತೃತ್ವದ ಟೀಮ್ ಇಂಡಿಯಾ ತಂಡ ಸದ್ಯ ಶ್ರೀಲಂಕಾ ಪ್ರವಾಸದಲ್ಲಿ ನಿರತವಾಗಿದೆ. 3ಪಂದ್ಯಗಳ ಏಕದಿನ ಸರಣಿಯನ್ನು ಈಗಾಗಲೇ ಭಾರತ 2-1 ಅಂತರದಿಂದ ಶ್ರೀಲಂಕಾ ವಿರುದ್ಧ ಗೆದ್ದುಕೊಂಡಿದ್ದು ಸದ್ಯ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಸೆಣಸಾಡುತ್ತಿದೆ.

ಟೋಕಿಯೋ ಒಲಿಂಪಿಕ್ಸ್: ಪಿ ವಿ ಸಿಂಧುಗೆ ಹ್ಯಾಟ್ರಿಕ್ ಗೆಲುವು, ಕ್ವಾರ್ಟರ್ ಫೈನಲ್‌ಗೆ ಲಗ್ಗೆ!ಟೋಕಿಯೋ ಒಲಿಂಪಿಕ್ಸ್: ಪಿ ವಿ ಸಿಂಧುಗೆ ಹ್ಯಾಟ್ರಿಕ್ ಗೆಲುವು, ಕ್ವಾರ್ಟರ್ ಫೈನಲ್‌ಗೆ ಲಗ್ಗೆ!

ಈಗಾಗಲೇ 2 ಟಿ ಟ್ವೆಂಟಿ ಪಂದ್ಯಗಳು ಮುಗಿದಿದ್ದು ಮೊದಲನೇ ಟಿ ಟ್ವೆಂಟಿ ಪಂದ್ಯದಲ್ಲಿ ಭಾರತ ಶ್ರೀಲಂಕಾ ವಿರುದ್ಧ 38 ರನ್‌ಗಳ ಜಯವನ್ನು ಸಾಧಿಸಿತ್ತು. ಆದರೆ ಎರಡನೇ ಟಿ ಟ್ವೆಂಟಿ ಪಂದ್ಯಕ್ಕೂ ಮುನ್ನ ಭಾರತ ತಂಡದ ಆಟಗಾರ ಕೃನಾಲ್ ಪಾಂಡ್ಯ ಕೊರೋನಾವೈರಸ್ ಸೋಂಕಿಗೆ ಒಳಗಾದ ಕಾರಣ ಪಾಂಡ್ಯ ಸಂಪರ್ಕದಲ್ಲಿದ್ದ ಭಾರತದ ಹಲವಾರು ಪ್ರಮುಖ ಆಟಗಾರರನ್ನು ಎರಡನೇ ಟಿ ಟ್ವೆಂಟಿ ಪಂದ್ಯದಿಂದ ಹೊರಗಿಡಲಾಯಿತು. ಹೀಗಾಗಿ ಭಾರತದ 4 ಯುವ ಕ್ರಿಕೆಟಿಗರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಪದಾರ್ಪಣೆ ಮಾಡುವ ಅವಕಾಶ ಲಭಿಸಿತು.

ಕೊಹ್ಲಿ ಅಲ್ಲ ಆ ಭಾರತೀಯ ಕ್ರಿಕೆಟಿಗ ಧೋನಿ ರೀತಿಯ ಚಾಣಾಕ್ಷ ನಾಯಕ ಎಂದ ಕಮ್ರಾನ್ ಅಕ್ಮಲ್ಕೊಹ್ಲಿ ಅಲ್ಲ ಆ ಭಾರತೀಯ ಕ್ರಿಕೆಟಿಗ ಧೋನಿ ರೀತಿಯ ಚಾಣಾಕ್ಷ ನಾಯಕ ಎಂದ ಕಮ್ರಾನ್ ಅಕ್ಮಲ್

Shikhar Dhawan ತಂಡದ ಹುಡುಗರಿಗೆ Hats off ಎಂದಿದ್ದೇಕೆ | Oneindia Kannada

ಆ ನಾಲ್ವರು ಕ್ರಿಕೆಟಿಗರ ಪೈಕಿ ಕನ್ನಡಿಗ ದೇವದತ್ ಪಡಿಕ್ಕಲ್ ಕೂಡ ಅವಕಾಶವನ್ನು ಪಡೆದುಕೊಂಡರು. ಹೀಗೆ ಶ್ರೀಲಂಕಾ ವಿರುದ್ಧದ ಎರಡನೇ ಟಿ ಟ್ವೆಂಟಿಯಲ್ಲಿ ಆಡುವ ಅವಕಾಶ ಪಡೆದ ದೇವದತ್ ಪಡಿಕ್ಕಲ್ ವಿಶೇಷ ದಾಖಲೆಗೆ ಪಾತ್ರರಾಗಿದ್ದಾರೆ. ಹೌದು 21ನೇ ಶತಮಾನದಲ್ಲಿ ಜನಿಸಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಕಾಲಿಟ್ಟ ಮೊದಲ ಭಾರತೀಯ ಆಟಗಾರ ಎಂಬ ಕೀರ್ತಿಗೆ ಈಗ ದೇವದತ್ ಪಡಿಕ್ಕಲ್ ಪಾತ್ರರಾಗಿದ್ದಾರೆ. ದೇವದತ್ ಪಡಿಕ್ಕಲ್ ಜುಲೈ 7, 2000ರಲ್ಲಿ ಜನಿಸಿದ್ದರು. ಹೀಗಾಗಿ ಟೀಮ್ ಇಂಡಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟ 21ನೇ ಶತಮಾನದಲ್ಲಿ ಜನಿಸಿದ ಮೊದಲ ಕ್ರಿಕೆಟಿಗ ಎಂಬ ದಾಖಲೆಯನ್ನು ದೇವದತ್ ಪಡಿಕ್ಕಲ್ ನಿರ್ಮಿಸಿದ್ದಾರೆ. ಪದಾರ್ಪಣೆ ಮಾಡಿದ ಮೊದಲನೇ ಪಂದ್ಯದಲ್ಲಿಯೇ 23 ಎಸೆತಗಳಿಗೆ 29 ರನ್ ಬಾರಿಸಿದ ದೇವದತ್ ಪಡಿಕ್ಕಲ್ ಜವಾಬ್ದಾರಿಯುತ ಆಟವಾಡಿದರು.

2000 ನಂತರ ಜನಿಸಿದವರ ಪೈಕಿ ಟೀಮ್ ಇಂಡಿಯಾಗೆ ಕಾಲಿಟ್ಟ ಮೊದಲ ಆಟಗಾರ

2000 ನಂತರ ಜನಿಸಿದವರ ಪೈಕಿ ಟೀಮ್ ಇಂಡಿಯಾಗೆ ಕಾಲಿಟ್ಟ ಮೊದಲ ಆಟಗಾರ


ಮೊದಲೇ ಹೇಳಿದಂತೆ 2000 ಇಸವಿಯ ನಂತರ ಜನಿಸಿದ ಕ್ರಿಕೆಟಿಗರ ಪೈಕಿ ಟೀಮ್ ಇಂಡಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಿದ ಮೊದಲನೆಯ ಆಟಗಾರ ಎಂಬ ಕೀರ್ತಿಗೆ ದೇವದತ್ ಪಡಿಕ್ಕಲ್ ಪಾತ್ರರಾಗಿದ್ದಾರೆ.

ಎರಡೂ ಟಿ ಟ್ವೆಂಟಿಯಲ್ಲೂ ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನೂ ನೀಡಲಿಲ್ಲ

ಎರಡೂ ಟಿ ಟ್ವೆಂಟಿಯಲ್ಲೂ ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನೂ ನೀಡಲಿಲ್ಲ

ಇನ್ನು ಶ್ರೀಲಂಕಾ ವಿರುದ್ಧದ 2 ಟಿ ಟ್ವೆಂಟಿ ಪಂದ್ಯಗಳಿಗೆ ಆಯ್ಕೆಯಾದ ದೇವದತ್ ಪಡಿಕ್ಕಲ್ ಹೇಳಿಕೊಳ್ಳುವಂತಹ ಅತ್ಯುತ್ತಮ ಪ್ರದರ್ಶನವನ್ನೇನೂ ನೀಡಲಿಲ್ಲ. ಲಂಕಾ ವಿರುದ್ಧದ ಭಾರತದ ಎರಡನೇ ಟ್ವೆಂಟಿ ಪಂದ್ಯದ ಮೂಲಕ ಪದಾರ್ಪಣೆ ಮಾಡಿದ ದೇವದತ್ ಪಡಿಕಲ್ ಆ ಪಂದ್ಯದಲ್ಲಿ 23 ಎಸೆತಗಳಿಗೆ 29 ರನ್ ಬಾರಿಸಿದರು ಹಾಗೂ ಲಂಕಾ ವಿರುದ್ಧದ ಭಾರತದ ಮೂರನೇ ಟಿ ಟ್ವೆಂಟಿ ಪಂದ್ಯದಲ್ಲಿ ಪಡಿಕ್ಕಲ್ 15 ಎಸೆತಗಳಿಗೆ 9 ರನ್ ಕಲೆಹಾಕಿ ನಿರಾಸೆ ಮೂಡಿಸಿದರು.

ಸರಣಿ ಕೈಚೆಲ್ಲಿದ ಭಾರತ

ಸರಣಿ ಕೈಚೆಲ್ಲಿದ ಭಾರತ

ಲಂಕಾ ವಿರುದ್ಧದ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯ ಮೊದಲನೇ ಪಂದ್ಯವನ್ನು ಗೆದ್ದು ಬೀಗಿದ್ದ ಟೀಂ ಇಂಡಿಯಾ 2 ಮತ್ತು ಮೂರನೇ ಟಿ ಟ್ವೆಂಟಿ ಪಂದ್ಯಗಳಲ್ಲಿ ಸೋಲುವುದರ ಮೂಲಕ ಸರಣಿಯನ್ನು ಕೈಚೆಲ್ಲಿದೆ. ತಂಡದ ಪ್ರಮುಖ ಆಟಗಾರರು ಸರಣಿಯಿಂದ ಹೊರಗುಳಿದರೂ ಸಹ ಸರಣಿಯನ್ನು ರದ್ದುಗೊಳಿಸದೇ ಯುವ ಆಟಗಾರರನ್ನು ಬಳಸಿಕೊಂಡು ಸರಣಿಯನ್ನು ಪೂರೈಸಿದ ಟೀಮ್ ಇಂಡಿಯಾಕ್ಕೆ ದೊಡ್ಡ ಪ್ರಮಾಣದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Story first published: Friday, July 30, 2021, 7:04 [IST]
Other articles published on Jul 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X