ದೇವದತ್ ಪಡಿಕ್ಕಲ್ 'ಭಾರತೀಯ ಕ್ರಿಕೆಟ್‌ನ ಭವಿಷ್ಯ' ಎಂದ ಕ್ರಿಸ್ ಮೊರಿಸ್

ಐಪಿಎಲ್ 13ನೇ ಆವೃತ್ತಿಯಲ್ಲಿ ಆರ್‌ಸಿಬಿ ಪರ ಮಿಂಚುತ್ತಿರುವ ಸ್ಟಾರ್ ಆಲ್‌ರೌಂಡರ್ ಕ್ರಿಸ್ ಮೊರಿಸ್ ಅವರು ತಂಡದ ಯುವ ಆಟಗಾರ ದೇವದತ್‌ ಪಡಿಕ್ಕಲ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. 'ಪಡಿಕ್ಕಲ್ ಭಾರತೀಯ ಕ್ರಿಕೆಟ್‌ನ ಭವಿಷ್ಯ' ಎಂದೇ ಶ್ಲಾಘಿಸಿದ್ದಾರೆ.

ವಿರಾಟ್ ಕೊಹ್ಲಿ ನಂತರ ಆರ್‌ಸಿಬಿಯ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಓಪನರ್ ಪಡಿಕ್ಕಲ್, ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್‌ಮನ್ ಮ್ಯಾಥ್ಯೂ ಹೇಡನ್ ಅವರ ಹೋಲಿಕೆಯನ್ನು ಹೊಂದಿದ್ದಾರೆ ಎಂದು ಮೋರಿಸ್ ಹೇಳಿದರು.

ದೇವದತ್‌ ಮ್ಯಾಥ್ಯೂ ಹೇಡನ್‌ರಂತೆ ಬ್ಯಾಟ್ ಬೀಸುತ್ತಾರೆ

ದೇವದತ್‌ ಮ್ಯಾಥ್ಯೂ ಹೇಡನ್‌ರಂತೆ ಬ್ಯಾಟ್ ಬೀಸುತ್ತಾರೆ

"ದೇವದತ್ ಅದ್ಭುತ ಬ್ಯಾಟ್ಸ್‌ಮನ್ ಆಗಿದ್ದಾನೆ. ಮ್ಯಾಥ್ಯೂ ಹೇಡನ್ ಅವರಂತೆಯೇ ಅವರು ಬ್ಯಾಟಿಂಗ್ ಮಾಡುವ ಭವ್ಯವಾದ ಮಾರ್ಗವನ್ನು ಹೊಂದಿದ್ದಾರೆ. ದೇವದತ್ ಅವರು ಹೇಡನ್ ಅವರ ಭೌತಿಕ ಗಾತ್ರದ ದೇಹವನ್ನು ಹೊಂದಿಲ್ಲ, ಆದರೆ ಅವರು ಚೆಂಡನ್ನು ಹೊಡೆಯುವ ವಿಧಾನದೊಂದಿಗೆ ಇದೇ ರೀತಿಯ ತಂತ್ರವನ್ನು ಹೊಂದಿದ್ದಾರೆ. ಅವರು ಶ್ರೇಷ್ಠ ಕ್ರೀಡಾಪಟು, ಅದು ಮುಖ್ಯವಾಗಿದೆ. ಅವರು ಭಾರತೀಯ ಕ್ರಿಕೆಟ್‌ನ ಭವಿಷ್ಯ "ಎಂದು ಮೋರಿಸ್ ಶುಕ್ರವಾರ ಮಾಧ್ಯಮ ಸಂವಾದದಲ್ಲಿ ಹೇಳಿದರು.

ಐಪಿಎಲ್ 2020: ಆರ್‌ಸಿಬಿ ಅಭಿಮಾನಿಗಳಿಗೆ ದೇವದತ್ ಪಡಿಕ್ಕಲ್ ಕನ್ನಡದಲ್ಲಿ ಮನವಿ: ವಿಡಿಯೋ

ವಾಷಿಂಗ್ಟನ್ ಸುಂದರ್ ಕುರಿತು ಹೊಗಳಿಕೆಯ ಮಾತು

ವಾಷಿಂಗ್ಟನ್ ಸುಂದರ್ ಕುರಿತು ಹೊಗಳಿಕೆಯ ಮಾತು

ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಇತರೆ ಭಾರತೀಯ ಆಟಗಾರರ ಬಗ್ಗೆ ಹೆಚ್ಚಿನ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಅದರಲ್ಲಿ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಕೂಡ ಒಬ್ಬರು.

"ವಾಷಿಂಗ್ಟನ್ ಸುಂದರ್ ಈಗ ತನ್ನದೇ ಆದ ಶೈಲಿಯಲ್ಲಿ ಪ್ರದರ್ಶನ ಮಾಡುತ್ತಿದ್ದಾರೆ. ಅವರು 13 ನೇ ವಯಸ್ಸಿನಿಂದ ಐಪಿಎಲ್ ಆಡುತ್ತಿದ್ದಾರೆ ಎಂದು ನನಗೆ ಅನ್ನಿಸುತ್ತಿದೆ. (ನಗುತ್ತಾನೆ). ವಾಷಿಂಗ್ಟನ್ ಚೆಂಡನ್ನು ಸ್ಟ್ರಿಂಗ್‌ನಲ್ಲಿ ಇಟ್ಟುಕೊಂಡಿದ್ದಾನೆ "ಎಂದು ಮೋರಿಸ್ ಹೇಳಿದರು.

ಡೆಲ್ಲಿ ತಂಡಕ್ಕೆ ನೆಟ್ ಬೌಲರ್ ಆಗಿದ್ರಂತೆ ನವದೀಪ್ ಸೈನಿ

ಡೆಲ್ಲಿ ತಂಡಕ್ಕೆ ನೆಟ್ ಬೌಲರ್ ಆಗಿದ್ರಂತೆ ನವದೀಪ್ ಸೈನಿ

ಡೆಲ್ಲಿ ಡೇರ್‌ಡೆವಿಲ್ಸ್ ತಂಡದಲ್ಲಿನ ಅವಧಿಯ ದಿನಗಳನ್ನು ಮೆಲುಕು ಹಾಕಿದ ಮೊರಿಸ್, ತನ್ನ ಅವಧಿಯಲ್ಲಿ ನಾನು (ನವದೀಪ್) ಸೈನಿಯೊಂದಿಗೆ ಇದ್ದೆ. ಸೈನಿ ಆಗ ನೆಟ್ ಬೌಲರ್ ಆಗಿದ್ದರು. ಅವರು ಬೌಲಿಂಗ್ ಮಾಡುತ್ತಿರುವುದನ್ನು ನೋಡಿ ಈತ ಐಪಿಎಲ್ ಆಡುತ್ತಾನೆ ಅಂತ ಅಂದುಕೊಂಡಿರಲಿಲ್ಲ, ಏಕೆಂದರೆ ಆತನದ್ದು ರಾಕೆಟ್ ವೇಗ. ಅವರು ಈಗ ಭಾರತದ ಅಂತರರಾಷ್ಟ್ರೀಯ ಆಟಗಾರರಾಗಿರುವುದನ್ನು ನೋಡಲು ತುಂಬಾ ಸಂತೋಷವಾಗಿದೆ. " ಎಂದು ಮೊರಿಸ್ ಸೈನಿ ಪರಿಶ್ರಮವನ್ನ ಹೊಗಳಿದ್ದಾರೆ.

ಆರ್‌ಸಿಬಿ ಪಾಲಿನ ದೇವದೂತ ದೇವದತ್ ಪಡಿಕ್ಕಲ್

ಒತ್ತಡ ಇಲ್ಲದ ಕ್ರಿಕೆಟ್ ಬೋರಿಂಗ್

ಒತ್ತಡ ಇಲ್ಲದ ಕ್ರಿಕೆಟ್ ಬೋರಿಂಗ್

ಒತ್ತಡ ಇಲ್ಲದ ಕ್ರಿಕೆಟ್ ಬೋರಿಂಗ್ ಎಂದು ಆರ್‌ಸಿಬಿಯ ಆಲ್‌ರೌಂಡರ್ ಕ್ರಿಸ್ ಮೋರಿಸ್ ಹೇಳಿದ್ದಾರೆ . ಆರ್‌ಸಿಬಿಯಲ್ಲಿದ್ದು ಆರಂಭದಲ್ಲಿ & ಡೆತ್‌ನಲ್ಲಿ ಬೌಲಿಂಗ್ ಮಾಡೋದು ಹೇಗನ್ನಿಸುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಮೋರಿಸ್ , ಪ್ರಾಮಾಣಿಕವಾಗಿ ಹೇಳೋದಾದ್ರೆ ಈಗಿನ ಈ ಸ್ಥಾನಕ್ಕೆ ನಾನು ಖುಷಿಯಾಗಿದ್ದೇನೆ . ಒತ್ತಡವಿಲ್ಲದ ಕ್ರಿಕೆಟ್ ಬೋರಿಂಗ್ , ನೀವು ಕ್ರಿಕೆಟರ್ ಆಗಿದ್ದು ಪರೀಕ್ಷೆಗೆ ಒಳಗಾಗುತ್ತಿರಬೇಕಾಗುತ್ತದೆ ಎಂದಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Saturday, October 24, 2020, 9:52 [IST]
Other articles published on Oct 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X