ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಯುವ ಕ್ರಿಕೆಟಿಗ ದೇವದತ್ ಪಡಿಕ್ಕಲ್‌ಗೆ ಸವಾಲೆನಿಸಿದ ಬೌಲರ್ ಯಾರು?

Devdutt Padikkal names bowler who impressed him most in IPL 2020

ಆರ್‌ಸಿಬಿ ಪರವಾಗಿ ಕಣಕ್ಕಿಳಿದ ದೇವದತ್ ಪಡಿಕ್ಕಲ್ ಈ ಬಾರಿಯ ಐಪಿಎಲ್ ಟೂರ್ನಿಯನ್ನು ಅತ್ಯಂತ ಸ್ಮರಣೀಯವಾಗಿಸಿಕೊಂಡರು. ಟೂರ್ನಿಯಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಪಡಿಕ್ಕಲ್ ಆರ್‌ಸಿಬಿ ಪರವಾಗಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿದ್ದಾರೆ. ನಾಯಕ ವಿರಾಟ್ ಕೊಹ್ಲಿಗಿಂತ 7 ರನ್ ಅಧಿಕ ಗಳಿಸಿ ಮಿಂಚಿದ್ದಾರೆ. ಪಡಿಕ್ಕಲ್ ಆಟಕ್ಕೆ ಹಿರಿಯ ಆಟಗಾರರು ದಿಗ್ಗಜರು ಕೂಡ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.

ದೇಶಿ ಕ್ರಿಕೆಟ್‌ನಲ್ಲಿ ಮಿಂಚುಹರಿಸಿರುವ ಪಡಿಕ್ಕಲ್ ಐಪಿಎಲ್‌ನಲ್ಲೂ ಸಾಕಷ್ಟು ನಿರೀಕ್ಷೆ ಮೂಡುವಂತೆ ಮಾಡಿದರು. ಆದರೆ ಆ ನಿರೀಕ್ಷೆಯನ್ನೂ ಮೀರಿ ಪ್ರದರ್ಶನವನ್ನು ನೀಡಿದ್ದಾರೆ. ವಿಶ್ವ ದರ್ಜೆಯ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ್ದಾರೆ. ಆದರೆ ಓರ್ವ ಬೌಲರ್ ಮಾತ್ರ ಪಡಿಕ್ಕಲ್‌ಗೆ ಅತ್ಯಂತ ಕಠಿಣವೆನಿಸಿದರಂತೆ.

ಮುಂಬೈ ವಿರುದ್ಧದ ಪ್ರದರ್ಶನದ ಬಳಿಕ ಪಡಿಕ್ಕಲ್‌ಗೆ ಎಬಿಡಿಯಿಂದ ಬಂದಿತ್ತು ವಿಶೇಷ ಸಂದೇಶಮುಂಬೈ ವಿರುದ್ಧದ ಪ್ರದರ್ಶನದ ಬಳಿಕ ಪಡಿಕ್ಕಲ್‌ಗೆ ಎಬಿಡಿಯಿಂದ ಬಂದಿತ್ತು ವಿಶೇಷ ಸಂದೇಶ

ಪಡಿಕ್ಕಲ್‌ಗೆ ಸವಾಲೆನಿಸಿದ ಆ ಬೌಲರ್ ಯಾರು? ಉಳಿದ ಬೌಲರ್‌ಗಳಿಗಿಂತ ಆತನಿಗಿರುವ ವಿಶೇಷತೆಯೇನು? ಮುಂದೆ ಓದಿ..

ವೇಗಿಗಳಿಗಿಂತಲೂ ಓರ್ವ ಸ್ಪಿನ್ನರ್ ಕಠಿಣ

ವೇಗಿಗಳಿಗಿಂತಲೂ ಓರ್ವ ಸ್ಪಿನ್ನರ್ ಕಠಿಣ

ಟೂರ್ನಿಯಲ್ಲಿ ಕಗಿಸೋ ರಬಡಾ, ಅನ್ರಕ್ ನಾರ್ಕಿಯಾ ಅವರಂತಾ ಭಯಾನದ ವೇಗಿಗಳ ಜೊತೆಗೆ ಮೊನಚಾದ ದಾಳಿ ನಡೆಸುವ ಬೂಮ್ರಾ, ಆರ್ಚರ್‌ರಂತಾ ಬೌಲರ್‌ಗಳನ್ನು ಪಡಿಕ್ಕಲ್ ಎದುರಿಸಿದ್ದಾರೆ. ಆದರೆ ಈ ಬೌಲರ್‌ಗಳು ಕಠಿಣ ಸವಾಲನ್ನು ನೀಡಿದ್ದರಾದರೂ ಅವರೆಲ್ಲರಿಗಿಂತಲೂ ಓರ್ವ ಸ್ಪಿನ್ನರ್ ಪಡಿಕ್ಕಲ್‌ಗೆ ಕಠಿಣವೆನಿಸಿದರೆಂದು ಸ್ವತಃ ಪಡಿಕ್ಕಲ್ ಬಹಿರಂಗಪಡಿಸಿದ್ದಾರೆ.

ರಶೀದ್ ಬೌಲಿಂಗ್ ಕಠಿಣ

ರಶೀದ್ ಬೌಲಿಂಗ್ ಕಠಿಣ

ವೇಗದ ಬೌಲ್‌ಗಳು ಹೆಚ್ಚಾಗಿ ಸವಾಲೆನಿಸಲಿಲ್ಲ. ಯಾಕೆಂದರೆ ದೇಶೀಯ ಕ್ರಿಕೆಟ್‌ನಲ್ಲೂ ಅದ್ಭುತ ವೇಗದ ಬೌಲರ್‌ಗಳನ್ನು ಎದುರಿಸಿದ್ದೆ. ಆದರೆ ಲೆಗ್‌ಸ್ಪಿನ್ನರ್ ರಶೀದ್ ಖಾನ್ ಬೌಲಿಂಗ್ ಮಾತ್ರ ನನಗೆ ಸ್ವಲ್ಪ ಸವಾಲೆನಿಸಿತ್ತು. ಯಾಕೆಂದರೆ ಆತನ ಬೌಲಿಂಗ್‌ನಲ್ಲಿ ಉತ್ತಮ ವೇಗದ ಜೊತೆಗೆ ಸ್ಪಿನ್ ಕೂಡ ಇತ್ತು. ಹೀಗಾಗಿ ಚೆಂಡನ್ನು ಗುರುತಿಸುವುದು ಕಠಿಣವೆನಿಸಿತ್ತು ಎಂದು ಪಡಿಕ್ಕಲ್ ಹೇಳಿದ್ದಾರೆ.

"ಆತನ ಬೌಲಿಂಗ್ ಸುಲಭವಿರಲಿಲ್ಲ"

ಆತನ ಬೌಲಿಂಗ್‌ನ್ನು ಎದುರಿಸುವುದು ಸುಲಭವಾಗಿರಲಿಲ್ಲ. ಆತನನ್ನು ಎದುರಿಸಿದಾಗ ನನಗೆ ಒಂದು ವಿಚಾರ ಎನಿಸಿದ್ದು "ಒಕೆ.. ಇದು ನಾನು ಈವರೆಗೆ ಎದುರಿಸಿದಕ್ಕಿಂತ ವಿಶೇಷವಾಗಿದೆ" ಎಂದು ಪಡಿಕ್ಕಲ್ ಕ್ರಿಕ್ ಇನ್ಫೋಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ರಾಷ್ಟ್ರೀಯ ತಂಡದತ್ತ ಚಿತ್ತ

ರಾಷ್ಟ್ರೀಯ ತಂಡದತ್ತ ಚಿತ್ತ

ಇನ್ನು ಇದೇ ಸಂದರ್ಭದಲ್ಲಿ ತನ್ನ ಮುಂದಿನ ಚಿತ್ತ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವುದಾಗಿದೆ ಎಂದು ಪಡಿಕ್ಕಲ್ ತನ್ನ ಕನಸನ್ನು ವ್ಯಕ್ತಪಡಿಸಿದ್ದಾರೆ. "ಇದು ಪ್ರತಿ ಕ್ರಿಕೆಟಿಗನಿಗೂ ಇರುವ ಕನಸು. ನಾನು ಅದನ್ನು ಶೀಘ್ರದಲ್ಲೇ ನೆರವೇರಿಸಲು ಪ್ರಯತ್ನಿಸುತ್ತೇನೆ. ನನ್ನ ಆಟದತ್ತ ಇನ್ನಷ್ಟು ಗಮನ ಹರಿಸಿ ಮತ್ತಷ್ಟು ಉತ್ತಮ ಆಟವನ್ನು ನೀಡುವ ಪ್ರಯತ್ನ ನಡೆಸುತ್ತೇನೆ. ಯಾವಾಗ ನನಗೆ ಆ ಅವಕಾಶ ದೊರೆಯುತ್ತದೆ ಎರಡೂ ಕೈಗಳಿಂದ ಅದನ್ನು ಬಾಚಿಕೊಳ್ಳಲು ಸಿದ್ದನಿದ್ದೇನೆ" ಎಂದು ಪಡಿಕ್ಕಲ್ ವಿವರಿಸಿದ್ದಾರೆ.

Story first published: Sunday, November 15, 2020, 16:54 [IST]
Other articles published on Nov 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X