ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಜಯ್ ಹಜಾರೆ: ಪಡಿಕ್ಕಲ್ ಬ್ಯಾಟಿಂಗ್ ಅಬ್ಬರ, ಮತ್ತೊಂದು ದಾಖಲೆ!

Devdutt Padikkal registers fourth consecutive century in Vijay Hazare Trophy

ನವದೆಹಲಿ: ಕರ್ನಾಟಕ ತಂಡದ ಬ್ಯಾಟ್ಸ್‌ಮನ್‌ ದೇವದತ್ ಪಡಿಕ್ಕಲ್ ಈಚಿನ ದಿನಗಳಲ್ಲಿ ಬಹಳ ಮಿಂಚುತ್ತಿದ್ದಾರೆ. ಕ್ರಿಕೆಟ್ ಟೂರ್ನಿಗಳಲ್ಲಿ ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ನೀಡುತ್ತಿರುವ ಎಡಗೈ ಬ್ಯಾಟ್ಸ್‌ಮನ್‌ ಪಡಿಕ್ಕಲ್, ಈ ಮೊದಲು ಐಪಿಎಲ್‌ನಲ್ಲಿ, ಆ ಬಳಿಕ ಭಾರತ ಪರ ಏಕದಿನ ಕ್ರಿಕೆಟ್‌ನಲ್ಲಿ ಗಮನ ಸೆಳೆದಿದ್ದರು. ಈಗ ವಿಜಯ್ ಹಜಾರೆ ಟ್ರೋಫಿಯಲ್ಲಿ ಪಡಿಕ್ಕಲ್ ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸುತ್ತಿದ್ದಾರೆ.

ಸಂಜನಾ ಗಣೇಶನ್ ವರಿಸಲಿರುವ ಟೀಮ್ ಇಂಡಿಯಾ ವೇಗಿ ಬೂಮ್ರಾ: ಮದುವೆ ದಿನಾಂಕವೂ ಬಹಿರಂಗಸಂಜನಾ ಗಣೇಶನ್ ವರಿಸಲಿರುವ ಟೀಮ್ ಇಂಡಿಯಾ ವೇಗಿ ಬೂಮ್ರಾ: ಮದುವೆ ದಿನಾಂಕವೂ ಬಹಿರಂಗ

2021ರ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಅರ್ಧ ಶತಕ, ಶತಕಗಳೊಂದಿಗೇನೇ ಮುಂದುವರೆಯುತ್ತಿರುವ ದೇವದತ್ ಪಡಿಕ್ಕಲ್ ಮಾರ್ಚ್ 8ರ ಸೋಮವಾರ ದೆಹಲಿಯಲ್ಲಿ ನಡೆದಿದ್ದ ಕೇರಳ ವಿರುದ್ಧದ ಪಂದ್ಯದಲ್ಲೂ ಶತಕ ಬಾರಿಸಿ ಮತ್ತೊಂದು ವಿಶೇಷ ದಾಖಲೆ ನಿರ್ಮಿಸಿದ್ದಾರೆ.

ಅತ್ಯಧಿಕ ರನ್ ಪಟ್ಟಿಯಲ್ಲಿ ನಂ.1

ಅತ್ಯಧಿಕ ರನ್ ಪಟ್ಟಿಯಲ್ಲಿ ನಂ.1

ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವ ದೇವದತ್ ಪಡಿಕ್ಕಲ್ ಈ ಬಾರಿಯ ವಿಜಯ್ ಹಜಾರೆಯಲ್ಲಿ ಅಬ್ಬರದ ಬ್ಯಾಟಿಂಗ್‌ ಮುಂದುವರೆಸುತ್ತಲೇಯಿದ್ದಾರೆ. ಕೇವಲ 6 ಇನ್ನಿಂಗ್ಸ್‌ಗಳನ್ನಾಡಿರುವ ಪಡಿಕ್ಕಲ್, 673 ರನ್ ಬಾರಿಸಿದ್ದಾರೆ. ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಗಳಿಸಿರುವ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಪಡಿಕ್ಕಲ್ ಈಗ ನಂ.1 ಸ್ಥಾನದಲ್ಲಿದ್ದಾರೆ.

ಸತತ 4 ಪಂದ್ಯಗಳಲ್ಲಿ ಶತಕ

ಸತತ 4 ಪಂದ್ಯಗಳಲ್ಲಿ ಶತಕ

ಸೋಮವಾರ (ಮಾರ್ಚ್ 8) ಕೇರಳ ವಿರುದ್ಧದ ಪಂದ್ಯದಲ್ಲಿ ಪಡಿಕ್ಕಲ್ 119 ಎಸೆತಗಳಲ್ಲಿ 101 ರನ್ ಬಾರಿಸಿದ್ದರು. ಇದರಲ್ಲಿ 10 ಫೋರ್ಸ್, 2 ಸಿಕ್ಸರ್ ಸೇರಿತ್ತು. ಪಡಿಕ್ಕಲ್ ಮತ್ತು ನಾಯಕ ಸಮರ್ಥ್ ಆರ್‌ (158 ಎಸೆತಗಳಲ್ಲಿ 192 ರನ್) ಬ್ಯಾಟಿಂಗ್‌ ಬಲದೊಂದಿಗೆ ಕರ್ನಾಟಕ 50 ಓವರ್‌ಗೆ 3 ವಿಕೆಟ್ ಕಳೆದು 338 ರನ್ ಗಳಿಸಿತ್ತು.ಅಷ್ಟೇ ಅಲ್ಲ, ಪಂದ್ಯವನ್ನು ಭರ್ಜರಿ 80 ರನ್‌ನಿಂದ ಗೆದ್ದುಕೊಂಡಿತು. ಪಡಿಕ್ಕಲ್ ಇದಕ್ಕೂ ಮುನ್ನ ಒಡಿಶಾ (152), ಕೇರಳ (126*), ರೈಲ್ವೇಸ್ (145*) ವಿರುದ್ಧವೂ ಶತಕ ಬಾರಿಸಿದ್ದರು.

ಸತತ ಶತಕಗಳ ದಾಖಲೆ

ಸತತ ಶತಕಗಳ ದಾಖಲೆ

ಕ್ರಿಕೆಟ್‌ ಪಂದ್ಯದಲ್ಲಿ ಅತೀ ಹೆಚ್ಚು ಶತಕಗಳನ್ನು (ನಿಯಮಿತ ಓವರ್‌ಗಳಲ್ಲಿ) ಬಾರಿಸಿದ ದಾಖಲೆ ಶ್ರೀಲಂಕಾದ ಕುಮಾರ ಸಂಗಕ್ಕಾರ ಅವರ ಹೆಸರಿನಲ್ಲಿದೆ. ಸಂಗಕ್ಕಾರ ಅವರು 2015ರ ವಿಶ್ವಕಪ್‌ನಲ್ಲಿ ಸತತ ಐದು ಶತಕಗಳನ್ನು ಬಾರಿಸಿದ್ದರು. ಅದು ಬಿಟ್ಟರೆ ದಕ್ಷಿಣ ಆಫ್ರಿಕಾದ ಅಲ್ವಿರೋ ಪೀಟರ್ಸನ್ ಅವರು 2015-16ರ 'ಮೊಮೆಂಟಮ್' ಒನ್‌ ಡೇ ಕಪ್‌ ಟೂರ್ನಿಯಲ್ಲಿ ಸತತ ನಾಲ್ಕು ಶತಕಗಳನ್ನು ಬಾರಿಸಿದ್ದರು. ಅಂದ್ಹಾಗೆ ಈ ಬಾರಿಯ ಐಪಿಎಲ್‌ನಲ್ಲಿ ಪಡಿಕ್ಕಲ್ ಆರ್‌ಸಿಬಿ ತಂಡದಲ್ಲಿ ಹೆಚ್ಚು ನಿರೀಕ್ಷೆ ಮೂಡಿಸಿದ್ದಾರೆ.

Story first published: Monday, March 8, 2021, 19:26 [IST]
Other articles published on Mar 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X