
5 ಪಂದ್ಯಗಳಲ್ಲಿ ಪಡಿಕ್ಕಲ್ ಸ್ಕೋರ್
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುವ ದೇವದತ್ ಪಡಿಕ್ಕಲ್ ಕಳೆದ ಐದು ಪಂದ್ಯಗಳಲ್ಲೂ 50+ ರನ್ ಗಳಿಸಿದ್ದಾರೆ ಅನ್ನೋದು ವಿಶೇಷ. ಹಿಂದಿನ 5 ಇನ್ನಿಂಗ್ಸ್ಗಳಲ್ಲಿ ಪಡಿಕ್ಕಲ್ ಕ್ರಮವಾಗಿ 52, 97, 152, 126, 145 ರನ್ ಗಳಿಸಿದ್ದಾರೆ.

ಅತೀ ಹೆಚ್ಚು ರನ್ ಪಟ್ಟಿಯಲ್ಲಿ ಅಗ್ರ ಸ್ಥಾನ
ವಿಜಯ್ ಹಜಾರೆ 2021 ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಗಳಿಸಿರುವ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಪಡಿಕ್ಕಲ್ ಸದ್ಯ ಮೊದಲನೇ ಸ್ಥಾನದಲ್ಲಿದ್ದಾರೆ. 572 ರನ್ ಗಳಿಸಿರುವ ಪಡಿಕ್ಕಲ್ ಮೊದಲ ಸ್ಥಾನದಲ್ಲಿದ್ದರೆ, ದ್ವಿತೀಯ ಸ್ಥಾನದಲ್ಲಿ ತನ್ಮಯ್ ಅಗರ್ವಾಲ್ (446 ರನ್), ತೃತೀಯ ಸ್ಥಾನದಲ್ಲಿ ರವಿಕುಮಾರ್ ಸಮರ್ಥ್ (413), ನಾಲ್ಕನೇ ಸ್ಥಾನದಲ್ಲಿ ಪೃಥ್ವಿ ಶಾ (404), ಐದನೇ ಸ್ಥಾನದಲ್ಲಿ 391 ತಿಲಕ್ ವರ್ಮಾ ಇದ್ದಾರೆ.

3 ಶತಕ, ವಿಶೇಷ ದಾಖಲೆ
ಆಡಿರುವ 5 ಇನ್ನಿಂಗ್ಸ್ಗಳಲ್ಲಿ 572 ರನ್ ಕಲೆ ಹಾಕಿರುವ ದೇವದತ್ ಪಡಿಕ್ಕಲ್ 152 ವೈಯಕ್ತಿಕ ಅತ್ಯಧಿಕ ರನ್, 190.66 ರನ್ ಸರಾಸರಿ, 97.78 ಸ್ಟ್ರೈಕ್ ರೇಟ್, 2 ಅರ್ಧ ಶತಕ, 3 ಶತಕಗಳನ್ನು ಬಾರಿಸಿದ್ದಾರೆ. ಇದರಲ್ಲಿ 51 ಫೋರ್ಸ್, 18 ಸಿಕ್ಸರ್ಗಳು ಸೇರಿವೆ. ಅಲ್ಲದೆ ವಿಜಯ್ ಹಜಾರೆ ಟ್ರೋಫಿಯಲ್ಲಿ ಸತತ 5 ಬಾರಿ 50+ ರನ್ ಗಳಿಸಿದ ವಿಶೇಷ ದಾಖಲೆಗೂ ಪಡಿಕ್ಕಲ್ ಪಾತ್ರರಾಗಿದ್ದಾರೆ.