ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಡೆವೊನ್ ಕಾನ್ವೇ, ಸೋಫಿ ಎಕ್ಲೆಸ್ಟೋನ್‌ಗೆ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ

Devon Conway and Sophie Ecclestone won the ICC player of the month for June

ಅಬುಧಾಬಿ: ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಡೆವೊನ್ ಕಾನ್ವೇ ಮತ್ತು ಇಂಗ್ಲೆಂಡ್‌ ಸ್ಪಿನ್ನರ್ ಸೋಫಿ ಎಕ್ಲೆಸ್ಟೋನ್‌ಗೆ ಜೂನ್ ತಿಂಗಳ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪ್ಲೇಯರ್ ಆಫ್‌ ದ ಮಂಥ್ ಪ್ರಶಸ್ತಿ ದೊರೆತಿದೆ. ಓಟಿಂಗ್ ವಿಧಾನದಿಂದ ಪ್ರಶಸ್ತಿ ವಿಜೇತರನ್ನು ಐಸಿಸಿ ಹೆಸರಿಸಿದೆ.

ಭಾರತ vs ಶ್ರೀಲಂಕಾ: ಸಂಜು ಹಾಗೂ ಇಶಾನ್ ಮಧ್ಯೆ ಯಾರು ಬೆಸ್ಟ್?ಭಾರತ vs ಶ್ರೀಲಂಕಾ: ಸಂಜು ಹಾಗೂ ಇಶಾನ್ ಮಧ್ಯೆ ಯಾರು ಬೆಸ್ಟ್?

ಪುರುಷರ ವಿಭಾಗದಲ್ಲಿ ಐಸಿಸಿ ಪ್ಲೇಯರ್ ಆಫ್‌ ದ ಮಂಥ್ ಪ್ರಶಸ್ತಿ ಜಯಿಸಿದ ನ್ಯೂಜಿಲೆಂಡ್‌ನ ಮೊದಲ ಆಟಗಾರನಾಗಿ ಎಡಗೈ ಬ್ಯಾಟ್ಸ್‌ಮನ್‌ ಡೆವೊನ್ ಕಾನ್ವೇ ಗುರುತಿಸಿಕೊಂಡಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿನ ಸಾಧನೆಗಾಗಿ ಕ್ವಾನ್ವೇ ತಿಂಗಳ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.

ಲಾರ್ಡ್ಸ್‌ನಲ್ಲಿ ನಡೆದಿದ್ದ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ದ್ವಿಶತಕ ಮತ್ತು ಮುಂದೆ ಇಂಗ್ಲೆಂಡ್ ಮತ್ತು ಭಾರತ ವಿರುದ್ಧ ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ನಲ್ಲಿ ಅರ್ಧ ಶತಕ ಬಾರಿಸಿದ್ದಕ್ಕಾಗಿ ಕಾನ್ವೇ ತಿಂಗಳ ಆಟಗಾರ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಶೆಫಾಲಿ ವರ್ಮಾ, ದೀಪ್ತಿ ಶರ್ಮಾ ಭರ್ಜರಿ ಆಟ, ಇಂಗ್ಲೆಂಡ್ ಎದುರು ಭಾರತಕ್ಕೆ ರೋಚಕ ಜಯಶೆಫಾಲಿ ವರ್ಮಾ, ದೀಪ್ತಿ ಶರ್ಮಾ ಭರ್ಜರಿ ಆಟ, ಇಂಗ್ಲೆಂಡ್ ಎದುರು ಭಾರತಕ್ಕೆ ರೋಚಕ ಜಯ

ಇಂಗ್ಲೆಂಡ್ ವಿರುದ್ಧ ರೋಚಕ ಗೆಲುವು ಸಾಧಿಸಿದ ಭಾರತ ತಂಡ ! | Oneindia Kannada

2018ರಲ್ಲಿ ಐಸಿಸಿ ಎಮರ್ಜಿಂಗ್ ಪ್ಲೇಯರ್ ಆಫ್‌ ದ ಇಯರ್ ಪ್ರಶಸ್ತಿ ಗೆದ್ದಿರುವ ಸೋಫಿ ಎಕ್ಲೆಸ್ಟೋನ್ ಭಾರತ ವಿರುದ್ಧ ಬ್ರಿಸ್ಟಲ್‌ನಲ್ಲಿ ನಡೆದಿದ್ದ ಟೆಸ್ಟ್‌ ಪಂದ್ಯದಲ್ಲಿನ ಉತ್ತಮ ಬೌಲಿಂಗ್‌ಗಾಗಿ ಈ ಬಾರಿ ಪ್ಲೇಯರ್ ಆಫ್‌ ದ ಮಂಥ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇದು ಇಂಗ್ಲೆಂಡ್ ಎರಡನೇ ಆಟಗಾರ್ತಿಗೆ ಸಿಗುತ್ತಿರುವ ಪ್ರಶಸ್ತಿ. ಇದಕ್ಕೂ ಮುನ್ನ ಟಮ್ಮಿ ಬ್ಯೂಮಾಂಟ್ ಫೆಬ್ರವರಿಯಲ್ಲಿ ಇದೇ ಪ್ರಶಸ್ತಿ ಪಡೆದುಕೊಂಡಿದ್ದರು.

Story first published: Monday, July 12, 2021, 11:42 [IST]
Other articles published on Jul 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X