ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌ ಫೈನಲ್‌ನಲ್ಲಿ ಎಸೆಗಿದ ತಪ್ಪನ್ನು ಒಪ್ಪಿಕೊಂಡ ಅಂಪೈರ್ಸ್‌!

ಮಾಡಿದ ತಪ್ಪನ್ನು ಒಪ್ಪಿಕೊಂಡ ಅಂಪೈರ್ ಗಳು..? | Oneindia Kannada
Dharmasena admits to judgemental error in World Cup final

ಲಂಡನ್‌, ಜುಲೈ 21: ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ನ 12ನೇ ಆವೃತ್ತಿಯ ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡದ ಎದುರು ಇಂಗ್ಲೆಂಡ್‌ ತಂಡಕ್ಕೆ 6 ರನ್‌ಗಳ ಓವರ್‌ ಥ್ರೋ ಕರುಣಿಸಿದ್ದು ದೊಡ್ಡ ತಪ್ಪೆಂದು ಪಂದ್ಯದಲ್ಲಿ ಅಂಪೈರಿಂಗ್‌ ಜವಾಬ್ದಾರಿ ನಿಭಾಯಿಸಿದ್ದ ಕುಮಾರ ಧರ್ಮಸೇನಾ ಮತ್ತು ಮರಾಯಿಸ್‌ ಎರಾಸ್ಮಸ್‌ ಒಪ್ಪಿಕೊಂಡಿದ್ದಾರೆ.

ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಇಂಗ್ಲೆಂಡ್‌ ಮತ್ತು ನ್ಯೂಜಿಲೆಂಡರ್‌ ತಂಡಗಳು ಸೀಮಿತ ಓವರ್‌ಗಳು ಮತ್ತು ಸೂಪರ್‌ ಓವರ್‌ ಎರಡರಲ್ಲೂ ಸಮಬಲ ಸಾಧಿಸಿದ್ದವು. ಅಂತಿಮವಾಗಿ ಟೈ ಬ್ರೇಕರ್‌ ನಿಯಮದ ಅನುಗುಣವಾಗಿ ಅತಿ ಹೆಚ್ಚು ಬೌಂಡರಿಗಳನ್ನು (26-17) ಗಳಿಸಿದ್ದ ಇಂಗ್ಲೆಂಡ್‌ ತಂಡಕ್ಕೆ ಪ್ರಶಸ್ತಿ ಒಲಿದಿತ್ತು.

ವಿಂಡೀಸ್‌ ಪ್ರವಾಸಕ್ಕೆ ಟೀಮ್‌ ಇಂಡಿಯಾ ಪ್ರಕಟ, 3 ಕನ್ನಡಿಗರಿಗೆ ಸ್ಥಾನವಿಂಡೀಸ್‌ ಪ್ರವಾಸಕ್ಕೆ ಟೀಮ್‌ ಇಂಡಿಯಾ ಪ್ರಕಟ, 3 ಕನ್ನಡಿಗರಿಗೆ ಸ್ಥಾನ

"ಟೆಲಿವಿಷನ್‌ ರೀ ಪ್ಲೇ ವೀಕ್ಷಿಸಿ ಟೀಕೆ ಮಾಡುವುದು ಸುಲಭ. ಪಂದ್ಯದಲ್ಲಿ ಕೆಲ ತೀರ್ಪುಗಳು ತಪ್ಪಾಗಿವೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಅದನ್ನು ಟೆಲಿವಿಷನ್‌ನಲ್ಲಿ ಈಗ ವೀಕ್ಷಿಸಿದ್ದೇನೆ ಕೂಡ. ಆದರೆ, ಪಂದ್ಯದ ವೇಳೆ ಆನ್‌ಫೀಲ್ಡ್‌ನಲ್ಲಿ ನಮಗೆ ಯಾವುದೇ ಟೆಲಿವಿಷನ್‌ ರೀಪ್ಲೆಯ ಸೌಭಾಗ್ಯ ಇರಲಿಲ್ಲ. ನನ್ನ ತೀರ್ಪಿಗೆ ನಾನೆಂದೂ ವಿಶಾದಿಸುವುದಿಲ್ಲ. ಬದಲಾಗಿ ಆ ಸಂದರ್ಭದಲ್ಲಿ ನಾನು ತೆಗೆದುಕೊಂಡ ನಿರ್ಧಾರಕ್ಕೆ ಐಸಿಸಿ ಮೆಚ್ಚುಗೆ ವ್ಯಕ್ತ ಪಡಿಸಿದೆ," ಎಂದು ಶ್ರೀಲಂಕಾದ ಟೆಲಿವಿಷನ್‌ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಧರ್ಮಸೇನಾ ಹೇಳಿದ್ದಾರೆ.

4ನೇ ಕ್ರಮಾಂಕದ ಬ್ಯಾಟಿಂಗ್‌ ಗೊಂದಲಕ್ಕೆ ಆಯ್ಕೆ ಸಮಿತಿಯಿಂದ ಪರಿಹಾರ!4ನೇ ಕ್ರಮಾಂಕದ ಬ್ಯಾಟಿಂಗ್‌ ಗೊಂದಲಕ್ಕೆ ಆಯ್ಕೆ ಸಮಿತಿಯಿಂದ ಪರಿಹಾರ!

ಪಂದ್ಯದ ಅಂತಿಮ ಓವರ್‌ನ ಮೂರನೇ ಎಸೆತದಲ್ಲಿ ಫೀಲ್ಡರ್‌ ಮಾರ್ಟಿನ್‌ ಗಪ್ಟಿಲ್‌ ಎಸೆದ ಚೆಂಡು ರನ್‌ ಪೂರೈಸಲು ಯತ್ನಿಸುತ್ತಿದ್ದ ಬೆನ್‌ ಸ್ಟೋಕ್ಸ್‌ ಅವರ ಬ್ಯಾಟ್‌ಗೆ ತಾಗಿ ಫೋರ್‌ಗೆ ತಲುಪಿತ್ತು. ಆನ್‌ಫೀಲ್ಡ್‌ ಅಂಪೈರ್‌ಗಳಾದ ಧರ್ಮಸೇನಾ ಮತ್ತು ದಕ್ಷಿಣ ಆಫ್ರಿಕಾ ಮೂಲದ ಎರಾಸ್ಮಸ್‌ 2+4 ರನ್‌ಗಳನ್ನು ಇಂಗ್ಲೆಂಡ್‌ ತಂಡಕ್ಕೆ ಓವರ್‌ ಥ್ರೋ ಮೂಲಕ ಕರುಣಿಸಿದ್ದರು. ಆದರೆ ಎರಡನೇ ರನ್‌ ಗಳಿಸುವಾಗ ಫೀಲ್ಡರ್‌ ಚೆಂಡನ್ನು ಎಸೆದ ಸಂದರ್ಭದಲ್ಲಿ ಕಣದಲ್ಲಿದ್ದ ಇಬ್ಬರು ಬ್ಯಾಟ್ಸ್ಮನ್‌ಗಳು ಒಬ್ಬರನ್ನೊಬ್ಬರು ದಾಟಿರದ ಕಾರಣ ನಿಯಮಾನುಸಾರ 1+4 ಅಂತೆ ಒಟ್ಟು 5 ರನ್‌ ಮಾತ್ರವೇ ಅಂಪೈರ್‌ಗಳು ನೀಡಬೇಕಿತ್ತು.

ವಿಶ್ವಕಪ್‌ನಲ್ಲಿದ್ದರೂ ವಿಂಡೀಸ್‌ ಪ್ರವಾಸಕ್ಕೆ ಮಯಾಂಕ್‌ ಬೇಡವಾದರು ಏಕೆ?ವಿಶ್ವಕಪ್‌ನಲ್ಲಿದ್ದರೂ ವಿಂಡೀಸ್‌ ಪ್ರವಾಸಕ್ಕೆ ಮಯಾಂಕ್‌ ಬೇಡವಾದರು ಏಕೆ?

ಆದರೆ, ಬ್ಯಾಟ್ಸ್‌ಮನ್‌ಗಳನ್ನು ಗಮನಿಸುವಲ್ಲಿ ವಿಫಲರಾದ ಪರಿಣಾಮ ಅಂಪೈರ್‌ಗಳ ಇಂಗ್ಲೆಂಡ್‌ಗೆ 1 ರನ್‌ ಹೆಚ್ಚಾಗಿ ಕರುಣಿಸಿದ್ದರು. ಅಂತಿಮವಾಗಿ ಇದೇ ಒಂದು ರನ್‌ ಸೋಲು ಗೆಲುವಿನ ನಿರ್ಧಾರ ಮಾಡಿತ್ತು. 242 ರನ್‌ಗಳನ್ನು ಗುರಿ ಬೆನ್ನತ್ತಿದ್ದ ಇಂಗ್ಲೆಂಡ್‌ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು 242 ರನ್‌ ಗಳಿಸಿ ಸಮಬಲ ಸಾಧಿಸುವ ಮೂಲಕ ತಂಡವನ್ನು ಸೂಪರ್‌ ಓವರ್‌ಗೆ ಕೊಂಡೊಯ್ದಿತ್ತು. ಅಂಪೈರ್‌ ಇಲ್ಲಿ ಒಂದು ರನ್‌ ನೀಡದೇ ಇದ್ದಿದ್ದರೆ ನ್ಯೂಜಿಲೆಂಡ್‌ ತಂಡ 1 ರನ್‌ ಅಂತರದಲ್ಲಿ ವಿಶ್ವ ಚಾಂಪಿಯನ್ಸ್‌ ಪಟ್ಟ ಅಲಂಕರಿಸುತ್ತಿತ್ತು.

ಇಂಗ್ಲೆಂಡ್‌ನ ಪೂನಂ ಪಾಂಡೆಯೆಂದು ಫ್ಯಾನ್ಸ್‌ ನಾಮಕರಣ ಮಾಡಿದ್ದೇಕೆ?ಇಂಗ್ಲೆಂಡ್‌ನ ಪೂನಂ ಪಾಂಡೆಯೆಂದು ಫ್ಯಾನ್ಸ್‌ ನಾಮಕರಣ ಮಾಡಿದ್ದೇಕೆ?

ಇದಕ್ಕೂ ಮುನ್ನ ಐಸಿಸಿಯ ಮಾಜಿ ಅಂಪೈರ್‌ ಆಸ್ಟ್ರೇಲಿಯಾದ ಸೈಮನ್‌ ಟಾಫಲ್‌ ಕೂಡ ಫೈನಲ್‌ ಪಂದ್ಯದಲ್ಲಿ ಅಂಪೈರ್‌ಗಳು ಎಸಗಿದ ಪ್ರಮಾದದ ಕುರಿತಾಗಿ ಬೆಳಕು ಚೆಲ್ಲಿದ್ದರು. ಅಲ್ಲದೆ ಒತ್ತಡದ ಅಂಪೈರ್‌ಗಳಿಂದ ಎಲ್ಲವನ್ನೂ ಮಾಡಲು ಸಾಧ್ಯವಾಗುವುದಿಲ್ಲ ಎಂದು ಅಂಪೈರ್‌ಗಳ ಮೇಲಿನ ಒತ್ತಡ ಕುರಿತಾಗಿಯೂ ಟಾಫಲ್‌ ವಿವರಿಸಿದ್ದರು.

Story first published: Tuesday, July 23, 2019, 11:39 [IST]
Other articles published on Jul 23, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X