ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಧವನ್‌ ಗಾಯಗೊಂಡ ಬಗ್ಗೆ ರಾಸ್‌ ಟೇಲರ್‌ ಹೇಳಿದ್ದೇನು ಗೊತ್ತಾ?

Dhawan is a big loss to India: Ross Taylor

ನಾಟಿಂಗ್‌ಹ್ಯಾಮ್‌, ಜೂನ್‌ 13: ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿ ಟೀಮ್‌ ಇಂಡಿಯಾಗೆ ಜಯ ತಂದುಕೊಟ್ಟ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ ಹೆಬ್ಬೆರಳಿನ ಗಾಯದ ಸಮಸ್ಯೆಗೆ ತುತ್ತಾಗಿ ಟೂರ್ನಿಯಿಂದಲೇ ಹೊರ ಬೀಳುವ ಸ್ಥಿತಿ ಎದುರಿಸುತ್ತಿರುವುದು ಭಾರತ ತಂಡಕ್ಕೆ ಭಾರಿ ನಷ್ಟ ಎಂದು ನ್ಯೂಜಿಲೆಂಡ್‌ ತಂಡದ ಅನುಭವಿ ಬ್ಯಾಟ್ಸ್‌ಮನ್‌ ರಾಸ್‌ ಟೇಲರ್‌ ಹೇಳಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

"ಶಿಖರ್‌ ಧವನ್‌ ಸೇವೆ ಇಲ್ಲವಾಗಿರುವುದು ಭಾರತ ತಂಡಕ್ಕೆ ತುಂಬಲಾರದ ನಷ್ಟ. ಆದರೂ ಸದ್ಯದ ಟೀಮ್‌ ಇಂಡಿಯಾ ಐಸಿಸಿ ಟೂರ್ನಿಗಳಲ್ಲಿ ಉತ್ತಮ ಆಟವಾಡುತ್ತಿದೆ. ಆದರೆ

ಪಾಕ್‌ ವಿರುದ್ಧ ಆಸೀಸ್‌ ತಿಣುಕಾಡಿ ಗೆದ್ದ ಬಳಿಕ ಆರೊನ್‌ ಫಿಂಚ್‌ ಹೇಳಿದ್ದಿದು!ಪಾಕ್‌ ವಿರುದ್ಧ ಆಸೀಸ್‌ ತಿಣುಕಾಡಿ ಗೆದ್ದ ಬಳಿಕ ಆರೊನ್‌ ಫಿಂಚ್‌ ಹೇಳಿದ್ದಿದು!

ಆಸೀಸ್‌ ವಿರುದ್ಧ 117 ರನ್‌ಗಳನ್ನು ಚೆಚ್ಚಿದ ಧವನ್‌ ಪ್ಯಾಟ್‌ ಕಮಿನ್ಸ್‌ ಅವರ ಎಸೆತದಲ್ಲಿ ತಮ್ಮ ಎಡಗೈನ ತೋರು ಬೆರಳು ಮತ್ತು ಹೆಬ್ಬರಳಿನ ಮಧ್ಯಭಾಗದಲ್ಲಿ ಪೆಟ್ಟು ತಿಂದಿದ್ದರು. ಪ್ರಥಮಿಕ ಎಕ್ಸ್‌-ರೇ ತಪಾಸಣೆಯಲ್ಲಿ ಯಾವುದೇ ತೊಂದರೆ ಇರಲಿಲ್ಲ. ಆದರೆ, ಬಳಿಕ ನಡೆಸಲಾದ ಸಿ.ಟಿ. ಸ್ಕ್ಯಾನ್‌ನಲ್ಲಿ ಹೇರ್‌ ಲೈನ್‌ ಫ್ರ್ಯಾಕ್ಚರ್‌ ಆಗಿರುವುದು ಕಂಡುಬಂದಿದ್ದು, ಕನಿಷ್ಠ ಮೂರು ವಾರಗಳ ಕಾಲ ಅವರು ವಿಶ್ರಾಂತಿ ಪಡೆಯುವಂತಾಗಿದೆ. ಇದರರ್ಥ ಲೀಗ್‌ನ ಉಳಿದಾವ ಪಂದ್ಯಗಳಿಗೂ ಧವನ್‌ ಸೇವೆ ಟೀಮ್‌ ಇಂಡಿಯಾಗೆ ಇಲ್ಲವಾದಂತಾಗುತ್ತದೆ. ಆದರೆ, ನಾಕ್‌ಔಟ್‌ ಹಂತಕ್ಕೆ ಧವನ್‌ ಮರಳುವ ಸಾಧ್ಯತೆ ಇದೆ.

ಇಂಡೊ-ಪಾಕ್‌ ಪಂದ್ಯದಲ್ಲಿ ಗೆಲ್ಲೊದ್ಯಾರಂತ ಭವಿಷ್ಯ ನುಡಿದ ಕಪಿಲ್‌ ದೇವ್‌!ಇಂಡೊ-ಪಾಕ್‌ ಪಂದ್ಯದಲ್ಲಿ ಗೆಲ್ಲೊದ್ಯಾರಂತ ಭವಿಷ್ಯ ನುಡಿದ ಕಪಿಲ್‌ ದೇವ್‌!

ಲೀಗ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್‌ ತಂಡಗಳು ಅಜೇಯವಾಗಿ ಉಳಿದಿವೆ. ಕಿವೀಸ್‌ ಪಡೆ ಈವರೆಗೆ ಆಡಿದ ಮೂರೂ ಪಂದ್ಯಗಳನ್ನು ಗೆದ್ದ ಭಾರತ ತಂಡ ಆಡಿದ ಎರಡೂ ಪಂದ್ಯಗಳಲ್ಲಿ ವಿಜಯೋತ್ಸವ ಆಚರಿಸಿದೆ. ಆದರೆ, ಗುರುವಾರ ಟ್ರೆಂಟ್‌ ಬ್ರಿಜ್‌ನಲ್ಲಿ ನಡೆಯ ಬೇಕಿದ್ದ ಭಾರತ ಮತ್ತು ನ್ಯೂಜಿಲೆಂಡ್‌ ತಂಡಗಳ ನಡುವಣ ಪಂದ್ಯಕ್ಕೆ ಮಳೆ ಅಡಚಣೆಯಾಗಿದ್ದು, ಟಾಸ್‌ ಕೂಡ ನಡೆಸಲು ಸಾಧ್ಯವಾಗಿಲ್ಲ. ನಾಟಿಂಗ್‌ಹ್ಯಾಮ್‌ನಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಈ ಪಂದ್ಯ ಬಹುತೇಕ ರದ್ದಾಗುವ ಸಾಧ್ಯತೆ ಇದೆ. ಹೀಗಾದರೆ ಇತ್ತಂಡಗಳು ತಲಾ ಒಂದಂಕ ಹಂಚಿಕೊಳ್ಳುವಂತಾಗಲಿದೆ.

ವಿಶ್ವಕಪ್‌: ಶಿಖರ್‌ ಧವನ್‌ ಇಂಜುರಿ ಬಗ್ಗೆ ಬಿಸಿಸಿಐ ಹೇಳೋದೇನು?ವಿಶ್ವಕಪ್‌: ಶಿಖರ್‌ ಧವನ್‌ ಇಂಜುರಿ ಬಗ್ಗೆ ಬಿಸಿಸಿಐ ಹೇಳೋದೇನು?

"ಟೂರ್ನಿಯ ಆರಂಭಿಕ ಹಂತವಿದು. ಅಗ್ರ 7 ಸ್ಥಾನದಲ್ಲಿರುವ ಎಲ್ಲಾ ತಂಡಗಳಿಗೂ ನಾಕ್‌ಔಟ್‌ ಹಂತಕ್ಕೇರುವ ಉತ್ತಮ ಅವಕಾಶವಿದೆ. ಮೊದಲಿಗೆ ಅಗ್ರ ನಾಲ್ಕರಲ್ಲಿ ಯಾವುದೇ ಸ್ಥಾನದಲ್ಲಿ ಸೆಮಿಫೈನಲ್ಸ್‌ ತಲುಪಿದರೆ ಸಂತಸವಾಗಲಿದೆ. ಇದು ಸಾಧ್ಯವಾದರೆ ಪ್ರಶಸ್ತಿ ಗೆಲ್ಲಲು ಇನ್ನೆರಡು ಪಂದ್ಯಗಳಷ್ಟೇ ಸಾಕು. ಸದ್ಯಕ್ಕೆ ನಮ್ಮ ತಂಡ ಮೂರರಲ್ಲಿ ಮೂರು ಜಯ ದಾಖಲಿಸಿದೆ. ಇದು ಸಂತಸ ನೀಡಿದೆಯಾದರೂ, ಮುಂದಿನ ದಿನಗಳಲ್ಲಿ ಮತ್ತಷ್ಟು ಕಠಿಣ ಪಂದ್ಯಗಳು ಎದುರಾಗಲಿವೆ ಎಂಬುದನ್ನು ಅರಿತಿದ್ದೇವೆ,'' ಎಂದು ಟೇಲರ್‌ ಹೇಳಿದ್ದಾರೆ.

Story first published: Thursday, June 13, 2019, 16:38 [IST]
Other articles published on Jun 13, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X