ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಭ್ಯಾಸಕ್ಕೆ ತಡವಾದರೆ 10 ಸಾವಿರ ರೂ. ದಂಡ ವಿಧಿಸುತ್ತಿದ್ದ ಧೋನಿ: ಅಪ್ಟನ್‌

ಒಬ್ಬರು ಲೇಟಾಗಿ ಬಂದ್ರೆ ಕಥೆ ಮುಗೀತು..!
Dhoni ensured no player was late for training: Upton

ಹೊಸದಿಲ್ಲಿ. ಮೇ 16: ಭಾರತಕ್ಕೆ ಎರಡು ವಿಶ್ವಕಪ್‌ಗಳನ್ನು ಗೆದ್ದುಕೊಟ್ಟ ಏಕೈಕ ನಾಯಕ ಎಂ.ಎಸ್‌ ಧೋನಿ, ಟೀಮ್‌ ಇಂಡಿಯಾದಲ್ಲಿ ಶಿಸ್ತು ಕಾಯ್ದುಕೊಳ್ಳಲು ಹೊಸ ಆಲೋಚನೆಗಳನ್ನು ತರುತ್ತಿದ್ದರು ಎಂದು ಭಾರತ ಕ್ರಿಕೆಟ್‌ ತಂಡದ ಮಾಜಿ ಮಾನಸಿಕ ಸ್ಥಿತಿ ಸುಧಾರಣೆಯ ತರಬೇತುದಾರ (ಮೆಂಟಲ್‌ ಕಂಡೀಷನಿಂಗ್‌ ಕೋಚ್‌) ಪ್ಯಾಡಿ ಅಪ್ಟನ್‌ ಹೇಳಿದ್ದಾರೆ.

ಭಾರತ ವಿಶ್ವಕಪ್‌ ತಂಡದಲ್ಲಿ ಇದೊಂದು ಕೊರತೆ ಇದೆ: ಗೌತಮ್‌ ಗಂಭೀರ್‌ಭಾರತ ವಿಶ್ವಕಪ್‌ ತಂಡದಲ್ಲಿ ಇದೊಂದು ಕೊರತೆ ಇದೆ: ಗೌತಮ್‌ ಗಂಭೀರ್‌

ತಮ್ಮ ನೂತನ ಮುಸ್ತಕ 'ದಿ ಬೇರ್‌ಫೂಟ್‌ ಕೋಚ್‌' ಕುರಿತಾಗಿ ಮಾಧ್ಯಮದೊಟ್ಟಿಗೆ ಮಾತನಾಡಿದ ಪ್ಯಾಡಿ ಅಪ್ಟನ್‌, ಆಟಗಾರರು ಅಭ್ಯಾಸಕ್ಕೆ ಮತ್ತು ತಂಡ ಮೀಟಿಂಗ್‌ಗಳಿಗೆ ತಡವಾಗಿ ಬರುವುದನ್ನು ತಪ್ಪಿಸುವ ಸಲುವಾಗಿ ಧೋನಿ ಹೊಸ ಆಲೋಚನೆಗಳನ್ನು ಮಾಡುತ್ತಿದ್ದರು ಎಂಬ ಸಂಗತಿಯನ್ನು ಬಹಿರಂಗ ಪಡಿಸಿದ್ದಾರೆ.

ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಬಗ್ಗೆ ಸೆಹ್ವಾಗ್‌ ಏನಂತ್ತಾರೆ?!ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಬಗ್ಗೆ ಸೆಹ್ವಾಗ್‌ ಏನಂತ್ತಾರೆ?!

"ನಾನು ಟೀಮ್‌ ಇಂಡಿಯಾಗೆ ಸೇರಿದ ದಿನದಲ್ಲಿ ಟೆಸ್ಟ್‌ ತಂಡಕ್ಕೆ ಅನಿಲ್‌ ಕುಂಬ್ಳೆ ಮತ್ತು ಏಕದಿನ ಕ್ರಿಕೆಟ್‌ ತಂಡಕ್ಕೆ ಎಂ.ಎಸ್‌ ಧೋನಿ ನಾಯಕರಾಗಿದ್ದರು. ನಮ್ಮದು ಬಹುತೇಕ ಸ್ವಯಂ ಆಡಳಿತ ಪ್ರಕ್ರಿಯೆಯಾಗಿತ್ತು. ಹೀಗಾಗಿ ತಂಡದ ಮೀಟಿಂಗ್‌ ಮತ್ತು ಅಭ್ಯಾಸಕ್ಕೆ ಸಮಯಕ್ಕೆ ಸರಿಯಾಗಿ ಹಾಜರಾಗುವುದು ಪ್ರಮುಖವೇ? ಎಂದು ತಂಡವನ್ನು ಪ್ರಶ್ನಿಸಿದಾಗ ಎಲ್ಲರೂ ಹೌದು ಎಂದು ಹೇಳಿದ್ದರು. ಈ ಸಂದರ್ಭದಲ್ಲಿ ತಡವಾಗಿ ಬಂದ ಆಟಗಾರ 10 ಸಾವಿರ ರೂ. ದಂಡ ತೆರಬೇಕು ಎಂದು ಸಲಹೆ ನೀಡಿದ್ದರು. ಆದರೆ, ಧೋನಿ ಇದಕ್ಕಿಂತಲೂ ಕಠೋರವಾಗಿ ಒಬ್ಬ ಆಟಗಾರ ತಡವಾಗಿ ಬಂದರೆ ತಂಡದ ಪ್ರತಿಯೊಬ್ಬ ಸದಸ್ಯನೂ ತಲಾ 10 ಸಾವಿರ ರೂ. ದಂಡ ತೆರಬೇಕು ಎಂದು ಹೇಳಿದರು. ಅಂದಿನಿಂದ ಯಾರೊಬ್ಬರೂ ಅಭ್ಯಾಸಕ್ಕಾಗಲಿ, ತಂಡದ ಮೀಟಿಂಗ್‌ಗಾಗಲೀ ತಡವಾಗಿ ಬಂದಿಲ್ಲ,'' ಎಂದು ಅಪ್ಟನ್‌ ಟೀಮ್‌ ಇಂಡಿಯಾ ಜೊತೆಗಿನ ತಮ್ಮ ಒಡನಾಟವನ್ನು ವಿವರಿಸಿದ್ದಾರೆ.

cricket: ಧೋನಿ ಕೂಡ ತಪ್ಪುಗಳನ್ನು ಮಾಡ್ತಾರೆಂದ ಕುಲ್ದೀಪ್‌ ಯಾದವ್‌!cricket: ಧೋನಿ ಕೂಡ ತಪ್ಪುಗಳನ್ನು ಮಾಡ್ತಾರೆಂದ ಕುಲ್ದೀಪ್‌ ಯಾದವ್‌!

ಇದೇ ವೇಳೆ ಧೋನಿ ಕುರಿತಾಗಿ ಮೆಚ್ಚುಗೆ ವ್ಯಕ್ತ ಪಡಿಸಿದ ಅಪ್ಟನ್‌, "ಧೋನಿ ಅವರ ಶಕ್ತಿಯೇ ಅವರ ತಾಳ್ಮೆ ಮತ್ತು ಸಂಯಮ. ಪಂದ್ಯದ ಯಾವುದೇ ಸ್ಥಿತಿಯಲ್ಲೂ ಅವರು ಇದನ್ನು ಕಾಯ್ದುಕೊಳ್ಳುತ್ತಾರೆ. ಒಬ್ಬ ಬಲಿಷ್ಠ ನಾಯಕನಾಗಿ ತಮ್ಮ ಬುದ್ಧಿವಂತಿಕೆಯನ್ನು ಅತ್ಯುತ್ತಮವಾಗಿ ಬಳಸಿಕೊಳ್ಳುತ್ತಾರೆ. ಸಹ ಆಟಗಾರರು ಸಂಯಮ ಕಾಯ್ದುಕೊಳ್ಳಲು ಅವರು ನೆರವಾಗುತ್ತಾರೆ,'' ಎಂದು ಗುಣಗಾನ ಮಾಡಿದ್ದಾರೆ.

Story first published: Thursday, May 16, 2019, 17:19 [IST]
Other articles published on May 16, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X