ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್‌ನಿಂದ ನಿವೃತ್ತಿ ಬಳಿಕ ಧೋನಿ ಏನ್ಮಾಡ್ತಾರೆ ಗೊತ್ತಾ?

ಕ್ರಿಕೆಟ್ ಆಡಿದ್ದು ಸಾಕಾಯ್ತು..! ಇನ್ನು ಮುಂದೆ ನನ್ನ ಇಷ್ಟದ ಕೆಲಸ ಮಾಡ್ತೀನಿ..? | Oneindia kannada
Dhoni hints at post-retirement plans

ಹೊಸದಿಲ್ಲಿ, ಮೇ 20: ಟೀಮ್‌ ಇಂಡಿಯಾದ ಮಾಜಿ ನಾಯಕ ಕ್ಯಾಪ್ಟನ್‌ ಕೂಲ್‌ ನಾಯಕ ಎಂ.ಎಸ್‌ ಧೋನಿ ತಮ್ಮ ವೃತ್ತಿ ಜೀವನದ ಕೊನೆಯ ವಿಶ್ವಕಪ್‌ ಟೂರ್ನಿಯನ್ನಾಡಲುಸಜ್ಜಾಗಿದ್ದಾರೆ.

ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಸಿಡಿಸಿದ ಬ್ಯಾಟ್ಸ್‌ಮನ್‌ಗಳುವಿಶ್ವಕಪ್‌ನಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಸಿಡಿಸಿದ ಬ್ಯಾಟ್ಸ್‌ಮನ್‌ಗಳು

ಇಂಗ್ಲೆಂಡ್‌ ಮತ್ತು ವೇಲ್ಸ್‌ ಆತಿಥ್ಯದಲ್ಲಿ ಮೇ 30ರಂದು ಆರಂಭವಾಗಲಿರುವ ಏಕದಿನ ಕ್ರಿಕೆಟ್‌ ವಿಶ್ವಕಪ್‌ನ 12ನೇ ಆವೃತ್ತಿ ನಂತರ ಧೋನಿ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತಾರೆಂಬುದು ಬಹುತೇಕರ ಅಭಿಪ್ರಾಯ. ಅಂದಹಾಗೆ ಧೋನಿ ನಿವೃತ್ತಿ ಬಳಿಕ ಏನ್ಮಾಡ್ತಾರೆ? ಎಂಬ ಚರ್ಚೆಗಳು ಈಗಾಗಲೇ ಶುರುವಾಗಿದೆ. ಇದೀಗ ಈ ಚರ್ಚೆಗೆ ಧೋನಿಯೇ ತುಪ್ಪ ಸುರಿದಿದ್ದು, ನಿವೃತ್ತಿ ನಂತರದ ದಿನಗಳಲ್ಲಿ ಮಾಡುವುದಾದರೂ ಏನು ಎಂಬುದರ ಸುಳಿವನ್ನು ನೀಡಿದ್ದಾರೆ.

ಈ ಬಾರಿಯ ವಿಶ್ವಕಪ್‌ನಲ್ಲಿ ಮಿಂಚಬಲ್ಲ ಟಾಪ್‌ 5 ಫೀಲ್ಡರ್ಸ್‌ ಇವರು!ಈ ಬಾರಿಯ ವಿಶ್ವಕಪ್‌ನಲ್ಲಿ ಮಿಂಚಬಲ್ಲ ಟಾಪ್‌ 5 ಫೀಲ್ಡರ್ಸ್‌ ಇವರು!

ಸಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಒಂದು ವೈರಲ್‌ ಆಗಿದ್ದು, ಧೋನಿ ತಮ್ಮೊಳಗಿನ ಕಲೆಗಾರನನ್ನು ಅನಾವರಣ ಪಡಿಸಿದ್ದಾರೆ. ಈ ವಿಡಿಯೊದಲ್ಲಿ ಧೋನಿ ತಾವು ರಚಿಸಿರುವ ಪೇಂಟಿಂಗ್‌ (ಚಿತ್ರಕಲೆ)ಗಳನ್ನು ಪ್ರದರ್ಶಿಸಿದ್ದಾರೆ. ಅಲ್ಲದೆ ಬಾಲ್ಯದಿಂದಲೂ ತಮಗೆ ಕಲೆಗಾರನಾಗುವ ಅತೀವ ಆಸೆಯಿತ್ತು ಎಂದು ಹೇಳಿಕೊಂಡಿದ್ದಾರೆ.

World Cupನಲ್ಲಿ ಅಬ್ಬರಿಸಬಲ್ಲ Top 10 ಬ್ಯಾಟ್ಸ್‌ಮನ್‌ಗಳಿವರು!World Cupನಲ್ಲಿ ಅಬ್ಬರಿಸಬಲ್ಲ Top 10 ಬ್ಯಾಟ್ಸ್‌ಮನ್‌ಗಳಿವರು!

ವಿಡಿಯೊದಲ್ಲಿ ನೂತನ ಹೇರ್‌ ಸ್ಟೈಲ್‌ ಮೂಲಕ ಮಿಂಚಿರುವ 37 ವರ್ಷದ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಧೋನಿ, "ನಿಮ್ಮೆಲ್ಲರೊಂದಿಗೆ ಒಂದು ರಹಸ್ಯವನ್ನು ಹಂಚಿಕೊಳ್ಳಬೇಕೆಂದಿದ್ದೇನೆ. ನನ್ನ ಬಾಲ್ಯದಿಂದಲೂ ನಾನು ಕಲೆಗಾರನಾಗಬೇಕೆಂದಿದ್ದೆ. ಇದೀಗ ಕ್ರಿಕೆಟ್‌ ಆಡಿದ್ದು ಸಾಕಾಗಿದೆ. ಇದೀಗ ನಾನು ಏನು ಮಾಡಬೇಕೆಂದು ಬಯಸಿದ್ದೆನೋ ಅದನ್ನು ಮಾಡುವ ಕಾಲ ಬಂದಿದೆ. ಹೀಗಾಗಿ ಕೆಲ ಪೇಂಟಿಂಗ್‌ಗಳನ್ನು ಮಾಡಿದ್ದೇನೆ,'' ಎಂದು ಹೇಳಿದ್ದಾರೆ.

ವಿಶ್ವಕಪ್‌ನಲ್ಲಿ ಆರ್ಭಟಿಸಬಲ್ಲ TOP 5 ಆಲ್‌ರೌಂಡರ್‌ಗಳಿವರು!ವಿಶ್ವಕಪ್‌ನಲ್ಲಿ ಆರ್ಭಟಿಸಬಲ್ಲ TOP 5 ಆಲ್‌ರೌಂಡರ್‌ಗಳಿವರು!

ಇದರೊಂದಿಗೆ ವಿಶ್ವಕಪ್‌ ಬಳಿಕ ಧೋನಿ 50 ಓವರ್‌ಗಳಿಗೆ ಗುಡ್‌ ಬೈ ಹೇಳುವುದು ಬಹುತೇಕ ಖಾತ್ರಿಯಾದಂತಿದೆ. 2011ರಲ್ಲಿ ಭಾರತಕ್ಕೆ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಗೆದ್ದುಕೊಟ್ಟ ಧೋನಿ, ಒಡಿಐನಲ್ಲಿ 341 ಪಂದ್ಯಗಳಿಂದ 10,500 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ 10 ಶತಕಗಳು ಮತ್ತು 71 ಅರ್ಧಶತಕಗಳು ಸೇರಿವೆ. 2014ರಲ್ಲಿ ಆಸ್ಟ್ರೇಲಿಯಾ ಪ್ರವಾಸ ಮಧ್ಯದಲ್ಲೇ ಧೋನಿ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.

Story first published: Monday, May 20, 2019, 22:07 [IST]
Other articles published on May 20, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X