ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL: ಧೋನಿ ಸಾಧನೆ ಬಗ್ಗೆ ಹಾಡಿ ಹೊಗಳಿದ ಮ್ಯಾಥ್ಯೂ ಹೇಡನ್‌

IPL 2019 Final : ಧೋನಿ ಬರೀ ತಂಡದ ನಾಯಕ ಅಲ್ಲ ರಾಷ್ಟ್ರೀಯ ನಾಯಕ..! | Oneindia Kannada
Dhoni is an era of cricket, almost like leader of a nation: Hayden

ಹೈದರಾಬಾದ್‌, ಮೇ 12: ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಮ್ಯಾಥ್ಯೂ ಹೇಡನ್‌, ಭಾರತ ತಂಡದ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಕ್ಯಾಪ್ಟನ್‌ ಕೂಲ್‌ ಮಹೇಂದ್ರ ಸಿಂಗ್‌ ಧೋನಿ ಅವರ ಸಾಧನಯನ್ನು ಇನ್ನಿಲ್ಲದಂತೆ ಹಾಡಿ ಹೊಗಳಿದ್ದಾರೆ.

ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ಮುಂಬಯಿ ಇಂಡಿಯನ್ಸ್‌ ತಂಡಗಳು ಪ್ರಸಕ್ತ ಐಪಿಎಲ್‌ನಲ್ಲಿ ಫೈನಲ್‌ ತಲುಪುವ ಮೂಲಕ ಭಾನುವಾರ ನಡೆಯಲಿರುವ ಹೈ ವೋಲ್ಟೇಜ್‌ ಪಂದ್ಯದಲ್ಲಿ ದಾಖಲೆಯ ನಾಲ್ಕನೇ ಪ್ರಶಸ್ತಿಗಾಗಿ ಹೋರಾಟ ನಡೆಸಲಿವೆ.

 ಫೈನಲ್‌ನಲ್ಲಿ ಎಂಐ-ಸಿಎಸ್‌ಕೆ: ಇದು ಐಪಿಎಲ್‌ ಪಾಲಿನ ಎಲ್ ಕ್ಲಾಸಿಕೋ! ಫೈನಲ್‌ನಲ್ಲಿ ಎಂಐ-ಸಿಎಸ್‌ಕೆ: ಇದು ಐಪಿಎಲ್‌ ಪಾಲಿನ ಎಲ್ ಕ್ಲಾಸಿಕೋ!

ಈ ಸಂದರ್ಭದಲ್ಲಿ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಧೋನಿ ಕುರಿತಾಗಿ ಮಾತನಾಡಿರುವ ಸಿಎಸ್‌ಕೆ ತಂಡ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಹೇಡನ್‌, ಧೋನಿ ಅವರನ್ನು "ಕ್ರಿಕೆಟ್‌ನ ಒಂದು ಯುಗ" ಹಾಗೂ "ಒಬ್ಬ ರಾಷ್ಟ್ರದ ನಾಯಕನಿದ್ದ ಹಾಗೆ'' ಎಂದೆಲ್ಲಾ ಮೆಚ್ಚುಗೆಯ ಸುರಿಮಳೆ ಹರಿಸಿದ್ದಾರೆ.

 IPL: ಮುಂಬೈ ಇಂಡಿಯನ್ಸ್‌ನ ಯಶಸ್ಸಿನ ಗುಟ್ಟು ಬಿಚ್ಚಿಟ್ಟ ಜಯವರ್ಧನೆ! IPL: ಮುಂಬೈ ಇಂಡಿಯನ್ಸ್‌ನ ಯಶಸ್ಸಿನ ಗುಟ್ಟು ಬಿಚ್ಚಿಟ್ಟ ಜಯವರ್ಧನೆ!

"ಧೋನಿ ಬಗ್ಗೆ ನಿಮಗೆಲ್ಲರಿಗೂ ತಿಳಿದೇ ಇದೆ. ಅವರು ಕೇವಲ ಒಬ್ಬ ಆಟಗಾರನಲ್ಲ. ಕ್ರಿಕೆಟ್‌ನಲ್ಲಿ ಅವರೊಂದು ಯುಗವಿದ್ದ ಹಾಗೆ. ನನ್ನ ಪ್ರಕಾರ ಎಂಎಸ್‌ ಒಂದು ಗಲ್ಲಿ ಕ್ರಿಕೆಟ್‌ ತಂಡದ ನಾಯಕ. ಅವರು ನಮ್ಮೆಲ್ಲರಲ್ಲೂ ಒಬ್ಬನಹಾಗೆ. ತಂಡಕ್ಕಾಗಿ ಅವರು ಏನು ಬೇಕಾದರೂ ಮಾಡಬಲ್ಲರು. ಅವರ ಪೂರ್ವ ಸಿದ್ಧತೆ, ಲೆಗ್‌ ಸ್ಪಿನ್ನರ್‌ಗಳನ್ನು ಅವರು ಬಳಸಿಕೊಳ್ಳುವ ರೀತಿ. ಅವರು ಹಿಡಿಯುವ ಕ್ಯಾಚ್‌ಗಳು ಎಲ್ಲವೂ ತಂಡವನ್ನು ಹುರಿದುಂಬಿಸುತ್ತಿದೆ. ತಂಡದ ಸಹ ಆಟಗಾರರನ್ನು ಕರೆದು ಪ್ರದರ್ಶನದ ಕುರಿತಾಗಿ ಕೇಳುತ್ತಾರೆ. ಆಟಗಾರರ ದುಗುವನ್ನು ಕಡಿಮೆ ಮಾಡುತ್ತಾರೆ. ಆದ್ದರಿಂದಲೇ ಧೋನಿಯನ್ನು "ತಲಾ" ಎಂದು ಕರೆಯುತ್ತಿದ್ದಾರೆ. ತಲಾ ಎಂದರೆ ಚೆನ್ನೈ ತಂಡದ ನಾಯಕ ಎಂಬುದು ತಿಳಿದೇ ಇದೆ. ಆದರೆ ಅವರು ರಾಷ್ಟ್ರೀಯ ನಾಯಕ ಎಂಬುದು ನನ್ನ ಅಭಿಪ್ರಾಯ,'' ಎಂದು ಸಿಎಸ್‌ಕೆ ತಂಡದ ವಿಶೇಷ ಕಾರ್ಯಕ್ರಮವೊಂದರಲ್ಲಿ ಧೋನಿ ಕುರಿತಾಗಿ ಹೇಡನ್‌ ಮಾತನಾಡಿದ್ದಾರೆ.

Story first published: Sunday, May 12, 2019, 17:50 [IST]
Other articles published on May 12, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X