ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಂಎಸ್ ಧೋನಿಯನ್ನು ಚಾಂಪಿಯನ್ ಆಟಗಾರ ಎಂದ ಪಾಕಿಸ್ತಾನ ಮಾಜಿ ನಾಯಕ

Dhoni Is Champion Player With Two World Cup Titles, Says Waqar Younis

ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿಯನ್ನು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ವಾಕರ್ ಯೂನಿಸ್ ಚಾಂಪಿಯನ್ ಆಟಗಾರ ಎಂದು ಹೇಳಿದ್ದಾರೆ. ಎರಡು ವಿಶ್ವಕಪ್‌ಗಳನ್ನು ಟೀಮ್ ಇಂಡಿಯಾಗೆ ಗೆಲ್ಲಿಸಿಕೊಟ್ಟ ಧೋನಿಯನ್ನು ವಾಕರ್ ಯೂನಿಸ್ ಮನಸಾರೆ ಹೊಗಳಿದ್ದಾರೆ.

ಟೀಮ್ ಇಂಡಿಯಾ ಸೌರವ್ ಗಂಗೂಲಿ ನಾಯಕತ್ವದಲ್ಲಿ ಕಂಡ ಬೆಳವಣಿಗೆಯನ್ನು ಎಂಎಸ್ ಧೋನಿ ಮುಂದಿವರಿಸಿದರು. ಆ ಮೂಲಕ ಗಂಗೂಲಿಯ ನಂತರ ಸಮರ್ಥ ನಾಯಕ ಎಂದೆನಿಸಿದರು ಎಂದು ವಾಕರ್ ಯೂನಿಸ್ ಎಂಎಸ್ ಧೋನಿ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ.

ಸಚಿನ್ ಯಾಕೆ ಮೊದಲ ಎಸೆತ ಎದುರಿಸುತ್ತಿರಲಿಲ್ಲ: ಗಂಗೂಲಿ ಬಿಚ್ಚಿಟ್ಟ ಕುತೂಹಲಕಾರಿ ಸಂಗತಿಸಚಿನ್ ಯಾಕೆ ಮೊದಲ ಎಸೆತ ಎದುರಿಸುತ್ತಿರಲಿಲ್ಲ: ಗಂಗೂಲಿ ಬಿಚ್ಚಿಟ್ಟ ಕುತೂಹಲಕಾರಿ ಸಂಗತಿ

ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ 2007ರ ಟಿ20 ವಿಶ್ವಕಪ್‌ನ ಮೊದಲ ಆವೃತ್ತಿ, 2011ರ ಏಕದಿನ ವಿಶ್ವಕಪ್ ಹಾಗೂ 2013ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡಿತ್ತು. ಈ ಮೂಲಕ ಐಸಿಸಿಯ ಎಲ್ಲಾ ಟ್ರೋಫಿ ಗೆದ್ದ ಏಕೈಕ ನಾಯಕ ಎಂಬ ಹೆಗ್ಗಳಿಕೆಗೂ ಧೋನಿ ಪಾತ್ರರಾದರು.

ಸೌರವ್ ಗಂಗೂಲಿ ಭಾರತದಲ್ಲಿ ಕ್ರಿಕೆಟ್‌ ಬೆಳವಣಿಗೆಗೆ ಕಾರಣರಾದರು, ಗಂಗೂಲಿ ಹಾದಿಯಲ್ಲೇ ನಡೆದ ಧೋನಿ ಅದನ್ನು ಮತ್ತಷ್ಟು ಮುಂದುವರಿಸಿದರು. ಆತನೋರ್ವ ಚಾಂಪಿಯನ್ ಆಟಗಾರ ಎರಡು ವಿಶ್ವಕಪ್‌ಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಆತನ ಕರ್ತವ್ಯವನ್ನು ಆತ ತನಗಾಗಿ ತನ್ನ ದೇಶಕ್ಕಾಗಿ ಮತ್ತು ಕುಟುಂಬಕ್ಕಾಗಿ ಅದ್ಭುತವಾಗಿ ನಿರ್ವಹಿಸಿದ್ದಾರೆ ಎಂದು ವಾಕರ್ ಯೂನಿಸ್ ಹೇಳಿದ್ದಾರೆ.

ಟಿ20 ವಿಶ್ವಕಪ್: ಐಸಿಸಿ ನಿರ್ಧಾರಕ್ಕೆ ಇನ್ನು ಕಾಯಲು ಸಾಧ್ಯವಿಲ್ಲ ಎಂದ ಬಿಸಿಸಿಐ ಕಾರ್ಯದರ್ಶಿಟಿ20 ವಿಶ್ವಕಪ್: ಐಸಿಸಿ ನಿರ್ಧಾರಕ್ಕೆ ಇನ್ನು ಕಾಯಲು ಸಾಧ್ಯವಿಲ್ಲ ಎಂದ ಬಿಸಿಸಿಐ ಕಾರ್ಯದರ್ಶಿ

ಧೋನಿ ತಂಡವನ್ನು ಮುನ್ನಡೆಸುತ್ತಿದ್ದ ರೀತಿಯನ್ನು ವಿವರಿಸಲು ಸಾಧ್ಯವಿಲ್ಲ ಆತನೋರ್ವ ಅದ್ಭುತ ನಾಯಕ. ದೊಡ್ಡ ನಾಯಕನಾಗಿ ವಿಚಾರಗಳನ್ನು ತಿಳಿದುಕೊಳ್ಳುತ್ತಿದ್ದರು. ಸಣ್ಣ ಗ್ರಾಮವೊಂದರಿಂದ ಬಂದು ಇಷ್ಟು ದೊಡ್ಡ ತಂಡವನ್ನು ಮುನ್ನಡೆಸಿದ ರೀತಿಗೆ ಆತ ಪ್ರಶಂಸೆಗೆ ಅರ್ಹವಾದ ವ್ಯಕ್ತಿ ಎಂದು ವಾಕರ್ ಯೂನಿಸ್ ಹೇಳಿದ್ದಾರೆ

Story first published: Monday, July 6, 2020, 16:17 [IST]
Other articles published on Jul 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X