ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಧೋನಿ ವಿಶ್ವಕಪ್ ಗೆದ್ದಿದ್ದು ಸಚಿನ್‌ ಕೊಟ್ಟ ಸಲಹೆಯಿಂದ: ಸೆಹ್ವಾಗ್

Dhoni lift the world cup because of Sachins advice

ನವದೆಹಲಿ, ಸೆಪ್ಟೆಂಬರ್ 13: ಎಂ.ಎಸ್.ಧೋನಿ ಎಂದ ಕೂಡಲೇ ನೆನಪು ಬರುವುದು ವಿಶ್ವಕಪ್ ಫೈನಲ್‌ನಲ್ಲಿ ಧೋನಿ ಬ್ಯಾಟಿನಿಂದ ಸಿಡದಿದ್ದ ಸಿಕ್ಸರ್‌. ಆದರೆ ಧೋನಿ ವಿಶ್ವಕಪ್ ಗೆಲ್ಲಲು ಪ್ರಮುಖ ಕಾರಣ ಸಚಿನ್‌ ನೀಡಿದ ಸಲಹೆ ಎಂಬುದು ಇದೀಗ ಬಹಿರಂಗವಾಗಿದೆ.

'ಸಚಿನ್ ತೆಂಡೂಲ್ಕರ್‌ ಅವರು ಧೋನಿಗೆ ನೀಡಿದ್ದ ಸಲಹೆಯಿಂದಲೇ ವಿಶ್ವಕಪ್ ಗೆಲ್ಲಲು ಸಾಧ್ಯವಾಯಿತು' ಎಂದು ಅಂದು ತಂಡದಲ್ಲಿದ್ದ ವಿರೇಂದ್ರ ಸೆಹ್ವಾಗ್ ಅವರು ಹೇಳಿದ್ದಾರೆ.

ವಿಶ್ವಕಪ್ 2019 : ಟೀಂ ಇಂಡಿಯಾ ಪಂದ್ಯಗಳ ಸಮಗ್ರ ವೇಳಾಪಟ್ಟಿ ವಿಶ್ವಕಪ್ 2019 : ಟೀಂ ಇಂಡಿಯಾ ಪಂದ್ಯಗಳ ಸಮಗ್ರ ವೇಳಾಪಟ್ಟಿ

ಫೈನಲ್‌ ಪಂದ್ಯದಲ್ಲಿ ಸಚಿನ್, ಸೆಹ್ವಾಗ್, ಕೊಹ್ಲಿ ಔಟಾಗಿ ಪೆವಿಲಿಯನ್ ಸೇರಿದ್ದ ವಿಷಮ ಸ್ಥಿತಿಯಲ್ಲಿ ಯುವರಾಜ್ ಸಿಂಗ್ ಸ್ಕ್ರೀಜಿಗಿಳಿಯಲು ಸಜ್ಜಾಗಿದ್ದರು. ಆದರೆ ಯುವರಾಜ್ ಬದಲಿಗೆ ಮುಂಚಿತವಾಗಿ ಬಂದ ಧೋನಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ ವಿಶ್ವಕಪ್ ಗೆಲ್ಲಿಸಿಕೊಟ್ಟರು.

ಕ್ರೀಸ್ ಗೆ ಮೊದಲು ಬಂದಿದ್ದು ಧೋನಿ

ಕ್ರೀಸ್ ಗೆ ಮೊದಲು ಬಂದಿದ್ದು ಧೋನಿ

ಆದರೆ ಯುವರಾಜ್ ಸಿಂಗ್‌ಗೆ ಮುಂಚಿತವಾಗಿ ಕ್ರೀಸ್ ಗೆ ಹೋಗುವಂತೆ ಧೋನಿಗೆ ಸಲಹೆ ನೀಡಿದ್ದು, ಸಚಿನ್ ಅಂತೆ. ಹೌದು, ಶ್ರೀಲಂಕಾ ವಿರುದ್ಧ ನಡೆದ ವಿಶ್ವಕಪ್‌ ಫೈನಲ್‌ನಲ್ಲಿ ಸೆಹ್ವಾಗ್ ಹಾಗೂ ಸಚಿನ್ ಇಬ್ಬರೂ ಔಟಾಗಿ ಪೆವಿಲಿಯನ್ ಸೇರಿದ್ದಾಗ ಗಂಭೀರ್ ಮತ್ತು ವಿರಾಟ್ ಕೊಹ್ಲಿ ಆಡುತ್ತಿದ್ದರು. ಆಗ ಧೋನಿಗೆ ಸಲಹೆ ನೀಡಿದ ಸಚಿನ್, ಎಡಗೈ ಬ್ಯಾಟ್ಸ್‌ಮನ್ ಔಟಾದರೆ ಯುವರಾಜ್ ಸಿಂಗ್ ಆಡಲು ಹೋಗಲಿ, ಬಲಗೈ ಆಟಗಾರ ಔಟಾದರೆ ನೀನು ಹೋಗು ಎಂದು ಸಲಹೆ ನೀಡಿದ್ದರಂತೆ.

ಬಲಗೈ ಬ್ಯಾಟ್ಸ್‌ಮನ್‌ ಕ್ರೀಸ್ಗೆ ಹೋಗಲಿ

ಬಲಗೈ ಬ್ಯಾಟ್ಸ್‌ಮನ್‌ ಕ್ರೀಸ್ಗೆ ಹೋಗಲಿ

ಸಚಿನ್ ಸಲಹೆ ನೀಡಿದ ಕೆಲ ಸಮಯದ ನಂತರ ವಿರಾಟ್ ಔಟಾಗಿದ್ದಾರೆ. ಸಚಿನ್ ಸಲಹೆಯಂತೆ ಧೋನಿ ಪ್ಯಾಡು ಕಟ್ಟಿಕೊಂಡು ಯುವರಾಜ್‌ಗಿಂತಲೂ ಮೊದಲು ಕ್ರೀಸ್ ಗೆ ತೆರಳಿ ಅಜೇಯ 91 ಗಳಿಸಿ ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟರು. ಈ ವಿಷಯವನ್ನು ಸೆಹ್ವಾಗ್‌ ಅವರು 'ವಾಟ್‌ ದಿ ಡಕ್' ಟಾಕ್‌ ಶೋನಲ್ಲಿ ಹೇಳಿಕೊಂಡಿದ್ದಾರೆ.

ಧೋನಿಗೆ ನಾಯಕತ್ವ ಕೊಡಿಸಿದ್ದೂ ಸಚಿನ್‌

ಧೋನಿಗೆ ನಾಯಕತ್ವ ಕೊಡಿಸಿದ್ದೂ ಸಚಿನ್‌

ಧೋನಿಗೆ ಟಿ20 ವಿಶ್ವಕಪ್‌ನ ನಾಯಕತ್ವ ನೀಡುವಲ್ಲಿಯೂ ಸಚಿನ್ ಅವರ ಪಾತ್ರ ಇದೆ ಎಂದು ಈ ಮೊದಲೇ ತಿಳಿದಿದೆ. ಮೊದಲ ಟಿ20 ವಿಶ್ವಕಪ್‌ ಫೈನಲ್‌ಗೆ ಹಿರಿಯರಾದ ಸಚಿನ್‌, ದ್ರಾವಿಡ್, ಸೆಹ್ವಾಗ್ ಇತರ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿತ್ತು. ಆಗ ಬಿಸಿಸಿಐಗೆ ಸಲಹೆ ನೀಡಿ ಧೋನಿಗೆ ಟಿ20 ವಿಶ್ವಕಪ್‌ ತಂಡಕ್ಕೆ ನಾಯಕನನ್ನಾಗಿ ಮಾಡಲಾಯಿತು.

ಕ್ರಿಕೆಟ್ ಇತಿಹಾಸದಲ್ಲಿ ಧೋನಿ ಹೆಸರು

ಕ್ರಿಕೆಟ್ ಇತಿಹಾಸದಲ್ಲಿ ಧೋನಿ ಹೆಸರು

ಮುಂಬೈ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಸಚಿನ್ ಸೆಹ್ವಾಗ್ ಬೇಗನೆ ಔಟಾಗಿದ್ದರು. ಆ ನಂತರ ಗಂಭೀರ್ ಹಾಗೂ ಕೊಹ್ಲಿ ಕೆಲ ಕಾಲ ಉತ್ತಮ ಪಾಲುದಾರಿಕೆ ಆಟ ಆಡಿದರು ಆ ನಂತರ ಕೊಹ್ಲಿ ಔಟಾದರು ಆಗ ಸ್ಕ್ರೀಜಿಗೆ ಹೋದ ಧೋನಿ ಅಜೇಯ 91 ರನ್ ಗಳಿಸಿ ಪಂದ್ಯ ಗೆದ್ದುಕೊಟ್ಟರು. ಅಂದು ಅವರು ಹೊಡೆ ಕೊನೆಯ ಸಿಕ್ಸ್‌ ಕ್ರಿಕೆಟ್ ಇತಿಹಾಸದಲ್ಲಿ ಸೇರಿಹೋಯಿತು.

Story first published: Thursday, September 13, 2018, 20:22 [IST]
Other articles published on Sep 13, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X