ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಾಜಿ ನಾಯಕ ಎಂಎಸ್ ಧೋನಿಯ ಏಕದಿನ ವೃತ್ತಿ ಬದುಕು ಕೊನೆ?!

Dhoni may end his ODI career soon, says Ravi Shastri

ನವದೆಹಲಿ, ಜನವರಿ 10: ಎರಡು ಬಾರಿ ವಿಶ್ವಕಪ್‌ ವಿಜೇತ (1 ಏಕದಿನ, 1 ಟಿ20ಐ) ಭಾರತ ತಂಡದ ನಾಯಕತ್ವ ವಹಿಸಿದ್ದ ಎಂಎಸ್ ಧೋನಿಯ ಏಕದಿನ ವೃತ್ತಿ ಬದುಕು ಶ್ರೀಘ್ರ ಕೊನೆಗೊಳ್ಳಲಿದೆ ಎಂದು ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರಿ ಹೇಳಿದ್ದಾರೆ. ಅಂದರೆ ಧೋನಿ ಶೀಘ್ರದಲ್ಲೇ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ನೀಡಲಿದ್ದಾರೆ ಎಂಬರ್ಥದಲ್ಲಿ ಶಾಸ್ತ್ರಿ ಹೇಳಿಕೆ ನೀಡಿದ್ದಾರೆ.

ಕೊಹ್ಲಿ ನನಗೆ ಸ್ಫೂರ್ತಿ ಎಂದ ಆಸ್ಟ್ರೇಲಿಯಾದ ಉದಯೋನ್ಮುಖ ಕ್ರಿಕೆಟರ್ಕೊಹ್ಲಿ ನನಗೆ ಸ್ಫೂರ್ತಿ ಎಂದ ಆಸ್ಟ್ರೇಲಿಯಾದ ಉದಯೋನ್ಮುಖ ಕ್ರಿಕೆಟರ್

'ಎಂಎಸ್ ಧೋನಿ ಜೊತೆ ನಾನು ಮಾತನಾಡಿದ್ದೇನೆ. ಧೋನಿ ತನ್ನ ಟೆಸ್ಟ್ ವೃತ್ತಿ ಬದುಕನ್ನು ಮುಗಿಸಿದ್ದಾರೆ. ಏಕದಿನ ವೃತ್ತಿ ಬದುಕನ್ನೂ ಧೋನಿ ಶೀಘ್ರ ಕೊನೆಗೊಳಿಸುವ ಸಾಧ್ಯತೆಯಿದೆ. ಎಲ್ಲಾ ವಿಚಾರಗಳನ್ನು ಗಮನಿಸಿದಾಗ ಧೋನಿಯ ಒಡಿಐ ಕೆರಿಯರ್ ಮುಗಿಯುವ ಲಕ್ಷಣ ಕಾಣುತ್ತಿದೆ,' ಎಂದು ಶಾಸ್ತ್ರಿ ಹೇಳಿದ್ದಾರೆ.

ಭಾರತ vs ಶ್ರೀಲಂಕಾ, 3ನೇ ಟಿ20, Live ಸ್ಕೋರ್‌ಕಾರ್ಡ್

1
46129

ಸಿಎನ್‌ಎನ್ ನ್ಯೂಸ್ 18 ಜೊತೆ ಮಾತನಾಡುತ್ತ ರವಿ ಶಾಸ್ತ್ರಿ ಧೋನಿ ಕುರಿತು ಇನ್ನೊಂದಿಷ್ಟು ಪ್ರಮುಖ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಧೋನಿ ಆಟದ ಪರಿಗೆ ಗೌರವಿಸಬೇಕು

ಧೋನಿ ಆಟದ ಪರಿಗೆ ಗೌರವಿಸಬೇಕು

ಮಾತು ಮುಂದುವರೆಸಿದ ಶಾಸ್ತ್ರಿ, 'ಧೋನಿ ಎಲ್ಲಾ ಕ್ರಿಕೆಟ್‌ ಮಾದರಿಗಳಲ್ಲಿ ಇಲ್ಲೀವರೆಗೆ ಆಡಿರುವ ಪರಿಗೆ ಜನ ಅವರನ್ನು ಗೌರವಿಸಲೇಬೇಕು,' ಎಂದರು. ಇಂಗ್ಲೆಂಡ್‌ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ ಬಳಿಕ ಧೋನಿ ಯಾವುದೇ ಟೂರ್ನಿಗಳಲ್ಲಿ ಪಾಲ್ಗೊಂಡಿಲ್ಲ. ಕ್ರಿಕೆಟ್ ವಲಯದಲ್ಲಿ ಧೋನಿ ನಿವೃತ್ತಿ ಬಗ್ಗೆ ಆಗೀಗ ಚರ್ಚೆಗಳು ನಡೆಯುತ್ತಲೇಯಿವೆ.

ಟಿ20 ಮಾದರಿಗೆ ಧೋನಿ ಹೆಚ್ಚು ಸೂಕ್ತ

ಟಿ20 ಮಾದರಿಗೆ ಧೋನಿ ಹೆಚ್ಚು ಸೂಕ್ತ

38ರ ಹರೆಯದ ಧೋನಿಗೆ ಈ ವಯಸ್ಸಿನಲ್ಲಿ ಟಿ20 ಕ್ರಿಕೆಟ್ ಮಾದರಿ ಹೆಚ್ಚು ಸೂಕ್ತ. ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನಲ್ಲಿ ಚೆನ್ನಾಗಿ ಆಡಿದರೆ ಧೋನಿ ಮುಂಬರಲಿರುವ ಟಿ20 ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವವರ ಸಾಲಿನಲ್ಲಿರುವ ಪ್ರಮುಖ ಸ್ಪರ್ಧಿ ಎಂಬ ಸಂಗತಿಯನ್ನೂ ಶಾಸ್ತ್ರಿ ಬಾಯ್ಬಿಟ್ಟಿದ್ದಾರೆ.

ಮತ್ತೆ ಟೀಮ್ ಇಂಡಿಯಾಕ್ಕೆ ವಾಪಸ್?!

ಮತ್ತೆ ಟೀಮ್ ಇಂಡಿಯಾಕ್ಕೆ ವಾಪಸ್?!

'ಏಕದಿನಕ್ಕೆ ಧೋನಿ ನಿವೃತ್ತಿ ಘೋಷಿಸಿದರೆ ಟಿ20 ಮಾದರಿಯಲ್ಲಿ ಮಾತ್ರ ಉಳಿಯುತ್ತಾರೆ. ಹೀಗಾಗಿ ಧೋನಿ ಐಪಿಎಲ್‌ನಲ್ಲಿ ಖಂಡಿತಾ ಆಡಲಿದ್ದಾರೆ. ಧೋನಿ ತಾನಾಗೇ ಟೀಮ್ ಇಂಡಿಯಾಕ್ಕೆ ಬರುವ ನಿಟ್ಟಿನಲ್ಲಿ ಒತ್ತಡ ಹೇರಿಲ್ಲ. ಆದರೆ ಐಪಿಎಲ್‌ನಲ್ಲಿ ಧೋನಿ ಚೆನ್ನಾಗಿ ಆಡಿದರೆ ಅವರನ್ನು ತಂಡಕ್ಕೆ ಕರೆತರುವ ಒತ್ತಡ ಸಹಜವಾಗೇ ನಮ್ಮ ಮೇಲೆ ಬೀಳಲಿದೆ,' ಎಂದು ರವಿ ಶಾಸ್ತ್ರಿ ಹೇಳಿದರು.

ಕೀಪಿಂಗ್‌ನಲ್ಲಿ ಸಾಟಿಯಿಲ್ಲದ ದಾಖಲೆ

ಕೀಪಿಂಗ್‌ನಲ್ಲಿ ಸಾಟಿಯಿಲ್ಲದ ದಾಖಲೆ

144 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 4876 ರನ್, 297 ಏಕದಿನ ಇನ್ನಿಂಗ್ಸ್‌ಗಳಲ್ಲಿ 10773 ರನ್ ಮತ್ತು 85 ಟಿ20ಐ ಇನ್ನಿಂಗ್ಸ್‌ಗಳಲ್ಲಿ 1617 ರನ್ ಗಳಿಸಿರುವ ಧೋನಿ, ವಿಕೆಟ್ ಕೀಪರ್‌ ಆಗಿದ್ದುಕೊಂಡು ಒಟ್ಟಿಗೆ 829 ಔಟ್‌ಗಳಿಗೆ ಕಾರಣರಾಗಿದ್ದರು. ಒಟ್ಟಿನಲ್ಲಿ ಧೋನಿ ಈ ಬಾರಿಯ ವಿಶ್ವಕಪ್‌ನಲ್ಲಿ ಆಡುತ್ತಾರೋ ಇಲ್ಲವೋ ಎಂಬುದು ಅವರ ಐಪಿಎಲ್‌ ಪ್ರದರ್ಶನ ನಿರ್ಧರಿಸಲಿದೆ.

Story first published: Saturday, January 11, 2020, 13:25 [IST]
Other articles published on Jan 11, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X