ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಧೋನಿ ರಾಂಚಿಯಲ್ಲಿ ಏನೋ ಮಾಡಿರಬೇಕು ಎಂದ ಪಿಯೂಷ್ ಚಾವ್ಲಾ

Dhoni Must Have Done Something In Ranchi: Csk Spinner Piyush Chawla

ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಸುದೀರ್ಘ ಕಾಲದ ಬಳಿಕ ಕ್ರಿಕೆಟ್‌ಗೆ ಮರಳಲು 13ನೇ ಆವೃತ್ತಿಯ ಐಪಿಎಲ್ ಮೂಲಕ ಸಿದ್ಧರಾಗಿದ್ದರು. ಆದರೆ ಕೊರೊನಾ ವೈರಸ್‌ನ ಕಾರಣದಿಂದಾಗಿ ಐಪಿಎಲ್‌ಅನ್ನು ಅನಿರ್ಧಿಷ್ಟಾವಧಿಗೆ ಮುಂದೂಡಲಾಯಿತು. ಅಭಿಮಾನಿಗಳಿಗೆ ಮತ್ತೆ ನಿರಾಸೆಯಾಗಿತ್ತು.

ಸುದೀರ್ಘ ಕಾಲದ ವಿರಾಮದ ನಂತರ ಧೋನಿ ಮತ್ತೆ ಕ್ರಿಕೆಟ್‌ಗೆ ಮರಳುವಾಗ ಯಾವ ರೀತಿಯ ಪ್ರದರ್ಶನ ನೀಡುತ್ತಾರೆ ಎಂಬ ಬಗ್ಗೆ ಅಭಿಮಾನಿಗಳು ಸಾಕಷ್ಟು ಕುತೂಹಲವನ್ನು ಹೊಂದಿದ್ದರು. ಈ ಬಗ್ಗೆ ಹಲವು ಕ್ರಿಕೆಟಿಗರು ಹೇಳಿಕೆಯನ್ನು ನೀಡಿದ್ದು ಧೋನಿ ಬ್ಯಾಟಿಂಗ್‌ನ ಸಾಮರ್ಥ್ಯಕಳೆಗುಂದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

2011ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಫಿಕ್ಸಿಂಗ್: ಆರೋಪಕ್ಕೆ ಸಾಕ್ಷ್ಯವೇ ಇಲ್ಲ ಎಂದ ತನಿಖಾ ತಂಡ2011ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಫಿಕ್ಸಿಂಗ್: ಆರೋಪಕ್ಕೆ ಸಾಕ್ಷ್ಯವೇ ಇಲ್ಲ ಎಂದ ತನಿಖಾ ತಂಡ

ಈ ಬಗ್ಗೆ ಹಿರಿಯ ಸ್ಪಿನ್ನರ್ ಪಿಯೂಷ್ ಚಾವ್ಲಾ ಕೂಡ ಪ್ರತಿಕ್ರಿಯಿಸಿದ್ದು ಧೋನಿ ಬ್ಯಾಟಿಂಗ್‌ನಲ್ಲಿ ಅತ್ಯುತ್ತಮ ಲಯವನ್ನು ಹೊಂದಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಅಭ್ಯಾಸ ಶಿಬಿರದಲ್ಲಿ ಅವರು ದೊಡ್ಡ ಹೊಡೆತಗಳನ್ನು ಬಾರಿಸಿ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಪ್ರದರ್ಶಿಸಿದ್ದರು ಎಂದು ಚಾವ್ಲಾ ಹೇಳಿದ್ದಾರೆ.

ಪ್ರಾಮಾಣಿಕವಾಗಿ ಹೇಳಬೇಕೆಂದರೆ ಯಾವುದೇ ಆಟಗಾರ ಸುದೀರ್ಘಕಾಲ ವಿರಾಮದ ನಂತರ ಬಂದಾಗ ಸಹಜವಾಗಿಯೇ ಕಳೆಗುಂದಿರುತ್ತಾರೆ. ಆದರೆ ಮಾಹೀ ಭಾಯ್ ರಾಂಚಿಯಲ್ಲಿ ಏನೋ ಮಾಡಿ ಬಂದಿರಬೇಕು. ಅಷ್ಟು ದೀರ್ಘ ಕಾಲದ ವಿರಾಮದ ಬಳಿಕವೂ ಅವರ ಆಟದಲ್ಲಿ ಸ್ವಲ್ಪವೂ ಕಳಗುಂದಿರಲಿಲ್ಲ. ಅವರು ಮೊದಲ ಐದಾರು ಎಸೆತಗಳನ್ನು ಗಮನಿಸಿಕೊಂಡರು. ಬಳಿಕ ದೊಡ್ಡ ಹೊಡೆತಗಳನ್ನು ಬಾರಿಸಲು ಆರಂಭಿಸಿದರು ಎಂದು ಚಾವ್ಲಾ ಹೇಳಿದ್ದಾರೆ.

ಐಪಿಎಲ್‌ನಲ್ಲಿ ಅತ್ಯಧಿಕ ಕ್ಯಾಚ್ ದಾಖಲೆ ಬರೆದಿರುವ ಟಾಪ್ 5 ಫೀಲ್ಡರ್‌ಗಳು!ಐಪಿಎಲ್‌ನಲ್ಲಿ ಅತ್ಯಧಿಕ ಕ್ಯಾಚ್ ದಾಖಲೆ ಬರೆದಿರುವ ಟಾಪ್ 5 ಫೀಲ್ಡರ್‌ಗಳು!

ಮಾಜಿ ಕ್ರಿಕೆಟಿಗ ಕಾಮೆಂಟೆಟರ್ ಆಕಾಶ್ ಚೋಪ್ರಾ ಜೊತೆಗಿನ ಸಂದರ್ಶನದಲ್ಲಿ ಈ ವಿಚಾರಗಳನ್ನು ಪಿಯೂಷ್ ಚಾವ್ಲಾ ಹಂಚಿಕೊಂಡರು. ಈ ಮಾತುಕತೆಯ ಸಂದರ್ಭದಲ್ಲಿ ಚಾವ್ಲಾ ತನ್ನ ನೆಚ್ಚಿನ ನಾಯಕ ಮಹೇಂದ್ರ ಸಿಂಗ್ ದೋನಿ ಎಂಬುದನ್ನೂ ಬಹಿರಂಗಪಡಿಸಿದ್ದಾರೆ.

Story first published: Saturday, July 4, 2020, 9:47 [IST]
Other articles published on Jul 4, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X