ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವೆಸ್ಟ್ ಇಂಡೀಸ್ ಪ್ರವಾಸ ಸರಣಿಗೆ ಧೋನಿ ಅಲಭ್ಯ, ಪಂತ್‌ಗೆ ಸ್ಥಾನ!?

Dhoni opts out of West Indies tour; to serve territorial army for two months

ನವದೆಹಲಿ, ಜುಲೈ 20: ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ, ವೆಸ್ಟ್ ಇಂಡೀಸ್ ಪ್ರವಾಸ ಸರಣಿಗೆ ಅಲಭ್ಯರಾಗಲಿದ್ದಾರೆ. ಸರಣಿ ಬದಲು ಧೋನಿ ಸೇನೆಗೆ 2 ತಿಂಗಳ ಕಾಲ ಸೇವೆ ಸಲ್ಲಿಸಲು ನಿರ್ಧರಿಸಿದ್ದಾರೆ. ಶುಕ್ರವಾರ (ಜುಲೈ 19) ಈ ವಿಚಾರವನ್ನು ಅಧಿಕೃತ ಮೂಲ ಖಾತರಿಪಡಿಸಿದೆ.

ಸ್ಲೋ ಓವರ್‌ ರೇಟ್‌: ಇನ್ಮುಂದೆ ನಾಯಕನಿಗೆ ನಿಷೇಧ ಹೇರೋಹಾಗಿಲ್ಲ!ಸ್ಲೋ ಓವರ್‌ ರೇಟ್‌: ಇನ್ಮುಂದೆ ನಾಯಕನಿಗೆ ನಿಷೇಧ ಹೇರೋಹಾಗಿಲ್ಲ!

ಭಾರತೀಯ ಪ್ರಾದೇಶಿಕ ಸೇನೆಯ ಪ್ಯಾರಾಚೂಟ್ ರೆಜಿಮೆಂಟ್‌ನಲ್ಲಿ ಗೌರವ ಲೆಫ್ಟಿನೆಂಟ್ ಆಗಿರುವ ಕೂಲ್ ಕ್ಯಾಪ್ಟನ್, ಮುಂದಿನ ಎರಡು ತಿಂಗಳಕಾಲ ತನ್ನ ರೆಜಿಮೆಂಟ್‌ನ ಸೇವೆಯಲ್ಲಿ ಕಳೆಯಲಿದ್ದಾರೆ. ಇದರೊಂದಿಗೆ ವೆಸ್ಟ್ ಇಂಡೀಸ್ ಪ್ರವಾಸ ಸರಣಿಯಲ್ಲಿ ಧೋನಿ ಪಾಲ್ಗೊಳ್ಳುತ್ತಾರೋ ಇಲ್ಲವೋ ಎಂಬ ಗೊಂದಲಕ್ಕೆ ತೆರೆ ಬಿದ್ದಿದೆ.

ಸಚಿನ್‌ಗೂ ಮುನ್ನ ದ್ರಾವಿಡ್, ಕುಂಬ್ಳೆಗೆ 'ಐಸಿಸಿ ಹಾಲ್ ಆಫ್ ಫೇಮ್' ಲಭಿಸಿದ್ದೇಕೆ?!ಸಚಿನ್‌ಗೂ ಮುನ್ನ ದ್ರಾವಿಡ್, ಕುಂಬ್ಳೆಗೆ 'ಐಸಿಸಿ ಹಾಲ್ ಆಫ್ ಫೇಮ್' ಲಭಿಸಿದ್ದೇಕೆ?!

ಪಿಟಿಐ ವರದಿಯ ಪ್ರಕಾರ ಬಿಸಿಸಿಐ ಉನ್ನತ ಅಧಿಕಾರಿಯೊಬ್ಬರು, 'ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಅಲಭ್ಯರಿರಲು ಧೋನಿ ತಾನೇ ನಿರ್ಧರಿಸಿದ್ದಾರೆ. ಮುಂದಿನ ಎರಡು ತಿಂಗಳ ಕಾಲ ಧೋನಿ ತನ್ನ ಪ್ಯಾರಾಮಿಲಿಟರಿ ರೆಜಿಮೆಂಟ್‌ನಲ್ಲಿ ಕಳೆಯಲಿದ್ದಾರೆ,' ಎಂದಿದ್ದಾರೆ.

ಟೀಮ್ ಇಂಡಿಯಾದ ಭವಿಷ್ಯದ ಮೂವರು ಕೀಪರ್‌ಗಳ ಹೆಸರಿಸಿದ ಗಂಭೀರ್!ಟೀಮ್ ಇಂಡಿಯಾದ ಭವಿಷ್ಯದ ಮೂವರು ಕೀಪರ್‌ಗಳ ಹೆಸರಿಸಿದ ಗಂಭೀರ್!

ವಿಶ್ವಕಪ್ ಬಳಿಕ ಭಾರತ ಮೊದಲ ಬಾರಿಗೆ ಪಾಲ್ಗೊಳ್ಳುವ ಪ್ರವಾಸ ಸರಣಿಯಿಂದ ಧೋನಿ ಹಿಂದೆ ಸರಿದಿರುವುದರಿಂದ ಯುವ ಬ್ಯಾಟ್ಸ್ಮನ್ ಕಮ್ ವಿಕೆಟ್ ಕೀಪರ್ ರಿಷಬ್ ಪಂತ್, ಧೋನಿ ಜಾಗ ಆವರಿಸುವುದನ್ನು ನಿರೀಕ್ಷಿಸಲಾಗಿದೆ. ಟೆಸ್ಟ್‌ನಲ್ಲಿ ಪಂತ್ ಬದಲಿಗೆ ವೃದ್ಧಿಮಾನ್ ಸಾಹ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಲಾರ್ಡ್ಸ್‌ ಪ್ರೇಕ್ಷಕರಿಗೆ 360 ಡಿಗ್ರಿ ದರ್ಶನ ಮಾಡಿಸಿದ ಎಬಿ ಡಿ'ವಿಲಿಯರ್ಸ್‌ಲಾರ್ಡ್ಸ್‌ ಪ್ರೇಕ್ಷಕರಿಗೆ 360 ಡಿಗ್ರಿ ದರ್ಶನ ಮಾಡಿಸಿದ ಎಬಿ ಡಿ'ವಿಲಿಯರ್ಸ್‌

ಆಗಸ್ಟ್ 3ರಿಂದ ಪ್ರವಾಸ ಸರಣಿ ಆರಂಭಗೊಳ್ಳಲಿದ್ದು, ಸರಣಿಯು 3 ಟಿ20 ಪಂದ್ಯಗಳು, 3 ಏಕದಿನ ಪಂದ್ಯಗಳು ಮತ್ತು 2 ಟೆಸ್ಟ್ ಪಂದ್ಯಗಳನ್ನು ಒಳಗೊಂಡಿದೆ. ಟೀಮ್ ಇಂಡಿಯಾ ಎಂದಿನ ನಾಯಕ ವಿರಾಟ್ ಕೊಹ್ಲಿ ತಂಡ ಮುನ್ನಡೆಸಲಿದ್ದಾರೆ.

Story first published: Saturday, July 20, 2019, 15:36 [IST]
Other articles published on Jul 20, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X