ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಧೋನಿಯ ಮಿಂಚಿನ ವೇಗದ ಕೈಗಳಿಗೆ ರಾಸ್ ಟೇಲರ್ ಬಲಿ: ವೈರಲ್ ವಿಡಿಯೋ

Dhoni’s lightning fast stumping ends Ross Taylor’s innings, watch video

ಮೌಂಟ್‌ಮೌಂಗನ್ಯುಯಿ, ಜನವರಿ 26: ಹೆಲಿಕಾಪ್ಟರ್ ಶಾಟ್, ಮ್ಯಾಚ್ ಫಿನಿಷಿಂಗ್, ಕೂಲ್ ಕ್ಯಾಪ್ಟನಿಂಗ್‌ಗೆ ಜನಪ್ರಿಯರಾಗಿರುವ ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಅದ್ಭುತ ವಿಕೆಟ್ ಕೀಪರ್ ಅನ್ನೋದರಲ್ಲಿ ಎರಡು ಮಾತಿಲ್ಲ. ಧೋನಿ ಅವರು ಇದಕ್ಕೆ ಮೌಂಟ್‌ಮೌಂಗನ್ಯುಯಿ ಏಕದಿನ ಪಂದ್ಯದಲ್ಲಿ ಮತ್ತೊಮ್ಮೆ ಸಾಕ್ಷಿ ಹೇಳಿದ್ದಾರೆ.

ಅಜರುದ್ದೀನ್ ದಾಖಲೆ ಸರಿದೂಗಿಸಿದ ಧೋನಿ, ದ್ರಾವಿಡ್ ಮೀರಿಸುವತ್ತ ಕಣ್ಣು!ಅಜರುದ್ದೀನ್ ದಾಖಲೆ ಸರಿದೂಗಿಸಿದ ಧೋನಿ, ದ್ರಾವಿಡ್ ಮೀರಿಸುವತ್ತ ಕಣ್ಣು!

ಮೌಂಟ್‌ಮೌಂಗನ್ಯುಯಿಯ ಬೇ ಓವಲ್‌ನಲ್ಲಿ ಶನಿವಾರ (ಜನವರಿ 26) ನಡೆದ ನ್ಯೂಜಿಲ್ಯಾಂಡ್-ಭಾರತ ದ್ವಿತೀಯ ಏಕದಿನ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ, ಕಿವೀಸ್ ಸ್ಫೋಟಕ ಬ್ಯಾಟ್ಸ್ಮನ್ ರಾಸ್ ಟೇಲರ್ ಅವರನ್ನು ಸ್ಟಂಪ್ಡ್ ಮಾಡಿ ಕೇವಲ 22 ರನ್ನಿಗೆ ಪೆವಿಲಿಯನ್‌ಗೆ ಕಳುಹಿಸಿದ್ದರು. ಧೋನಿಯ ಈ ಅದ್ಭುತ ಕೈಚಳಕ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಸದ್ದು ಮಾಡುತ್ತಿದೆ.

18ನೇ ಓವರ್‌ (17.1) ಎಸೆಯಲು ಕೇದಾರ್ ಜಾಧವ್ ನಿಂತಿದ್ದಾಗ ಎದುರಿನಲ್ಲಿ ನ್ಯೂಜಿಲ್ಯಾಂಡ್ ಅಪಾಯಕಾರಿ ಆಟಗಾರ ಟೇಲರ್ ಇದ್ದರು. ಜಾಧವ್ ಎಸೆತಕ್ಕೆ ರಾಸ್ ಬ್ಯಾಟ್ ಬೀಸಿದರು. ಆದರೆ ಚೆಂಡು ಬ್ಯಾಟ್ ತಾಗದೆ ಧೋನಿ ಕೈ ಸೇರಿತು; ಟೇಲರ್ ಔಟ್ ಆದರು!.

ಬೇ ಓವಲ್, 2ನೇ ಏಕದಿನ: 90 ರನ್‌ನಿಂದ ನ್ಯೂಜಿಲ್ಯಾಂಡ್ ಮಣಿಸಿದ ಭಾರತಬೇ ಓವಲ್, 2ನೇ ಏಕದಿನ: 90 ರನ್‌ನಿಂದ ನ್ಯೂಜಿಲ್ಯಾಂಡ್ ಮಣಿಸಿದ ಭಾರತ

ಅಂಪೈರ್ ಡಿಸಿಶನ್ ರಿವ್ಯೂ ಸಿಸ್ಟಮ್‌ಗೆ (ಡಿಆರ್ಎಸ್‌) ಸವಾಲೆಂಬಂತಿದ್ದ ಈ ಸೂಕ್ಷ್ಮ ಸ್ಟಂಪ್ಡ್ ಮತ್ತು ಧೋನಿಯ ವೇಗದ ಕೈಗಳಿಗೆ ಕ್ರಿಕೆಟ್ ಅಭಿಮಾನಿಗಳು ಮನಸೋತಿದ್ದಾರೆ. ಅಂದ್ಹಾಗೆ ಈ ಪಂದ್ಯದಲ್ಲಿ ಭಾರತ 90 ರನ್‌ಗಳಿಂದ ಭರ್ಜರಿ ಗೆಲುವನ್ನಾಚರಿಸಿತ್ತಲ್ಲದೆ, ಕೀವೀಸ್ ಅನ್ನು ಏಕದಿನದಲ್ಲಿ 90 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿದ ಅಪರೂಪದ ದಾಖಲೆಗೂ ಕಾರಣವಾಯ್ತು.

Story first published: Saturday, January 26, 2019, 17:36 [IST]
Other articles published on Jan 26, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X