ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ-ಆಸೀಸ್: ಭಾರತೀಯ ಸೇನಾ ಮುದ್ರೆಯ ಗ್ಲೌಸನ್ನೇ ಧೋನಿ ಬಳಸ್ತಾರಾ?!

ICC World Cup 2019 : ಇಂದಿನ ಪಂದ್ಯದಲ್ಲೂ ಅದೇ ಗ್ಲೌಸ್ ಬಳಸಲಿದ್ದಾರೆ ಧೋನಿ..? | Oneindia Kannada
Dhoni to mask army insignia on his wicketkeeping gloves against Australia?

ಲಂಡನ್, ಜೂನ್ 9: ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾದ ವಿಶ್ವಕಪ್ ಆರಂಭಿಕ ಪಂದ್ಯದಲ್ಲಿ ಮಾಜಿ ನಾಯಕ ಎಂಎಸ್ ಧೋನಿ ಅವರು ಭಾರತೀಯ ವಿಶೇಷ ಸೇನಾಪಡೆಯ ಮುದ್ರೆಯಿದ್ದ ಗ್ಲೌಸನ್ನು ಬಳಸಿದ್ದರು. ಇದಕ್ಕೆ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ತಕರಾರು ತೆಗೆದಿತ್ತು. ಹಾಗಾದರೆ ಭಾರತ vs ಆಸ್ಟ್ರೇಲಿಯಾ ಪಂದ್ಯದಲ್ಲಿ ಧೋನಿ ಮತ್ತೆ ಅದೇ ಗ್ಲೌಸನ್ನು ಧರಿಸುತ್ತಾರಾ? ಇಲ್ವಾ?

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಧರಿಸುತ್ತಾರೆ ಎನ್ನುತ್ತಿದೆ ಮೂಲವೊಂದು. ಜೂನ್ 9ರಂದು ಲಂಡನ್ ನಲ್ಲಿ ನಡೆಯಲಿರುವ ಭಾರತ vs ಆಸ್ಟ್ರೇಲಿಯಾ ಹೈ ವೋಲ್ಟೋಜ್ ಪಂದ್ಯದಲ್ಲೂ ಧೋನಿ ಆರ್ಮಿ ಮುದ್ರೆಯಿದ್ದ ಅದೇ ಗ್ಲೌಸನ್ನು ಬಳಸಲಿದ್ದಾರೆ. ಆದರೆ ಗ್ಲೌಸಿನ ಮೇಲಿನ ಮುದ್ರೆ ಕಾಣದಂತೆ ಮುದ್ರೆಯನ್ನು ಮುಚ್ಚಲಿದ್ದಾರೆ ಎನ್ನಲಾಗುತ್ತಿದೆ.

ಭಾರತ vs ಆಸ್ಟ್ರೇಲಿಯಾ ಪಂದ್ಯ, ಜೂನ್ 9, Live ಸ್ಕೋರ್‌ಕಾರ್ಡ್

1
43657

ಧೋನಿ ಅವರು ಭಾರತೀಯ ಸೇನೆಯಲ್ಲಿ ಗೌರವ ಲೆಫ್ಟಿನೆಂಟ್ ಆಗಿರುವುದರಿಂದ ಅವರಿಗೆ ಭಾರತದ ವಿಶೇಷ ಪ್ಯಾರಾ ಸೇನಾಪಡೆಯ 'ಬಲಿದಾನ್' ಚಿಹ್ನೆಯನ್ನು ಗ್ಲೌಸಿನಲ್ಲಿ ಧರಿಸಲು ಅವಕಾಶ ಮಾಡಿಕೊಡಬೇಕು ಎಂದು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ), ಐಸಿಸಿ ಜೊತೆ ಕೋರಿಕೊಂಡಿತ್ತು. ಆದರೆ ಬಿಸಿಸಿಐ ಮನವಿಯನ್ನು ಐಸಿಸಿ ತಿರಸ್ಕರಿಸಿದೆ.

ಇಂಥ ದೊಡ್ಡ ಮಟ್ಟದ ಟೂರ್ನಿ ನಡೆಯುವಾಗ ಧೋನಿ ಅಂಥ ಲೋಗೋವಿರುವ ಗ್ಲೌಸ್ ಬಳಸುವಂತಿಲ್ಲ. ಇದು ಡ್ರೆಸ್ ಕೋಡ್ ಮುರಿದಂತಾಗುತ್ತದೆ. ಐಸಿಸಿ ಅನುಮತಿ ನೀಡಿರುವ ಎರಡೇ ತಯಾರಕರ ಚಿಹ್ನೆ ಮಾತ್ರ ಕ್ರೀಡಾ ಪರಿಕರಗಳಲ್ಲಿ ಕಾಣಿಸಲು ಅವಕಾಶವಿದೆ. ಅದಲ್ಲದೆ ಬೇರಾವುದೇ ಮುದ್ರೆಗಳು ಕ್ರೀಡಾ ಸಾಮಗ್ರಿಗಳಲ್ಲಿ ಕಾಣಿಸುವಂತಿಲ್ಲ ಎಂಬುದನ್ನು ಐಸಿಸಿಯು ಬಿಸಿಸಿಐಗೆ ಸ್ಪಷ್ಟವಾಗಿ ಹೇಳಿದೆ.

ಗಿಮಿಕ್‌ಗಳನ್ನು ಮಾಡೋದನ್ನು ನಿಲ್ಲಿಸಿ: ಎಬಿಡಿಯತ್ತ ಬೌನ್ಸರ್ ಎಸೆದ ಅಖ್ತರ್!ಗಿಮಿಕ್‌ಗಳನ್ನು ಮಾಡೋದನ್ನು ನಿಲ್ಲಿಸಿ: ಎಬಿಡಿಯತ್ತ ಬೌನ್ಸರ್ ಎಸೆದ ಅಖ್ತರ್!

ಈ ಬಗ್ಗೆ ಉಪ ನಾಯಕ ರೋಹಿತ್ ಶರ್ಮಾ ಅವರಲ್ಲಿ ಪ್ರಶ್ನಿಸಿದಾಗ, 'ನನಗೆ ಆ ಬಗ್ಗೆ ಮಾಹಿತಿಯಿಲ್ಲ. ನಾನು ನಾಯಕನೂ ಅಲ್ಲ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ಧೋನಿ, ಆರ್ಮಿ ಮುದ್ರೆಯಿರುವ ಅದೇ ಗ್ಲೌಸ್ ಧರಿಸುತ್ತಾರೋ ಇಲ್ಲವೋ ಎಂಬುದು ಗೊತ್ತಿಲ್ಲ. ಏನಾಗುತ್ತದೆ ಕಾದು ನೋಡಬೇಕಿದೆ' ಎಂದಿದ್ದಾರೆ.

Story first published: Sunday, June 9, 2019, 13:03 [IST]
Other articles published on Jun 9, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X