ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಧೋನಿಗೆ ಟೀಮ್‌ ಇಂಡಿಯಾದ ಕದ ಮುಚ್ಚುವ ಸಮಯ ಹತ್ತಿರ?!

ಧೋನಿ ಸ್ಥಾನವನ್ನು ಕಸಿದುಕೊಂಡ ರಿಷಬ್ ಪಂತ್..? | Oneindia Kannada
Dhoni wont go to Windies but will help Rishabh Pant: BCCI Sources

ಬೆಂಗಳೂರು, ಜುಲೈ 17: ಭಾರತಕ್ಕೆ ಎರಡು ವಿಶ್ವಕಪ್‌ ಗೆದ್ದುಕೊಟ್ಟ ಯಶಸ್ವಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರಿಗೆ ಟೀಮ್‌ ಇಂಡಿಯಾದ ಬಾಗಿಲು ಮುಚ್ಚುವ ಕಾಲ ಹತ್ತಿರವಾದಂತಿದೆ.

ಇತ್ತೀಚೆಗಷ್ಟೇ ಇಂಗ್ಲೆಂಡ್‌ ಮತ್ತು ವೇಲ್ಸ್‌ ಆತಿಥ್ಯದಲ್ಲಿ ನಡೆದ 12ನೇ ಆವೃತ್ತಿಯ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡ ಸೆಮಿಫೈನಲ್ಸ್‌ನಲ್ಲಿ ಮುಗ್ಗರಿಸಿತ್ತು. ಇನ್ನು ವಿಶ್ವಕಪ್‌ ಟೂರ್ನಿ ಬಳಿಕ ಧೋನಿ ನಿವೃತ್ತಿ ಘೋಷಿಸುತ್ತಾರೆ ಎಂದೇ ಎಣಿಸಲಾಗಿತ್ತು. ಆದರೆ, ವಿಶ್ವಕಪ್‌ ಬಳಿಕ ಮೌನಕ್ಕೆ ಜಾರಿರುವ ಎಂಎಸ್‌ಡಿ ತಮ್ಮ ನಿವೃತ್ತಿ ವಿಚಾರವನ್ನು ಮತ್ತಷ್ಟು ರಹಸ್ಯವನ್ನಾಗಿಸಿದ್ದಾರೆ.

ವಿಶ್ವಕಪ್‌ ಫೈನಲ್‌ ಸೋಲಿನ ದುಖಃ ತೋಡಿಕೊಂಡ ವಿಲಿಯಮ್ಸನ್‌ವಿಶ್ವಕಪ್‌ ಫೈನಲ್‌ ಸೋಲಿನ ದುಖಃ ತೋಡಿಕೊಂಡ ವಿಲಿಯಮ್ಸನ್‌

ಇನ್ನು ಭಾರತ ತಂಡ ಇದೇ ತಿಂಗಳ ಅಂತ್ಯಕ್ಕೆ ವೆಸ್ಟ್‌ ಇಂಡೀಸ್‌ ಪ್ರವಾಸ ಕೈಗೊಳ್ಳುತ್ತಿದ್ದು, ತಲಾ ಮೂರು ಪಂದ್ಯಗಳ ಏಕದಿನ ಮತ್ತು ಟಿ20 ಸರಣಿಗಳು ಹಾಗೂ 2 ಪಂದ್ಯಗಳ ಟೆಸ್ಟ್‌ ಸರಣಿಯನ್ನಾಡಲಿದೆ. ಅಂದಹಾಗೆ ಈ ಪ್ರವಾಸಕ್ಕೆ ಇದೇ ಶುಕ್ರವಾರ ಭಾರತ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ. ಇದೇ ವೇಳೆ ವೆಸ್ಟ್‌ ಇಂಡೀಸ್‌ ಪ್ರವಾಸಕ್ಕೆ ಧೋನಿ ತಮ್ಮನ್ನು ಅಲಭ್ಯರನ್ನಾಗಿಸಿಕೊಂಡಿದ್ದಾರೆ.

ಇದೇ ವೇಳೆ ಸೀಮಿತ ಓವರ್‌ಗಳ ತಂಡಕ್ಕೆ ಧೋನಿ ಅವರನ್ನು ಶಾಶ್ವತ ಆಯ್ಕೆಯಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಬಿಸಿಸಿಐನ ಅಧಿಕಾರಿಯೊಬ್ಬರು ಇತ್ತೀಚೆಗೆ ಬಾಂಬ್‌ ಸಿಡಿಸಿದ್ದಾರೆ. ವೆಸ್ಟ್‌ ಇಂಡೀಸ್‌ ಪ್ರವಾಸದಿಂದ ಧೋನಿ ಹೊರಗುಳಿದಿರುವಂತೆ ಬಹುತೇಕ ಸರಣಿಗಳಿಂದ ಅವರು ಮುಂದಿನ ದಿನಗಳಲ್ಲಿ ಹೊರಗುಳಿಯಲಿದ್ದಾರೆ ಎಂದು ಮೂಲಗಳು ಹೇಳಿವೆ.

ತಮ್ಮ ವಿಶ್ವಕಪ್‌ ತಂಡದಿಂದ ಧೋನಿಯನ್ನು ಕೈಬಿಟ್ಟ ತೆಂಡೂಲ್ಕರ್‌!ತಮ್ಮ ವಿಶ್ವಕಪ್‌ ತಂಡದಿಂದ ಧೋನಿಯನ್ನು ಕೈಬಿಟ್ಟ ತೆಂಡೂಲ್ಕರ್‌!

ಇದರರ್ಥ ನಿವೃತ್ತಿ ಪ್ರಕಟಿಸದೇ ಇರುವ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಧೋನಿಗೆ ಇದೀಗ ನಿಧಾನವಾಗಿ ಟೀಮ್‌ ಇಂಡಿಯಾದ ಕದ ಮುಚ್ಚಲು ಆರಂಭವಾಗಿದೆ. ಧೋನಿ ಸ್ಥಾನದಲ್ಲಿ ಯುವ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್ ರಿಷಭ್‌ ಪಂತ್‌ ತಂಡ ಸೇರಿಕೊಳ್ಳುವಲ್ಲಿ ಆಯ್ಕೆ ಸಮಿತಿಯ ಫೇವರಿಟ್‌ ಆಗಿದ್ದಾರೆ.

"ಧೋನಿ ವೆಸ್ಟ್‌ ಇಂಡೀಸ್‌ ಪ್ರವಾಸದಲ್ಲಿ ಭಾರತ ತಂಡದೊಂದಿಗೆ ತೆರಳುವುದಿಲ್ಲ. ಇನ್ನು ತಂಡದ ಪ್ರಥಮ ಆಯ್ಕೆಯ ವಿಕೆಟ್‌ ಕೀಪರ್‌ ಆಗಿ ಅವರು ಉಳಿದಿಲ್ಲ. ಹೀಗಾಗಿ ತಂಡದೊಂದಿಗೆ ವಿದೇಶಗಳಿಗೆ ಅಲ್ಲ ದೇಶದ ಯಾವುದೇ ಭಾಗಕ್ಕೂ ಅವರು ಹೋಗುವುದಿಲ್ಲ. ರಿಷಭ್‌ ಪಂತ್‌ ಅವರ ಸ್ಥಾನ ಪಡೆಯಲಿದ್ದಾರೆ. ಆದರೆ, ಇದಕ್ಕೂ ಮುನ್ನ ಪಂತ್‌ ಅವರನ್ನು ಸಂಪೂರ್ಣವಾಗಿ ಸಜ್ಜಾಗುವಂತೆ ಮಾಡುವ ಜಚಾಬ್ದಾರಿ ಧೋನಿ ಮೇಲಿದೆ. ಪಂತ್‌ ಅವರನ್ನು ರೂಪಿಸುವ ಕಡೆಗೆ ಎಂಎಸ್‌ ಕೆಲಸ ಮಾಡಲಿದ್ದಾರೆ. ಧೋನಿ ಅವರನ್ನು 15 ಆಟಗಾರರ ತಂಡದಲ್ಲಿ ಆಯ್ಕೆ ಮಾಡಿದರೂ ಆಡುವ 11ರ ಬಳಗದಲ್ಲಿ ಅವರು ಇರುವುದಿಲ್ಲ," ಎಂದು ಬಿಸಿಸಿಐನ ಮೂಲಗಳು ತಿಳಿಸಿವೆ.

ಟೀಮ್‌ ಇಂಡಿಯಾದ ನೂತನ ಕೋಚ್‌ಗೆ ಏನೆಲ್ಲಾ ಅರ್ಹತೆ ಇರಬೇಕು ಗೊತ್ತಾ?ಟೀಮ್‌ ಇಂಡಿಯಾದ ನೂತನ ಕೋಚ್‌ಗೆ ಏನೆಲ್ಲಾ ಅರ್ಹತೆ ಇರಬೇಕು ಗೊತ್ತಾ?

ಇದರರ್ಥ ಟೀಮ್‌ ಇಂಡಿಯಾ ಜೊತೆಗಿನ ಧೋನಿ ಅವರ ಪಯಣ ಇನ್ನೇನು ಅಂತ್ಯಗೊಳ್ಳುವ ಕಡೆಗೆ ಸಾಗಿದೆ. 2014ರಲ್ಲಿ ಆಸ್ಟ್ರೇಲಿಯಾ ಪ್ರವಾಸದ ಮಧ್ಯದಲ್ಲೇ ಅಚ್ಚರಿಯ ರೀತಿಯಲ್ಲಿ ಧೋನಿ ತಮ್ಮ ಟೆಸ್ಟ್‌ ಕ್ರಿಕೆಟ್‌ ವೃತ್ತಿ ಬದುಕಿಗೆ ವಿದಾಯ ಹೇಳಿದ್ದರು. ಇದೀಗ ಏಕದಿನ ಕ್ರಿಕೆಟ್‌ಗೂ ಅದೇ ರೀತಿಯಲ್ಲಿ ವಿದಾಯ ಹೇಳಿದರೆ ಅಚ್ಚರಿಯೇನಲ್ಲ. ಇನ್ನು ಮುಂದಿನ ವರ್ಷ ಟಿ20 ವಿಶ್ವಕಪ್‌ ಟೂರ್ನಿ ನಡೆಯಲಿದ್ದು, ಅಲ್ಲಿಯವರೆಗೂ ಭಾರತ ತಂಡದಲ್ಲೇ ಧೋನಿ ಉಳಿಯಲಿ ಎಂಬುದು ಅಭಿಮಾನಿಗಳ ನಿರೀಕ್ಷೆಯಾಗಿದೆ.

 ಮಂದಗತಿಯ ಬ್ಯಾಟಿಂಗ್‌ಗಾಗಿ ಟೀಕೆ

ಮಂದಗತಿಯ ಬ್ಯಾಟಿಂಗ್‌ಗಾಗಿ ಟೀಕೆ

ಐಪಿಎಲ್‌ನಲ್ಲಿ ಸ್ಫೋಟಕ ಬ್ಯಾಟಿಂಗ್‌ ಮೂಲಕ ಅಬ್ಬರಿಸಿದ್ದ ಎಂ.ಎಸ್‌ ಧೋನಿ, ವಿಶ್ವಕಪ್‌ ಟೂರ್ನಿಯ ಅಭ್ಯಾಸ ಪಂದ್ಯದಲ್ಲೂ ಶತಕ ಸಿಡಿಸಿದ್ದರು. ಆದರೆ, ಟೂರ್ನಿ ಶುರುವಾದ ಬಳಿಕ ಒತ್ತಡ ಅವರನ್ನು ಆವರಿಸಿದಂತೆ ಕಂಡು ಮಂದಗತಿಯ ಬ್ಯಾಟಿಂಗ್‌ಗೆ ಮುಂದಾದರು. ಪ್ರಮುಖವಾಗಿ ಇಂಗ್ಲೆಂಡ್‌ ಮತ್ತು ಅಫಘಾನಿಸ್ತಾನ ವಿರುದ್ಧದ ಲೀಗ್‌ ಪಂದ್ಯಗಳಲ್ಲಿ ಧೋನಿ ಅವರ ಆಮೆಗತಿಯ ಬ್ಯಾಟಿಂಗ್‌ಗೆ ವ್ಯಾಪಕ ಟೀಕೆ ಮೂಡಿಬಂದಿದ್ದವು. ಇನ್ನು ವಿಕೆಟ್‌ ಕೀಪಿಂಗ್‌ ವಿಚಾರದಲ್ಲಿ ಧೋನಿ ಕಡೆಗೆ ಬೊಟ್ಟು ಮಾಡಲು ಸಾಧ್ಯವಿಲ್ಲ ಎಂಬಂತಾದರೂ, ಅವರ ಕಳೆಗುಂದಿದ ಬ್ಯಾಟಿಂಗ್‌ ಕಾರಣದಿಂದ ಮಾತ್ರ ಅವರನ್ನು ತಂಡದಿಂದ ಹೊರಗಿಡಲು ಸಾಧ್ಯ. ಒಟ್ಟಾರೆ ವೆಸ್ಟ್‌ ಇಂಡೀಸ್‌ ಪ್ರವಾಸಕ್ಕೆ ಧೋನಿ ಭಾರತ ತಂಡಕ್ಕೆ ಆಯ್ಕೆಯಾಗುತ್ತಾರೆಯೇ? ಆಯ್ಕೆಯಾದರೂ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯುವರೇ? ಎಂಬ ಹಲವು ಪ್ರಶ್ನೆಗಳು ಕ್ರಿಕೆಟ್‌ ಪ್ರಿಯರನ್ನು ಕಾಡಲಾರಂಭಿಸಿದೆ.

ಟೆಸ್ಟ್‌ನಲ್ಲಿ ಧೋನಿ ಸಾಧನೆ

ಟೆಸ್ಟ್‌ನಲ್ಲಿ ಧೋನಿ ಸಾಧನೆ

90 ಪಂದ್ಯ
4876 ರನ್‌
224 ಗರಿಷ್ಠ
38.09 ಸರಾಸರಿ
59.11 ಸ್ಟ್ರೈಕ್‌ರೇಟ್‌
06 ಶತಕ
33 ಅರ್ಧಶತಕ
256 ಕ್ಯಾಚ್‌ಗಳು
38 ಸ್ಟಂಪಿಂಗ್ಸ್‌

 ಒಡಿಐನಲ್ಲಿ ಧೋನಿ ಸಾಧನೆ

ಒಡಿಐನಲ್ಲಿ ಧೋನಿ ಸಾಧನೆ

350 ಪಂದ್ಯ
10773 ರನ್‌
183* ಗರಿಷ್ಠ
50.57 ಸರಾಸರಿ
87.56 ಸ್ಟ್ರೈಕ್‌ರೇಟ್‌
10 ಶತಕ
73 ಅರ್ಧಶತಕ
321 ಕ್ಯಾಚ್‌ಗಳು
123 ಸ್ಟಂಪಿಂಗ್ಸ್‌

 ಟಿ20-ಐನಲ್ಲಿ ಧೋನಿ ಸಾಧನೆ

ಟಿ20-ಐನಲ್ಲಿ ಧೋನಿ ಸಾಧನೆ

98 ಪಂದ್ಯ
1617 ರನ್‌
56 ಗರಿಷ್ಠ
37.60 ಸರಾಸರಿ
126.13 ಸ್ಟ್ರೈಕ್‌ರೇಟ್‌
00 ಶತಕ
02 ಅರ್ಧಶತಕ
57 ಕ್ಯಾಚ್‌ಗಳು
34 ಸ್ಟಂಪಿಂಗ್ಸ್‌

Story first published: Wednesday, July 17, 2019, 16:36 [IST]
Other articles published on Jul 17, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X