ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಧೋನಿಯಿಂದಾಗಿ ನಾನು ಬಾಲ್ಯದ ಕೋಚನ್ನು ಮಿಸ್‌ ಮಾಡಿಕೊಂಡಿಲ್ಲ: ಕುಲ್‌ದೀಪ್ ಯಾದವ್

Didn’t Miss My Childhood Coach Because Of Ms Dhoni: Kuldeep Yadav

ಟೀಮ್ ಇಂಡಿಯಾ ಸ್ಪಿನ್ನರ್ ಕುಲ್‌ದೀಪ್ ಯಾದವ್ ತಮ್ಮ ಬೌಲಿಂಗ್‌ಗೆ ಟೀಮ್ ಇಂಡಿಯಾ ಮಾಜಿ ನಾಯಕ ಧೋನಿ ಯಾವ ರೀತಿ ಸಹಕಾರಿಯಾದರು ಎಂದು ಹೇಳಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉತ್ತಮ ಬೌಲರ್ ಎನಿಸಿಕೊಳ್ಳಲು ಧೋನಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಕುಲ್‌ದೀಪ್ ಯಾದವ್ ಹೇಳಿದ್ದಾರೆ.

ಧೋನಿಯಿಂದಾಗಿ ನಾನು ನನ್ನ ಬಾಲ್ಯದ ಕೋಚ್‌ಅನ್ನು ಹೆಚ್ಚಾಗಿ ಮಿಸ್ ಮಾಡಿಕೊಳ್ಳುತ್ತಿಲ್ಲ, ಅದಕ್ಕೆ ಕಾರಣ ಧೋನಿ ಎಂದಿದ್ದಾರೆ ಕುಲ್‌ದೀಪ್. ಧೋನಿ ಮತ್ತು ನನ್ನ ಬಾಲ್ಯದ ಕೋಚ್ ಇಬ್ಬರ ತತ್ವಗಳೂ ಬಹುತೇಕ ಒಂದೇ ಆಗಿದೆ ಎಂದು ಅದಕ್ಕೆ ಕಾರಣವನ್ನು ನೀಡಿದ್ದಾರೆ.

ಆಸಿಸ್ ಸರಣಿಯಲ್ಲಿ ಸವಾಲೆನಿಸಲಿರುವ ಸಂಗತಿಗಳನ್ನು ಹೇಳಿದ ರೋಹಿತ್ ಶರ್ಮಾಆಸಿಸ್ ಸರಣಿಯಲ್ಲಿ ಸವಾಲೆನಿಸಲಿರುವ ಸಂಗತಿಗಳನ್ನು ಹೇಳಿದ ರೋಹಿತ್ ಶರ್ಮಾ

ಈ ಬಗ್ಗೆ ಕೇವಲ ಒಂದು ನಿದರ್ಶನವನ್ನು ಮಾತ್ರವೇ ಹೇಳಲು ಸಾಧ್ಯವಿಲ್ಲ. ಇಂತವು ಅನೇಕ ಇದೆ, ಎಂದು ವಿಕೆಟ್ ಕೀಪಿಂಗ್‌ನ ಹಿಂದೆ ಧೋನಿ ನೀಡುವ ಸಲಹೆಯ ಬಗ್ಗೆ ಕೇಳಿದಾಗ ಕುಲ್‌ದೀಪ್ ಹೇಳಿದ್ದಾರೆ. ಅವರು ಯಾವಾಗಲು ಬಾಲ್ ತಗ್ಗಿನಿಂದ ಹೋಗುವಂತೆ ಮಾಡದೆ ಸ್ಪಿನ್‌ ಮಾಡು ಎಂದು ಸಲಹೆಯನ್ನು ನೀಡುತ್ತಿರುತ್ತಾರೆ. ನನ್ನ ಕೋಚ್ ಕೂಡ ಇದೇ ಮಾತು ಹೇಳುತ್ತಿದ್ದರು ಎಂದಿದ್ದಾರೆ.

ಧೋನಿ ನೀಡುವ ಈ ಸಲಹೆಗಳಿಂದ ನಾನು ನನ್ನ ಬಾಲ್ಯದ ಕೋಚನ್ನು ಹೆಚ್ಚಾಗಿ ಮಿಸ್ ಮಾಡಿಕೊಳ್ಳುತ್ತಿಲ್ಲ ಎಂದಿದ್ದಾರೆ ಕುಲ್ದೀಪ್ ಯಾದವ್. ಇದೇ ಸಂದರ್ಭದಲ್ಲಿ ಕುತೂಹಲಕಾರಿ ಪ್ರಶ್ನೆಯೊಂದನ್ನು ಕುಲ್‌ದೀಪ್‌ ಯಾದವ್‌ಗೆ ಕೇಳಲಾಯಿತು. ಸೂಪರ್ ಓವರ್‌ನಲ್ಲಿ ಯಾವ ಆಟಗಾರನಿಗೆ ಬೌಲಿಂಗ್ ಮಾಡಲು ಇಚ್ಛಿಸುವುದಿಲ್ಲ ಎಂದು ಕೇಳಿದಾಗ ಅಚ್ಚರಿಯ ಹೆಸರನ್ನು ತೆಗೆದುಕೊಂಡರು ಕುಲ್‌ದೀಪ್ ಯಾದವ್

ಬರ್ತ್‌ಡೇ ಬಾಯ್ ತೆಂಡೂಲ್ಕರ್ ಶತಕ ಬಾರಿಸಿ ಭಾರತ ಗೆಲ್ಲಿಸಿದ್ದ ದಿನವಿದು

ನಾನು ತೆಗೆದುಕೊಳ್ಳುವ ಒಂದು ಹೆಸರು ಸೂರ್ಯಕುಮಾರ್ ಯಾದವ್ ಆಗಿರುತ್ತದೆ, ಯಾಕೆಂದರೆ ಆತ ಸ್ಪಿನ್ ಬೌಲಿಂಗ್‌ಗೆ ಅತ್ಯುತ್ತಮವಾಗಿ ಆಡುತ್ತಾರೆ ನನ್ನ ಬೌಲಿಂಗ್‌ಅನ್ನು ಸೂರ್ಯಕುಮಾರ್ ಪರಿಣಾಮಕಾರಿಯಾಗಿ ಎದುರಿಸುತ್ತಾರೆ ಎಂದರು. ಜೊತೆಗೆ ರೋಹಿತ್ ಶರ್ಮಾ ಮತ್ತು ಶ್ರೇಯಸ್ ಅಯ್ಯರ್ ಕೂಡ ಸ್ಪಿನ್ ಬೌಲಿಂಗ್‌ನಲ್ಲಿ ಅದ್ಭುತವಾಗಿ ಆಡುತ್ತಾರೆ ಎಂದು ಕುಲ್‌ದೀಪ್ ಯಾದವ್ ಹೇಳಿದರು.

Story first published: Friday, April 24, 2020, 21:58 [IST]
Other articles published on Apr 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X