ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಫಿಕ್ಸಿಂಗ್ ಪ್ರಕರಣದಲ್ಲಿ ಶ್ರೀಲಂಕಾದ ದಿಲ್ಹರ ಲೋಕುಹೆಟ್ಟಿಗೆ ತಪ್ಪಿತಸ್ಥ ಎಂದು ಸಾಬೀತು

Dilhara Lokuhettige found guilty under ICC Anti-Corruption Code

ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ಆಲ್‌ರೌಂಡರ್ ದಿಹ್ಲರ ಲೋಕುಹೆಟ್ಟಿಗೆ ಐಸಿಸಿ ಭ್ರಷ್ಟಾಚಾರ ನಿಗ್ರಹ ಸಂಹಿತೆಯಡಿ ತಪ್ಪಿತಸ್ಥರೆಂದು ಸಾಬೀತಾಗಿದೆ. ತನಿಖೆಯನ್ನು ಕೈಗೊತ್ತಿಕೊಂಡಿದ್ದ ಐಸಿಸಿ ಸ್ವತಂತ್ರ ಭ್ರಷ್ಟಾಚಾರ ವಿರೋಧಿ ನ್ಯಾಯಮಂಡಳಿ ಲೋಕುಹೆಟ್ಟಿಗೆ ಅವರು ತಪ್ಪಿತಸ್ಥರೆಂದು ಸಾಬೀತುಪಡಿಸಿದೆ. ಮ್ಯಾಚ್‌ಫಿಕ್ಸಿಂಗ್‌ಗೆ ಸಂಬಂಧಿಸಿದಂತೆ ಮೂರು ಪ್ರಕರಣಗಳು ದಿಹ್ಲರ ಲೋಕುಹೆಟ್ಟಿಗೆ ವಿರುದ್ಧ ದಾಖಲಾಗಿತ್ತು.

2017 ರಲ್ಲಿ ಯುಎಇಯಲ್ಲಿ ನಡೆದ ಟಿ 20 ಪಂದ್ಯಾವಳಿಯಲ್ಲಿ ಶ್ರೀಲಂಕಾ ತಂಡ ಭಾಗವಿಸಿತ್ತು. ಈ ಪಂದ್ಯದಲ್ಲಿ ಲೋಕುಹೆಟ್ಟಿಗೆ ಮ್ಯಾಚ್ ಫಿಕ್ಸಿಂಗ್‌ನಲ್ಲಿ ಪಾಲ್ಗೊಂಡಿದ್ದರು ಎಂಬ ಆರೋಪದಲ್ಲಿ ಕೇಳಿಬಂದಿತ್ತು. ಹೀಗಾಗಿ 2019 ರ ನವೆಂಬರ್‌ನಲ್ಲಿ ಐಸಿಸಿ ಭ್ರಷ್ಟಾಚಾರ ನಿಗ್ರಹ ಸಂಹಿತೆಯಡಿ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಂಡಿತ್ತು.

ಸ್ಟೇಡಿಯಂ ಒಳಗೆ ಅಭಿಮಾನಿಗಳಿಗೆ ಪ್ರವೇಶ ನೀಡಲು ಬಿಸಿಸಿಐ ಸಿದ್ಧತೆಸ್ಟೇಡಿಯಂ ಒಳಗೆ ಅಭಿಮಾನಿಗಳಿಗೆ ಪ್ರವೇಶ ನೀಡಲು ಬಿಸಿಸಿಐ ಸಿದ್ಧತೆ

ಶ್ರೀಲಂಕಾ ತಂಡದ ಪರವಾಗಿ ದಿಲ್ಹರ ಲೋಕುಹೆಟ್ಟಿಗೆ ಒಂಬತ್ತು ಏಕದಿನ ಮತ್ತು ಎರಡು ಟಿ 20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಲೋಕುಹೆಟ್ಟಿಗೆ ಆರೋಪದ ಹಿನ್ನೆಲೆಯಲ್ಲಿ ಐಸಿಸಿಯ ಸ್ವತಂತ್ರ ಭ್ರಷ್ಟಾಚಾರ ನಿಗ್ರಹ ನ್ಯಾಯಮಂಡಳಿಯ ಮುಂದೆ ವಿಚಾರಣೆಗೆ ಒಳಗಾದರು. ಇದರಲ್ಲಿ ಶ್ರೀಲಂಕಾ ತಂಡದ ಮಾಜಿ ಆಲ್‌ರೌಂಡರ್ ತಪ್ಪಿತಸ್ಥ ಎಂದು ಸಾಬೀತಾಯಿತು.

"ಐಸಿಸಿ ನಿಯೋಜಿಸಿದ ಮೂವರು ಸದಸ್ಯರ ನ್ಯಾಯಮಂಡಳಿ ಸರ್ವಾನುಮತದಿಂದ ಲೋಕುಕೆಟ್ಟಿಗೆ ವಿರುದ್ಧದ ಪ್ರಕರಣವನ್ನು ನಿರ್ಧರಿಸಲು ಅರ್ಹತೆಯಿದೆ ಎಂದು ತೀರ್ಮಾನಿಸಿದೆ" ಎಂದು ಐಸಿಸಿ ಪ್ರಕಟಣೆಯನ್ನು ಮಾಹಿತಿಯನ್ನು ನೀಡಿದೆ.

ಐಪಿಎಲ್ 2021: ಮಿನಿ ಹರಾಜಿನಲ್ಲಿ ದೊಡ್ಡ ಮೊತ್ತ ಪಡೆಯಲಿದ್ದಾರೆ ಈ 5 ಆಟಗಾರರುಐಪಿಎಲ್ 2021: ಮಿನಿ ಹರಾಜಿನಲ್ಲಿ ದೊಡ್ಡ ಮೊತ್ತ ಪಡೆಯಲಿದ್ದಾರೆ ಈ 5 ಆಟಗಾರರು

ಐಸಿಸಿ ನೀತಿ ಸಂಹಿತೆ 2.1.1 ಪಂದ್ಯದ ಫಿಕ್ಸಿಂಗ್‌ಗೆ ಒಪ್ಪಂದ ಅಥವಾ ಪ್ರಯತ್ನ ಅಥವಾ ಫಲಿತಾಂಶದ ಮೇಲೆ ಪ್ರಭಾವ ಅಥವಾ ಅದಕ್ಕಾಗಿ ಯೋಜನೆ ಹಾಗೂ ಪಂದ್ಯದ ಇತಿರೆ ಸಂಗತಿಗಳ ಮೇಲೆ ಪ್ರಭಾವ, 2.1.4 ರ ಅಡಿಯಲ್ಲಿ "ನೇರವಾಗಿ ಅಥವಾ ಪರೋಕ್ಷವಾಗಿ ವಿನಂತಿಸುವುದು, ಪ್ರೇರೇಪಿಸುವುದು, ಸೂಚನೆ ನೀಡುವುದು, ಮನವೊಲಿಸುವುದು, ಪ್ರೋತ್ಸಾಹಿಸುವುದು ಅಥವಾ ಉದ್ದೇಶಪೂರ್ವಕವಾಗಿ ಯಾವುದೇ ಭಾಗವಹಿಸುವವರಿಗೆ ಕೋಡ್ ಉಲ್ಲಂಘಿಸಲು ಅನುಕೂಲ ಮಾಡಿಕೊಡುವುದು ಮತ್ತು 2.4.4ರ ಅಡಿಯಲ್ಲಿ ಭ್ರಷ್ಟ ನಡವಳಿಕೆಯಲ್ಲಿ ತೊಡಗಿಸಿಕೊಳ್ಳಲು ಆಹ್ವಾನಿಸಿದ ಅಥವಾ ಆಹ್ವಾನ ಸ್ವೀಕರಿಸಿದ ವಿಧಾನಗಳು ಅಥವಾ ಆಹ್ವಾನಗಳ ಸಂಪೂರ್ಣ ವಿವರಗಳನ್ನು ಐಸಿಸಿ ಭ್ರಷ್ಟಾಚಾರ ನಿಗ್ರಹದಳಕ್ಕೆ ವಿಫಲವಾಗಿರುವ" ಪ್ರಕರಣಗಳು ಲೋಕುಹೆಟ್ಟಿಗೆಗೆ ಸಂಕಷ್ಟವನ್ನು ತಂದೊಡ್ಡಿದೆ

Story first published: Friday, January 29, 2021, 9:23 [IST]
Other articles published on Jan 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X