ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ತಂಡದ ನಾಯಕತ್ವಕ್ಕೆ ರೋಹಿತ್ ಅತ್ಯಂತ ಅರ್ಹ ಆಟಗಾರ: ವೆಂಗ್‌ಸರ್ಕಾರ್

Dilip Vengsarkar picks Rohit Sharma name to replace Virat Kohli as India’s T20I skipper

ಟಿ20 ವಿಶ್ವಕಪ್‌ನ ಬಳಿಕ ಟಿ20 ಮಾದರಿಯ ನಾಯಕತ್ವಕ್ಕೆ ವಿರಾಟ್ ಕೊಹ್ಲಿ ವಿದಾಯ ಹೇಳುವ ನಿರ್ಧಾರವನ್ನು ಗುರುವಾರ ಪ್ರಕಟಿಸಿದ್ದಾರೆ. ಹೀಗಾಗಿ ಟೀಮ್ ಇಂಡಿಯಾದ ಟಿ20 ತಂಡಕ್ಕೆ ಮುಮದಿನ ನಾಯಕ ಯಾರು ಎಂಬ ಪ್ರಶ್ನೆ ಈಗ ಕುತೂಹಲ ಮೂಡಿಸಿದೆ. ಆದರೆ ಇದರಲ್ಲಿ ತಕ್ಷಣ ಆಯ್ಕೆಯಾಗಿ ರೋಹಿತ್ ಶರ್ಮಾ ಹೆಸರು ಕೇಳಿ ಬರುತ್ತಿದ್ದು ನಾಯಕನಾಗಿ ರೋಹಿತ್ ಸಾಧಿಸಿದ ದಾಖಲೆಗಳು ಕೂಡ ಅದಕ್ಕೆ ಪೂರಕವಾಗಿದೆ. ಆದರೆ ಬಿಸಿಸಿಐ ತೆಗೆದುಕೊಳ್ಳುವ ನಿರ್ಧಾರ ಸಾಕಷ್ಟು ಕುತೂಹಲ ಮೂಡಿಸಿದೆ.

ಈ ಮಧ್ಯೆ ರೋಹಿತ್ ಶರ್ಮಾನೇ ತಂಡದ ನಾಯಕನಾಗಲಿ ಎಂಬ ಬಗ್ಗೆ ಸಾಕಷ್ಟು ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಮಾಜಿ ಕ್ರಿಕೆಟಿಗ ಹಾಗೂ ಆಯ್ಕೆ ಸಮಿತಿಯ ಮಾಜಿ ಮುಖ್ಯಸ್ಥ ದಿಲೀಪ್ ವೆಂಗ್ ಸರ್ಕಾರಗ್ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು ಟೀಮ್ ಇಂಡಿಯಾದ ಟಿ20 ನಾಯಕತ್ವಕ್ಕೆ ರೋಹಿತ್ ಶರ್ಮಾ ಅತ್ಯಂತ ಅರ್ಹ ಆಟಗಾರ ಎಂದಿದ್ದಾರೆ.

ಟಿ20 ವಿಶ್ವಕಪ್‌ ಸೋತ್ರೆ ಏಕದಿನ ನಾಯಕತ್ವವೂ ತ್ಯಜಿಸುತ್ತಾರಾ ವಿರಾಟ್ ಕೊಹ್ಲಿ!?ಟಿ20 ವಿಶ್ವಕಪ್‌ ಸೋತ್ರೆ ಏಕದಿನ ನಾಯಕತ್ವವೂ ತ್ಯಜಿಸುತ್ತಾರಾ ವಿರಾಟ್ ಕೊಹ್ಲಿ!?

ಟೈಮ್ಸ್ ಆಫ್ ಇಂಡಿಯಾಗೆ ಪ್ರತಿಕ್ರಿಯಿಸಿರುವ ದಿಲೀಪ್ ವೆಂಗ್ ಸರ್ಕಾರ್ "ರೋಹಿತ್ ಶರ್ಮಾ ಭಾರತದ ಮುಂದಿನ ಟಿ20 ತಮಡದ ನಾಯಕನಾಗಲು ಅತ್ಯಂತ ಅರ್ಹ ಆಟಗಾರನಾಗಿದ್ದಾರೆ. ಯಾಕೆಂದರೆಅವರಿಗೆ ಅವಕಾಶ ಸಿಕ್ಕಾಗಲೆಲ್ಲಾ ಅವರು ಅತ್ಯುತ್ತಮವಾಗಿ ತಮ್ಮ ಜವಾಬ್ಧಾರಿಯನ್ನು ನಿರ್ವಹಿಸಿದ್ದಾರೆ. 2018 ರಲ್ಲಿ ಭಾರತವು ಅವರ ನಾಯಕತ್ವದಲ್ಲಿ ಏಷ್ಯಾ ಕಪ್ ಗೆದ್ದಿತು. ಅದಲ್ಲದೆ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ಅವರ ಸಾಧನೆ ಅಮೋಘವಾಗಿದೆ" ಎಂದಿದ್ದಾರೆ ದಿಲೀಪ್ ವೆಂಗ್‌ಸರ್ಕಾರ್.

ಯಾರಾಗ್ತಾರೆ ಟೀಮ್ ಇಂಡಿಯಾ ಮುಂದಿನ ಉಪ ನಾಯಕ?; ರೇಸ್‌ನಲ್ಲಿದ್ದಾರೆ ಈ ಮೂವರು ಆಟಗಾರರುಯಾರಾಗ್ತಾರೆ ಟೀಮ್ ಇಂಡಿಯಾ ಮುಂದಿನ ಉಪ ನಾಯಕ?; ರೇಸ್‌ನಲ್ಲಿದ್ದಾರೆ ಈ ಮೂವರು ಆಟಗಾರರು

ವಿರಾಟ್ ಕೊಹ್ಲಿ 2017ರಲ್ಲಿ ಎಂಎಸ್ ಧೋನಿ ನಾಯಕತ್ವ ತ್ಯಜಿಸಿದ ಬಳಿಕ ವೈಟ್ ಬಾಲ್ ಕ್ರಿಕೆಟ್‌ನ ನಾಯಕತ್ವದ ಜವಾಬ್ಧಾರಿ ವಹಿಸಿಕೊಂಡರು. ಇದುವರೆಗೆ ಅವರು ಟೀಮ್ ಇಂಡಿಯಾವನ್ನು 45 ಟಿ20 ಪಂದ್ಯಗಳಲ್ಲಿ ಮುನ್ನಡೆಸಿದ್ದು ಅದರಲ್ಲಿ ಅವರು 27 ಪಂದ್ಯಗಳನ್ನು ಗೆದ್ದಿದ್ದಾರೆ ಮತ್ತು 14 ಪಂದ್ಯಗಳನ್ನು ಸೋತಿದ್ದಾರೆ.ಈ ಮೂಲಕ 65.11 ಶೇಕಡಾದಷ್ಟು ಗೆಲುವಿನ ಶೇಕಡಾವನ್ನು ಹೊಂದಿದ್ದಾರೆ. ಮತ್ತೊಂದೆಡೆ ತೋಹಿತ್ ಶರ್ಮಾ 19 ಪಂದ್ಯಗಳಲ್ಲಿ ಮುನ್ನಡೆಸಿದ್ದು ಇದರಲ್ಲಿ 15 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ. ರೋಹಿತ್ ಶರ್ಮಾ 78.94 ಶೇಕಡಾ ಪಂದ್ಯಗಳಲ್ಲಿ ಗೆಲುವು ಸಾಧಿಸಿ ಮಿಂಚಿದ್ದಾರೆ.

ಐಪಿಎಲ್‌ನಲ್ಲಿ ಫ್ಲಾಪ್ ಆದ 3 ಅಂತಾರಾಷ್ಟ್ರೀಯ ತಂಡದ ನಾಯಕರು ಇವರು!ಐಪಿಎಲ್‌ನಲ್ಲಿ ಫ್ಲಾಪ್ ಆದ 3 ಅಂತಾರಾಷ್ಟ್ರೀಯ ತಂಡದ ನಾಯಕರು ಇವರು!

ಮತ್ತೊಂದು ಗಮನಾರ್ಹ ಸಂಗತಿಯೆಂದರೆ ರೋಹಿತ್ ಆರ್ಮಾ ಐಪಿಎಲ್‌ನಲ್ಲಿಯೂ ಅತ್ಯಂತ ಯಶಸ್ವಿ ನಾಯಕ ಎನಿಸಿದ್ದಾರೆ. ಮುಂಬೈ ಇಂಡಿಯನ್ಸ್ ನಾಯಕನಾಗಿ 5 ಬಾರಿ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ ರೋಹಿತ್ ಶರ್ಮಾ. ಮತ್ತೊಂದೆಡೆ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನಾಗಿ ಈವರೆಗೂ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿದ್ದಾರೆ.

ಇನ್ನು ಟೀಮ್ ಇಂಡಿಯಾ ನಾಯಕನಾಗಿ ಸಿಕ್ಕ ಅವಕಾಶದಲ್ಲಿ ಮಿಂಚಿರುವ ರೋಹಿತ್ ಶರ್ಮಾ ಬ್ಯಾಟಿಂಗ್‌ನಲ್ಲಿಯೂ ಅಮೋಘ ಪ್ರದರ್ಶನ ನೀಡಿರುವುದನ್ನು ಗಮನಿಸಬಹುದು. ವಿಶೇಷವೆಂದರೆ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಒಟ್ಟು 4 ಶತಕವನ್ನು ಸಿಡಿಸಿದ ದಾಖಲೆ ಹೊಂದಿದ್ದು ಇದರಲ್ಲಿ 2 ಶತಕಗಳು ನಾಯಕನಾಗಿಯೇ ಬಂದಿದೆ. ರೋಹಿತ್ ಶರ್ಮಾ ನಾಯಕನಾಗಿ ಮುನ್ನಡೆಸಿದ 19 ಪಂದ್ಯಗಳಲ್ಲಿ 2 ಶತಕ ಸೇರಿದಂತೆ ಒಟ್ಟು 7 ಬಾರಿ 50ಕ್ಕೂ ಅಧಿಕ ರನ್‌ಗಳಿಸಿದ್ದಾರೆ. ಈ ಮೂಲಕ ನಾಯಕನಾಗಿ ಬ್ಯಾಟಿಂಗ್‌ನಲ್ಲಿಯೂ ರೋಹಿತ್ ದಾಖಲೆ ಅತ್ಯುತ್ತಮವಾಗಿದೆ.

ಟಿ20 ನಾಯಕತ್ವಕ್ಕೆ ವಿರಾಟ್ ವಿದಾಯ: ರೋಹಿತ್ ಹೊರತು ಬೇರೆ ಆಯ್ಕೆ ಇಲ್ಲ ಎನ್ನುತ್ತಿವೆ ಈ ಅಂಕಿಅಂಶಗಳುಟಿ20 ನಾಯಕತ್ವಕ್ಕೆ ವಿರಾಟ್ ವಿದಾಯ: ರೋಹಿತ್ ಹೊರತು ಬೇರೆ ಆಯ್ಕೆ ಇಲ್ಲ ಎನ್ನುತ್ತಿವೆ ಈ ಅಂಕಿಅಂಶಗಳು

IPL ನಲ್ಲಿ 100 ಕೋಟಿ ಕ್ಲಬ್ ಸೇರಿ ಶೈನ್ ಆದ ಆಟಗಾರರು ಇವರೇ ನೋಡಿ | Oneindia Kannada

ಇನ್ನು ರೋಹಿತ್ ಶರ್ಮಾ ಎಂಥಾ ಅದ್ಭುತ ನಾಯಕ ಎನ್ನಲು ಐಪಿಎಲ್‌ನಲ್ಲಿ ನಾಯಕನಾಗಿ ಹೊಂದಿರುವ ದಾಖಲೆಗಳೆ ಸಾಕ್ಷಿ ಹೇಳುತ್ತವೆ. ಮುಂಬೈ ಇಂಡಿಯನ್ಸ್ ತಂಡ ರೋಹಿತ್ ಶರ್ಮಾ ನಾಯಕತ್ವದಲ್ಲಿ ದಾಖಲೆಯ ಐದು ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಐಪಿಎಲ್‌ನಲ್ಲಿ ರೋಹಿತ್ ಶರ್ಮಾ 123 ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ್ದಾರೆ. ಇದರಲ್ಲಿ 72 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು 47 ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ. 4 ಪಂದ್ಯಗಳು ಟೈ ಫಲಿತಾಂಶ ಪಡೆದುಕೊಂಡಿದೆ. ಚುಟುಕು ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಸಾಧಿಸುತ್ತಾ ಸಾಗಿದ ಈ ಅದ್ಭುತ ಪ್ರದರ್ಶನಗಳ ಕಾರಣದಿಂದಾಗಿಯೇ ರೋಹಿತ್ ಶರ್ಮಾಗೆ ಭಾರತೀಯ ಟಿ20 ಕ್ರಿಕೆಟ್ ತಂಡದ ನಾಯಕತ್ವ ನೀಡಬೇಕು ಎಂಬ ಕೂಗು ಕಳೆದ ಎರಡು ವರ್ಷಗಳಿಂದ ಕೇಳಿ ಬರುತ್ತಲೇ ಇತ್ತು. ಅದರಲ್ಲೂ ಕಳೆದ ಬಾರಿಯ ಐಪಿಎಲ್‌ನಲ್ಲಿ ಐದನೇ ಬಾರಿಗೆ ಟ್ರೋಫಿ ಎತ್ತಿ ಹಿಡಿದ ಬಳಿಕ ವಿರಾಟ್ ಟಿ20 ನಾಯಕತ್ವದಿಂದ ಕೆಳಗಿಳಿಯಲೇ ಬೇಕು ಎಂಬ ಕೂಗು ಜೋರಾಗಿತ್ತು.

Story first published: Saturday, September 18, 2021, 0:04 [IST]
Other articles published on Sep 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X