ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ ತಂಡದ ಭವಿಷ್ಯದ ನಾಯಕ ನಿಶ್ಚಿತವಾಗಿಯೂ ಈತನೇ ಎಂದ ದಿಲೀಪ್ ವೆಂಗ್‌ಸರ್ಕಾರ್

Dilip Vengsarkar said Hardik Pandya is definite option for India white-ball captaincy in future

ಐರ್ಲೆಂಡ್ ವಿರುದ್ಧ ಭಾರತ ಟಿ20 ಸರಣಿಯನ್ನಾಡುತ್ತಿದ್ದು ಈ ಮೂಲಕ ಹಾರ್ದಿಕ್ ಪಾಂಡ್ಯ ಭಾರತೀಯ ತಂಡವನ್ನು ಮೊದಲ ಬಾರಿಗೆ ನಾಯಕನಾಗಿ ಮುನ್ನಡೆಸುತ್ತಿದ್ದಾರೆ. ಬಹುತೇಕ ಯುವ ಆಟಗಾರರನ್ನು ಒಳಗೊಂಡಿರುವ ಭಾರತ ತಂಡದ ಐರ್ಲೆಂಡ್ ಪಡೆಯ ವಿರುದ್ಧ ಅಗ್ನಿ ಪರೀಕ್ಷೆಗೆ ಇಳಿದಿದೆ. ಭುವನೇಶ್ವರ್ ಕುಮಾರ್ ಭಾರತ ತಂಡಕ್ಕೆ ಉಪನಾಯಕನಾಗಿ ಪಾಂಡ್ಯಗೆ ಬೆಂಬಲವಾಗಿರಲಿದ್ದಾರೆ.

ಈ ಸರಣಿಯ ಆರಂಭಕ್ಕೂ ಮುನ್ನ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಮಾಜಿ ಮುಖ್ಯ ಆಯ್ಕೆಗಾರ ದಿಲೀಪ್ ವೆಂಗ್‌ಸರ್ಕಾರ್ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಭಾರತ ಕ್ರಿಕೆಟ್ ತಂಡದ ಭವಿಷ್ಯದ ನಾಯಕ ಯಾರು ಎಂಬ ಬಗ್ಗೆ ಪ್ರತಿಕ್ರಿಯಸಿದ್ದಾರೆ. ಯುವ ಆಟಗಾರರ ಪೈಕಿ ಈ ಓರ್ವ ಆಟಗಾರ ಭಾರತ ತಂಡದ ಭವಿಷ್ಯದ ನಾಯಕನಾಗುವುದು ನಿಶ್ಚಿತ ಎಂದಿದ್ದಾರೆ ವೆಂಗ್‌ಸರ್ಕಾರ್.

IND vs IRE: ಮೊದಲ ಟಿ20 ಪಂದ್ಯಕ್ಕೂ ಮುನ್ನ ವಿಶ್ವಕಪ್ ಬಗ್ಗೆ ಹಾರ್ದಿಕ್ ಪಾಂಡ್ಯ ಮಹತ್ವದ ಹೇಳಿಕೆIND vs IRE: ಮೊದಲ ಟಿ20 ಪಂದ್ಯಕ್ಕೂ ಮುನ್ನ ವಿಶ್ವಕಪ್ ಬಗ್ಗೆ ಹಾರ್ದಿಕ್ ಪಾಂಡ್ಯ ಮಹತ್ವದ ಹೇಳಿಕೆ

ಅದ್ಭುತ ಕಮ್‌ಬ್ಯಾಕ್ ಎಂದು ಮೆಚ್ಚಿದ ವೆಂಗ್‌ಸರ್ಕಾರ್

ಅದ್ಭುತ ಕಮ್‌ಬ್ಯಾಕ್ ಎಂದು ಮೆಚ್ಚಿದ ವೆಂಗ್‌ಸರ್ಕಾರ್

ಹಾರ್ದಿಕ್ ಪಾಂಡ್ಯ ಅವರದ್ದು ಅದ್ಭುತ ಕಮ್‌ಬ್ಯಾಕ್ ಎಂದು ದಿಲೀಪ್ ವೆಂಗ್‌ಸರ್ಕಾರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. "ಈ ರೀತಿಯ ಕಮ್‌ಬ್ಯಾಕ್‌ಗಾಗಿ ಅವರು ಸಾಕಷ್ಟು ಪರಿಶ್ರಮವನ್ನು ಪಟ್ಟಿರಬೇಕಾಗುತ್ತದೆ. ಫಿಟ್‌ನೆಸ್ ಮರಳಿಗಳಿಸಲು ಸಾಕಷ್ಟು ಬೆವರುಹರಿಸಿದ್ದಾರೆ. ನಾಯಕನಾಗಿ ಐಪಿಎಲ್‌ನಲ್ಲಿ ಅದ್ಭುತವಾಗಿ ಪ್ರದರ್ಶನ ನೀಡಿದ್ದಾರೆ. ಆತನೋರ್ವ ಅದ್ಭುತ ಆಲ್‌ರೌಂಡರ್" ಎಂದಿದ್ದಾರೆ.

ಮುಂದೆ ನಿಂತು ಮುನ್ನಡೆಸುವ ನಾಯಕ

ಮುಂದೆ ನಿಂತು ಮುನ್ನಡೆಸುವ ನಾಯಕ

ಮುಂದುವರಿದು ಮಾತನಾಡಿದ ದಿಲೀಪ್ ವೆಂಗ್‌ಸರ್ಕಾರ್ ಹಾರ್ದಿಕ್ ಪಾಂಡ್ಯ ಸ್ವತಃ ಮುಂದೆ ನಿಂತು ತಂಡವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿರುವ ನಾಯಕ ಎಂದಿದ್ದಾರೆ. "ಆತ ಎರಡು ವಿಕೆಟ್‌ಗಳು ಉರುಳಿದಾಗ ಕಣಕ್ಕಿಳಿದು ಬ್ಯಾಟಿಂಗ್ ಮಾಡಿದ್ದಾರೆ. ಹಾಗಾಗಿ ತಾನೇ ಮುಂದೆ ಬಂದು ಮುನ್ನಡೆಸುವ ನಾಯಕ ಆತ. ಅಲ್ಲದೆ ಬೌಲಿಂಗ್ ಕೂಡ ಅದ್ಭಯತವಾಗಿ ಮಾಡಬಲ್ಲರು. ತಂಡವನ್ನು ಕೂಡ ಉತ್ತಮವಾಗಿ ಮು್ನನಡೆಸಿದ್ದಾರೆ. ನಾಯಕನಾಗಿ ಮೊದಲ ಆವೃತ್ತಿಯಲ್ಲಿಯೇ ಉತ್ತಮ ಪ್ರದರ್ಶನ ನೀಡಿದ್ದಾರೆ" ಎಂದಿದ್ದಾರೆ ದಿಲೀಪ್ ವೆಂಗ್ ಸರ್ಕಾರ್.

ಸೀಮಿತ ಓವರ್‌ಗಳಿಗೆ ಭವಿಷ್ಯದ ನಾಯಕ

ಸೀಮಿತ ಓವರ್‌ಗಳಿಗೆ ಭವಿಷ್ಯದ ನಾಯಕ

ಇನ್ನು ಈ ಸಂದರ್ಭದಲ್ಲಿ ವೆಂಗ್‌ಸರ್ಕಾರ್ ಭಾರತ ಸೀಮಿತ ಓವರ್‌ಗಳ ತಂಡಕ್ಕೆ ಹಾರ್ದಿಕ್ ಪಾಂಡ್ಯ ಭವಿಷ್ಯದ ನಾಯಕನಾಗುವ ಅವಕಾಶವಿದೆ ಎಂದಿದ್ದಾರೆ. "ಭವಿಷ್ಯದ ನಾಯಕತ್ವಕ್ಕೆ ಅವರು ಉತ್ತಮವಾದ ಆಯ್ಕೆ. ಆದರೆ ಇದು ಆಯ್ಕೆಗಾರರ ಮೇಲೆ ಅವಲಂಬಿಸಿರುತ್ತದೆ. ಅವರು ಈ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಾರೆ. ಅವರು ಯಾವ ಯೋಜನೆ ಹೊಂದಿರುತ್ತಾರೆ ಎಂಬುದು ಮುಖ್ಯವಾಗುತ್ತದೆ. ಆದರೆ ಹಾರ್ದಿಕ್ ಒಆಂಡ್ಯ ಕಂಡಿತವಾಗಿಯೂ ಅವರ ಪ್ರಮುಖ ಆಯ್ಕೆಯಲ್ಲಿ ಒಬ್ಬರಾಗಿರುತ್ತಾರೆ" ಎಂದಿದ್ದಾರೆ ದಿಲೀಪ್ ವೆಂಗ್‌ಸರ್ಕಾರ್.

Umran Malik ಮೊದಲನೇ ಪಂದ್ಯದಲ್ಲಿ ಹೀಗಾ ಆಡೋದು | *Cricket | OneIndia Kannada
ಭಾರತ ತಂಡ

ಭಾರತ ತಂಡ

ಹಾರ್ದಿಕ್ ಪಾಂಡ್ಯ (ನಾಯಕ), ಭುವನೇಶ್ವರ್ ಕುಮಾರ್ (ಉಪ ನಾಯಕ), ಇಶಾನ್ ಕಿಶನ್, ಋತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಆರ್. ಬಿಷ್ಣೋಯ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಶ್ದೀಪ್ ಸಿಂಗ್, ಉಮ್ರಾನ್ ಮಲಿಕ್.

Story first published: Sunday, June 26, 2022, 21:27 [IST]
Other articles published on Jun 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X