ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

300ನೇ ಟಿ20 ಪಂದ್ಯವನ್ನಾಡಿದ ದಿನೇಶ್ ಕಾರ್ತಿಕ್: ಈ ಸಾಧನೆ ಮಾಡಿದ ನಾಲ್ಕನೇ ಭಾರತೀಯ

Dinesh Karthik Becomes 4th Indian To Play 300 T20 Matches

ಸೋಮವಾರ ನಡೆದ ಕಿಂಗ್ಸ್‌ ಇಲೆವೆನ್ ಪಂಜಾಬ್ ವರ್ಸಸ್ ಕೊಲ್ಕತ್ತಾ ನೈಟ್‌ ರೈಡರ್ಸ್ ಪಂದ್ಯದಲ್ಲಿ, ಕೆಕೆಆರ್‌ನ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ 300 ಟಿ20 ಪಂದ್ಯಗಳಲ್ಲಿ ಕಾಣಿಸಿಕೊಂಡ ನಾಲ್ಕನೇ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಐಪಿಎಲ್ 2020 ರ 46 ನೇ ಪಂದ್ಯದ ವೇಳೆ ದಿನೇಶ್ ಕಾರ್ತಿಕ್ ಟಿ 20 ವೃತ್ತಿಜೀವನದಲ್ಲಿ ಈ ವೈಯಕ್ತಿಕ ಮೈಲಿಗಲ್ಲು ತಲುಪಿದ್ದಾರೆ. ಈ ಮೂಲಕ ರೋಹಿತ್, ಧೋನಿ, ರೈನಾ ಬಳಿಕ ಈ ಸಾಧನೆ ಮಾಡಿದ್ದಾರೆ.

ಐಪಿಎಲ್ 2020ರ ಮಧ್ಯದಲ್ಲೇ ದಿನೇಶ್ ಕಾರ್ತಿಕ್ ನಾಯಕತ್ವ ತ್ಯಜಿಸಿದ್ದು ಏಕೆ? ಕಾರಣ ಏನು?ಐಪಿಎಲ್ 2020ರ ಮಧ್ಯದಲ್ಲೇ ದಿನೇಶ್ ಕಾರ್ತಿಕ್ ನಾಯಕತ್ವ ತ್ಯಜಿಸಿದ್ದು ಏಕೆ? ಕಾರಣ ಏನು?

ಈ ಹಿಂದೆ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ, ಸಿಎಸ್‌ಕೆ ನಾಯಕ ಎಂ.ಎಸ್.ಧೋನಿ ಮತ್ತು ಸಿಎಸ್‌ಕೆ ಆಟಗಾರ ಸುರೇಶ್ ರೈನಾ ಅವರು ಈಗಾಗಲೇ 300 ಟಿ 20 ಪಂದ್ಯಗಳಲ್ಲಿ ಕಾಣಿಸಿಕೊಂಡ ಭಾರತದ ಇತರೇ ಕ್ರಿಕೆಟಿಗರು. ರೋಹಿತ್ ಭಾರತದ ಅತಿ ಹೆಚ್ಚು ಟಿ 20 ಪಂದ್ಯವನ್ನಾಡಿ ಆಟಗಾರ (337 ಪಂದ್ಯಗಳು), ಧೋನಿ (329 ಪಂದ್ಯಗಳು) ಮತ್ತು ರೈನಾ (319 ಪಂದ್ಯಗಳು) ಮುಂದಿನ ಸ್ಥಾನಗಳಲ್ಲಿದ್ದರೆ ಮತ್ತು ಕಾರ್ತಿಕ್ ಈ ಕ್ಲಬ್‌ಗೆ ಸೇರಿದ್ದಾರೆ.

ಮತ್ತೊಂದೆಡೆ, ಟೀಮ್ ಇಂಡಿಯಾ ತಂಡದ ನಾಯಕ ವಿರಾಟ್ ಕೊಹ್ಲಿ ಕೂಡ ಭಾರತೀಯರಲ್ಲಿ 300 ಟಿ 20 ಕ್ಲಬ್‌ಗೆ ಸೇರಲು ಬಹಳ ಹತ್ತಿರದಲ್ಲಿದ್ದಾರೆ. ಕೊಹ್ಲಿ ಈಗಾಗಲೇ 292 ಟಿ 20 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.

Story first published: Tuesday, October 27, 2020, 15:22 [IST]
Other articles published on Oct 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X