ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಂ ಇಂಡಿಯಾಗೆ ಕಂಬ್ಯಾಕ್ ಮಾಡಿದ DK: ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ

Dinesh karthik

ದಕ್ಷಿಣ ಆಫ್ರಿಕಾ ವಿರುದ್ಧದ ಮುಂಬರುವ ಟಿ20 ಸರಣಿಗೆ ಟೀಂ ಇಂಡಿಯಾ 18 ಸದಸ್ಯರ ತಂಡವನ್ನ ಘೋಷಿಸಲಾಗಿದ್ದು, ಟೀಂ ಇಂಡಿಯಾಗೆ ಮೂರು ವರ್ಷಗಳ ಬಳಿಕ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಕಂಬ್ಯಾಕ್ ಮಾಡಿದ್ದಾರೆ.

36 ವರ್ಷದ ದಿನೇಶ್ ಕಾರ್ತಿಕ್ ಕೊನೆಯ ಬಾರಿಗೆ 2019ರ ಐಸಿಸಿ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತದ ಪರ ಆಡಿದ್ದರು. ಆದ್ರೀಗ ಮೂರು ವರ್ಷದ ಬಳಿಕ ಬ್ಲ್ಯೂ ಜರ್ಸಿ ತೊಡಲು ತಮಿಳುನಾಡು ಅನುಭವಿ ವಿಕೆಟ್ ಕೀಪರ್ ರೆಡಿಯಾಗಿದ್ದಾರೆ. ಐಪಿಎಲ್ 2022ರ ಸೀಸನ್‌ನಲ್ಲಿ ಆರ್‌ಸಿಬಿ ಪರ ಹೊಸ ಜವಾಬ್ದಾರಿ ನಿಭಾಯಿಸಿದ ದಿನೇಶ್ ಕಾರ್ತಿಕ್ ತನ್ನ ಫಿನಿಶಿಂಗ್ ಕೌಶಲ್ಯದ ಮೂಲಕ ಗಮನ ಸೆಳೆದಿದ್ದಾರೆ.

ಆರ್‌ಸಿಬಿ ಪರ ಮ್ಯಾಚ್ ಫಿನಿಷರ್ ಆಗಿರುವ DK

ಆರ್‌ಸಿಬಿ ಪರ ಮ್ಯಾಚ್ ಫಿನಿಷರ್ ಆಗಿರುವ DK

ಬಲಗೈ ಅನುಭವಿ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ 57.40 ಬ್ಯಾಟಿಂಗ್ ಸರಾಸರಿಯಿಂದ 287 ರನ್ ಸಿಡಿಸಿದ್ದಾರೆ. ಅದ್ರಲ್ಲೂ ಕೆಲವು ಮ್ಯಾಚ್ ಇನ್ನಿಂಗ್ಸ್ ಆಡುವ ಮೂಲಕ ಆರ್‌ಸಿಬಿ ಪ್ಲೇ ಆಫ್ ತಲುಪಲು ಕಾರ್ತಿಕ್ ಪಾತ್ರ ಪ್ರಮುಖವಾಗಿದೆ.

2014ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ದಿನೇಶ್ ಕಾರ್ತಿಕ್ ಹಲವು ಬಾರಿ ತಂಡಕ್ಕೆ ಬಂದು ಹೊರನಡೆದಿದ್ದಾರೆ. ಮಹೇಂದ್ರ ಸಿಂಗ್ ಧೋನಿಯ ವರ್ಚಸ್ಸಿನ ಮುಂದೆ ಕಾರ್ತಿಕ್ ಶೈನ್ ಆಗದೆ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾದರು. ಆದ್ರೆ ಐಪಿಎಲ್ 2022ರಲ್ಲಿ ಆರ್‌ಸಿಬಿ ಫ್ರಾಂಚೈಸಿ ದಿನೇಶ್ ಕಾರ್ತಿಕ್‌ಗೆ ಹೊಸ ಜವಾಬ್ದಾರಿ ನೀಡಿದೆ. ಅದನ್ನ ಕಾರ್ತಿಕ್ ಯಶಸ್ವಿಯಾಗಿ ನಿಭಾಯಿಸಿ ಆಯ್ಕೆಗಾರರ ಗಮನ ಸೆಳೆದಿದ್ದಾರೆ.

ಆತ್ಮವಿಶ್ವಾಸದ ಪ್ರಾಮುಖ್ಯತೆ ಕುರಿತು ತಿಳಿಸಿದ ಕಾರ್ತಿಕ್‌

ಏತನ್ಮಧ್ಯೆ, ಕಾರ್ತಿಕ್ ಯಾವುದೇ ಸಾಧನೆಯನ್ನು ಸಾಧಿಸಲು ಆತ್ಮ ವಿಶ್ವಾಸದ ಪ್ರಾಮುಖ್ಯತೆ ತುಂಬಾ ಮುಖ್ಯ ಎಂಬುದನ್ನ ತಿಳಿಸಿದ್ದಾರೆ. ಜೊತೆಗೆ ತಮ್ಮ ಬೆಂಬಲಿಗರಿಗೆ ಕೃತಜ್ಞತೆಯನ್ನು ತೋರಿಸಿದರು. ಮುಂಬರುವ ವರ್ಷಗಳಲ್ಲಿಯೂ ತಮ್ಮ ಶ್ರಮವನ್ನು ಮುಂದುವರಿಸುವುದಾಗಿ ತಿಳಿಸಿದರು.

ಕಾರ್ತಿಕ್ ಜೊತೆಗೆ ರಿಷಬ್ ಪಂತ್ ಮತ್ತು ಇಶಾನ್ ಕಿಶನ್ ಅವರೊಂದಿಗೆ ತಂಡದಲ್ಲಿ ಮೂರು ವಿಕೆಟ್ ಕೀಪಿಂಗ್ ಆಯ್ಕೆಗಳನ್ನು ಆಯ್ಕೆ ಮಾಡಲಾಗಿದೆ. 2022 ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ T20 ವಿಶ್ವಕಪ್‌ಗೆ ಅವರು ಖಂಡಿತವಾಗಿಯೂ ರಾಡಾರ್‌ನಲ್ಲಿದ್ದಾರೆ.

"ನೀವು ನಿಮ್ಮನ್ನು ನಂಬಿದರೆ, ಎಲ್ಲವೂ ಸರಿಯಾಗಿ ಬರುತ್ತದೆ! ಎಲ್ಲಾ ಬೆಂಬಲ ಮತ್ತು ನಂಬಿಕೆಗೆ ಧನ್ಯವಾದಗಳು...ಕಠಿಣ ಪರಿಶ್ರಮ ಮುಂದುವರಿಯುತ್ತದೆ...'' ಎಂದು ಕಾರ್ತಿಕ್ ಟ್ವೀಟ್ ಮಾಡಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ಗೆ ಪ್ರಕಟವಾದ ತಂಡದಲ್ಲಿ ಈ ಮೂವರಿಗೆ ಅವಕಾಶ ನೀಡಿದ್ದೇ ಆ‍ಶ್ಚರ್ಯ!

ಜೂನ್‌ 9ರಿಂದ ಆರಂಭಗೊಳ್ಳಲಿದೆ ಟಿ20 ಸರಣಿ

ಜೂನ್‌ 9ರಿಂದ ಆರಂಭಗೊಳ್ಳಲಿದೆ ಟಿ20 ಸರಣಿ

ಜೂನ್ 9 ರಿಂದ ಆರಂಭಗೊಳ್ಳುವ ಮೊದಲ ಟಿ20 ಪಂದ್ಯವು ದೆಹಲಿಯಲ್ಲಿ ನಡೆಯಲಿದ್ದು, ಜೂನ್ 12 ಎರಡನೇ ಟಿ20 ಕಟಕ್, ಜೂನ್ 14 ಮೂರನೇ ಟಿ20 ವಿಶಾಖಪಟ್ಟಣಂ, ಜೂನ್ 17 ನಾಲ್ಕನೇ ಟಿ20 ರಾಜ್‌ಕೋಟ್‌, ಜೂನ್ 19 ಐದನೇ ಟಿ20 ಬೆಂಗಳೂರಿನಲ್ಲಿ ನಡೆಯಲಿದೆ.

ಮುಂಬೈ ಮಾಡಿದ್ದು ಸಣ್ಣ ಸಹಾಯ, ಇನ್ನೇನಿದ್ದರೂ ನಮ್ಮದೇ ಆಟ ಎಂದ ಆರ್‌ಸಿಬಿ ಆಟಗಾರ!

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಭಾರತದ ಸ್ಕ್ವಾಡ್‌

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಭಾರತದ ಸ್ಕ್ವಾಡ್‌

ಕೆಎಲ್ ರಾಹುಲ್ (ನಾಯಕ), ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ಉಪ ನಾಯಕ) (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯುಜುವೇಂದ್ರ ಚಾಹಲ್, ಕುಲ್‌ದೀಪ್ ಯಾದವ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್ , ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಆವೇಶ್ ಖಾನ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್

Story first published: Tuesday, May 24, 2022, 9:22 [IST]
Other articles published on May 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X