ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ನನ್ನ ದೇಹ ಜೂಂಬಿ ಮೂಡ್‌ನಲ್ಲಿದೆ ಫಿಟ್‌ನೆಸ್ ಗಳಿಸಲು ಸಮಯಬೇಕು': ದಿನೇಶ್ ಕಾರ್ತಿಕ್

Dinesh Karthik Says Need Minimum 4 Weeks To Achieve Match Fitness

ಕೊರೊನಾ ವೈರಸ್‌ನ ಕಾರಣದಿಂದಾಗಿ ಮನೆಯಲ್ಲೇ ಕಾಲ ಕಳೆದಿರುವ ಆಟಗಾರು ಮತ್ತೆ ಕ್ರಿಕೆಟ್ ಮುಂದುವರಿಸಲು ಸಮಯಾವಕಾಶದ ಅಗತ್ಯವಿದೆಯೆಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ. ಕನಿಷ್ಟ ನಾಲ್ಕು ವಾರಗಳ ಕಾಲಾವಕಾಶ ಕ್ರಿಕೆಟಿಗರಿಗೆ ಅಗತ್ಯವಾಗಿದೆ ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.

ಲಾಕ್‌ಡೌನ್‌ನ ಸಂದರ್ಭದಲ್ಲಿ ಯಾವುದೇ ರೀತಿಯ ದೈಹಿಕ ವ್ಯಾಯಾಮ ಸಾಧ್ಯವಾಗದ ಕಾರಣ ತನ್ನ ದೇಹ ಜೂಂಬಿ ಮೂಡ್‌ನಲ್ಲಿದೆ ಎಂದು ತಮಾಷೆಯಾಗಿ ಹೇಳಿದ್ದಾರೆ ದಿನೇಶ್ ಕಾರ್ತಿಕ್. ಮತ್ತೆ ಕ್ರಿಕೆಟ್ ಚಟುವಟಿಕೆಗೆ ಪೂರಕವಾಗುವಂತೆ ದೇಹವನ್ನು ಮಾಡಲು ಕಾಲಾವಕಾಶದ ಅಗತ್ಯವಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ವಿಶ್ವ ದಾಖಲೆಯ ಕ್ಷಣದಲ್ಲಿ ಪತ್ನಿ ಕಣ್ಣೀರು: ಕಾರಣ ಹೇಳಿದ ರೋಹಿತ್ ಶರ್ಮಾವಿಶ್ವ ದಾಖಲೆಯ ಕ್ಷಣದಲ್ಲಿ ಪತ್ನಿ ಕಣ್ಣೀರು: ಕಾರಣ ಹೇಳಿದ ರೋಹಿತ್ ಶರ್ಮಾ

ಈಗ ಇರುವ ಸ್ಥಿತಿಯಿಂದ ಮತ್ತೆ ಪರಿವರ್ತನೆಯನ್ನು ಪಡೆಯುವುದು ತುಂಬಾ ಕಠಿಣವಾಗಿದೆ. ಕನಿಷ್ಟ ನಾಲ್ಕು ವಾರಗಳಾದರೂ ಬೇಕಾಗುತ್ತದೆ. ನಿಧಾನವಾಗಿ ಮತ್ತೆ ತರಬೇತಿಯನ್ನು ಆರಂಭಿಸಬೇಕು. ಅಭ್ಯಾಸದ ಪ್ರಮಾಣವನ್ನು ನಿಧಾನವಾಗಿ ಹೆಚ್ಚಿಸುತ್ತಾ ಅದರ ತೀವ್ರತೆಯನ್ನು ಹೆಚ್ಚುಗೋಳಿಸಬೇಕು ಎಂದು ದಿನೇಶ್ ಕಾರ್ತಿಕ್ ಕ್ರಿಕೆಟ್ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

"ಇದೀಗ ಲಾಕ್‌ಡೌನ್ ಚೆನ್ನೈನಲ್ಲಿ ಸಾಕಷ್ಟು ಸಡಿಲಗೊಂಡಿದೆ. ಹಾಗಾಗಿ ಅಭ್ಯಾಸಕ್ಕೆ ಅನುಮತಿಯನ್ನು ಪಡೆಯಲು ಸಾಧ್ಯವಿದೆ. ನಾನು ಅಭ್ಯಾಸವನ್ನು ಆರಂಭಿಸುವ ಬಗ್ಗೆ ಯೋಚಿಸುತ್ತಿದ್ದೇನೆ. ದೇಹ ಜೂಂಬಿ ಮೂಡ್‌ನಲ್ಲಿರುವುದರಿಂದ ಮತ್ತೆ ಸಹಜ ಸ್ಥಿತಿಗೆ ತರಬೇಕಿದ ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಅಲ್ಲ : ಯಾರು ಶ್ರೇಷ್ಠ ಪ್ರಶ್ನೆಗೆ ಜಾಫರ್ ನೀಡಿದ ಉತ್ತರ ಇದು!ವಿರಾಟ್ ಕೊಹ್ಲಿ ಅಲ್ಲ : ಯಾರು ಶ್ರೇಷ್ಠ ಪ್ರಶ್ನೆಗೆ ಜಾಫರ್ ನೀಡಿದ ಉತ್ತರ ಇದು!

ಟೀಮ್ ಇಂಡಿಯಾದ ವೇಗಿ ಶಾರ್ದೂಲ್ ಠಾಕೂರ್ ಕಳೆದ ತಿಂಗಳು ತಮ್ಮ ಅಭ್ಯಾಸವನ್ನು ಆರಂಭಿಸಿದ್ದರು. ಈ ಮೂಲಕ ಕೊರೊನಾ ವೈರಸ್ ನಂತರ ಹೊರಾಂಗಣ ಅಭ್ಯಾಸ ಆರಂಭಿಸಿದ ಮೊದಲ ಕ್ರಿಕೆಟಿಗ ಎನಿಸಿದ್ದರು. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಬೋಯಿಸಾರ್‌ನ ಸ್ಥಳೀಯ ಮೈದಾನದಲ್ಲಿ ಸ್ಥಳೀಯ ಆಟಗಾರರೊಂದಿಗೆ ತರಬೇತಿ ಆರಂಭಿಸಿದ್ದರು.

Story first published: Sunday, June 7, 2020, 21:49 [IST]
Other articles published on Jun 7, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X