ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆರ್‌ಸಿಬಿಯ ಈ ಆಟಗಾರ ವಿಶ್ವಕಪ್‌ನಲ್ಲಿ ಖಂಡಿತಾ ಸ್ಥಾನ ಪಡೆಯಲಿದ್ದಾರೆ: ಸಂಜಯ್ ಮಂಜ್ರೇಕರ್

Dinesh Karthik will be selected for the T20 World Cup team said Sanjay Manjrekar

ಟಿ20 ವಿಶ್ವಕಪ್‌ಗೆ ಕೆಲವೇ ತಿಂಗಳುಗಳು ಬಾಕಿಯಿರುವ ಕಾರಣ ಚುಟುಕು ವಿಶ್ವಕಪ್‌ನಲ್ಲಿ ಯಾವೆಲ್ಲಾ ಆಟಗಾರರು ಸ್ಥಾನ ಪಡೆಯಲಿದ್ದಾರೆ ಎಂಬುದು ಸಾಕಷ್ಟು ಕುತೂಹಲ ಮೂಡಿಸಿದೆ. ಭಾರತೀಯ ತಂಡದ ಆಯ್ಕೆಗಾರರು ಕೂಡ ವಿಶ್ವಕಪ್‌ಗೆ ಮುನ್ನ ನಡೆಯುವ ಸರಣಿಗಳ ಮೇಲೆ ಕಣ್ಣಿಟ್ಟಿದ್ದು ಉತ್ತಮ ಪ್ರದರ್ಶನ ನೀಡುವ ಆಟಗಾರರ ಮೇಲೆ ಕಣ್ಣಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಆಟಗಾರ ಹಾಗೂ ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ ಪ್ರತಿಕ್ರಿಯೆ ನೀಡಿದ್ದು ಅನುಭವಿ ಆಟಗಾರನ ಮೇಲೆ ಭಾರೀ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.

ಈ ಬಾರಿಯ ಐಪಿಎಲ್‌ನಲ್ಲಿ ಹಾಗೂ ನಂತರ ಭಾರತ ತಂಡದ ಪರವಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಅದ್ಭುತ ಪ್ರದರ್ಶನ ನಿಡಿದ ಓರ್ವ ಆಟಗಾರನ ಬಗ್ಗೆ ಸಂಜಯ್ ಮಂಜ್ರೇಕರ್ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಈ ಆಟಗಾರ ಮುಂದಿನ ಟಿ20 ವಿಶ್ವಕಪ್‌ನ ಆಡುವ ಬಳಗದಲ್ಲಿ ಖಂಡಿತಾ ಸ್ಥಾನ ಪಡೆಯಲಿದ್ದಾರೆ ಎಂದಿದ್ದಾರೆ ಮಂಜ್ರೇಕರ್.

IND vs IRE: ಮೊದಲ ಟಿ20 ಪಂದ್ಯಕ್ಕೂ ಮುನ್ನ ವಿಶ್ವಕಪ್ ಬಗ್ಗೆ ಹಾರ್ದಿಕ್ ಪಾಂಡ್ಯ ಮಹತ್ವದ ಹೇಳಿಕೆIND vs IRE: ಮೊದಲ ಟಿ20 ಪಂದ್ಯಕ್ಕೂ ಮುನ್ನ ವಿಶ್ವಕಪ್ ಬಗ್ಗೆ ಹಾರ್ದಿಕ್ ಪಾಂಡ್ಯ ಮಹತ್ವದ ಹೇಳಿಕೆ

ಆರ್‌ಸಿಬಿ ಆಟಗಾರನ ಮೇಲೆ ಮಂಜ್ರೇಕರ್ ವಿಶ್ವಾಸ

ಆರ್‌ಸಿಬಿ ಆಟಗಾರನ ಮೇಲೆ ಮಂಜ್ರೇಕರ್ ವಿಶ್ವಾಸ

ಈ ಬಾರಿಯ ಐಪಿಎಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಆರ್‌ಸಿಬಿ ಅಭಿಮಾನಿಗಳ ಮನ ಗೆದ್ದಿರುವ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಬಗ್ಗೆ ಸಂಜಯ್ ಮಂಜ್ರೇಕರ್ ಈ ಮಾತುಗಳನ್ನು ಆಡಿದ್ದಾರೆ. ಆರ್‌ಸಿಬಿ ತಂಡದಲ್ಲಿ ನೀಡಿದ ಪ್ರದರ್ಶನದ ಬಳಿಕ ಭಾರತ ತಂಡದಲ್ಲಿಯೂ ಅವಕಾಶ ಪಡೆದುಕೊಂಡ ದಿನೇಶ್ ಕಾರ್ತಿಕ್ ಟೀಮ್ ಇಂಡಿಯಾ ಪರವಾಗಿ ಮಿಂಚಿದ್ದಾರೆ. ಈ ಕಾರಣದಿಂದಾಗಿ ದಿನೇಶ್ ಕಾರ್ತಿಕ್ ಮೇಲೆ ಸಂಜಯ್ ಮಂಜ್ರೇಕರ್ ವಿಶ್ವಾಸದ ಮಾತುಗಳನ್ನಾಡಿದ್ದಾರೆ.

ವಿಶ್ವಕಪ್‌ನಲ್ಲಿ ಆಡಲು ಅವಕಾಶ ದೊರೆಯಲಿದೆ

ವಿಶ್ವಕಪ್‌ನಲ್ಲಿ ಆಡಲು ಅವಕಾಶ ದೊರೆಯಲಿದೆ

ಎನ್‌ಡಿ ಡಿವಿ ಜೊತೆಗೆ ಮಾತನಾಡಿದ ಸಂಜಯ್ ಮಂಜ್ರೇಕರ್ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ವಿಶ್ವಕಪ್ ತಂಡದಲ್ಲಿ ಆಡಲು ಕಾರ್ತಿಕ್‌ಗೆ ಅದ್ಭುತ ಅವಕಾಶ ದೊರೆಯಲಿದ್ದು ಆತನೋರ್ವ ಅತ್ಯುತ್ತಮ ಆಯ್ಕೆಯಾಗಲಿದ್ದಾರೆ ಎಂದಿದ್ದಾರೆ. "ದಿನೇಶ್ ಕಾರ್ತಿಕ್ ತಾನು ಅಂದುಕೊಂಡಿದ್ದನ್ನು ಸಾಧಿಸಲು ಉತ್ತಮ ಅವಕಾಶವಿದೆ. ಯಾಕೆಂದರೆ ತಾನು ಎಷ್ಟು ಸಮರ್ಥ ಆಟಗಾರ ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ. ಅದರಲ್ಲೂ ದಕ್ಷಿಣ ಆಫ್ರಿಕಾ ವಿರುದ್ಧದ ರಾಜ್‌ಕೋಟ್‌ನ ಪಂದ್ಯದಲಲ್ಇ ಅವರ ಪ್ರದರ್ಶನ ಅಮೋಘವಾಗಿದ್ದು 200ಕ್ಕೂ ಅಧಿಕ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ" ಎಂದಿದ್ದಾರೆ ಸಂಜಯ್ ಮಂಜ್ರೇಕರ್.

ಅತಿ ಅಪರೂಪದ ಆಟಗಾರ ಎಂದ ಮಂಜ್ರೇಕರ್

ಅತಿ ಅಪರೂಪದ ಆಟಗಾರ ಎಂದ ಮಂಜ್ರೇಕರ್

ಇನ್ನು ಈ ಸಂದರ್ಭದಲ್ಲಿ ದಿನೇಶ್ ಕಾರ್ತಿಕ್ ಅವರನ್ನು ಸಂಜಯ್ ಮಂಜ್ರೇಕರ್ ಅಪರೂಪದ ಕ್ರಿಕೆಟಿಗ ಎಂದು ಬಣ್ಣಿಸಿದ್ದಾರೆ. ಕ್ರಿಕೆಟ್‌ನಿಂದ ನಿವೃತ್ತಿ ಪಡೆಯುವ ಹಂತದಲ್ಲಿ ಈ ರೀತಿಯ ಪ್ರದರ್ಶನ ನೀಡುವ ಮೂಲಕ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುವುದು ನಿಜಕ್ಕೂ ಅದ್ಭುತವಾಗಿದೆ ಎಂದಿದ್ದಾರೆ. ಇನ್ನು ಟಿ20 ಕ್ರಿಕೆಟ್‌ನಲ್ಲಿ ಕೆಳ ಕ್ರಮಾಂಕದಲ್ಲಿ ಈ ರೀತಿಯ ಬ್ಯಾಟಿಂಗ್ ನಡೆಸುವ ತಜ್ಮ ಬ್ಯಾಟರ್ ಆಗಿ ರೂಪುಗೊಂಡಿದ್ದಾರೆ. ದೊರೆಯುವ 15ರಿಂದ 20 ಎಸೆತಗಳ್ಲಲಿ ಅಮೋಘವಾಗಿ ಬ್ಯಾಟಿಂಗ್ ಮಾಡಿ ತಂಡಕ್ಕೆ ಅದ್ಭುತ ಕೊಡುಗೆ ನೀಡುತ್ತಾರೆ. ಈ ರೀತಿಯ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಅವರು ತಮ್ಮ ಸ್ಥಾನವನ್ನು ಅವರೇ ಗಳಿಸಿಕೊಂಡಿದ್ದಾರೆ" ಎಂದಿದ್ದಾರೆ ಸಂಜಯ್ ಮಂಜ್ರೇಕರ್.

ಐರ್ಲೆಂಡ್ ಪ್ರವಾಸಕ್ಕೂ ಡಿಕೆ ಆಯ್ಕೆ

ಐರ್ಲೆಂಡ್ ಪ್ರವಾಸಕ್ಕೂ ಡಿಕೆ ಆಯ್ಕೆ

ಇನ್ನು ದಕ್ಷಿಣ ಆಫ್ರಿಕಾ ವಿರುದ್ಧಧ ಸರಣಿಯಲ್ಲಿ ಸುದೀರ್ಘ ಮೂರು ವರ್ಷಗಳ ಬಳಿಕ ಭಾರತೀಯ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದ ದಿನೇಶ್ ಕಾರ್ತಿಕ್ ಆ ಸರಣಿಯಲ್ಲಿ ಮಿಂಚಿದ್ದಾರೆ. ಇದೀಗ ಐರ್ಲೆಂಡ್ ವಿರುದ್ಧಧ ಸರಣಿಗೂ ಅವರು ಆಯ್ಕೆಯಾಗಿದ್ದು ಮತ್ತೊಮ್ಮೆ ಮಿಂಚುವ ವಿಶ್ವಾಸದಲ್ಲಿದ್ದಾರೆ. ಯುವ ಆಟಗಾರರು ಹೊಂದಿರುವ ಈ ತಂಡದಲ್ಲಿ ಅನುಭವಿ ಆಟಗಾರನಾಗಿ ದಿನೇಶ್ ಕಾರ್ತಿಕ್ ಮೇಲೆ ಹೆಚ್ಚಿನ ನಿರೀಕ್ಷೆಯಿದೆ.

Story first published: Monday, June 27, 2022, 10:31 [IST]
Other articles published on Jun 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X