ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶೊಯೇಬ್‌ ಅಖ್ತರ್‌ಗೆ ವಿಶ್ವಕಪ್‌ನಲ್ಲಿ ಗುಣಮಟ್ಟದ ಕ್ರಿಕೆಟ್‌ ಕಾಣ್ತಿಲ್ಲವಂತೆ!

Disappointed with quality of cricket at this World Cup: Shoaib Akhtar

ಹೊಸದಿಲ್ಲಿ, ಜುಲೈ 04: ಇಂಗ್ಲೆಂಡ್‌ ಮತ್ತು ವೇಲ್ಸ್‌ ಆತಿಥ್ಯದಲ್ಲಿ ನಡೆಯುತ್ತಿರುವ 12ನೇ ಆವೃತ್ತಿಯ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಸ್ಪರ್ಧೆಯಿಂದ ಹೊರ ಬೀಳುವ ಹೊಸ್ತಿಲಲ್ಲಿರುವ ವೇಳೆ, ವಿಶ್ವಕಪ್‌ನ ಗುಣಮಟ್ಟವೇ ಸರಿಯಿಲ್ಲ ಎಂದು ಪಾಕ್‌ನ ಮಾಜಿ ವೇಗಿ ಶೊಯೇಬ್‌ ಅಖ್ತರ್‌ ಹೇಳಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಹತ್ತು ತಂಡಗಳ ನಡುವಣ ವಿಶ್ವಕಪ್‌ ಟೂರ್ನಿಯಲ್ಲಿ ಈಗಾಗಲೇ ಆಸ್ಟ್ರೇಲಿಯಾ, ಭಾರತ ಮತ್ತು ಇಂಗ್ಲೆಂಡ್‌ ತಂಡಗಳು ಸೆಮಿಫೈನಲ್ಸ್‌ಗೆ ಕಾಲಿಟ್ಟಾಗಿದೆ. ಇನ್ನುಳಿದ ಒಂದು ಸ್ಥಾನಕ್ಕಾಗಿ ನ್ಯೂಜಿಲೆಂಡ್‌ ಮತ್ತು ಪಾಕಿಸ್ತಾನದ ನಡುವೆ ಪೈಪೋಟಿ ಇದೆ. ಅಂದಹಾಗೆ ಪಾಕ್‌ ತಂಡ ಸೆಮಿಫೈನಲ್‌ ತಲುಪಬೇಕಾದರೆ ಪವಾಡವೇ ನಡೆಯಬೇಕಿದೆ.

ನ್ಯೂಜಿಲೆಂಡ್‌ ತಂಡ ಆಡಿದ 9 ಲೀಗ್‌ ಪಂದ್ಯಗಳಿಂದ 11 ಅಂಕಗಳನ್ನು ಗಳಿಸಿ ಜೊತೆಗೆ ಉತ್ತಮ ರನ್‌ರೇಟ್‌ನೊಂದಿಗೆ ಅಂಕಪಟ್ಟಿಯ ನಾಲ್ಕನೇ ಸ್ಥಾನದಲ್ಲಿದೆ. ಪಾಕಿಸ್ತಾನ ತಂಡಕ್ಕೆ ಇನ್ನೊಂದು ಲೀಗ್‌ ಪಂದ್ಯ ಬಾಕಿ ಇದ್ದು ಬಾಂಗ್ಲಾದೇಶ ವಿರುದ್ಧ ಪೈಪೋಟಿ ನಡೆಸಲಿ. ಈ ಪಂದ್ಯದಲ್ಲಿ ಪಾಕ್‌ ತಂಡಕ್ಕೆ ಗೆಲುವು ಸಾಧ್ಯವಾದರೆ ಒಟ್ಟು 11 ಅಂಕಗಳನ್ನು ಗಳಿಸಲಿದೆ.

ರಾಯುಡು ಬೇಡ ಮಯಾಂಕ್‌ ಬೇಕೆಂದಿದ್ದು, ಕೊಹ್ಲಿ ಮತ್ತು ಶಾಸ್ತ್ರಿ!ರಾಯುಡು ಬೇಡ ಮಯಾಂಕ್‌ ಬೇಕೆಂದಿದ್ದು, ಕೊಹ್ಲಿ ಮತ್ತು ಶಾಸ್ತ್ರಿ!

ಅಂದಹಾಗೆ ಪಾಕ್‌ ತಂಡಕ್ಕೆ ಸೆಮಿಫೈನಲ್‌ ಹಂತಕ್ಕೇರಲು ಗೆಲುವೊಂದೇ ಸಾಲದು. ತಂಡದ ರನ್‌ರೇಟ್‌ ಕೂಡ ಚೇತರಿಸಬೇಕಿದ್ದು, ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿ ಬೃಹತ್‌ ಮೊತ್ತ ದಾಖಲಿಸಿ ಬಾಂಗ್ಲಾ ಎದುರು 300+ ರನ್‌ಗಳ ಅಂತರದಲ್ಲಿ ಕ್ರಿಕೆಟ್‌ ಇತಿಹಾಸದಲ್ಲಿ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಐರಿಹಾಸಿಕ ಜಯ ದಾಖಲಿಸಿದರೆ ಮಾತ್ರವೇ ಉಪಾಂತ್ಯಕ್ಕೆ ಪ್ರವೇಶ ಲಭ್ಯವಾಗಲಿದೆ. ಒಂದು ವೇಳೆ ಟಾಸ್‌ ಸೋತು ಬಾಂಗ್ಲಾ ಮೊದಲು ಬ್ಯಾಟ್‌ ಮಾಡಿದರೆ ಪಾಕಿಸ್ತಾನ ತಂಡದ ಅಭಿಯಾನ ಟಾಸ್‌ನಲ್ಲೇ ಕೊನೆಗೊಳ್ಳಲಿದೆ.

ಅಂಬಾಟಿ ರಾಯುಡು ನಿವೃತ್ತಿ ಬಗ್ಗೆ ಗುಡುಗಿದ ಗೌತಮ್‌ ಗಂಭೀರ್‌!ಅಂಬಾಟಿ ರಾಯುಡು ನಿವೃತ್ತಿ ಬಗ್ಗೆ ಗುಡುಗಿದ ಗೌತಮ್‌ ಗಂಭೀರ್‌!

ಈ ಸಂದರ್ಭದಲ್ಲಿ ತಮ್ಮ ಹತಾಶೆ ಹೊರ ಹಾಕಿರುವ ಪಾಕಿಸ್ತಾನ ತಂಡದ ಮಾಜಿ ವೇಗಿ ಶೊಯೇಬ್‌ ಅಖ್ತರ್, "ವಿಶ್ವಕಪ್‌ನಲ್ಲಿ ಆಡಲಾಗುತ್ತಿರುವ ಕ್ರಿಕೆಟ್‌ನ ಗುಣಮಟ್ಟ ನನಗೆ ಬೇಸರ ತಂದಿದೆ. ಕ್ರಿಕೆಟ್‌ನ ಗುಣಮಟ್ಟ ಇಲ್ಲಿ ತಳ ಹಿಡಿದಿದೆ. ರನ್‌ ಗಳಿಸುವುದು ಇಲ್ಲಿ ಸುಲಭವಾಗಿಬಿಟ್ಟಿದೆ. ಬೌಲರ್‌ಗಳಲ್ಲೂ ಗುಣಮಟ್ಟವಿಲ್ಲ. 1990ರ ದಶಕ ಮತ್ತು 2000ದ ದಶಕಗಳಲ್ಲಿ ಸ್ಪಿನ್‌ ಮತ್ತು ವೇಗಿಗಳಲ್ಲಿ ಇದ್ದ ಗುಣಮಟ್ಟ ಈಗ ಇಲ್ಲವಾಗಿದೆ. ಕೊತೆಗೆ ಮೂರು ಪವರ್‌ ಪ್ಲೇ ಮತ್ತು ಎರಡು ಹೊಸ ಚೆಂಡಿನ ಬಳಕೆಯಿಂದಾಗಿ ರನ್‌ ಗಳಿಸುವುದು ಸುಲಭವಾಗಿ ಬಿಟ್ಟಿದೆ,'' ಎಂದು ತಮ್ಮ ಯೂಟ್ಯೂಬ್‌ ಚಾನಲ್‌ನಲ್ಲಿ ಹೇಳಿಕೊಂಡಿದ್ದಾರೆ.

ಭಾರತ ತಂಡಕ್ಕೆ 4ನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ಹೆಸರಿಸಿದ ಯುವರಾಜ್‌!ಭಾರತ ತಂಡಕ್ಕೆ 4ನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ಹೆಸರಿಸಿದ ಯುವರಾಜ್‌!

"ಇಂಗ್ಲೆಂಡ್‌ ವಿರುದ್ಧ ನ್ಯೂಜಿಲೆಂಡ್‌ ಆಡಿದ ರೀತಿ ನಿಜಕ್ಕೂ ನಿರಾಸೆ ಮೂಡಿಸಿತು. ಕಿವೀಸ್‌ ಕಿಂಚಿತ್ತೂ ಹೋರಾಟ ನೀಡದೆ ಸುಲಭವಾಗಿ ಇಂಗ್ಲೆಂಡ್‌ಗೆ ಶರಣಾಯಿತು," ಎಂದು ಅಖ್ತರ್‌ ಹೇಳಿದ್ದಾರೆ.

ಇದೇ ವೇಳೆ ಪಾಕಿಸ್ತಾನ ತಂಡದ ದಯನೀಯ ಸ್ಥಿತಿಗೆ ತಂಡದ ಕಳಾಹೀನ ಪ್ರದರ್ಶನವೇ ಕಾರಣ ಎಂದು 43 ವರ್ಷದ ಅಖ್ತರ್‌ ಗುಡುಗಿದ್ದಾರೆ. "ವೆಸ್ಟ್‌ ಇಂಡೀಸ್‌ ವಿರುದ್ಧದ ಪಂದ್ಯ ನಮ್ಮ ಪಾಲಿಗೆ ನಿಜಕ್ಕೂ ಭಾರಿ ಹೊಡೆತವನ್ನೇ ನೀಡಿತು. ಜೊತೆಗೆ ಶ್ರೀಲಂಕಾ ವಿರುದ್ಧದ ಪಂದ್ಯ ಮಳೆಗೆ ಆಹುತಿಯಾಯಿತು. ಆಸ್ಟ್ರೇಲಿಯಾ ವಿರುದ್ಧ ಗೆಲ್ಲುವ ಉತ್ತಮ ಅವಕಾಶ ಕೈಚೆಲ್ಲಿದೆವು. ಈ ಮೂರು ಪಂದ್ಯಗಳು ತಂಡ ಈ ಸ್ಥಿತಿಗೆ ಕಾರಣವಾಗಿದೆ,'' ಎಂದಿದ್ದಾರೆ.

Story first published: Thursday, July 4, 2019, 17:35 [IST]
Other articles published on Jul 4, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X