ಭಾರತದಲ್ಲಿ ಐಪಿಎಲ್ ಆಯೋಜನೆ ಸಾಧ್ಯವಾಗದಕ್ಕೆ ಬೇಸರಿಸಿದ ಸ್ಟೀವ್ ಸ್ಮಿತ್

ಕೊರೊನಾ ವೈರಸ್‌ನ ಕಾರಣದಿಂದಾಗಿ ಈ ಬಾರಿಯ ಐಪಿಎಲ್ ಕ್ರೀಡಾಕೂಟವನ್ನು ಯುಎಇನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಇದಕ್ಕೆ ಆಸ್ಟ್ರೇಲಿಯಾ ಕ್ರಿಕೆಟ್‌ನ ಪ್ರಮುಖ ಆಟಗಾರ, ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸ್ಟೀವ್ ಸ್ಮಿತ್ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಯುಎಇನ ವಾತಾವರಣಕ್ಕೆ ಎಲ್ಲಾ ಆಟಗಾರರು ಕೂಡ ಹೊಂದಿಕೊಳ್ಳಲೇಬೇಕಾಗಿದೆ ಎಂದಿರುವ ಸ್ಮಿತ್ ಅದು ತನಗೆ ಸಮಸ್ಯೆಯಾಗಲಾರದು ಎಂದಿದ್ದಾರೆ. ಕೊರೊನಾ ವೈರಸ್‌ನ ಕಾರಣದಿಂದಾಗಿ ಕ್ರಿಕೆಟ್ ಸ್ಥಗಿತಗೊಂಡಿರುವ ಕಾರಣ ಎಲ್ಲರೂ ಕೂಡ ಅಂಗಳಕ್ಕೆ ಇಳಿಯಲು ಹಾಗೂ ಉತ್ಕೃಷ್ಟ ಮಟ್ಟದ ಕ್ರಿಕೆಟ್ ಆಡಲು ಕಾತುರದಿಂದಿದ್ದಾರೆ ಎಂದು ಸ್ಟೀವ್ ಸ್ಮಿತ್ ಹೇಳಿದ್ದಾರೆ.

ಈ 5 ಆಟಗಾರರ ಪಾಲಿಗೆ 2020ರ ಐಪಿಎಲ್ ಕೊನೇಯ ಸೀಸನ್ ಎನಿಸಲಿದೆ!

ದುಬೈನಲ್ಲಿ ಐಪಿಎಲ್ ನಡೆಯುತ್ತಿರುವ ಕಾರಣ ಅಲ್ಲಿನ ಪರಿಸ್ಥಿತಿ ಭಾರತದ ವಾತಾವರಣದಂತೆಯೇ ಇರಬಹುದು ಅಥವಾ ಇಲ್ಲದಿರಬಹುದು. ಅದು ನೀವು ಹೇಗೆ ಹೊಂದಿಕೊಳ್ಳುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ಹಲವು ಆಟಗಾರರು ಯುಎಇನಲ್ಲಿ ಐಪಿಎಲ್‌ನಲ್ಲಿ ಆಡಿದ ಅನುಭವಹೊಂದಿದ್ದಾರೆ ಎಂದು ಸ್ಟೀವ್ ಸ್ಮಿತ್ ಹೇಳಿದ್ದಾರೆ.

"ಗುಣಮಟ್ಟದ ಕ್ರಿಕೆಟ್ ಆಡಲು ಆಟಗಾರರು ಉತ್ಸುಕರಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ. ಆದರೆ ಈ ಬಾರಿ ಅದು ಭಾರತದಲ್ಲಿ ಇರುವುದಿಲ್ಲ ಎಂಬುದು ಬೇಸರವಾಗಿದೆ. ಭಾರತದಲ್ಲಿ ಕ್ರಿಕೆಟ್ ಆಡುವುದನ್ನು ಸಂಪೂರ್ಣವಾಗಿ ಇಷ್ಟಪಡುತ್ತೇನೆ" ಎಂದು ಸ್ಟೀವ್ ಸ್ಮಿತ್ ಹೇಳಿದರು.

ಅದೇ ಕಣ್ಣು!: ಕ್ರಿಕೆಟಿಗ ಶುಭ್‌ಮನ್ ಗಿಲ್, ಸಚಿನ್ ಪುತ್ರಿ ಸಾರಾ 'ಕಣ್ಣಿಟ್ಟ' ಗುಟ್ಟೇನು?

ಕೊರೊನಾ ವೈರಸ್‌ನ ಕಾರಣದಿಂದಾಗಿ ವಿರಾಮದಲ್ಲಿದ್ದ ಕಾರಣದಿಂದಾಗಿ ಎಲ್ಲ ಆಟಗಾರರು ಕೂಡ ಅಭ್ಯಾಸವಿಲ್ಲದೆ ಜಡತ್ವ ಹೊಂದಿರುವ ಸಾಧ್ಯತೆಯಿರುತ್ತದೆ. ಆದರೆ ಇದು ಪ್ರತಿಯೊಬ್ಬರಿಗೂ ಒಂದೇ ಸ್ಥಿತಿಯಿದ್ದ ಕಾರಣ ಯಾರಿಗೂ ಇದರ ಅನುಕೂಲತೆಗಳು ಇರುವುದಿಲ್ಲ ಎಂಬುದು ಕೂಡ ಗಮನಿಸಬೇಕು ಎಂದು ಸ್ಟೀವ್ ಸ್ಮಿತ್ ಹೇಳಿದ್ದಾರೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Friday, July 31, 2020, 21:07 [IST]
Other articles published on Jul 31, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X