ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಡ್ರೆಸ್ಸಿಂಗ್ ರೂಂನಲ್ಲಿ ಆಸ್ಟ್ರೇಲಿಯಾದ ಸಂಭ್ರಮಾಚರಣೆ ಅಸಹ್ಯ ಹುಟ್ಟಿಸುವಂತಿತ್ತು: ಶೋಯೆಬ್ ಅಕ್ತರ್

Shoaib akthar

ಭಾನುವಾರ ನಡೆದ ಐಸಿಸಿ ಟಿ20 ವಿಶ್ವಕಪ್ 2021ರಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವು ಚೊಚ್ಚಲ ಬಾರಿಗೆ ಟಿ20 ವಿಶ್ವಕಪ್ ಅನ್ನು ಮುಡಿಗೇರಿಸಿಕೊಂಡಿತು. ಐಸಿಸಿ ಟೋಫ್ರಿಗಳನ್ನೆಲ್ಲಾ ಗೆದ್ದುಕೊಂಡಿದ್ದ ಕಾಂಗರೂ ರಾಷ್ಟ್ರಕ್ಕೆ ಇದೊಂದು ಟ್ರೋಫಿ ಇದುವರೆಗೂ ದಕ್ಕಿರಲಿಲ್ಲ. ಆದ್ರೆ ಕಡೆಗೂ ಆ್ಯರೋನ್ ಫಿಂಚ್ ನೇತೃತ್ವದ ತಂಡವು ಟಿ20 ವಿಶ್ವಕಪ್ ಗೆದ್ದುಕೊಂಡಿದೆ.

ಆಸ್ಟ್ರೇಲಿಯಾ ಈ ಕಪ್ ಗೆಲ್ಲುವ ಮೂಲಕ ಬರೋಬ್ಬರಿ ಎಂಟನೆಯ ಐಸಿಸಿ ಟ್ರೋಫಿಯನ್ನ ತನ್ನದಾಗಿಸಿಕೊಂಡಿದೆ. ತನ್ನ ಬದ್ಧ ವೈರಿ ನ್ಯೂಜಿಲೆಂಡ್ ತಂಡವನ್ನು ಮಣಿಸುವ ಮೂಲಕ ಚೊಚ್ಚಲ ಚುಟುಕು ವಿಶ್ವಕಪ್‌ ಅನ್ನು ತನ್ನದಾಗಿಸಿಕೊಂಡಿದೆ.

ವಿಶ್ವಕಪ್ ಗೆದ್ದ ಬಳಿಕ ಆಸ್ಟ್ರೇಲಿಯಾದ ಸಂಭ್ರಮಾಚರಣೆ ಮುಗ್ಗಿಲು ಮುಟ್ಟಿತ್ತು. ನ್ಯೂಜಿಲೆಂಡ್ ತಂಡದ ಆಟಗಾರರು ಹತಾಶರಾಗಿ ಡ್ರೆಸ್ಸಿಂಗ್ ರೂಂನತ್ತ ಹೆಜ್ಜೆ ಹಾಕಿದ್ರೆ, ಕಾಂಗರೂಗಳ ಸಂತಸಕ್ಕೆ ಯಾವುದೇ ಕಡಿವಾಣವೇ ಇರಲಿಲ್ಲ.

ಡ್ರೆಸ್ಸಿಂಗ್‌ ರೂಂನಲ್ಲೂ ಆಸೀಸ್‌ ಆಟಗಾರರು ಹಾಡನ್ನು ಹೇಳುತ್ತಾ, ಜೈಕಾರ ಹಾಕುತ್ತಾ ಕುಣಿದು ಕುಪ್ಪಳಿಸಿದ್ರು. ಈ ವೇಳೆ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮ್ಯಾಥ್ಯೂ ವೇಡ್ ಮತ್ತು ಆಲ್‌ರೌಂಡರ್‌ ಮಾರ್ಕಸ್‌ ಸ್ಟೋಯ್ನಿಸ್ ಸಂಭ್ರಮಾಚರಣೆ ಒಂದು ಹಂತವನ್ನು ಮೀರಿದ್ದು, ನೋಡುಗರನ್ನ ಅಚ್ಚರಿಗೊಳಿಸಿತು.

ಮ್ಯಾಥ್ಯೂ ವೇಡ್ ಮತ್ತು ಮಾರ್ಕಸ್‌ ಸ್ಟೋಯ್ನಿಸ್ ಸಂಭ್ರಮಿಸುತ್ತಾ, ತಮ್ಮದೇ ಶೂಗಳಲ್ಲಿ ಬಿಯರ್ ಹಾಕಿಕೊಂಡು ಕುಡಿದುಬಿಟ್ರು.ಇದು ನೋಡುಗರಿಗೆ ಆಶ್ಚರ್ಯ ಮೂಡಿಸಿದ್ರೆ, ಸಾಮಾಜಿಕ ಜಾಲತಾಣಗಳಲ್ಲಿ ಹಲವರ ತೀವ್ರ ಟೀಕೆಗೆ ಗುರಿಯಾಯಿತು.

ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಕೂಡ ಟಿ 20 ವಿಶ್ವಕಪ್ ವಿಜಯವನ್ನು ಆಚರಿಸುವ ಆಸ್ಟ್ರೇಲಿಯಾದ ವಿಧಾನವನ್ನು "ಸ್ವಲ್ಪ ಅಸಹ್ಯಕರ" ಎಂದು ಬಣ್ಣಿಸಿದ್ದಾರೆ. ನವೆಂಬರ್ 14 ರಂದು ನಡೆದ ಫೈನಲ್‌ನಲ್ಲಿ ಆಸ್ಟ್ರೇಲಿಯಾವು ನ್ಯೂಜಿಲೆಂಡ್‌ಗೆ ಎಂಟು ವಿಕೆಟ್‌ಗಳ ಸೋಲನ್ನು ನೀಡಿ ತಮ್ಮ ಚೊಚ್ಚಲ ಟಿ20 ವಿಶ್ವಕಪ್‌ ಗೆದ್ದುಕೊಂಡಿತು.

ಅಖ್ತರ್, ಆಸ್ಟ್ರೇಲಿಯಾದ ಡ್ರೆಸ್ಸಿಂಗ್ ರೂಂ ವೀಡಿಯೋವನ್ನು ಪೋಸ್ಟ್ ಮಾಡುತ್ತಾ, "ಸ್ವಲ್ಪ ಅಸಹ್ಯ ಹುಟ್ಟಿಸುವ ವಿಧಾನ ಇದಲ್ಲವೇ??" ಎಂದು ಟಾಂಗ್ ಕೊಟ್ಟಿದ್ದಾರೆ.

ಟಿ20 ವಿಶ್ವಕಪ್‌ಗೂ ಮುನ್ನ ಆಸ್ಟ್ರೇಲಿಯಾ ಐದು ದ್ವಿಪಕ್ಷೀಯ ಸರಣಿಗಳಲ್ಲಿ ಪ್ರತಿಯೊಂದರಲ್ಲೂ ಸೋಲನ್ನ ಕಂಡಿತ್ತು. ಆಸೀಸ್ ಈ ಮಟ್ಟಿಗೆ ಗೆಲ್ಲುತ್ತೆ ಎಂದು ಯಾರೂ ಊಹಿಸಿರ್ಲಿಲ್ಲ. ಸೆಮಿ-ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿದ ನಂತರ ನ್ಯೂಜಿಲೆಂಡ್ ವಿರುದ್ಧದ ಗೆಲುವಿನೊಂದಿಗೆ ತಮ್ಮ ಟ್ರೋಫಿ ಕ್ಯಾಬಿನೆಟ್ ಅನ್ನು ಪೂರ್ಣಗೊಳಿಸಿತು. ಈ ಮೂಲಕ ಟೀಕಾಕಾರರಿಗೆ ಉತ್ತರ ನೀಡಿತು.

ಇದು ತಂಡದ ಪ್ರಯತ್ನದ ಫಲ: ಜಸ್ಟಿನ್ ಲ್ಯಾಂಗರ್
ಆಸ್ಟ್ರೇಲಿಯಾದ ಮುಖ್ಯ ತರಬೇತುದಾರ ಜಸ್ಟಿನ್ ಲ್ಯಾಂಗರ್ ಅವರು ತಮ್ಮ ನಾಯಕತ್ವದ ಶೈಲಿ ಮತ್ತು ಅವರ ಅಡಿಯಲ್ಲಿ 20-ಓವರ್ ಮಾದರಿಯಲ್ಲಿ ಆಸ್ಟ್ರೇಲಿಯಾದ ಸೋಲಿನ ಕುರಿತು ಸಾಕಷ್ಟು ಟೀಕೆಗಳನ್ನು ಎದುರಿಸಿದ್ರು. ಆದ್ರೆ ಇದೀಗ ತಮ್ಮ ಪ್ರದರ್ಶನದ ಮೂಲಕ ಎಲ್ಲದಕ್ಕೂ ಉತ್ತರ ನೀಡಿದ್ದಾರೆ.

ಭಾರತದೆದುರು ಆಡುವುದು ನಿಜಕ್ಕೂ ದೊಡ್ಡ ಸವಾಲಾಗಿರುತ್ತದೆ: ನ್ಯೂಜಿಲೆಂಡ್ ಕೋಚ್ಭಾರತದೆದುರು ಆಡುವುದು ನಿಜಕ್ಕೂ ದೊಡ್ಡ ಸವಾಲಾಗಿರುತ್ತದೆ: ನ್ಯೂಜಿಲೆಂಡ್ ಕೋಚ್

"ವಿಶ್ವಕಪ್ ಗೆದ್ದ ಪ್ರತಿಯೊಬ್ಬರೂ ಅದನ್ನು ಪಡೆಯುವುದು ಕಷ್ಟ, ಪದಗಳಲ್ಲಿ ಹೇಳುವುದು ಕಷ್ಟ, ಆದರೆ ಇದು ಅಂತಹ ಅದ್ಭುತ ಜನರ ಗುಂಪಾಗಿದೆ. ಪ್ರತಿಯೊಬ್ಬ ಕೋಚ್ ಮತ್ತು ಪ್ರತಿಯೊಬ್ಬ ನಾಯಕನೂ ಅದನ್ನೇ ಹೇಳುತ್ತಾರೆ. ಆದರೆ ನಾವು ಇಲ್ಲಿ ಕೆಲವು ಅದ್ಭುತ ಕ್ರಿಕೆಟಿಗರನ್ನು ಪಡೆದಿದ್ದೇವೆ'' ಎಂದು ಲ್ಯಾಂಗರ್ ಫೈನಲ್ ನಂತರ ಹೇಳಿದರು.

ಕಳೆದ 12 ತಿಂಗಳುಗಳಿಂದ ಬೇರೆ ಬೇರೆ ಕಾರಣಗಳಿಗಾಗಿ ನಮಗೆ ಒಟ್ಟಿಗೆ ಆಡುವ ಅವಕಾಶ ಸಿಕ್ಕಿರಲಿಲ್ಲ. ನಾವೆಲ್ಲರೂ ಮತ್ತೆ ಒಟ್ಟಿಗೆ ಸೇರಿದಾಗ, ಅದು ಪುನರ್ಮಿಲನದಂತೆಯೇ ಇತ್ತು. ಅಲ್ಲಿ ಅನೇಕ ನಿಕಟ ಸಂಬಂಧಗಳಿವೆ, ಎಲ್ಲರಿಗೂ ಬಹಳ ವಿಶೇಷವಾದ ಕ್ಷಣ. ನಮ್ಮಲ್ಲಿ ಎಷ್ಟು ಪ್ರತಿಭೆ ಇದೆ ಎಂದು ನಾವು ಒಟ್ಟಿಗೆ ಸೇರಿದಾಗ ನಮಗೆ ತಿಳಿದಿದ್ದು, ತಂಡದಲ್ಲಿ ಅಗಾಧ ಪ್ರತಿಭೆಗಳಿದ್ದು, ಎಲ್ಲರೂ ಖುಷಿಯಿಂದ ಸಂಭ್ರಮಿಸಿದ್ದಾರೆ'' ಎಂದು ಜಸ್ಟಿನ್ ಲ್ಯಾಂಗರ್ ಹೇಳಿದ್ದಾರೆ.

ಆಸ್ಟ್ರೇಲಿಯಾ ಈ ಟ್ರೋಫಿ ಗೆಲುವಿನ ಮೂಲಕ ಎಲ್ಲಾ ಐಸಿಸಿ ಟ್ರೋಫಿ ಗೆದ್ದಂತಾಗಿದೆ. ಕ್ರಿಕೆಟ್ ವಿಶ್ವಕಪ್‌ನಲ್ಲಿ ಅತ್ಯಂತ ಯಶಸ್ವಿ ತಂಡವು 1987, 1999, 2003, 2007, ಮತ್ತು 2015 ರಲ್ಲಿ 50 ಓವರ್‌ಗಳ ವಿಶ್ವಕಪ್ ಗೆದ್ದುಕೊಂಡಿದೆ. ಆಸ್ಟ್ರೇಲಿಯಾ 2019 ರವರೆಗೆ ವಿಶ್ವಕಪ್ ಆತಿಥ್ಯ ವಹಿಸಿದ ಎಲ್ಲಾ ದೇಶಗಳಲ್ಲಿ ಟ್ರೋಫಿ ಗೆದ್ದ ಏಕೈಕ ತಂಡ ಎಂಬ ದಾಖಲೆ ಮಾಡಿದೆ.

Boot ಗಳಲ್ಲಿ ಬಿಯರ್ ಕುಡಿದು ಸಂಭ್ರಮಿಸಿದ ಆಸೀಸ್ ಆಟಗಾರರ ವಿಡಿಯೋ ವೈರಲ್ | Oneindia Kannada

ಇದಲ್ಲದೆ ಆಸ್ಟ್ರೇಲಿಯಾ 2006 ಮತ್ತು 2009 ರಲ್ಲಿ ವೆಸ್ಟ್ ಇಂಡೀಸ್ ಮತ್ತು ನ್ಯೂಜಿಲೆಂಡ್ ವಿರುದ್ಧ ಕ್ರಮವಾಗಿ ಎರಡು ಬಾರಿ ICC ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿತು. ಕೊನೆಯದಾಗಿ, 2021 ರ T20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ಅನ್ನು ಸೋಲಿಸಿದ ನಂತರ ಆಸ್ಟ್ರೇಲಿಯಾ ತನ್ನ ಮೊದಲ ICC T20 ವಿಶ್ವಕಪ್ ಟ್ರೋಫಿಯನ್ನು ಗೆದ್ದು ಬೀಗಿದೆ.

Story first published: Tuesday, November 16, 2021, 10:18 [IST]
Other articles published on Nov 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X