ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2019: ರಾಜಸ್ಥಾನ್‌ ರಾಯಲ್ಸ್‌ಗೆ ಮಾಡು ಇಲ್ಲವೆ ಮಡಿ ಪಂದ್ಯ

Do-or-die encounter for Royals against Mumbai

ಜೈಪುರ, ಏಪ್ರಿಲ್‌ 20: ಬ್ಯಾಟಿಂಗ್‌ ಮತ್ತು ಬೌಲಿಂಗ್‌ನ್ಲಲ್ಲಿ ಬಲಿಷ್ಠವಾಗಿದ್ದರೂ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲಗೊಂಡಿರುವ ರಾಜಸ್ಥಾನ್‌ ರಾಯಲ್ಸ್‌ ತಂಡ, ಪ್ರವಾಸಿ ಮುಂಬಯಿ ಇಂಡಿಯನ್ಸ್‌ ವಿರುದ್ಧಶನಿವಾರ ಮಾಡು ಇಲ್ಲವೆ ಮಡಿ ಪಂದ್ಯವನ್ನಾಡಲಿದ್ದು, ಇಲ್ಲಿ ಗೆದ್ದರಷ್ಟೇ ರಾಯಲ್ಸ್‌ನ ಪ್ಲೇ ಆಫ್ಸ್‌ ಕನಸನ್ನು ಜೀವಂತವಾಗಿರಿಸಿಕೊಳ್ಳಲಿದೆ.

ಲೀಗ್‌ನಲ್ಲಿ ಈವರೆಗೆ ಒಟ್ಟು 8 ಪಂದ್ಯಗಳನ್ನು ಆಡಿರುವ ರಾಯಲ್ಸ್‌ 6 ಸೋಲು ಮತ್ತು 2 ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ತನ್ನ ಹಿಂದಿನ ಪಂದ್ಯದಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಎದುರು 12 ರನ್‌ಗಳ ಅಂತರದಲ್ಲಿ ಸೋತಿರುವ ರಾಯಲ್ಸ್‌, ಇದೀಗ ಸವಾಯ್‌ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ಬಲಿಷ್ಠ ಇಂಡಿಯನ್ಸ್‌ ಪಡೆಗೆ ಖೆಡ್ಡಾ ತೋಡಲು ಎದುರು ನೋಡುತ್ತಿದೆ.

ಮತ್ತೊಂದೆಡೆ ಅಮೋಘ ಲಯದಲ್ಲಿರುವ ರೋಹಿತ್‌ ಶರ್ಮಾ ಸಾರಥ್ಯದ ಮುಂಬಯಿ ಇಂಡಿಯನ್ಸ್‌ 9 ಪಂದ್ಯಗಳಿಂದ 6 ಗೆಲುವು ಮತ್ತು 3 ಸೋಲಿನೊಂದಿಗೆ 12 ಅಂಕಗಳನ್ನು ಗಳಿಸಿದ್ದು, ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಅಲ್ಲದೆ ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 40 ರನ್‌ಗಳ ಭರ್ಜರಿ ಜಯ ದಾಖಲಿಸಿ ಆತ್ಮವಿಶ್ವಾಸದ ಅಲೆಯಲ್ಲಿ ಸಾಗುತ್ತಿದೆ.

ಬಟ್ಲರ್‌ ಮೇಲೆ ಹೆಚ್ಚು ಅವಲಂಬನೆ
ರಾಯಲ್ಸ್‌ ತಂಡದ ಬ್ಯಾಟಿಂಗ್‌ ವಿಭಾಗ ಜೋಸ್‌ ಬಟ್ಲರ್‌ ಮೇಲೆ ಹೆಚ್ಚು ಅವಲಂಬಿತವಾಗಿದೆ. ನಿರೀಕ್ಷೆಗೆ ತಕ್ಕ ಆಟವನ್ನೇ ಆಡಿರುವ ಬಟ್ಲರ್‌ 8 ಪಂದ್ಯಗಳಿಂದ ಒಟ್ಟು 311 ರನ್‌ಗಳನ್ನು ಗಳಿಸಿದ್ದಾರೆ. ಆದರೆ, ನಾಯಕ ಅಜಿಂಕ್ಯ ರಹಾನೆ ಮತ್ತು ಆಸೀಸ್‌ನ ಮಾಜಿ ನಾಯಕ ಸ್ಟೀವನ್‌ ಸ್ಮಿತ್‌ ಅವರ ಪ್ರದರ್ಶನ ಕುಂಟಿತವಾಗಿರುವುದು ರಾಯಲ್ಸ್‌ ಬ್ಯಾಟಿಂಗ್‌ ಬಲವನ್ನು ಕುಗ್ಗುವಂತೆ ಮಾಡಿದೆ.

ಇನ್ನು ಸನ್‌ರೈಸರ್ಸ್‌ ವಿರುದ್ಧ ಶತಕ ದಾಖಲಿಸಿದ್ದ ಸಂಜು ಸ್ಯಾಮ್ಸನ್‌ ಅವರ ಫಾರ್ಮ್‌ ಕ್ರಮೇಣ ಇಳಿಮುಖವಾಗಿ ಸಾಗಿದೆ. ಬೌಲಿಂಗ್‌ ವಿಭಾಗದಲ್ಲಿ ವೇಗಿ ಜೋಫ್ರಾ ಆರ್ಚರ್‌ ಮಿಂಚಿನ ಪ್ರದರ್ಶನ ನೀಡುತ್ತಿದ್ದಾರೆ. ಆದರೆ, ತಂಡವನ್ನು ಗೆಲುವಿನ ಹಾದಿಯಲ್ಲಿ ಸಾಗುವಂತೆ ಮಾಡಲು ರಾಯಲ್ಸ್‌ ಮತ್ತಷ್ಟು ಸಂಘಟಿತ ಪ್ರದರ್ಶನ ನೀಡಬೇಕಿದೆ.

ಇಂಡಿಯನ್ಸ್‌ಗೆ ಪಾಂಡ್ಯ ಬಲ
ಮುಂಬಯಿ ಇಂಡಿಯನ್ಸ್‌ ಪರ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಮ್ಯಾಚ್‌ ವಿನ್ನರ್‌ ಎನಿಸಿದ್ದಾರೆ. ಅದರಲ್ಲೂ ಕಳೆದ ಪಂದ್ಯದಲ್ಲಿ ಕೇವಲ 15 ಎಸೆತಗಳಲ್ಲಿ 32 ರನ್‌ಗಳನ್ನು ಸಿಡಿಸಿದ ಪಾಂಡ್ಯ ಡೆಲ್ಲಿ ಕ್ಯಾಪಿಟಲ್ಸ್‌ ಎದುರು ಮುಂಬಯಿ ತಂಡಕ್ಕೆ 40 ರನ್‌ಗಳ ಭರ್ಜರಿ ಜಯ ತಂದುಕೊಟ್ಟಿದ್ದರು. ಆರ್‌ಸಿಬಿ ವಿರುದ್ಧ ಪಂದ್ಯದಲ್ಲೂ ಪಾಂಡ್ಯ ಇದೇ ರೀತಿ ಪರಾಕ್ರಮ ಮೆರೆದಿದ್ದರು. ಬೌಲಿಂಗ್‌ನಲ್ಲೂ ಒಟ್ಟಾರೆ ಎಂಟು ವಿಕೆಟ್‌ ಪಡೆದಿರುವ ಪಾಂಡ್ಯ ತಂಡದ ಪ್ರಮುಖ ಅಸ್ತ್ರವಾಗಿದ್ದಾರೆ. ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಎರಡರಲ್ಲೂ ಸ್ಥಿರತೆ ಕಾಯ್ದುಕೊಂಡಿರುವ ಪಾಂಡ್ಯ ಎದುರಾಳಿ ತಂಡಗಳಲ್ಲಿ ನಡುಕ ಹುಟ್ಟಿಸಿದ್ದಾರೆ.

ರಾಯಲ್ಸ್‌ ಸಂಭಾವ್ಯ 11
ರಾಹುಲ್‌ ತ್ರಿಪಾಠಿ, ಜೋಸ್‌ ಬಟ್ಲರ್‌, ಸಂಜು ಸ್ಯಾಮ್ಸನ್‌, ಅಜಿಂಕ್ಯ ರಹಾನೆ, ಆಷ್ಟನ್‌ ಟರ್ನರ್‌, ಜೋಫ್ರಾ ಆರ್ಚರ್‌, ಸ್ಟುವರ್ಟ್‌ ಬಿನ್ನಿ, ಶ್ರೇಯಸ್‌ ಗೋಪಾಲ್‌, ಜಯದೇವ್‌ ಉನಾದ್ಕಟ್‌, ಧವಳ್‌ ಕುಲಕರ್ಣಿ, ಜಯದೇವ್‌ ಉನಾದ್ಕಟ್‌.

ಇಂಡಿಯನ್ಸ್‌ ಸಂಭಾವ್ಯ 11
ರೋಹಿತ್‌ ಶರ್ಮಾ, ಕ್ವಿಂಟನ್‌ ಡಿ'ಕಾಕ್‌, ಬೆನ್‌ ಕಟಿಂಗ್‌, ಸೂರ್ಯಕುಮಾರ್‌ ಯಾದವ್‌, ಕೃಣಲ್‌ ಪಾಂಡ್ಯ, ಹಾರ್ದಿಕ್‌ ಪಾಂಡ್ಯ, ಕೈರೊನ್‌ ಪೊಲಾರ್ಡ್‌, ಜಯಂತ್‌ ಯಾದವ್‌, ರಾಹುಲ್‌ ಚಹರ್‌, ಲಸಿತ್‌ ಮಾಲಿಂಗ, ಜಸ್‌ಪ್ರೀತ್‌ ಬುಮ್ರಾ.

Story first published: Friday, April 19, 2019, 18:27 [IST]
Other articles published on Apr 19, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X