ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಟರ್‌ ನ್ಯಾಷನಲ್ ಕ್ರಿಕೆಟ್ ಕ್ಯಾಪ್ಟನ್‌ಗಳ ವಾರ್ಷಿಕ ಸಂಬಳ ಎಷ್ಟಿದೆ ಗೊತ್ತಾ?!

Do you know the annual salary of international cricket captains?

ಬೆಂಗಳೂರು: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಂಡವೊಂದನ್ನು ಮುನ್ನಡೆಸೋದು ಎಂದರೆ ಸುಲಭದ ಮಾತಲ್ಲ. ಮೈದಾನದ ಒಳಗೆ ಅಥವಾ ಹೊರಗಿದ್ದರೂ ನಾಯಕರಿಗೆ ಒತ್ತಡವಂತೂ ಇದ್ದೇ ಇರುತ್ತದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ ತಂಡದ ಹೆಚ್ಚಿನ ನಾಯಕರು ಆಯಾ ಕ್ರಿಕೆಟ್ ಮಂಡಳಿಗಳಲ್ಲಿ ಒಪ್ಪಂದ ಮಾಡಿಕೊಂಡಿರುತ್ತಾರೆ. ಆ ಒಪ್ಪಂದಗಳ ಪ್ರಕಾರ ಸಂಬಳ ಪಡೆಯುತ್ತಾರೆ. ವಿಭಿನ್ನ ಮಂಡಳಿಗಳು ತಮ್ಮ ಒಪ್ಪಂದಗಳಿಗೆ ಅನುಗುಣವಾಗಿ ವಿಭಿನ್ನ ಕಾಲಾವಧಿ ಹೊಂದಿರುತ್ತವೆ.

ಕೊಹ್ಲಿಗಿರುವ ಈ ಸಾಮರ್ಥ್ಯ ರೋಹಿತ್, ಗೇಲ್, ಎಬಿಡಿಗೂ ಇಲ್ಲ!: ಗಂಭೀರ್ಕೊಹ್ಲಿಗಿರುವ ಈ ಸಾಮರ್ಥ್ಯ ರೋಹಿತ್, ಗೇಲ್, ಎಬಿಡಿಗೂ ಇಲ್ಲ!: ಗಂಭೀರ್

ಸಾಮಾನ್ಯವಾಗಿ ಕ್ರಿಕೆಟ್ ತಂಡದ ನಾಯಕರು ಆಯಾ ಬೋರ್ಡ್‌ಗಳಿಗಾನುಸಾರ ವರ್ಷಕ್ಕಿಷ್ಟು ಅಂತ ಸಂಬಳವನ್ನು ಒಪ್ಪಂದದ ಪ್ರಕಾರ ಪಡೆದುಕೊಳ್ಳುತ್ತಾರೆ. ಬೇರೆ ಬೇರೆ ಬೋರ್ಡ್‌ಗಳು ನಾಯಕರಿಗೆ ವಿಭಿನ್ನ ರೀತಿಯಲ್ಲಿ ವಾರ್ಷಿಕ ಸಂಬಳ ನೀಡುತ್ತಿವೆ.

ಪಂದ್ಯ ಗೆಲ್ಲದಿದ್ದರೂ ಅಭಿಮಾನಿಗಳ ಹೃದಯ ಗೆದ್ದ 4 ಅದ್ಭುತ ಒಡಿಐ ಪ್ರದರ್ಶನಗಳುಪಂದ್ಯ ಗೆಲ್ಲದಿದ್ದರೂ ಅಭಿಮಾನಿಗಳ ಹೃದಯ ಗೆದ್ದ 4 ಅದ್ಭುತ ಒಡಿಐ ಪ್ರದರ್ಶನಗಳು

ವಿರಾಟ್ ಕೊಹ್ಲಿಯೂ ಸೇರಿದಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ ತಂಡದ ಜನಪ್ರಿಯ ನಾಯಕರು ವಾರ್ಷಿಕವಾಗಿ ಪಡೆಯುವ ಸಂಬಳದ ಮಾಹಿತಿ ಇಲ್ಲಿದೆ.

7. ಶ್ರೀಲಂಕಾ: ಕರುಣರತ್ನೆ, ಮಾಲಿಂಗ

7. ಶ್ರೀಲಂಕಾ: ಕರುಣರತ್ನೆ, ಮಾಲಿಂಗ

ಶ್ರೀಲಂಕಾ ಕ್ರಿಕೆಟ್‌ ತಂಡದ ನಾಯಕತ್ವವನ್ನು ದಿಮುತ್ ಕರುಣರತ್ನೆ ಮತ್ತು ಲಸಿತ್ ಮಾಲಿಂಗ ವಹಿಸಿಕೊಂಡಿದ್ದಾರೆ. ಕರುಣರತ್ನೆ ಏಕದಿನ ಮತ್ತು ಟೆಸ್ಟ್ ತಂಡವನ್ನು ಮುನ್ನಡೆಸಿದರೆ, ಮಾಲಿಂಗ ಟಿ20ಐ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಇಬ್ಬರೂ ಶ್ರೀಲಂಕಾ ಕ್ರಿಕೆಟ್ ಬೋರ್ಡ್‌ನ ಒಪ್ಪಂದಲ್ಲಿದ್ದಾರೆ. ಇವರಿಬ್ಬರ ವಾರ್ಷಿಕ ವೇತನ ಗಮನಿಸಿದರೆ 2019-20ರಲ್ಲಿ ಕರುಣರತ್ನೆ 71.32 ಲಕ್ಷ. ರೂ ಪಡೆದರೆ, ಮಾಲಿಂಗ 50 ಲಕ್ಷ. ರೂ ಪಡೆಯುತ್ತಾರೆ.

6. ಆಸ್ಟ್ರೇಲಿಯಾ: ಪೈನೆ, ಫಿಂಚ್

6. ಆಸ್ಟ್ರೇಲಿಯಾ: ಪೈನೆ, ಫಿಂಚ್

ಕ್ರಿಕೆಟ್ ಆಸ್ಟ್ರೇಲಿಯಾದೊಂದಿಗೆ ಒಪ್ಪಂದ ಹೊಂದಿರುವ ಆಸ್ಟ್ರೇಲಿಯಾ ನಾಯಕರಾದ ಟೀಮ್ ಪೈನೆ ಮತ್ತು ಆ್ಯರನ್ ಫಿಂಚ್ ಸಮಾನಾಗಿ ವಾರ್ಷಿಕ ಸಂಬಳ ಪಡೆಯುತ್ತಿದ್ದಾರೆ. ಪೈನೆ ಟೆಸ್ಟ್‌ನಲ್ಲಿ, ಫಿಂಚ್ ಏಕದಿನ ಮತ್ತು ಟಿ20ಯಲ್ಲಿ ತಂಡ ಮುನ್ನಡೆಸುತ್ತಿದ್ದಾರಾದರೂ ಇಬ್ಬರೂ ವಾರ್ಷಿಕವಾಗಿ ಸುಮಾರು 4.87ಕೋ. ರೂ. ಗಳಿಸುತ್ತಿದ್ದಾರೆ.

5. ದಕ್ಷಿಣ ಆಫ್ರಿಕಾ: ಡು ಪ್ಲೆಸಿಸ್, ಡಿ ಕಾಕ್

5. ದಕ್ಷಿಣ ಆಫ್ರಿಕಾ: ಡು ಪ್ಲೆಸಿಸ್, ಡಿ ಕಾಕ್

2019-20ರ ಸೀಸನ್‌ಗೆ ವೈಟ್‌ ಬಾಲ್‌ ಕ್ರಿಕೆಟ್‌ನಿಂದ ದಕ್ಷಿಣ ಆಫ್ರಿಕಾ ನಾಯಕತ್ವದಿಂದ ಡು ಪ್ಲೆಸಿಸ್ ಅವರನ್ನು ಕೆಳಗಿಳಿಸಿ ಕ್ವಿಂಟನ್‌ ಡಿ ಕಾಕ್‌ಗೆ ಸ್ಥಾನ ನೀಡಲಾಗಿದೆ. ಆದರೆ ಡು ಪ್ಲೆಸಿಸ್ ಟೆಸ್ಟ್‌ ನಾಯಕತ್ವದಲ್ಲಿ ಮುಂದುವರೆದಿದ್ದಾರೆ. ಕ್ರಿಕೆಟ್ ದಕ್ಷಿಣ ಆಫ್ರಿಕಾದಿಂದ ವಾರ್ಷಿಕವಾಗಿ ಡು ಪ್ಲೆಸಿಸ್ 3.2 ಕೋ.ರೂ. ಪಡೆಯುತ್ತಿದ್ದಾರೆ. ಇನ್ನು ಏಕದಿನ ಮತ್ತು ಟಿ20ಐ ತಂಡದ ನಾಯಕ ಡಿ ಕಾಕ್ 2.5 ಪಡೆಯುತ್ತಿದ್ದಾರೆ.

4. ನ್ಯೂಜಿಲೆಂಡ್: ವಿಲಿಯಮ್ಸನ್

4. ನ್ಯೂಜಿಲೆಂಡ್: ವಿಲಿಯಮ್ಸನ್

2019ರ ಐಸಿಸಿ ವಿಶ್ವಕಪ್‌ನ ರನ್ನರ್ಸ್ ಪ್ರಶಸ್ತಿ ವಿಜೇತ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಟೆಸ್ಟ್ ಮತ್ತು ವೈಟ್ ಬಾಲ್ ಎರಡಕ್ಕೂ ನಾಯಕನಾಗಿದ್ದಾರೆ. ನ್ಯೂಜಿಲೆಂಡ್ ಕ್ರಿಕೆಟ್‌ ಒಪ್ಪಂದದಲ್ಲಿರುವ ವಿಲಿಯಮ್ಸನ್ 2019-20ಕ್ಕೆ ವಾರ್ಷಿಕವಾಗಿ 3.17 ಕೋ.ರೂ. ಪಡೆಯುತ್ತಿದ್ದಾರೆ.

3. ಪಾಕಿಸ್ತಾನ: ಬಾಬರ್, ಸರ್ಫರಾಜ್, ಅಝರ್

3. ಪಾಕಿಸ್ತಾನ: ಬಾಬರ್, ಸರ್ಫರಾಜ್, ಅಝರ್

ಪಾಕಿಸ್ತಾನ ಕ್ರಿಕೆಟ್‌ ತಂಡಕ್ಕೆ ಮೂರೂ ಮಾದರಿಗಳಲ್ಲಿ ಬೇರೆ ಬೇರೆ ನಾಯಕರು ಜವಾಬ್ದಾರಿ ಹೊತ್ತಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಅಡಿಯಲ್ಲಿರುವ ಈ ಮೂವರೂ ವಾರ್ಷಿಕವಾಗಿ ಸಂಬಳ ಪಡೆಯುತ್ತಿದ್ದಾರೆ. ಈಗ ಏಕದಿನ ಮತ್ತು ಟಿ20 ತಂಡದ ನಾಯಕರಾಗಿರುವ ಬಾಬರ್ ಅಝಾಮ್ 66 ಲಕ್ಷ ರೂ. ಪಡೆಯುತ್ತಿದ್ದಾರೆ. ಮೊದಲು ನಾಯರಾಗಿದ್ದ ಸರ್ಫರಾಜ್ ಅಹ್ಮದ್ ಕೂಡ 66 ಲಕ್ಷ ರೂ. ಪಡೆಯುತ್ತಿದ್ದಾರೆ. ಟೆಸ್ಟ್ ತಂಡದ ನಾಯಕ ಅಝರ್ ಅಲಿ 44.28 ಲಕ್ಷ ರೂ. ಪಡೆಯುತ್ತಿದ್ದಾರೆ.

2. ಭಾರತ: ವಿರಾಟ್ ಕೊಹ್ಲಿ

2. ಭಾರತ: ವಿರಾಟ್ ಕೊಹ್ಲಿ

ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಅಡಿಯಲ್ಲಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಾರ್ಷಿಕವಾಗಿ ಉತ್ತಮ ಸಂಬಳ ಪಡೆಯುತ್ತಿದ್ದಾರೆ. ವಿಶ್ವಶ್ರೇಷ್ಠ ಬ್ಯಾಟ್ಸ್‌ಮನ್ ಕೊಹ್ಲಿ 2015ರಿಂದ ಟೆಸ್ಟ್ ತಂಡವನ್ನು, 2017ರಿಂದ ವೈಟ್ ಬಾಲ್ ಕ್ರಿಕೆಟ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಕೊಹ್ಲಿ ವಾರ್ಷಿಕವಾಗಿ ಸುಮಾರು 7 ಕೋ.ರೂ. ಪಡೆಯುತ್ತಿದ್ದಾರೆ.

1. ಇಂಗ್ಲೆಂಡ್: ರೂಟ್, ಮಾರ್ಗನ್

1. ಇಂಗ್ಲೆಂಡ್: ರೂಟ್, ಮಾರ್ಗನ್

ಕಳೆದ ಕೆಲ ವರ್ಷಗಳಿಂದಲೂ ಇಂಗ್ಲೆಂಡ್‌ ತಂಡವನ್ನು ಲಿಮಿಟೆಡ್ ಓವರ್‌ ಕ್ರಿಕೆಟ್‌ನಲ್ಲಿ ಇಯಾನ್ ಮಾರ್ಗನ್ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ ಒಪ್ಪಂದದಲ್ಲಿರುವ ಮಾರ್ಗನ್ ಮತ್ತು ಜೋ ರೂಟ್ ಉತ್ತಮ ಸಂಬಳ ಪಡೆಯುತ್ತಿದ್ದಾರೆ. ಜೋ ರೂಟ್ 8.15 ಕೋ.ರೂ. ಪಡೆದರೆ, ಇಯಾನ್ ಮಾರ್ಗನ್ 2.56 ಕೋ.ರೂ. ಪಡೆಯುತ್ತಿದ್ದಾರೆ.

Story first published: Wednesday, June 24, 2020, 18:08 [IST]
Other articles published on Jun 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X